For Quick Alerts
ALLOW NOTIFICATIONS  
For Daily Alerts

  ಭೂಮಿಯಲ್ಲಿ ಕಾಣಿಸಿಕೊಳ್ಳುತ್ತಿದೆ ಬೃಹತ್ ಗುಂಡಿ! ಏನಿದರ ರಹಸ್ಯ?

  By Hemanth
  |

  ಭೂಮಿ ದೇವರ ಉದಾರ ಕೊಡುಗೆ. ಇರುವಂತಹ ಗ್ರಹಗಳಲ್ಲಿ ಭೂಮಿಯ ಮೇಲೆ ಮಾತ್ರ ಜೀವಿಸಲು ಸಾಧ್ಯ. ಹೀಗಿದ್ದರೂ ಮಾನವನ ದುರಾಸೆಯಿಂದಾಗಿ ಭೂಮಿ ಕೂಡ ಕಲುಷಿತಗೊಂಡು ಹಲವಾರು ಗಂಭೀರ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಮಾನವ ಹಲವಾರು ಪ್ರಯೋಗಗಳನ್ನು ಮಾಡಿ ಭೂಮಿಯನ್ನು ಒಂದು ಹಂತದಲ್ಲಿ ಪ್ರಯೋಗ ಶಾಲೆಯನ್ನಾಗಿ ಮಾಡಿದ್ದಾನೆ. ಅದರೆ ಇದರ ಕೆಲವೊಂದು ಅಡ್ಡಪರಿಣಾಮಗಳ ಬಗ್ಗೆ ವಿಶ್ವ ಭೂಮಿ ದಿನದಂದು ಮಾತನಾಡಲೇಬೇಕಾಗಿದೆ.

  ಈಗಾಗಲೇ ಪ್ರಕೃತಿಗೆ ಬೇಕಾದಷ್ಟು ಹಾನಿಯನ್ನು ಉಂಟುಮಾಡಿರುವ ಕಾರಣದಿಂದ ಮುಂದಿನ ಜನಾಂಗವನ್ನು ನಾವು ಸಂಕಷ್ಟಕ್ಕೆ ಸಿಲುಕಿಸುವುದರಲ್ಲಿ ಎರಡು ಮಾತಿಲ್ಲ. ಇದರ ಬಗ್ಗೆ ಈಗಲೇ ನಾವು ಗಮನಹರಿಸಿಲ್ಲವೆಂದಾದರೆ ಮುಂದೆ ದೊಡ್ಡ ಅನಾಹುತ ಸಂಭವಿಸುವುದು ಖಚಿತ. ಭೂಮಿಯ ಒತ್ತಡದಿಂದಾಗಿ ಇಂದು ಬತ್ತುಕುಳಿಗಳು ಅಥವಾ ಕೊರೆತಗಳು ಅಥವಾ ಬೃಹತ್ ಗುಂಡಿಗಳು ಕಾಣಿಸಿಕೊಳ್ಳಲು ಆರಂಭಿಸಿದೆ. ಮೊದಲು ಇದು ಸಣ್ಣದಾಗಿದ್ದರೂ ಸಮಯ ಕಳೆದಂತೆ ದೊಡ್ಡದಾಗುತ್ತಾ ಇದೆ. ವಿಶ್ವದ ಕೆಲವೊಂದು ಕಡೆ ಇರುವ ಬತ್ತುಕುಳಿಗಳ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳುವ..

  ಬೆರೆಝಿಂಕಿ ಬತ್ತುಕುಳಿ, ರಷ್ಯಾ

  ಬೆರೆಝಿಂಕಿ ಬತ್ತುಕುಳಿ, ರಷ್ಯಾ

  ರಷ್ಯಾದಲ್ಲಿರುವ ಈ ಬತ್ತುಕುಳಿಯು ಸುಮಾರು 80 ಮೀ. ಉದ್ದ ಮತ್ತು 40 ಮೀ. ಅಗಲವಿದೆ. ಸಂಶೋಧನೆಗಳ ಪ್ರಕಾರ ಇದು ಸುಮಾರು 200 ಮೀ. ಆಳವನ್ನು ಹೊಂದಿದೆ. ಇದು ದೊಡ್ಡ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ತಜ್ಞರು ಇದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. Image courtesy

