Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಂದು, ಅಮ್ಯೂಸ್ಮೆಂಟ್ ಪಾರ್ಕ್‌ನಲ್ಲಿ ನಡೆದ ಅವಾಂತರ ನೋಡಿ...
ಮನರಂಜನೆಗೆ ಹಲವು ಮಾಧ್ಯಮಗಳಿವೆ. ಸರ್ಕಸ್‌ನಲ್ಲಿ ಕಲಾವಿದರು ತೋರುವ ಕಸರತ್ತನ್ನೂ ನೋಡಿ ಸಂತೋಷ ಅನುಭವಿಸಿದರೆ ಕೆಲವು ಕಸರತ್ತು ಅಥವಾ ಮೈನವಿರೇಳಿಸುವ ಅನುಭವ ಪಡೆದು ಮನರಂಜನೆ ಪಡೆಯುವ ವಿಹಾರ ತಾಣ ಅಥವಾ ಅಮ್ಯೂಸ್ಮೆಂಟ್ ಪಾರ್ಕ್‌ಗಳಿಗೆ ಇಂದು ಹೆಚ್ಚಿನ ಬೇಡಿಕೆ ದೊರಕುತ್ತಿದೆ. ಮೊದಲೆಲ್ಲಾ ನಾಲ್ಕು ತೊಟ್ಟಿಲುಗಳ, ಕೈಯಲ್ಲಿ ತಿರುಗಿಸುವ ಜಾತ್ರೆಯ ದೊಡ್ಡ ಚಕ್ರವೇ ಹೊಟ್ಟೆಯಲ್ಲಿ ಚಳಕು ಹುಟ್ಟಿಸುವ ದೊಡ್ಡ ಅವಕಾಶವಾಗಿತ್ತು.
ಇಂದು ನೂರಾರು ಅಡಿ ಎತ್ತರವಿರುವ ತೊಟ್ಟಿಲುಗಳ ಚಕ್ರಗಳಿವೆ. ನೀರಿನ ಹರಿವನ್ನೇ ಪ್ರಮುಖವಾಗಿ ಬಳಸಿ ಇದರಲ್ಲಿ ಮೋಜಾಟವಾಡುವ ಅವಕಾಶ ನೀಡುವ ವಾಟರ್ ಪಾರ್ಕ್ ಗಳಿವೆ. ಆಗಸದಲ್ಲಿ ತಿರುಚಿ ತಿರುವಿ ಓಲಾಡಿ ಅತಿವೇಗಗಲ್ಲಿ ನುಗ್ಗುವ ರೈಲುಗಳಿವೆ. ಸಾಮಾನ್ಯ ಜೀವನದಲ್ಲಿ ದೊರಕದ ವಿಭಿನ್ನ ಅವಕಾಶವನ್ನು ಪಡೆಯಲು ಈ ಪಾರ್ಕ್‌ಗಳಿಗೆ ಧಾಳಿಯಿಡುವ ಜನರು ಈ ನಿಟ್ಟಿನಲ್ಲಿ ಅಪಾಯವನ್ನೂ ಆಹ್ವಾನಿಸುತ್ತಾರೆ.
ಆದರೆ ಯಾವುದೇ ವ್ಯವಸ್ಥೆಯಲ್ಲಿ ಆಗುವ ಕೊಂಚಿತ್ತು ತಪ್ಪು ಸಹಾ ಇದನ್ನು ಬಳಸುವವರ ಮೇಲೆ ಅಪಾಯಕಾರಿಯಾಗುವಂತೆಯೇ ಈ ಅಮ್ಯೂಸ್ಮೆಂಟ್ ಪಾರ್ಕ್ ಗಳಲ್ಲಿಯೂ ಆಗಾಗ ಅಪಘಾತಗಳಾಗಿವೆ. ಕೆಲವು ಅಪಘಾತಗಳಂತೂ ಜೀವಹಾನಿಗಳನ್ನೇ ಉಂಟುಮಾಡಿ ಜಗತ್ತನ್ನೇ ಭಯಭೀತವಾಗಿಸಿದೆ. ಇದರ ಅಪಾಯಗಳನ್ನು ಮನಗಂಡ ಬಳಿಕ ಈ ಸವಾರಿ ಅಥವಾ ರೈಡ್‌ಗಳನ್ನು ನಿಷೇಧಿಸಲಾಗಿದೆ.ಈ ಅಪಘಾತದಲ್ಲಿ ಹಲವರು ಪ್ರಾಣವನ್ನೇ ಕಳೆದುಕೊಂಡರೆ ಉಳಿದವರಿಗೆ ಮಾರಣಾಂತಿಕ ಗಾಯಗಳೂ ಶಾಶ್ವತ ಅಂಗವೈಕಲ್ಯತೆಯೂ ಉಂಟಾಗಿದೆ. ಜಗತ್ತನ್ನೇ ಝಲ್ಲೆನ್ನಿಸಿದ ಕೆಲವು ಅಪಘಾತಗಳ ಬಗ್ಗೆ ಕೆಳಗಿನ ಸ್ಲೈಡ್ ಶೋ ಮೂಲಕ ಮಾಹಿತಿಗಳನ್ನು ನೀಡಲಾಗಿದೆ...

