Latest Updates
-
ಸಾವಿನ ನಂತರವೂ ಜೀವದಾನ: ದಂಪತಿಗಳೇ, ಈ ಒಂದು ನಿರ್ಧಾರ 8 ಜನರ ಪ್ರಾಣ ಉಳಿಸಬಹುದು! -
ಹರ್ ಘರ್ ತಿರಂಗಾ: ಅಪಾರ್ಟ್ಮೆಂಟ್ ಬಾಲ್ಕನಿಯಲ್ಲಿ ಧ್ವಜ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಬೆಲೆ ಏರಿಕೆಯ ಬಿಸಿ: ಕೇವಲ ₹99 ಬಜೆಟ್ನಲ್ಲಿ ಸಿಗುವ ಪೌಷ್ಟಿಕಾಂಶಯುಕ್ತ ಹೈ-ಪ್ರೊಟೀನ್ ಊಟದ ಪ್ಲಾನ್! -
ಆಕಾಶದಲ್ಲಿ ಅದ್ಭುತ ಕೌತುಕ: ನಾಳೆ ರಾತ್ರಿ ಪರ್ಸೀಡ್ ಉಲ್ಕಾಪಾತ ವೀಕ್ಷಿಸಲು ಮಿಸ್ ಮಾಡ್ಬೇಡಿ! -
ಕಾಡಿನ ಅಂಚಿನಲ್ಲಿ ವಾಕಿಂಗ್ ಹೋಗ್ತೀರಾ? ಆನೆಗಳ ಕಾಟ ತಪ್ಪಿಸಲು ಮತ್ತು ಫಿಟ್ ಆಗಿರಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶಕ್ಕೆ ಗುಡ್ ಬೈ: ₹1,499 ರೊಳಗೆ ಸಿಗುವ ಬೆಸ್ಟ್ ಡಿಹ್ಯೂಮಿಡಿಫೈಯರ್ ಮತ್ತು ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆ 120 ರೂಪಾಯಿಯಲ್ಲಿ ಆರೋಗ್ಯಕರ ಲಂಚ್ಬಾಕ್ಸ್ ಸಿದ್ಧಪಡಿಸುವುದು ಹೇಗೆ? -
ವಿಶ್ವ ಸಿಂಹ ದಿನ: ಸಿಂಹದಂತೆ ಗರ್ಜಿಸುವ ಶಕ್ತಿ ಪಡೆಯಲು 10 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ!
ತಮಾಷೆಯ ಸಂಗತಿ: ನಿರೀಕ್ಷೆಗೂ ಮೀರಿ ಅದೃಷ್ಟ ಕೈ ಕೊಟ್ಟಾಗ...
ಜೀವನವೆಂದರೆ ಹಲವಾರು ಏಳುಬೀಳುಗಳನ್ನು ಕಾಣುತ್ತಾ ಇರುತ್ತದೆ. ಇದರಲ್ಲಿ ಕೆಲವೊಂದು ಆನಂದವನ್ನು ನೀಡಿದರೆ ಮತ್ತೆ ಕೆಲವು ದುಃಖವನ್ನು ನೀಡುವುದು. ಜೀವನವನ್ನು ಸಂಪೂರ್ಣವಾಗಿ ಆನಂದಿಸಬೇಕಾದರೆ ಕೆಟ್ಟ ಹಾಗೂ ಒಳ್ಳೆಯ ವಿಷಯಗಳಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗುತ್ತದೆ. ಸುಖ ಮತ್ತು ದುಃಖ ಸಮಾನವಾಗಿದ್ದರೆ ಮಾತ್ರ ಜೀವನ ಸಾಗಲು ಸಾಧ್ಯ.
ಈ ಲೇಖನದಲ್ಲಿ ಜನರಿಗೆ ಉಂಟಾದ ಕೆಲವೊಂದು ಆಕಸ್ಮಿಕ ಮತ್ತು ಮೂರ್ಖತನದ ಘಟನೆಗಳ ಬಗ್ಗೆ ಚರ್ಚಿಸುವ. ಈ ಫೋಟೊಗಳು ತುಂಬಾ ತಮಾಷೆಯದ್ದಾಗಿದೆ ಮತ್ತು ಈ ಪರಿಸ್ಥಿತಿಯಿಂದ ಹೊರಬರಲು ಅವರು ಮುಂದೆ ಏನು ಮಾಡಿರಬಹುದು ಎನ್ನುವ ಬಗ್ಗೆ ನಾವು ಚಿಂತಿಸುತ್ತಿರುತ್ತೇವೆ. ಪ್ರತಿಯೊಂದು ದಿನವೂ ಅದೃಷ್ಟವನ್ನು ತರುವುದಿಲ್ಲ ಎನ್ನುವುದನ್ನು ನಾವು ಇವುಗಳಿಂದ ತಿಳಿದುಕೊಳ್ಳಬೇಕಾಗುತ್ತದೆ. ದಿನದ ಆರಂಭದಲ್ಲೇ ಕೆಲವೊಂದು ಮಂದಿ ಯಾವೆಲ್ಲಾ ರೀತಿಯ ಸಂಕಷ್ಟಕ್ಕೆ ಸಿಲುಕುತ್ತಾರೆ ಎನ್ನುವುದನ್ನು ನಾವು ಈ ಲೇಖನದಲ್ಲಿ ಓದಿ ತಿಳಿಯುವ....

