Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತಮಾಷೆ ಅನ್ನಿಸಿದರೂ, ಇವರ ಸಾಧನೆಯನ್ನು ಮೆಚ್ಚಲೇಬೇಕು
ಮನೆಯಿಂದ ಕಚೇರಿಗೆ ತೆರಳುವುದೆಂದರೆ ಅದು ಹಿಮಾಲಯ ಪರ್ವತ ಏರಿದಂತೆ. ಬಸ್‌ನಲ್ಲಿ ಗುದ್ದಾಟ, ಸ್ವಂತ ವಾಹನವಾದರೆ ಟ್ರಾಫಿಕ್ ಸಮಸ್ಯೆಯಿಂದಾಗಿ ಬಿಸಿಲು, ಮಳೆ ಎನ್ನದೆ ರಸ್ತೆಯಲ್ಲೇ ಕಳೆಯಬೇಕಾದ ಪರಿಸ್ಥಿತಿ. ದಿನಾಲೂ ನಾವು ಇದನ್ನು ಎದುರಿಸಲೇ ಬೇಕಾಗಿದೆ. ಬೆಂಗಳೂರು, ಮುಂಬಯಿ, ದೆಹಲಿಯಂತಹ ಮಹಾನಗರಗಳನ್ನು ಹೊರತುಪಡಿಸಿದರೂ ಸಣ್ಣ ನಗರಗಳಲ್ಲೂ ಇಂದಿನ ದಿನಗಳಲ್ಲಿ ಅತಿಯಾದ ವಾಹನ ಸಂಖ್ಯೆಯಿಂದ ಪ್ರಯಾಣ ತುಂಬಾ ತ್ರಾಸದಾಯಕವೆನಿಸಿದೆ. ದಿನಾಲೂ ಕೆಲಸಕ್ಕೆ ಹೋಗುವವರ ಪಾಡು ಹೇಳುವುದೇ ಬೇಡ. ಪ್ರಾಣಾಂತಿಕ ಕಾಯಿಲೆ ಇದ್ದರೂ, ಉತ್ತಮ ಸಾಧನೆ ಗೈದ ಧೀರರು
ಈ ಲೇಖನದಲ್ಲಿ ಕೆಲವರು ತುಂಬಾ ವಿಚಿತ್ರವಾಗಿ ತಮ್ಮ ಕಚೇರಿಗೆ ತಲುಪುವ ಬಗ್ಗೆ ಮಾಹಿತಿ ಇದೆ. ಟ್ರಾಫಿಕ್ ಗೊಂದಲದಿಂದ ಪಾರಾಗಲು ಒಂದಾ ನದಿಯನ್ನು ಈಜಿ ಮುಂದೆ ಸಾಗಬೇಕು ಅಥವಾ ದಿನಾಲೂ ವಿಮಾನವನ್ನು ಹಿಡಿಯಬೇಕು. ಇದು ತುಂಬಾ ವಿಚಿತ್ರವೆನಿಸಿದರೂ ಕೆಲವು ಮಂದಿ ಇದನ್ನೇ ಮಾಡುತ್ತಾರೆ. ಕಚೇರಿಗೆ ತೆರಳಲು ಕೆಲವು ಜನರು ಮಾಡುವಂತಹ ಸಾಹಸಗಳನ್ನು ನಾವು ಇಲ್ಲಿ ತಿಳಿದುಕೊಳ್ಳುವ ಮತ್ತು ನೀವು ಕೂಡ ಇದನ್ನೇ ಅನುಸರಿಸಲು ಸಾಧ್ಯವೇ ಎಂದು ನೋಡಿ.

