For Quick Alerts
ALLOW NOTIFICATIONS  
For Daily Alerts

ವಿದ್ಯೆಯ ಶ್ರೀಮಂತಿಕೆ ಪಡೆದ 'ಭಿಕ್ಷುಕ ಹುಡುಗನ' ರಿಯಲ್ ಸ್ಟೋರಿ

By Manu
|

ಒಂದು ಕಾಲದಲ್ಲಿ ಭಿಕ್ಷುಕರಾಗಿದ್ದು ಬಳಿಕ ಕೋಟ್ಯಾಧಿಪತಿಗಳಾದ ವ್ಯಕ್ತಿಗಳ ಬಗ್ಗೆ ಕಲವಾದರೂ ಕಥೆಗಳನ್ನು ನಾವೆಲ್ಲಾ ಕೇಳಿಯೇ ಇದ್ದೇವೆ. ಇದಕ್ಕೆ ಅವರ ನಸೀಬೇ ಕಾರಣ ಎಂದು ಸುಲಭವಾಗಿ ಹೇಳಬಹುದು. ಬಡತನದಿಂದ ಶ್ರೀಮಂತಿಕೆ ಪಡೆದವರ ಕಥೆಗಳು ಪ್ರತಿ ವ್ಯಕ್ತಿಗೂ ಬೇರೆ ಬೇರೆಯಾಗಿದ್ದರೂ ಕೆಲವರ ಕಥೆ ಮಾತ್ರ ಮನ ಕಲಕುವಂತಿರುತ್ತದೆ.

ಇಂತಹ ಓರ್ವ ವ್ಯಕ್ತಿಯ ಬಗ್ಗೆ ಇಂದಿನ ಲೇಖನದಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ಈ ವ್ಯಕ್ತಿ ಭಿಕ್ಷುಕನಾಗಿದ್ದು ನೇರವಾಗಿ ಹಣದ ಶ್ರೀಮಂತಿಕೆ ಪಡೆಯಲಿಲ್ಲ. ಬದಲಿಗೆ ವಿದ್ಯೆಯ ಶ್ರೀಮಂತಿಕೆ ಪಡೆದು ಬೀದಿಯಿಂದ ನೇರ ಕೇಂಬ್ರಿಜ್ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದಿದ್ದಾನೆ. ಇನ್ನೇನು ಕೆಲವೇ ದಿನಗಳಲ್ಲಿ ಉನ್ನತ ವ್ಯಾಸಾಂಗಕ್ಕಾಗಿ ಇಟಲಿಗೂ ತೆರಳಲಿದ್ದಾನೆ. ಭಾರತದ ಶ್ರೀಮಂತ ಭಿಕ್ಷುಕರು!-ಅದೃಷ್ಟ ಅಂದರೆ ಹೀಗಿರಬೇಕು!

ಈ ವ್ಯಕ್ತಿ ಯಾರು ಎಂಬ ಬಗ್ಗೆ ನಿಮಗೆ ಕುತೂಹಲ ಮೂಡಿರಬಹುದು. ಈತನೇ ಚೆನ್ನೈ ನಗರದ ಬೀದಿಗಳಲ್ಲಿ ಹಿಂದೊಮ್ಮೆ ಭಿಕ್ಷೆ ಬೇಡುತ್ತಿದ್ದ ಜಯಾವಲ್. ಈತನ ಬಗ್ಗೆ ವಿವರ ತಿಳಿದ ಬಳಿಕ ವಿಶ್ವದ ಹಲವು ಜನರು ಈತನ ಬಗ್ಗೆ ತಿಳಿದುಕೊಳ್ಳಲು ಉತ್ಸುಕತೆ ತೋರುತ್ತಿದ್ದಾರೆ.

ಇಂದು ಈತ ತಲುಪಿರುವ ಎತ್ತರಕ್ಕೆ ಈತನಲ್ಲಿ ತನ್ನನ್ನು ತಾನು ಬದಲಿಸಿಕೊಳ್ಳುವ ಹೊರತಾಗಿ ಬೇರಾವ ಬಂಡವಾಳವೂ ಇಲ್ಲದಿರುವುದೇ ಈತನ ಹೆಚ್ಚುಗಾರಿಕೆಯಾಗಿದೆ. ಬನ್ನಿ, ಈತನ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ....

ಈತನ ತಂದೆ ದಿವಾಳಿಯಾಗಿದ್ದ

ಈತನ ತಂದೆ ದಿವಾಳಿಯಾಗಿದ್ದ

ಜಯಾವಲ್ ನೆಲ್ಲೂರು ಜಿಲ್ಲೆಯ ಕೃಷಿಯಾಧಾರಿತ ಕುಟುಂಬಕ್ಕೆ ಸೇರಿದವನಾಗಿದ್ದ. ಎಂಭತ್ತರ ದಶಕದಲ್ಲಿ ಬೆಳೆಗಳು ವಿಫಲವಾದ ಬಳಿಕ ಮನೆ ಮಠ ತೊರೆದು ನಿರ್ಗತಿಕರಾಗಿ ಚೆನ್ನೈ ನಗರಕ್ಕೆ ಆಗಮಿಸದ ಹೊರತು ಈ ಕುಟುಂಬಕ್ಕೆ ಬೇರಾವ ಮಾರ್ಗವೇ ಇರಲಿಲ್ಲ.

