For Quick Alerts
ALLOW NOTIFICATIONS  
For Daily Alerts

ಅಚ್ಚರಿಯ ಸಂಗತಿ- ಇವೆಲ್ಲಾ ಆಹಾರ ಸೇವಿಸುವಾಗ ನಡೆದ ಘಟನೆ!

By Super
|

ಇತ್ತೀಚೆಗೆ ಮಾವಿನ ಹಣ್ಣಿನ ರಸದ ಬಾಟಲಿಯಲ್ಲಿ ಗುಟ್ಕಾ ದ ತೆರೆದಿದ್ದ ಪ್ಯಾಕೆಟ್ ಒಂದು ಕಂಡುಬಂದಿದ್ದು ಗ್ರಾಹಕರು ಇದನ್ನು ನೇರವಾಗಿ ಬಳಕೆದಾರರ ವೇದಿಕೆಗೆ ದೂರು ನೀಡಿ ಇದಕ್ಕೆ ಕಾರಣರಾದವರಿಗೆ ತಕ್ಕ ಶಿಕ್ಷೆ ನೀಡಿರುವುದನ್ನು ಮಾಧ್ಯಮಗಳಲ್ಲಿ ಓದಿಯೇ ಇರುತ್ತೀರಿ. ಆಹಾರದಲ್ಲಿ ಅನಾರೋಗ್ಯಕರ ವಸ್ತುಗಳಿರುವುದು ಇದೇನೂ ಮೊದಲಲ್ಲ. ಮೇಯರ್ ಮುತ್ತಣ್ಣ ಎಂಬ ಕಪ್ಪು ಬಿಳಿಪು ಚಿತ್ರ ನೋಡಿದ್ದರೆ ದೋಸೆ ಹಿಟ್ಟಿನಲ್ಲಿ ಇಲಿ ಇದ್ದುದನ್ನು ಗಮನಿಸಿರಬಹುದು.

ಇಂದಿನ ಹೋಟೆಲು ಮತ್ತು ರೆಸ್ಟೋರೆಂಟುಗಳಲ್ಲಿಯೂ ಸ್ವಚ್ಛತೆಯನ್ನು ಕಾಪಾಡಲಾಗುತ್ತದೆ ಎಂದು ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಕೆಲವು ವಸ್ತುಗಳು ಆಹಾರದೊಡನೆ ಮಿಶ್ರಣಗೊಂಡರೆ ಪತ್ತೆ ಮಾಡುವುದಕ್ಕೇ ಸಾಧ್ಯವಿಲ್ಲ. ಉದಾಹರಣೆಗೆ ಉಪ್ಪಿನ ಪುಡಿಯ ಬದಲು ಅಡುಗೆ ಸೋಡಾ ಹಾಕಿದ್ದರೆ? ನೋಡಿ ಪತ್ತೆಹಚ್ಚಲು ಸಾಧ್ಯವೇ ಇಲ್ಲ. ಇದನ್ನು ತಿಂದ ಬಳಿಕ ಹೊಟ್ಟೆ ಕೆಟ್ಟರೆ ಮಾತ್ರ ಇದರ ಬಗ್ಗೆ ಅನುಮಾನ ಮೂಡುವುದು ಸಹಜ. ಅಚ್ಚರಿ, ಆದರೂ ಸತ್ಯ-ಈ ಆಹಾರಗಳು ವಿಷದಷ್ಟೇ ಅಪಾಯಕಾರಿ!

ಹಣ ಮಾಡುವ ಧಾವಂತದಲ್ಲಿ ಸ್ವಚ್ಛತೆಗೆ ಮೂರನೆಯ ಆದ್ಯತೆಯನ್ನು ನೀಡಿರುವ ಸಿದ್ಧ ಆಹಾರ ಮಳಿಗೆಗಳು ನಮ್ಮ ಸುತ್ತಮುತ್ತ ಹಲವಾರಿವೆ. ಇವುಗಳ ಧಾವಂತದಲ್ಲಿ ಕಣ್ತಪ್ಪಿ ಅನಾರೋಗ್ಯಕರ ವಸ್ತುಗಳು ಆಹಾರದಲ್ಲಿ ಬಂದುಬಿಡುತ್ತವೆ. ಇಂತಹ ಕೆಲವು ಗಾಬರಿಪಡಿಸುವ ಸತ್ಯಸಂಗತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದ್ದು ಗ್ರಾಹಕರು ಈ ಬಗ್ಗೆ ಎಚ್ಚರ ವಹಿಸಲು ಮನವಿಮಾಡಲಾಗಿದೆ. ಆದರೆ ಇದು ಯಾವುದೇ ರೆಸ್ಟೋರೆಂಟ್ ಅಥವಾ ಹೋಟೆಲುಗಳ ಬಗ್ಗೆ ಅಪಪ್ರಚಾರ ಮಾಡುವುದಾಗಲೀ, ಯಾವುದೇ ವ್ಯಕ್ತಿಯನ್ನು ಕುರಿತು ಅವಹೇಳನವಾಗಲೀ ಸರ್ವಥಾ ಅಲ್ಲ. ಗ್ರಾಹಕರಲ್ಲಿ ಈ ಬಗ್ಗೆ ಅರಿವು ಮೂಡಿಸುವುದೇ ಈ ಲೇಖನದ ಮುಖ್ಯ ಉದ್ದೇಶವಾಗಿದೆ...