ಸೈಕಲ್‌ನಲ್ಲಿ ಪ್ರಯಾಣ
ಮ್ಯಾನ್ ಹಟ್ಟನ್ ನಲ್ಲಿರುವ 33ರ ಹರೆಯದ ಬೆಂಜಮಿನ್ ಕೆಫರ್ ಎನ್ನುವಾತ ದಿನಾಲೂ ಕಚೇರಿಗೆ ಸೈಕಲ್‌ನಲ್ಲಿ ಪ್ರಯಾಣಿಸುತ್ತಾನೆ. ರಸ್ತೆಗಳು ತುಂಬಿರುತ್ತದೆ, ಟ್ಯಾಕ್ಸಿ ತುಂಬಾ ದುಬಾರಿ ಮತ್ತು ನಡೆದುಕೊಂಡು ಹೋಗುವುದು ಬೋರ್ ಹೊಡೆಸುವುದರಿಂದ ಸೈಕಲ್ ಬಳಸುತ್ತೇನೆ ಎಂದು ಆತ ಹೇಳುತ್ತಾನೆ.
Image courtesy
ಶಾಲೆಗೆ ಹೋಗಲು ಈಜುತ್ತಾ ನದಿ ದಾಟುವ ಶಿಕ್ಷಕರು
Image courtesy
ಪ್ರತೀ ದಿನ ವಿಮಾನಯಾನ
ಬಾರ್ಸಿಲೋನಾದಲ್ಲಿ ವಾಸಿಸುವ ಸ್ಯಾಮ್ ಕೂಕಿ ಎನ್ನುವಾತ ಲಂಡನ್ ನ ಸ್ಟ್ಯಾನ್ ಸ್ಟೆಡ್ ವಿಮಾನ ನಿಲ್ದಾಣಕ್ಕೆ ತೆರಳಲು ಪ್ರತೀ ದಿನ ತುಂಬಾ ಅಗ್ಗದ ವಿಮಾನದಲ್ಲಿ ಪ್ರಯಾಣಿಸುತ್ತಾನೆ. ಆತ 1500 ಕಿ.ಮೀ. ಪ್ರಯಾಣಿಸಲು ತಗಲುವ ಸಮಯ 51/2 ಗಂಟೆ. ಆದರೆ ಆತ ಪ್ರತೀ ದಿನ 9.30ಕ್ಕೆ ಸರಿಯಾಗಿ ಕಚೇರಿಯಲ್ಲಿರುತ್ತಾನೆ. ಲಂಡನ್ ನಲ್ಲಿ ಬಾಡಿಗೆಗೆ ಮನೆ ಪಡೆಯುವುದಕ್ಕಿಂತ ವಿಮಾನ ಪ್ರಯಾಣ ಮಾಡಿ ಸ್ವಲ್ಪ ಹಣ ಉಳಿಸಬಹುದು ಎಂದು ಆತ ಹೇಳುತ್ತಾನೆ.
Image courtesy
ಅಂತರಖಂಡ ವಿಮಾನದಲ್ಲಿ ಪ್ರಯಾಣ
ಅಝುಲ್ ಏರ್ ಲೈನ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇವಿಡ್ ನೀಲ್ ಮೆನ್ ಎನ್ನುವಾತ ತನ್ನ ಮನೆ ಕನೆಕ್ಟ್ ಕ್ಯುಟ್ ನಿಂದ ಸಾವೊ ಪೌಲೊದಲ್ಲಿರುವ ತನ್ನ ಕಚೇರಿಗೆ ವಾರಕ್ಕೊಮ್ಮೆ ತೆರಳಲು 10 ಗಂಟೆಗಳ ಕಾಲ ವಿಮಾನದಲ್ಲಿ ಪ್ರಯಾಣಿಸುತ್ತಾನೆ. ವಿಮಾನ ಕಂಪೆನಿಯವನಿಗೆ ಇದೇನು ದೊಡ್ಡ ವಿಷಯವಲ್ಲ ಅಲ್ಲವೇ?
ಸ್ನೋಬೋರ್ಡ್‌ನಲ್ಲಿ ಪ್ರಯಾಣ
Image courtesy



Click it and Unblock the Notifications