ಓವರ್ಸೀಸ್ ಚೈನಾ ಟೌನ್ ಈಸ್ಟ್ ಥೀಂ ಪಾರ್ಕ್
ರಾಕೆಟ್ಟೊಂದರಲ್ಲಿ ಕುಳಿತು ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಆಗಸಕ್ಕೆ ನೆಗೆದರೆ ಹೇಗಿರುತ್ತದೆ ಎಂಬ ಅನುಭವವನ್ನು ನೀಡುವ ಈ ಪಾರ್ಕಿನಲ್ಲಿ 'ಸ್ಪೇಸ್ ಜರ್ನಿ' ಅಥವಾ ಬಾಹ್ಯಾಕಾಶ ಪ್ರಯಾಣ ಎಂಬ ಸವಾರಿಯೊಂದನ್ನು ಈ ಪಾರ್ಕ್ ನಲ್ಲಿ ಪ್ರಾರಂಭಿಸಲಾಗಿತ್ತು. ಆದರೆ ಇಂತಹ ಒಂದು ಯಾನದಲ್ಲಿ ನಲವತ್ತು ಜನರು ಕುಳಿತಿದ್ದ ರಾಕೆಟ್ ಧಿಡೀರನೇ ಕುಸಿದುಬಿದ್ದು ಆರು ಜನರು ಮೃತಪಟ್ಟು ಉಳಿದವರಲ್ಲಿ ಹಲವರಿಗೆ ಮಾರಣಾಂತಿಕ ಗಾಯಗಳಾದವು.
Image courtesy

ಡೇರಿಯನ್ ಲೇಕ್ ಅಮ್ಯೂಸ್ಮೆಂಟ್ ಪಾರ್ಕ್
ಅಮೇರಿಕಾದ ನ್ಯೂಯಾರ್ಕ್ ರಾಜ್ಯದಲ್ಲಿರುವ ಬಫೆಲೋ ಎಂಬ ಪಟ್ಟಣದಲ್ಲಿ ಪುಟ್ಟ ಅಮ್ಯೂಸ್ ಮೆಂಟ್ ಪಾರ್ಕೊಂದರಲ್ಲಿ ಅತಿ ಸುರಕ್ಷಿತ ರೈಡ್ ಯಾವುದು ಎಂದು ಕೇಳಿಕೊಂಡು ಬಂದ ಇರಾಕ್ ನ ಪಶುವೈದ್ಯರಿಗೆ ಅಲ್ಲಿನ ಸಹಾಯಕರು "ರೈಡ್ ಆಫ್ ಸ್ಟೀಲ್" ಎಂಬ ಸವಾರಿಯನ್ನು ಏರುವಂತೆ ಸಲಹೆ ಮಾಡಿದರು. ಎರಡೂ ಕಾಲುಗಳನ್ನು ಕಳೆದುಕೊಂಡಿದ್ದ ಈ ಪಶುವೈದ್ಯರಿಗೆ ಈ ಸವಾರಿಯೇ ಜೀವನದ ಕೊನೆಯದಾಗಿ ಪರಿಣಮಿಸಿತು. ಏಕೆಂದರೆ ಇದರ ತೊಟ್ಟಿಲಿನಿಂದ ಕೆಳಕ್ಕೆ ಬೀಳದಂತೆ ಅಡ್ಡ ಇಟ್ಟಿದ್ದ ಸಲಾಕೆಯಿಂದ ಕಾಲಿಲ್ಲದ ಪಶುವೈದ್ಯರಿಗೆ ಜಾರಿ ಬೀಳಲು ಸಾಧ್ಯವಾಗಿದ್ದು ಆಘಾತದಿಂದ ಮರಣ ಸಂಭವಿಸಿದ್ದು ಅತ್ಯಂತ ದಯನೀಯವಾಗಿತ್ತು. Image courtesy