ಸಾಲಾಡ್‌ನಲ್ಲಿ ಕಂಡುಬಂದ ಬೆರಳತುದಿ

ಸಾಲಾಡ್‌ನಲ್ಲಿ ಕಂಡುಬಂದ ಬೆರಳತುದಿ

ಕ್ಯಾಲಿಫೋರ್ನಿಯಾದಲ್ಲಿ ಒಂದು ಖ್ಯಾತ ಹೋಟೆಲಿನಲ್ಲಿ ಗ್ರಾಹಕರೊಬ್ಬರಿಗೆ ನೀಡಲಾದ ಸಾಲಾಡ್‌ನ ತಟ್ಟೆಯಲ್ಲಿ ಮಾನವ ಬೆರಳಿನ ತುದಿನ ತುಂಡೊಂದು ಇತ್ತು. ಇದನ್ನು ಕಂಡ ಮಹಿಳಾ ಗ್ರಾಹಕರು ಗಾಬರಿಬಿದ್ದು ಕೂಗಾಟ ನಡೆಸಿದ ಕಾರಣ ಅಲ್ಲಿ ರಾದ್ಧಾಂತವೇ ನಡೆದುಹೋಗಿತ್ತು. ವಾಸ್ತವವಾಗಿ ಅಡುಗೆಯ ಸಮಯದಲ್ಲಿ ಉದ್ಯೋಗಿಯೊಬ್ಬರು ತಮ್ಮ ಬೆರಳಿನ ತುದಿಯನ್ನು ಕತ್ತರಿಸಿಕೊಂಡಿದ್ದು ಈ ಭಾಗ ಕಣ್ತಪ್ಪಿ ಸಾಲಾಡ್ ನ ತಟ್ಟೆಯಲ್ಲಿ ಬಂದುದೇ ದೊಡ್ಡ ಪ್ರಮಾದವಾಗಿತ್ತು. Image courtesy

ಆಹಾರದಲ್ಲಿ ಮೀನಿನ ಗಾಳ!

ಆಹಾರದಲ್ಲಿ ಮೀನಿನ ಗಾಳ!

ಸಾಮಾನ್ಯವಾಗಿ ಚಪಾತಿಯಲ್ಲಿ ಸ್ಟಾಪ್ಲರ್ ಪಿನ್ ಸಿಗುವುದು ಮಾಮೂಲು. ಏಕೆಂದರೆ ಕಾಗದದ ಪೊಟ್ಟಣವನ್ನು ಸ್ಟಾಪ್ಲರ್ ನಿಂದ ಮುಚ್ಚಿ ಕೊಟ್ಟಿದ್ದು ಬಳಿಕ ಮನೆಯಲ್ಲಿ ಚಪಾತಿ ಮಾಡಲು ತೆರೆಯುವಾಗ ಈ ಪಿನ್ನನ್ನು ಹೆಚ್ಚಿನವರು ಮರೆತೇ ಬಿಡುತ್ತಾರೆ. ಆದರೆ ಇದರ ಸ್ಥಳದಲ್ಲಿ ಚೂಪಾದ ಮೀನಿನ ಗಾಳ ಇದ್ದರೆ? ವಾಸ್ತವಕ್ಕೆ ದೂರ ಅನ್ನಿಸುತ್ತಿದೆಯೇ? ಮಹಿಳಾ ಗ್ರಾಹಕರೊಬ್ಬರು ಆಹಾರದಲ್ಲಿ ಮೀನಿನ ಗಾಳವಿದ್ದು ಊಟ ಮಾಡುವಾಗ ನಾಲಿಗೆಗೆ ಸಿಕ್ಕಿಕೊಂಡು ಗಾಯವಾಗಿದೆ ಎಂದು ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರಿದರು. ಆದರೆ ತನಿಖೆಯ ಬಳಿಕ ಈ ಗಾಳವನ್ನು ಆಕೆ ಬೇಕೆಂದೇ ಮೊದಲೇ ನಾಲಿಗೆಗೆ ಚುಚ್ಚಿಕೊಂಡು ಬಂದಿದ್ದು ಸುಲಭವಾಗಿ ಹಣ ಎಗರಿಸಲು ಮಾಡಿದ್ದ ತಂತ್ರ ಎಂದು ಬಳಿಕ ಗೊತ್ತಾಯಿತು. Image courtesy