ಒಡೆದುಹೋದ ಮೊಟ್ಟೆಗಳು
ಬೆಳಿಗ್ಗೆ ಎದ್ದ ಬಳಿಕ ಉಪಹಾರಕ್ಕಾಗಿ ಏನಾದರೂ ಮಾಡಬೇಕೆಂದು ಫ್ರಿಡ್ಜ್ ತೆರೆದಾಗ ಅದರಲ್ಲಿದ್ದ ಮೊಟ್ಟೆಗಳೆಲ್ಲವೂ ಒಡೆದುಹೋಗಿದ್ದರೆ ಆಗ ನಿಮಗೆ ಹೇಗನಿಸುತ್ತದೆ? Image courtesy

ಕಾರಿನ ಹ್ಯಾಂಡಲ್
ಕಚೇರಿಗೆ ಹೋಗಲು ಗಡಿಬಿಡಿಯಲ್ಲಿ ಹೋಗಿ ಕಾರಿನಲ್ಲಿ ಕುಳಿತಾಗ ಅದರ ಹ್ಯಾಂಡಲ್ ಮುರಿದು ನಿಮ್ಮ ಕೈಗೆ ಬಂದರೆ ಆಗ ನಿಮ್ಮ ಮುಖದ ಭಾವ ಊಹಿಸಲು ಸಾಧ್ಯವಿಲ್ಲ, ಅಲ್ಲವೇ?

ಕಂಪ್ಯೂಟರ್ ಹಾಳಾಗುವುದು
ತನ್ನ ತಂದೆಯ ಲ್ಯಾಪ್ ಟಾಪ್ ನಲ್ಲಿ ಏನಾದರೂ ಆಟವಾಡಬೇಕೆಂದು ಈ ಮಗು ಪ್ರಯತ್ನಿಸಿದೆ. ಇದು ಪರ್ಮನೆಂಟ್ ಮಾರ್ಕರ್ ಆಗದಿರಲೆಂದು ನಾವೆಲ್ಲರೂ ಆಶಿಸುವ.
Image courtesy

ಎಲ್ಲವೂ ನೆಲಸಮ!!
ಇಷ್ಟು ಅವಸರದಲ್ಲಿ ಪಿಜ್ಜಾವನ್ನು ತೆಗೆಯುವ ಅವಸರವೇನು? ಎಲ್ಲವೂ ನೆಲಸಮ!
Image courtesy

ಡ್ಯಾಡಿಯ ಶೂಗಳು
ಎರಡು ಭಿನ್ನ ರೀತಿಯ ಶೂಗಳನ್ನು ಹಾಕಿಕೊಂಡು ಡ್ಯಾಡಿ ಹೊರಗಡೆ ಹೋಗಿದ್ದಾರೆ ಮತ್ತು ಯಾರೂ ಇದನ್ನು ನೋಡದಿರಲೆಂದು ಅವರು ಮನದಲ್ಲೇ ಪ್ರಾರ್ಥಿಸುತ್ತಿದ್ದಾರೆ.
Image courtesy

ಚಕ್ರಗಳೂ ಮಾಯ
ಕಚೇರಿಗೆ ಮೊದಲೇ ಲೇಟ್ ಆಗಿದೆ. ಅದೇ ವೇಳೆ ಚಕ್ರಗಳು ಮಾಯವಾಗಿದ್ದರೆ? ಆಗ ಹುಚ್ಚು ಹಿಡಿಯಲು ಮಾತ್ರ ಬಾಕಿ!
Image courtesy

ಡೌನಟ್ ಕಿಸ್
ಡೌನಟ್ ಅನ್ನು ಸರಿಯಾಗಿ ತರದೇ ಇರುವ ಬಗ್ಗೆ ಆ ವ್ಯಕ್ತಿ ಡಿಲಿವರಿ ಹುಡುಗನಿಗೆ ಎರಡು ಏಟು ಕೊಡಬಹುದೇನೋ?
Image courtesy

ಕಾರ್ಡ್ ಮತ್ತು ಕೀ ಕಳೆದುಹೋಗುವುದು
ಈ ಹುಡುಗ ಇಷ್ಟು ಯಾಕೆ ಗಲಿಬಿಲಿಗೊಂಡಿದ್ದಾನೆಂದು ನಿಮಗೆ ಏನಾದರೂ ಗೊತ್ತಿದೆಯಾ? ಆತನ ಕೀ ಮತ್ತು ಕಾರ್ಡ್ ಕಳೆದುಹೋಗಿದೆ. ಮುಂದೆ ಏನಾಗಬಹುದು ನೀವೇ ಯೋಚಿಸಿ...
Image courtesy



Click it and Unblock the Notifications