ಸಾಹಸ ಕ್ರೀಡೆಗಳೋ, ಸಾಯಿಸುವ ಕ್ರೀಡೆಗಳೋ, ದೇವರೇ ಬಲ್ಲ!

By Super

ಈ ಜಗತ್ತಿನಲ್ಲಿ ಎರಡು ವಿಧದ ಜನರಿದ್ದಾರೆ. ಮೊದಲ ವರ್ಗದವರು ಆರಾಮವಾಗಿದ್ದು ಯಾವುದೇ ರೋಮಾಂಚನವಿಲ್ಲದ ನೀರಸ ಬದುಕನ್ನು ಬದುಕಬಯಸಿದರೆ ಇನ್ನೊಂದು ವರ್ಗದವರು ಚಲನಶೀಲರಾಗಿದ್ದು ಸದಾ ಹೊಸ ರೋಮಾಂಚನವನ್ನು ಬಯಸುತ್ತಾರೆ. ಇವರಿಗಾಗಿಯೇ ಕೆಲವು ಕ್ರೀಡೆಗಳು ರೂಪುಗೊಂಡಿದ್ದು ಇವುಗಳನ್ನು ಆಡುವ ವಿಧಾನ ಕೊಂಚ ತಪ್ಪಿದರೂ ಪ್ರಾಣಾಪಾಯ ಎದುರಾಗಬಹುದು. ಇವುಗಳ ಅಪಾಯಗಳಿಂದ ರಕ್ಷಿಸಿಕೊಳ್ಳಲು ರಕ್ಷಣಾ ಕವಚಗಳು ಲಭ್ಯವಿವೆ.

ಜನಪ್ರಿಯ ಕ್ರಿಕೆಟ್ ಆಟವೂ ಒಂದು ಅಪಾಯಕಾರಿಯಾದ ಆಟವಾಗಿದೆ. ಕ್ರಿಕೆಟ್ ಆಟಗಾರ ರಮಣ್ ಲಾಂಬಾ ಕೊನೆಯುಸಿರೆಳೆದಿದ್ದು ಸಹಾ ಒಂದು ಹೊಡೆತ ನೇರವಾಗಿ ತಲೆಗೆ ಬಿದ್ದ ಕಾರಣದಿಂದ. ಆದರೆ ಇದಕ್ಕೂ ಅಪಾಯಕಾರಿಯಾದ ಕ್ರೀಡೆಗಳು ಈ ಜಗತ್ತಿನಲ್ಲಿದ್ದು ಇವನ್ನು ಆಡುವ ಆಟಗಾರರ ಕೊಂಚ ನಿರ್ಲಕ್ಷ್ಯ ಅಥವಾ ರಕ್ಷಣಾ ವ್ಯವಸ್ಥೆಯಲ್ಲಿ ಕೊರತೆಯಿಂದ ಪ್ರಾಣಾಪಾಯ ಉಂಟಾಗಬಹುದು. ರೋಮಾಂಚನ ನೀಡುವ ಈ ಆಟಗಳು ಅಪಾಯಕಾರಿಯಾಗಿದ್ದು ಇಂತಹ ಹತ್ತು ಅತ್ಯಂತ ಹೆಚ್ಚಿನ ಅಪಾಯದ ಆಟಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ:

ವಾಸ್ತವವಾಗಿ ಜಗತ್ತಿನ ಅಪಾಯಕಾರಿ ಕ್ರೀಡೆಗಳನ್ನು ಪಟ್ಟಿಮಾಡಿದರೆ ಹತ್ತಕ್ಕಿಂತಲೂ ಹೆಚ್ಚು ಕ್ರೀಡೆಗಳಿರುವುದು ಕಂಡುಬರುತ್ತದೆ. ಆದರೆ ಇವು ಜನಸಾಮಾನ್ಯರಿಗಾಗಿ ಸರ್ವಥಾ ತಕ್ಕುದಲ್ಲ. ಸಾಮಾನ್ಯವಾಗಿ ಇಪ್ಪತ್ತರಿಂದ ನಲವತ್ತರ ನಡುವಣ ವಯಸ್ಸಿನ ಯುವಜನತೆ ಈ ಕ್ರೀಡೆಗಳತ್ತ ಒಲವು ತೋರುತ್ತಾರೆ. ಜೀವನದ ಪ್ರಬುದ್ದತೆ ಬೆಳೆದಂತೆ ಈ ಅಪಾಯಗಳಿಂದ ದೂರಾಗುವ ಲಕ್ಷಣ ತೋರುತ್ತಾರೆ. ಈ ಆಟಗಳನ್ನು ಆಡುವವರು ಸಾಕಷ್ಟು ಎಚ್ಚರಿಕೆ, ