Just In
Don't Miss
- News
ಮೈಸೂರು; ಭೂಮಿ ಕೊಟ್ಟವರಿಗೆ ಉದ್ಯೋಗ ಕೊಟ್ಟ ಏಷಿಯನ್ ಪೇಂಟ್ಸ್
- Automobiles
ಟೊಯೊಟಾ ಕಾರುಗಳ ಖರೀದಿ ಮೇಲೆ ಮಾರ್ಚ್ ಅವಧಿಯ ಆಫರ್ ಘೋಷಣೆ
- Sports
ಬಾಂಗ್ಲಾದೇಶ ವಿರುದ್ಧದ ಸರಣಿಯಿಂದ ಕೇನ್ ವಿಲಿಯಮ್ಸನ್ ಹೊರಕ್ಕೆ
- Movies
ವಿಡಿಯೋ: ರಸ್ತೆ ವಿಚಾರಕ್ಕೆ ರಾಕಿಂಗ್ ಸ್ಟಾರ್ ಯಶ್ ತಾಯಿ ಮತ್ತು ಗ್ರಾಮಸ್ಥರ ನಡುವೆ ಗಲಾಟೆ
- Finance
ಎಲ್ಪಿಜಿ ಸಿಲಿಂಡರ್ ಬೆಲೆ 7 ವರ್ಷದಲ್ಲಿ ದುಪ್ಪಟ್ಟು ಏರಿಕೆ: ತೈಲದ ಮೇಲಿನ ತೆರಿಗೆ ಸಂಗ್ರಹ 459% ಹೆಚ್ಚಳ
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಚ್ಚರಿಯಾದರೂ ಸತ್ಯ, ಮುಖದ ಮೇಲೆಯೂ ಟ್ಯಾಟೂ..!
ಅಚ್ಚೆ ಹಾಕಿಸಿಕೊಳ್ಳುವುದು ಅನಾದಿ ಕಾಲದಿಂದಲೂ ಭಾರತೀಯರಿಗೆ ಗೊತ್ತಿರುವ ಕಲೆಯೇ ಆಗಿದೆ. ಆದರೆ ಅದರ ಪಾಶ್ಚಿಮಾತ್ಯ ಫ್ಯಾಷನ್ ಪ್ರಕಾರ ಟ್ಯಾಟೂ, ಕೆಲವು ವರ್ಷಗಳಿಂದ ಭಾರೀ ಜನಪ್ರಿಯವಾಗಿದೆ. ಇದಕ್ಕಾಗಿ ಯುವ ಜನತೆ ಮನಸೋಲುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಮೊದಲು ತಮಗೆ ಇಷ್ಟವಾದ ರಂಗೋಲಿ ಪ್ರಕಾರಗಳನ್ನು ಭಾರತೀಯ ಹಳ್ಳಿಗಾಡಿನ ಮಹಿಳೆಯರು ಅಚ್ಚೆ ಹಾಕಿಸಿಕೊಳ್ಳುತ್ತಿದ್ದರು. ಆಮೇಲೆ ಹೆಸರನ್ನು ಹಾಕಿಸಿಕೊಳ್ಳುತ್ತಿದ್ದರು. ಆದರೆ ಈಗ ಟ್ಯಾಟೂ ಎಂಬುದು ಫ್ಯಾಷನ್ ಆದ ಮೇಲೆ ತರಹೇವಾರಿ ವಿನ್ಯಾಸಗಳಲ್ಲಿ ಬಂದಿದೆ. ಹಚ್ಚೆಯನ್ನು ಎಲ್ಲೆಲ್ಲಿ ಹಾಕಿಸಿಕೊಳ್ಳುವುದು ಈಗೀನ ಟ್ರೆಂಡ್
ಮೈತುಂಬಾ ಟ್ಯಾಟೂ ಹಾಕಿಸಿಕೊಳ್ಳುವರು ಇದ್ದಾರೆ. ಇನ್ನೂ ಕೆಲವರು ದೇಹದ ವಿವಿಧ ಅಂಗಗಳ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಅದರಲ್ಲೂ ಕೈ, ಕುತ್ತಿಗೆ, ತೋಳಿನ ಮೇಲೆ ಹೆಚ್ಚಾಗಿ ಹಾಕಿಸಿಕೊಳ್ಳುತ್ತಾರೆ. ಇತ್ತೀಚೆಗೆ ಮುಖದ ಮೇಲೆ ಸಹ ಹಾಕಿಸಿಕೊಳ್ಳುತ್ತಾರೆ. ಈ ಅಂಕಣದಲ್ಲಿ ನಾವು ಇಂದು ಮುಖದ ಮೇಲೆ ಹಾಕಿಸಿಕೊಳ್ಳುವಂತಹ ವಿಚಿತ್ರ ರೀತಿಯ ಟ್ಯಾಟೂಗಳ ಕುರಿತು ನಿಮಗೆ ತಿಳಿಸಿಕೊಡುತ್ತೇವೆ. ಇದು ನಿಮಗೆ ಸೋಜಿಗವನ್ನುಂಟು ಮಾಡಬಹುದಾದರೂ ಸತ್ಯ. ಬನ್ನಿ ಅವು ಯಾವುವು ಎಂದು ನೋಡೋಣ... ಹಚ್ಚೆಗೆ ಮರುಳಾಗಿ, ಅಪಾಯದ ಸುಳಿಗೆ ಸಿಲುಕಬೇಡಿ!

ಮೈಕೆಲ್ ಕಾರ್ಟರ್
ಇವರು ವಿವಾದಾತ್ಮಕ ಟ್ಯಾಟೂಗಳಿಗೆ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಹಣೆಯ ಮೇಲೆ ಸ್ವಸ್ತಿಕ್ ಚಿಹ್ನೆ ಇರಬಹುದು ಅಥವಾ ಕೆನ್ನೆಯ ಮೇಲಿನ ಯೇಸು ಕ್ರಿಸ್ತನ ಚಿತ್ರವಿರಬಹುದು. ತನ್ನ ಟ್ಯಾಟೂಗಳ ಆಯ್ಕೆಯಿಂದಲೆ ಆತ ಕುಖ್ಯಾತಿಯನ್ನು ತನ್ನತ್ತ ಸೆಳೆಯುವ ಕಲೆಯನ್ನು ಈತ ಸಂಪಾದಿಸಿಕೊಂಡಿದ್ದಾನೆ. ಈಗ ಒಬ್ಬ ದೋಷಿಯಾಗಿ ಜೈಲು ವಾಸವನ್ನು ಮಾಡುತ್ತಿದ್ದಾನೆ. Image courtesy

"ಜೋಂಬಿ ಬಾಯ್"
ರಿಕ್ ಜೆನೆಸ್ಟ್‌ರವರನ್ನು "ಜೋಂಬಿ ಬಾಯ್" ಎಂದು ಸಹ ಕರೆಯುತ್ತಾರೆ. ಇವರು ಒಂದು ಪ್ರಸಿದ್ಧ ವೀಡಿಯೋದಲ್ಲಿ ತಮ್ಮ ಮ್ಯಾಕೆಬರ್ ದೇಹವನ್ನು ಪ್ರದರ್ಶಿಸಿಇದ ನಂತರ ಖ್ಯಾತಿಗೆ ಬಂದರು. ಇವರು ಪ್ರಸ್ತುತ ಪುರುಷ ಮಾಡೆಲ್ ಆಗಿ ಫ್ಯಾಶನ್ ಮ್ಯಾಗಜೀನ್‌ಗಳಿಗೆ ಕೆಲಸ ಮಾಡುತ್ತಿದ್ದಾರೆ. Image courtesy

ಖಂಪ್ರಸೊಂಗ್ ತಮ್ಮವೊಂಗ್
ಈತನು ತನ್ನ ಅಪಾರ್ಟ್‌ಮೆಂಟಿನ ಫ್ಲಾಟ್‌ನಲ್ಲಿ ನಿಷೇಧಿತ ಮಾರಿಜುವಾನಾದ 38 ಗಿಡಗಳನ್ನು ನೆಟ್ಟಿದ್ದನು, ಜೊತೆಗೆ ಪ್ಯಾರಾಫೆರ್ನಲಿಯಾದ ವಿವಿಧ ಡ್ರಗ್ಸ್ ಸಹ ಇವನ ಬಳಿ ಇತ್ತು. ಜೊತೆಗೆ ಅಕ್ರಮ ಆಯುಧಗಳನ್ನು ಸಹ ಹೊಂದಿದ್ದ ಆರೋಪದ ಮೇಲೆ ಈತನನ್ನು ಪೋಲಿಸರು ಬಂಧಿಸಿದರು. Image courtesy

ರೌಸ್ಲನ್ ಟೌಮನಿಯಾಟ್ಜ್
ಇದು ಇರುವುದರಲ್ಲಿಯೇ ಅತ್ಯಂತ ಸೋಜಿಗವನ್ನು ಉಂಟು ಮಾಡುವ ಟ್ಯಾಟೂ ಆಗಿದೆ. ಒಬ್ಬ ಟ್ಯಾಟೂ ಕಲಾವಿದನ ಈತನ ಹೆಸರನ್ನು ಈತನ ಗರ್ಲ್‌ಫ್ರೆಂಡ್ ಮುಖದ ಮೇಲೆ ಬರೆದನು. ಅದು ಈತನನ್ನು ಆಕೆ ಭೇಟಿ ಮಾಡಿದ ಮೊದಲ ದಿನ. ಈಗ ಇವರಿಬ್ಬರೂ ಸುಖೀ ದಾಂಪತ್ಯವನ್ನು ನಡೆಸುತ್ತಿದ್ದಾರೆ. Image courtesy

ಜೇಸನ್ ಬರ್ನಮ್ ಅಲಿಯಾಸ್ ಐ ಬಾಲ್
ಈ ಭಯಾನಕವಾಗಿ ಕಾಣುವ ಮನುಷ್ಯನು ತನ್ನ ಭೀಭತ್ಸಕರ ಟ್ಯಾಟೂವಿನಿಂದಲೆ ಪ್ರಸಿದ್ಧಿಯನ್ನು ಪಡೆದಿದ್ದಾನೆ. ಈತ ತನ್ನ ಕಣ್ಣು ಗುಡ್ಡೆಯ ಮೇಲೆ ಟ್ಯಾಟು ಹಾಕಿಸಿಕೊಂಡು ಜನರ ಮೈನಡುಗಿಸುತ್ತಿದ್ದಾನೆ. ಇತ್ತೀಚೆಗೆ ಪೋಲಿಸರೊಬ್ಬರ ಮೇಲೆ ಆತ್ಮರಕ್ಷಣೆ ನೆಪದಲ್ಲಿ ಗುಂಡು ಹಾರಿಸಿದ ಆರೋಪದ ಮೇಲೆ, 22 ವರ್ಷದ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. Image courtesy

ವಿನ್ ಲೊಸ್
ಈ ಮಾಡೆಲ್ ಖ್ಯಾತಿಯನ್ನು ಗಳಿಸಲು ಈ ಶಾರ್ಟ್‌ಕಟ್ ಆರಿಸಿಕೊಂಡಿದ್ದಾರೆ. ಈತ ಪ್ರಪಂಚ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಬೇಕೆಂದು ಬಯಸಿದ್ದನು. ಅದಕ್ಕಾಗಿ ಈತ ತನ್ನ ಮೈಮೇಲೆ ಟ್ಯಾಟೂ ಹಾಕಿಸಿಕೊಳ್ಳಲು ಆರಂಭಿಸಿದ. ಮುಖ, ಮೂತಿ ಎನ್ನದೆ ಟ್ಯಾಟೂ ಹಾಕಿಸಿಕೊಂಡಿರುವ ಪುಣ್ಯಾತ್ಮ ಈತ. ಅದರ ಮೂಲಕವೇ ಖ್ಯಾತಿಯನ್ನು ಗಳಿಸಿದ ಎಂಬುದು ಮುಖ್ಯ. Image courtesy

ಕ್ರಿಸ್ಟಿಯೆನ್ ಸೆಕ್ರಿಸ್ಟ್
ಈತ ತನ್ನ ಮುಖವನ್ನು ತನ್ನ ಮಗುವಿನ ಮುಖದಿಂದ ಟ್ಯಾಟೂ ಹಾಕಿಸಿಕೊಂಡ. ಆತನ ಮಗು ನಿಧನ ಹೊಂದಿದ ನಂತರ, ಅದರ ನೆನಪಿಗೆ ಈ ಟ್ಯಾಟೂವನ್ನು ಹಾಕಿಸಿಕೊಂಡನು. ಇದು ಒಂದು ರೀತಿ ಭಾವನಾತ್ಮಕವಾದ ಮತ್ತು ಅಚ್ಚರಿಗೆ ತಳ್ಳುವಂತಹ, ಅದೇ ಸಮಯಕ್ಕೆ ಜನರ ಮನಸ್ಸು ಮಿಡಿಯುವಂತಹ ಒಂದು ಟ್ಯಾಟೂ ಆಗಿದೆ. ಅಪ್ಪನ ಪ್ರೀತಿಯ ಅದ್ಬುತ ದ್ಯೋತಕವಾಗಿ ಈ ಟ್ಯಾಟೂ ಸ್ಥಾನ ಪಡೆದಿದೆ. Image courtesy