ಅಚ್ಚರಿ: ಇದು ಗಾಳಿ ಸುದ್ದಿ ಅಲ್ಲ, ಸತ್ಯ ಸಂಗತಿ!, ಹೀಗೂ ಉಂಟೇ!!

By: Hemanth
Subscribe to Boldsky

ಪ್ರಕೃತಿ ನಿಯಮದ ಪ್ರಕಾರ ಹೆಣ್ಣು ಗರ್ಭಧರಿಸಬೇಕು ಮತ್ತು ತಾಯಿಯಾಗಬೇಕು. ಮನುಷ್ಯನಿಂದ ಹಿಡಿದು ಪ್ರಾಣಿಗಳ ತನಕ ಇದೇ ನಿಯಮ ಅನ್ವಯವಾಗುತ್ತದೆ. ಆದರೆ ಪ್ರಕೃತಿ ನಿಯಮಕ್ಕೆ ವಿರುದ್ಧವಾಗಿ ಪುರುಷನೊಬ್ಬ ತಾಯಿಯಾದರೆ ಅದನ್ನು ಯಾರೂ ನಂಬಲಿಕ್ಕಿಲ್ಲ...

ಹೌದು ಕೆಲವು ವರ್ಷಗಳ ಮೊದಲು ಥಾಮಸ್ ಟ್ರೇಸ್ ಬೀಟೈ ಎನ್ನುವಾತ ತಾನು ಗರ್ಭ ಧರಿಸಿದ್ದೇನೆಂದು ಘೋಷಿಸಿದಾಗ ಇದು ಗಾಳಿಸುದ್ದಿಯೆಂದು ಹೆಚ್ಚಿನವರು ಭಾವಿಸಿದ್ದರು. ಇದು ಪ್ರಕೃತಿಗೆ ವಿರುದ್ಧವೆಂದು ಹೇಳಿದ್ದರು.

ಆದರೆ ಈತ ಒಂದು ಸಲವಲ್ಲ. ಮೂರು ಸಲ ಗರ್ಭ ಧರಿಸಿ ಎಲ್ಲರನ್ನು ಅಚ್ಚರಿಗೀಡು ಮಾಡಿದ್ದಾನೆ. 2002ರಲ್ಲಿ ಥಾಮಸ್ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ. ಇದರ ಬಳಿಕ ಮೂರು ಸಲ ಆತ ಗರ್ಭ ಧರಿಸಿದ್ದಾನೆ ಮತ್ತು ಹೀಗೆ ಮಾಡಿದ ಮೊದಲ ಪುರುಷನಾಗಿದ್ದಾನೆ. ಈ ರೋಚಕ ಸುದ್ದಿಯನ್ನು ಓದುತ್ತಾ ಸಾಗಿ...

ಆತ ಹುಡುಗಿ....

ಆತ ಹುಡುಗಿ....

ಬಾಲ್ಯದಲ್ಲಿ ಹಾಗೂ ಯೌವನದಲ್ಲಿ ಆತ ಹುಡುಗಿಯಾಗಿದ್ದ ಮತ್ತು ರೂಪದರ್ಶಿಯಾಗಿದ್ದ. ಅಮೆರಿಕಾದ ಮಿಸ್ ಟೀನ್ ಹುವಾಯಿ ಸ್ಪರ್ಧೆಯ ಅಂತಿಮ ಸುತ್ತಿಗೇರಿದ್ದ. ಆತ ಟೆಕ್ವಾಂಡೊ ಬ್ಲ್ಯಾಕ್ ಬೆಲ್ಟ್ ಪಡೆದಿದ್ದ ಮತ್ತು ಒಳ್ಳೆಯ ದೇಹದಾರ್ಢ್ಯ ಪಟು ಕೂಡ ಆಗಿದ್ದ.

ಮದುವೆ

ಮದುವೆ

ಆತ ನ್ಯಾನ್ಸಿ ಎಂಬಾಕೆಯನ್ನು ಮದುವೆಯಾದ. ಆದರೆ ಅವರಿಗೆ ಮಕ್ಕಳಾಗಲಿಲ್ಲ. ಇದರಿಂದ ಆತ ತಮ್ಮದೇ ಆದ ಮಕ್ಕಳು ಬೇಕೆಂದು ಬಯಸಿ 2002ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ. ಈ ಶಸ್ತ್ರಚಿಕಿತ್ಸೆಯ ಎದೆಯ ಮರು ನಿರ್ಮಾಣವೆಂದು ಕರೆಯಲಾಯಿತು. ತನ್ನದೇ ಆದ ಮಕ್ಕಳು ಬೇಕಾಗಿದ್ದ ಕಾರಣದಿಂದ ಆತ ಸಂತಾನೋತ್ಪತ್ತಿಯ ಒಳಗಿನ ಅಂಗಾಂಗಗಳನ್ನು ಹಾಗೆ ಇರಿಸಿಕೊಂಡ.