ಮಕ್ಕಳ ಆಹಾರ ಡಬ್ಬಿಯಲ್ಲಿ ಏನಿರಬೇಕು? ಇಲಿಗಳ ಆಹಾರವಂತೂ ಅಲ್ಲ

ಮಕ್ಕಳ ಆಹಾರ ಡಬ್ಬಿಯಲ್ಲಿ ಏನಿರಬೇಕು? ಇಲಿಗಳ ಆಹಾರವಂತೂ ಅಲ್ಲ

ಮಕ್ಕಳ ಆಹಾರದ ಡಬ್ಬಿಯಿಂದ ಸಾಸೇಜ್ ನ ಪದಾರ್ಥವೊಂದನ್ನು ಮಾಡಿ ತನ್ನ ಮಗುವಿಗೆ ತಿನ್ನಿಸಿದ ಮಹಿಳೆಯೊಬ್ಬರಿಗೆ ಮಗು ತಕ್ಷಣ ವಾಂತಿ ಮಾಡಿಕೊಂಡಿದ್ದು ಅದರಲ್ಲಿ ಇಲಿಯ ಪಾದವೊಂದಿದ್ದುದು ಕಂಡು ದಿಗ್ಭ್ರಾಂತಿಗೊಂಡರು. ಏಕೆಂದರೆ ಇದೇ ಪೊಟ್ಟಣದಿಂದ ಇವರ ಮನೆಯವರೆಲ್ಲಾ ಹಿಂದಿನ ರಾತ್ರಿ ಸಾಸೇಜ್ ಮಾಡಿಕೊಂಡು ತಿಂದಿದ್ದರು. Image courtesy

ಬಫೆಯಲ್ಲಿ ಏನೇನಿದೆ? ಚಿಕನ್, ಮಟನ್, ಇಲಿ?

ಬಫೆಯಲ್ಲಿ ಏನೇನಿದೆ? ಚಿಕನ್, ಮಟನ್, ಇಲಿ?

ಬಫೆ ಎಂದರೆ ಸಿದ್ಧ ಅಡುಗೆಗಳನ್ನು ಮಾಡಿಟ್ಟ ಪಾತ್ರೆಗಳಿಂದ ಗ್ರಾಹಕರು ತಮಗಿಷ್ಟವಾದ ಆಹಾರವನ್ನು ಬಡಿಸಿಕೊಂಡು ಊಟ ಮಾಡುವುದು. ಇದೇ ಪ್ರಕಾರ ಪಾತ್ರೆಯೊಂದರಲ್ಲಿ ಇಟ್ಟಿದ್ದ ಖಾದ್ಯದ ನಡುವೆ ದಾರದಂತಹ ಏನೋ ಇದ್ದುದನ್ನು ಕಂಡ ಮಹಿಳೆಯೊಬ್ಬರಿಗೆ ಈ ದಾರವನ್ನು ಎಳೆದಾಗ ತುದಿಯಲ್ಲಿ ಇಡಿಯ ಇಲಿಯೊಂದು ಇದ್ದುದು ಕಂಡು ಏನಾಗಿರಬಹುದು ಎಂಬುದನ್ನು ಊಹಿಸಿಕೊಳ್ಳಬಲ್ಲಿರಾ? Image courtesy

ಬ್ಯಾಗೆಲ್ ನಲ್ಲಿ ಕಿಬ್ಬೊಟ್ಟೆಯ ಕೂದಲು

ಬ್ಯಾಗೆಲ್ ನಲ್ಲಿ ಕಿಬ್ಬೊಟ್ಟೆಯ ಕೂದಲು

ನ್ಯೂ ಜರ್ಸಿಯ ಹೋಟೆಲೊಂದರಲ್ಲಿ ಸರ್ವರ್ ಆಗಿ ಕೆಲಸ ಮಾಡುತ್ತಿದ್ದ ರಯಾನ್ ಬರ್ಕ್ ಎಂಬುವರಿಗೆ ತಮ್ಮ ಗ್ರಾಹಕರಾಗಿ ಬಂದಿದ್ದ ವ್ಯಕ್ತಿಯನ್ನು ನೋಡಿದಾಕ್ಷಣ ಮೈಯಲ್ಲಿ ಸಂಚಕಾರ ಉಂಟಾಗಿತ್ತು. ಏಕೆಂದರೆ ಪೋಲೀಸ್ ಅಧಿಕಾರಿಯಾಗಿರುವ ಈ ವ್ಯಕ್ತಿ ಕೆಲವು ದಿನಗಳ ಹಿಂದೆ ಚಿಕ್ಕ ತಪ್ಪಿಗಾಗಿ ರಯಾನ್ ರಿಗೆ ದಂಡ ವಿಧಿಸಿದ್ದರು. ಈಗ ಗ್ರಾಹಕರಾಗಿ ಬಂದವರಲ್ಲಿ ಸೇಡು ತೀರಿಸಿಕೊಳ್ಳುವುದು ಹೇಗೆ? ಅವರೊಳಗಿನ ರಾಕ್ಷಸ ತಕ್ಷಣ ಒಂದು ಐಡಿಯಾ ಕೊಟ್ಟಿದ್ದ.ಅಂತೆಯೇ ಅಧಿಕಾರಿಯವರು ಆರ್ಡರ್ ಮಾಡಿದ ಬ್ಯಾಗೆಲ್ (ಉದ್ದಿನ ವಡೆಯಂತಹ ಬ್ರೆಡ್) ತಯಾರಿಸುವ ವೇಳೆ ನಲ್ಲಿ ತನ್ನ ಕಿಬ್ಬೊಟ್ಟೆಯ ಕೂದಲನ್ನು ಬೆರೆಸಿ ನೀಡಿದ್ದ. ಈ ವಡೆಯನ್ನು ಮುರಿದಾಗ ಕೂದಲಿನ ರಾಶಿಯನ್ನು ಕಂಡ ಅಧಿಕಾರಿಯ ಒಳಗಿನ ಪೋಲೀಸ್ ಬುದ್ದಿ ಜಾಗೃತಗೊಂಡಿತು. ಇದನ್ನು ತಿನ್ನದೇ ಹಾಗೇ ಪ್ರಯೋಗಾಲಯಕ್ಕೆ ಹೋಗಿ ಪರೀಕ್ಷೆ ನಡೆಸಿದಾಗ ಇದು ಕಿಬ್ಬೊಟ್ಟೆಯ ಕೂದಲು ಎಂದು ತಿಳಿದುಬಂದಿತ್ತು.ಮುಂದಿನ ಕ್ರಮವಾಗಿ ಈಗ ರಯಾನ್ ಹದಿನಾಲ್ಕು ಸಾವಿರ ಡಾಲರ್ ದಂಡ ಮತ್ತು ಜೈಲುವಾಸದ ಶಿಕ್ಷೆ ಅನುಭವಿಸುತ್ತಿದ್ದಾನೆ.

Image courtesy

ಬೀನ್ಸ್ ಕ್ಯಾನ್ ನಲ್ಲಿ ಹಾವಿನ ತಲೆ

ಬೀನ್ಸ್ ಕ್ಯಾನ್ ನಲ್ಲಿ ಹಾವಿನ ತಲೆ

ಬೀನ್ಸ್ ಕಾಳುಗಳನ್ನು ಬೇಯಿಸುವುದೇ ತುಂಬಾ ಹೊತ್ತು ಹಿಡಿಯುವ ಕೆಲಸ. ಇದನ್ನು ಸುಲಭಗೊಳಿಸಲು ಬೇಯಿಸಿ ಸಿದ್ದರೂಪದಲ್ಲಿ ಬಳಸಬಹುದಾದ ಬೇಕ್ಡ್ ಬೀನ್ಸ್ ಎಂಬ ಡಬ್ಬಿಗಳು ದೊರಕುತ್ತಿವೆ. ಅಂತೆಯೇ ಬೀನ್ಸ್ ಕೋಡುಗಳೂ ಸಿದ್ಧರೂಪದಲ್ಲಿ ದೊರಕುತ್ತವೆ. ಅಮೇರಿಕಾದ ಉಟಾ ಎಂಬ ಪ್ರದೇಶದ ಫಾರ್ಮಿಂಗ್ಟನ್ ಎಂಬಲ್ಲಿ ಮಹಿಳೆಯೊಬ್ಬರು ವೆಸ್ಟರ್ನ್ ಫಾಮಿಲಿ ಎಂಬ ಸಂಸ್ಥೆಯ ಬೀನ್ಸ್ ಡಬ್ಬಿಯೊಂದನ್ನು ಕೊಂಡಿದ್ದರು. ಇದನ್ನು ನೇರವಾಗಿ ಕುಕ್ಕರಿಗೆ ಸುರುವಿದ ಬಳಿಕ ಇದರಲ್ಲಿ ಏನೋ ವಿಚಿತ್ರವಾದುದು ಇದ್ದುದು ಗಮನಕ್ಕೆ ಬಂದಿತ್ತು. ಏನೆಂದು ನೋಡಿದಾಗ ಸುಮಾರು ಕುತ್ತಿಗೆಯ ಬಳಿ ಕಡಿದಿದ್ದ ಹಾವಿನ ತಲೆಯೊಂದು ಕಂಡುಬಂದಿತ್ತು. ತಕ್ಷಣ ಈಕೆ ಸಂಬಂಧಪಟ್ಟವರಿಗೆ ಸುದ್ದಿ ಮುಟ್ಟಿಸಿದ ಕಾರಣ ಆ ಸಂಸ್ಥೆಯಿಂದ ಹೊರಬಂದ ಎಲ್ಲಾ ಉತ್ಪನ್ನಗಳ ಮೇಲೆ ನಿರ್ಬಂಧ ಹೇರಿ ಆ ಬ್ಯಾಚ್ ಇರುವ ಅಷ್ಟೂ ಪೊಟ್ಟಣಗಳನ್ನು ಹಿಂಪಡೆದು ಪರಿಶೀಲಿಸಲಾಯಿತು. ಆದರೆ ಹಾವಿತ ಇತರ ಭಾಗಗಳು ಎಲ್ಲೂ ಕಂಡುಬಂದಿರಲಿಲ್ಲ. Image courtesy

ಬ್ರೆಡ್ ಕಟ್ ಮಾಡಿದರೆ ಒಳಗೆ ಇಲಿಯ ತಲೆ!!

ಬ್ರೆಡ್ ಕಟ್ ಮಾಡಿದರೆ ಒಳಗೆ ಇಲಿಯ ತಲೆ!!

ಮನೆಗೆ ತಂದ ಬ್ರೆಡ್ ಒಂದನ್ನು ಕತ್ತರಿಸಿದ ಮಹಿಳೆಯೊಬ್ಬರಿಗೆ ಜೀವಮಾನದ ಶಾಕ್ ದೊರಕಿತ್ತು. ಏಕೆಂದರೆ ಇದರ ನಟ್ಟ ನಡುವ ಇಲಿಯ ತಲೆಯೊಂದು ಇತ್ತು. Image courtesy

ಮೊಸರಿನಲ್ಲಿ ಕಂಡುಬಂದ ವೀರ್ಯ!!

ಮೊಸರಿನಲ್ಲಿ ಕಂಡುಬಂದ ವೀರ್ಯ!!

ಕೇಳಲಿಕ್ಕೂ ಅಸಹನೀಯವಾದ ಈ ಘಟನೆ ನ್ಯೂ ಮೆಕ್ಸಿಕೋ ನಗರದಲ್ಲಿ ನಡೆದಿದೆ. ಇಲ್ಲಿನ ಚಿಕ್ಕ ಕಿರಾಣಿ ಅಂಗಡಿಯೊಂದರ ಮಾಲಿಕ ಆಂಥೋನಿ ಗಾರ್ಸಿಯಾ ಎಂಬುವರು ತಮ್ಮ ಅಂಗಡಿಗೆ ನಿಯಮಿತವಾಗಿ ಬರುತ್ತಿದ್ದ ಕನಿಷ್ಠ ನಾಲ್ವರು ಮಹಿಳೆಯರಿಗೆ ತನ್ನದೇ ವೀರ್ಯವನ್ನು ಮಿಶ್ರಣ ಮಾಡಿದ ಮೊಸರನ್ನು ಉಚಿತ ಸ್ಯಾಂಪಲ್ ರೂಪದಲ್ಲಿ ನೀಡಿದ್ದ. ಈ ಬಗ್ಗೆ ದೂರು ದಾಖಲಾಗಿದ್ದು ನ್ಯಾಯಾಲಯ ಈತನಿಗೆ ಎರಡು ವರ್ಷ ಜೈಲುವಾಸದ ಶಿಕ್ಷೆ ನೀಡಿದೆ. Image courtesy

English summary

Ewww! List Of Gross Things Found In Food

In this article, we have shared the list of the most disgusting and yucky things that were found in the food served at some of the restaurants or fast-food joints. We are not here to defame any restaurant in this article, but we give you a choice to choose if you should really continue relishing food from these places, as some of these disgusting things have been added by some of the not-so-cool people out there. So, find out more about these disgusting things.
X
Desktop Bottom Promotion