  ಗ್ರೇಟ್ ಬ್ಲೂ ಹೋಲ್, ಬೆಲೀಜೆ

  ಗ್ರೇಟ್ ಬ್ಲೂ ಹೋಲ್, ಬೆಲೀಜೆ

  ಅಮೆರಿಕಾಗೆ ಹತ್ತಿರವಿರುವ ರಾಷ್ಟ್ರ ಬೆಲೀಜೆಯಲ್ಲಿ ಕಾಣಸಿಗುವಂತಹ ನೀಲಿ ಬತ್ತುಕುಳಿಯು ಭೂಮಿಯ ಮೇಲಿನ ವಿಶೇಷಗಳಲ್ಲಿ ಒಂದು ಮಾತ್ರವಲ್ಲದೆ ಇದನ್ನು ಅಂತರಿಕ್ಷದಿಂದಲೂ ವೀಕ್ಷಿಸಬಹುದಾಗಿದೆ. ಇದನ್ನು ಈಗ ವಿಶ್ವ ಪಾರಂಪರಿಕ ಸ್ಥಳವೆಂದು ಘೋಷಿಸಲಾಗಿದೆ ಮತ್ತು ಬೆಲೀಜೆಯ ಸಂರಕ್ಷಿತ ಪ್ರದೇಶಗಳಲ್ಲಿ ಇದು ಒಂದಾಗಿದೆ. Image courtesy

  ಸಿಮಾ ಹಂಬೋಲ್ಟ್, ವೆನೆಜುವೆಲಾ

  ಸಿಮಾ ಹಂಬೋಲ್ಟ್, ವೆನೆಜುವೆಲಾ

  ಇದು ಅತ್ಯಂತ ದೊಡ್ಡ ಪ್ರಮಾಣದ ಬತ್ತುಕುಳಿಯಾಗಿದ್ದು, ವೆನೆಜುವೆಲಾದ ಬೊಲಿವರಾ ರಾಜ್ಯದಲ್ಲಿದೆ. ಈ ಬತ್ತುಕುಳಿಯು ಸುಮಾರು 314 ಮೀ ಆಳ ಮತ್ತು 352 ಮೀಟರ್ ಉದ್ದವಿದೆ ಎಂದು ಸಂಶೋಧಕರ ಅಭಿಪ್ರಾಯ. Image courtesy

  ಸತ್ತ ಸಮುದ್ರದ ಬತ್ತುಕುಳಿ, ಇಸ್ರೇಲ್

  ಸತ್ತ ಸಮುದ್ರದ ಬತ್ತುಕುಳಿ, ಇಸ್ರೇಲ್

  ಸತ್ತ ಸಮುದ್ರವನ್ನು ಬತ್ತುಕುಳಿಗಳಿಗೆ ತವರು ಎನ್ನಬಹುದು. ಸಂಶೋಧಕರ ಪ್ರಕಾರ ಈ ಸಮುದ್ರದ ತೀರದಲ್ಲಿ ಸುಮಾರು ಮೂರು ಸಾವಿರ ಬತ್ತುಕುಳಿಗಳು ಕಾಣಿಸಿಕೊಂಡಿವೆ. ಈ ಪ್ರದೇಶಗಳಲ್ಲಿ ನೀರಿನ ಕೊರತೆಯಿಂದಾಗಿ ಇಂತಹ ಬತ್ತುಕುಳಿಗಳು ಕಾಣಿಸಿಕೊಂಡಿದೆ ಎಂದು ಸಂಶೋಧಕರ ಅಭಿಪ್ರಾಯ. Image courtesy

  ಗ್ವಾಟೆಮಾಲಾ ನಗರದ ಬತ್ತುಗುಂಡಿ 2007, ಗ್ವಾಟೆಮಾಲಾ

  ಗ್ವಾಟೆಮಾಲಾ ನಗರದ ಬತ್ತುಗುಂಡಿ 2007, ಗ್ವಾಟೆಮಾಲಾ

  2007ರ ಫೆಬ್ರವರಿ 23ರಂದು ಕಾಣಿಸಿಕೊಂಡ ಭೂಕುಸಿತದಿಂದಾಗಿ ಗ್ವಾಟೆಮಾಲಾ ನಗರದಲ್ಲಿ ತುಂಬಾ ಆಳ ಹಾಗೂ ದೊಡ್ಡದಾದ ಬತ್ತುಕುಳಿ ಕಾಣಿಸಿಕೊಂಡಿದೆ. ಇಲ್ಲಿದ್ದ ಚರಂಡಿ ವ್ಯವಸ್ಥೆಯಿಂದಾಗಿ ಇಂತಹ ಬತ್ತುಕುಳಿಯು ಕಾಣಿಸಿಕೊಂಡಿದೆ ಎಂದು ವಿಶ್ಲೇಷಿಸಲಾಗಿದೆ. Image courtesy

  English summary

  Earth Day: Largest Sinkholes On The Planet

  In this article, we are here to share the list of the world's largest sinkholes on the planet. These are the changes that need an immediate attention to the damage that we, as humans, are causing to the world. So, read on to know more about the world's largest sinkholes in the planet.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more