ಮೊದಲ ಮಗು

ಮೊದಲ ಮಗು

ಮೊದಲ ಮಗುವಿಗಾಗಿ ಆತ ದಾನಿಯಿಂದ ವೀರ್ಯವನ್ನು ಪಡೆದುಕೊಂಡ. ಹಲವಾರು ಪ್ರಕ್ರಿಯೆ ಬಳಿಕ ಆತ 2008ರಲ್ಲಿ ತಾಯಿಯಾದ.

ಮತ್ತೆರಡು

ಮತ್ತೆರಡು

ಮೊದಲ ಮಗುವಿಗೆ ಯಶಸ್ವಿಯಾಗಿ ಜನ್ಮ ನೀಡಿದ ಬಳಿಕ ತನಗೆ ಮತ್ತೆ ಮಕ್ಕಳು ಬೇಕೆಂಬ ಬಯಕೆ ಥಾಮಸ್ ನಲ್ಲಿ ಉಂಟಾಯಿತು. ಮೊದಲ ಮಗುವಿಗೆ ವೀರ್ಯ ಕೊಟ್ಟ ದಾನಿಯಿಂದಲೇ ವೀರ್ಯವನ್ನು ಪಡೆದುಕೊಂಡ ಥಾಮಸ್ 2009 ಮತ್ತು 2010ರಲ್ಲಿ ಮತ್ತೆ ತಾಯಿಯಾದ.

ಆತನ ನಿಜವಾದ ಬದಲಾವಣೆ

ಆತನ ನಿಜವಾದ ಬದಲಾವಣೆ

20ರ ಹರೆಯದಲ್ಲಿದ್ದಾಗ ಆತನಿಗೆ ಬದಲಾಗಬೇಕೆಂಬ ಮನಸ್ಸು ಬಂದಿತ್ತು. ಹುಡುಗಿಯಾಗಿ ಹುಟ್ಟಿದ್ದ ಆತನಿಗೆ ಪುರುಷನಾಗಬೇಕೆಂಬ ಹಂಬಲ ಅತಿಯಾಗಿತ್ತು.

ಇನ್ನು ಮಕ್ಕಳು ಬೇಡ

ಇನ್ನು ಮಕ್ಕಳು ಬೇಡ

ಮಗನ ಜನನದ ಬಳಿಕ ಮತ್ತೆ ಮಕ್ಕಳು ಬೇಡವೆಂದು ನಿರ್ಧರಿಸಿದ ಆತ ತನ್ನ ಸಂತಾನೋತ್ಪತ್ತಿ ಅಂಗವನ್ನು ತೆಗೆಸಿಕೊಂಡ.

ವಿಚ್ಛೇದನ

ವಿಚ್ಛೇದನ

ಪತ್ನಿ ನ್ಯಾನ್ಸಿಯು ಥಾಮಸ್ ಹಾಗೂ ಮಕ್ಕಳನ್ನು ಕೆಟ್ಟದಾಗಿ ಬೈಯ್ಯುತ್ತಿರುವ ವೀಡಿಯೋ ಆತನಿಗೆ ಸಿಕ್ಕಿದ ಮೇಲೆ 9 ವರ್ಷಗಳ ದಾಂಪತ್ಯ ಜೀವನಕ್ಕೆ ಆತ ಎಳ್ಳುನೀರು ಬಿಟ್ಟ.

ಮೂರನೇ ಮಗುವಿಗೆ ಜನ್ಮ ನೀಡುವ ಮೊದಲು ಥಾಮಸ್ ತೆಗೆಸಿಕೊಂಡಿರುವ ವೀಡಿಯೋವನ್ನು ನೋಡಿ.

English summary

First Man To Get Pregnant Thrice!

The story of this man getting pregnant not once but thrice has a deeper secret to it. So, find out more about the first man who got pregnant thrice! Apparently, Thomas had a sex reassignment surgery in 2002 due to which he became pregnant. So, check out his complete story unfold below...
Story first published: Monday, December 5, 2016, 23:31 [IST]
Please Wait while comments are loading...
Subscribe Newsletter