ಜಾರ್ಜೀಯಾದಲ್ಲಿ ತಲೆ ಕತ್ತರಿಸಿದ ಬ್ಯಾಟ್ಮಾನ್
ಸುಪರ್ ಮ್ಯಾನ್ ಬ್ಯಾಟ್ ಮ್ಯಾನ್ ಎಂಬ ಕಾಮಿಕ್ ಕಥೆಗಳ ನಾಯಕರೆಲ್ಲಾ ಜನರನ್ನು ರಕ್ಷಿಸುವ ಹೀರೋಗಳು ಎಂದೇ ನಾವೆಲ್ಲಾ ನಂಬಿದ್ದೇವೆ. ಅಮೇರಿಕಾದ ಜಾರ್ಜಿಯಾದಲ್ಲಿರುವ ಒಂದು ಪಾರ್ಕ್ ನಲ್ಲಿ ಬ್ಯಾಟ್ ಮ್ಯಾನ್ ನ ಕಥೆಯನ್ನು ಆಧರಿಸಿ ವೇಗದ ಕಾರು ಮತ್ತಿತರ ಉಪಕರಣಗಳನ್ನು ಬಳಸಿ ಸವಾರಿಯೊಂದನ್ನು ಪ್ರಾರಂಭಿಸಲಾಗಿತ್ತು. ಇಂತಹ ಒಂದು ಸವಾರಿ ಪ್ರಗತಿಯಲ್ಲಿದ್ದ ಸಮಯದಲ್ಲಿ ಕೆಳಕ್ಕೆ ಬಿದ್ದ ತನ್ನ ಟೊಪ್ಪಿಯನ್ನು ಎತ್ತಿಕೊಳ್ಳಲು ಹೋದ ಬಾಲಕನೊಬ್ಬರನ ಕುತ್ತಿಗೆಯ ಮೇಲೆ ಹರಿದ ಈ ಸವಾರಿ ಒಂದೇ ಕ್ಷಣದಲ್ಲಿ ರುಂಡವನ್ನು ಬೇರ್ಪಡಿಸಿದ್ದು ಎಂತಹವರ ಕಲ್ಲೆದೆಯನ್ನೂ ಕರಗಿಸುವಂತಿತ್ತು.
Image courtesy

ಓಕ್ವುಡ್ ಥೀಂ ಪಾರ್ಕ್
ನೀರಿನ ಹರಿವನ್ನು ಆಧರಿಸಿ ನಿರ್ಮಿಸಲಾದ "ಹೈಡ್ರೋ/ಡ್ರೆಂಚ್ಡ್" ಎಂಬ ಸವಾರಿ ಸುಮಾರು ಮೂವತ್ತು ಮೀಟರುಗಳಷ್ಟು ಎತ್ತರಕ್ಕೆ ಹೋಗಿದ್ದಾಗ ಆಯತಪ್ಪಿ ಬಿದ್ದ ಹದಿನಾರು ವರ್ಷದ ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಳು. ಆಕೆ ಸವಾರಿ ಮಾಡುತ್ತಿದ್ದ ಕಾರಿನಂತಹ ಚಿಕ್ಕ ತೊಟ್ಟಿಲು ಆ ಹೊತ್ತಿನಲ್ಲಿ ಕೆಲಸ ಮಾಡದೇ ಆಯತಪ್ಪಲು ಕಾರಣವಾಗಿತ್ತು. ಕೆಳಕ್ಕೆ ಬಿದ್ದ ಆಘಾತಕ್ಕೆ ಆಕೆಯ ದೇಹದ ಒಣಗಣ ಹಲವು ಅಂಗಗಳು ಛಿದ್ರವಾಗಿತ್ತು. ಈ ಅಪಘಾತದ ಪರಿಣಾಮವಾಗಿ ಒಂದು ವರ್ಷದ ಕಾಲ ಇದನ್ನು ಮುಚ್ಚಲಾಗಿತ್ತು. ಇಂತಹ ಯಾವುದೇ ಪ್ರಕರಣಗಳು ನಡೆಯದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಂಡ ಬಳಿಕವೇ ಮರುಪ್ರಾರಂಭಿಸಲು ಅನುಮತಿ ನೀಡಲಾಯಿತು. Image courtesy