ಇವರಿಗೆ ಭಿಕ್ಷಾಟನೆ ಅನಿವಾರ್ಯವಾಗಿತ್ತು

ಇವರಿಗೆ ಭಿಕ್ಷಾಟನೆ ಅನಿವಾರ್ಯವಾಗಿತ್ತು

ಚೆನ್ನೈ ನಗರಕ್ಕೆ ಬಂದ ಕುಟುಂಬಕ್ಕೆ ನಿರ್ವಹಣೆಗಾಗಿ ಭಿಕ್ಷಾಟನೆಯ ಹೊರತಾಗಿ ಯಾವುದೇ ಮಾರ್ಗ ಉಳಿದಿರಲಿಲ್ಲ. ಅಂತೆಯೇ ಮನೆಯ ಎಲ್ಲಾ ಸದಸ್ಯರು ಚೆನ್ನೈ ನಗರದ ಬೀದಿಬೀದಿಗಳಲ್ಲಿ ಭಿಕ್ಷೆ ಬೇಡುತ್ತಾ, ರಾತ್ರಿ ಫುಟ್ ಪಾಥ್ ಗಳಲ್ಲಿ ಮಲಗುತ್ತಾ, ಏನು ಸಿಕ್ಕಿತೋ ಅದನ್ನು ತಿನ್ನುತ್ತಾ, ಬೀದಿ ನಲ್ಲಿಗಳ ನೀರು ಕುಡಿಯುತ್ತಾ ಸ್ನಾನ ಮಾಡುತ್ತಾ ಕಾಲ ಕಳೆಯುತ್ತಿದ್ದರು.

ಇವರಿಗೆ ಭಿಕ್ಷಾಟನೆ ಅನಿವಾರ್ಯವಾಗಿತ್ತು

ಇವರಿಗೆ ಭಿಕ್ಷಾಟನೆ ಅನಿವಾರ್ಯವಾಗಿತ್ತು

ಮಳೆಬಂದ ಸಮಯದಲ್ಲಿ ಅಂಗಡಿಗಳ ಮುಂದಿನ ನೆರಳುಛಾವಣಿಯ ಕೆಳಗೆ ನಿದ್ದೆ ಇಲ್ಲದೇ ಆಶ್ರಯ ಪಡೆಯುತ್ತಿದ್ದರು. ಎಲ್ಲಿಯವೆರೆಗೆ ಅಂದರೆ ಪೋಲೀಸರು ಅವರನ್ನು ಅಲ್ಲಿಂದ ಓಡಿಸುವ ತನಕ.

ಮದ್ಯವ್ಯಸನಿಯಾದ ತಾಯಿ, ಹಣವನ್ನೆಲ್ಲಾ ಕಿತ್ತುಕೊಳ್ಳುತ್ತಿದ್ದಳು!

ಮದ್ಯವ್ಯಸನಿಯಾದ ತಾಯಿ, ಹಣವನ್ನೆಲ್ಲಾ ಕಿತ್ತುಕೊಳ್ಳುತ್ತಿದ್ದಳು!

ತನ್ನ ಕುಟುಂಬ ಬೀದಿಪಾಲಾಗಿರುವುದನ್ನು ಸಹಿಸದ ತಾಯಿ ತನ್ನ ನೋವನ್ನು ಮರೆಯಲು ಮದ್ಯದ ಮೊರೆ ಹೊಕ್ಕಳು. ಕೆಲವೇ ಸಮಯದಲ್ಲಿ ಇದೊಂದು ವ್ಯಸನವಾಗಿ ಪರಿಣಮಿಸಿತ್ತು.

ಮಕ್ಕಳು ಇಡಿಯ ದಿನ ಭಿಕ್ಷೆ ಬೇಡಿ ತಂದ ಹಣವನ್ನೆಲ್ಲಾ ಆಕೆ ಬಲವಂತವಾಗಿ ಕಿತ್ತುಕೊಂಡು ಇನ್ನಷ್ಟು ಮದ್ಯ ಕುಡಿಯಲು ಪ್ರಾರಂಭಿಸಿದಳು. ಜಯಾವಲ್‌ಗೆ ತನ್ನ ಖರ್ಚನ್ನೂ ನಿಭಾಯಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಆಪತ್ಬಾಂಧವರಾಗಿ ಆಗಮಿಸಿದ ಉಮಾ ಮುತ್ತುರಾಮನ್

ಆಪತ್ಬಾಂಧವರಾಗಿ ಆಗಮಿಸಿದ ಉಮಾ ಮುತ್ತುರಾಮನ್

ಈ ಸಂದರ್ಭದಲ್ಲಿ ಚೆನ್ನೈ ಬೀದಿಯಲ್ಲಿ ಭಿಕ್ಷಾಟನೆ ನಡೆಸುತ್ತಿದ್ದ ಮಕ್ಕಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದ ಉಮಾ ಮುತ್ತುರಾಮನ್ ಎಂಬ ಮಹಿಳೆ ಜಯಾವೆಲ್‌ನನ್ನು ಪ್ರಥಮ ಬಾರಿ ಭೇಟಿಯಾಗಿ ಆತನ ಬಗ್ಗೆ ಉತ್ಸುಕತೆ ವಹಿಸಿದರು.