ಎಕ್ಸ್ಪೋಲ್ಯಾಂಡ್
ರೋಚಕವಾಗಿ ಕೇಳುವ "ಫೂಜಿನ್ ರೈಜಿನ್ II"ಎಂಬ ರೈಲು ಹಳಿಯ ಮೇಲಿನ ಸವಾರಿ ವಾಸ್ತವವಾಗಿ ಮೃತ್ಯುವಿನ ಸವಾರಿಗೆ ಸಮನಾಗಿತ್ತು. ಒಮ್ಮೆ ಬೋಗಿ ಹಳಿತಪ್ಪಿದ ಪರಿಣಾಮವಾಗಿ ಇದನ್ನು ಏರಿದ್ದ ಓರ್ವ ಕಾಲೇಜು ಯುವಕನ ಸಾವು ಕಂಡರೆ ಒಂದು ಡಜನ್ನಿಗೂ ಹೆಚ್ಚಿನ ಜನರು ಗಂಭೀರವಾಗಿ ಗಾಯಗೊಂಡರು. Image courtesy

ಲೂದೂನ್ ಕ್ಯಾಸಲ್ ಅಮ್ಯೂಸ್ಮೆಂಟ್ ಪಾರ್ಕ್
'ದ ರ್‍ಯಾಟ್' ಎಂಬ ಸವಾರಿಯ ಪರೀಕ್ಷಾರ್ಥಾ ಸವಾರಿಯಲ್ಲಿಯೇ ಇದನ್ನು ಪರೀಕ್ಷಿಸಲೆಂದು ಏರಿದ್ದ ಕಾರ್ಮಿಕನೊಬ್ಬನ ಕೈ ಈ ವಾಹನದ ಆಯಕಟ್ಟಿನ ಸ್ಥಳದಲ್ಲಿ ಸಿಕ್ಕಿಕೊಂಡು ಅಪಘಾತ ಸಂಭವಿಸಿತ್ತು. ಬಳಿಕ ಆಘಾತದಿಂದ ಆತನ ದೇಹ ಕೆಳಕ್ಕೆ ಎಸೆಯಲ್ಪಟ್ಟಿತ್ತು. Image courtesy

ಸಿಕ್ಸ್ ಫ್ಲಾಗ್ ಕೆಂಟಕಿ
ಅಮೇರಿಕಾದ ಕೆಂಟಕಿ ನಗರದ "ಸುಪರ್ಮ್ಯಾನ್ ಟವರ್ ಆಫ್ ಪವರ್" ಎಂಬ ಸವಾರಿಯಲ್ಲಿ ಲೋಹದ ತಂತಿಯ ಮೇಲೆ ತೂಗಾಡುತ್ತಾ ಸಾಗುವ ತೊಟ್ಟಿಲೊಂದು ತಂತಿ ತುಂಡಾಗಿ ಬಿದ್ದು ಈ ತಂತಿ ಬಾಲಕಿಯೊಬ್ಬಳ ಕುತ್ತಿಗೆಗೆ ಕಬಂಧಕಬಾಹುವಿನಂತೆ ಸುತ್ತಿಕೊಂಡು ಹೆಚ್ಚು ಕಡಿಮೆ ಮೃತ್ಯುವಿಗೆ ಹತ್ತಿರ ಕೊಂಡುಹೋಗಿತ್ತು. ಆಕೆ ಧೈರ್ಯವಹಿಸಿ ಹೇಗೋ ಕುತ್ತಿಗೆಗೆ ಸುತ್ತಿಕೊಂಡಿದ್ದ ತಂತಿಯನ್ನು ಬಿಡಿಸಿಕೊಳ್ಳಲು ಸಮರ್ಥಳಾದರೂ ಕಾಲಿನ ಮೇಲೆ ಬಿದ್ದಿದ್ದ ತೊಟ್ಟಿಲಿನ ಭಾರ ಆಕೆಯಿಂದ ಎತ್ತಲು ಸಾಧ್ಯವಾಗಲೇ ಇಲ್ಲ. ಸಹಾಯ ಆಕೆಯವರೆಗೆ ತಲುಪುವವರೆಗೆ ಆಕೆಯ ಪಾದ ಅಪ್ಪಚ್ಚಿಯಾಗಿ ಹೋಗಿತ್ತು. ಅನಿವಾರ್ಯವಾಗಿ ಆಕೆಯ ಪಾದವನ್ನು ಶಾಶ್ವತವಾಗಿ ನಿವಾರಿಸಲಾಯಿತು.
Image courtesy



Click it and Unblock the Notifications