ಆಪತ್ಬಾಂಧವರಾಗಿ ಆಗಮಿಸಿದ ಉಮಾ ಮುತ್ತುರಾಮನ್

ಆಪತ್ಬಾಂಧವರಾಗಿ ಆಗಮಿಸಿದ ಉಮಾ ಮುತ್ತುರಾಮನ್

ಈತನ ನಿಃಸಹಾಯಕ ಸ್ಥಿತಿಯನ್ನು ಗಮನಿಸಿದ ಅವರು ಈತನಿಗೆ ತನ್ನಿಂದಾದ ಸಹಾಯವನ್ನು ಮಾಡಬೇಕೆಂದು ಅಂದೇ ನಿಶ್ಚಯಿಸಿಕೊಂಡರು. ಬಳಿಕ ಆಕೆ ಈತನನ್ನು "ಸುಯಾಮ್ ಚಾರಿಟೇಬಲ್ ಟ್ರಸ್ಟ್ " ಎಂಬ ಹೆಸರಿನ ಎನ್. ಜಿ.ಓ ಅಥವಾ ಸರ್ಕಾರೇತರ ಸೇವಾ ಸಂಸ್ಥೆಯೊಂದಕ್ಕೆ ಕರೆದುಕೊಂಡು ಹೋದರು.

ಈತನ ಜೀವನದಲ್ಲಿ ಹೊಸ ಅಧ್ಯಾಯರೊಂದು ಪ್ರಾರಂಭವಾಯಿತು

ಈತನ ಜೀವನದಲ್ಲಿ ಹೊಸ ಅಧ್ಯಾಯರೊಂದು ಪ್ರಾರಂಭವಾಯಿತು

ಈ ಎನ್. ಜಿ.ಓ ಮೂಲಕ ದೊರೆತ ನೆರವಿನಿಂದ ಶಿಕ್ಷಣವನ್ನು ಮುಂದುವರೆಸಿದ ಜಯಾವೆಲ್ ಎರಡನೇ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ. ಈತನ ಅಂಕಗಳ ಬಗ್ಗೆ ಹಾಗೂ ಮುಂದೆ ಓದುವ ಕಾತುರವನ್ನು ಗಮನಿಸಿದ ಕೆಲವು ಸಹೃದಯಿ ದಾನಿಗಳು ಈತನ ಮುಂದಿನ ಶಿಕ್ಷಣದ ವೆಚ್ಚವನ್ನು ಸಾಲರೂಪದಲ್ಲಿ ಭರಿಸಲು ಮುಂದೆ ಬಂದರು

ಕೇಂಬ್ರಿಜ್‌ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯಲ್ಲಿ ಜಯ

ಕೇಂಬ್ರಿಜ್‌ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯಲ್ಲಿ ಜಯ

ಉನ್ನತ ಶಿಕ್ಷಣಕ್ಕಾಗಿ ಕೇಂಬ್ರಿಜ್‌ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯನ್ನು ಬರೆದ ಜಯಾವೆಲ್ ಈ ಪರೀಕ್ಷೆಯಲ್ಲಿಯೂ ಉನ್ನತ ಅಂಕಗಳನ್ನು ಪಡೆದು ಪ್ರವೇಶಕ್ಕೆ ಆಯ್ಕೆಯಾದ. ಅಲ್ಲದೇ ಬ್ರಿಟನ್ನಿನ ಗ್ಲಿಂಡ್ವರ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆಯಲು ಪವೇಶವನ್ನೂ ದೊರಕಿಸಿಕೊಂಡಿದ್ದಾನೆ.

ಬಳಿಕ 'Performance Car Enhancement Technology Engineering' ಎಂಬ ಆಟೋಮೋಬೈಲ್ ಇಂಜಿನಿಯರಿಂಗ್ ಆಧಾರಿತ ವಿಷಯವನ್ನು ಆಧರಿಸಿ ಶಿಕ್ಷಣ ಮುಂದುವರೆಸುತ್ತಿದ್ದಾನೆ. ಈ ತಂತ್ರಜ್ಞಾನ ರೇಸ್ ಕಾರುಗಳ ವೇಗವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಮುಂದುವರೆಯುತ್ತಿದೆ. ಇತ್ತ ಈತನ ತಾಯಿ ಇಂದಿಗೂ ಮದ್ಯವ್ಯಸನದಿಂದ ಹೊರಬರಲಾರದೇ ಬೀದಿಯಲ್ಲಿಯೇ ಕಾಲ ಕಳೆಯುತ್ತಿದ್ದಾಳೆ.

English summary

From Begging On Streets To Studying At Cambridge

Check out the story of Jayavel from the streets of Chennai, India, who became an inspiration for people around the world, especially when you have nothing except your willingness to change your own destiny. Read on to know more...
X
Desktop Bottom Promotion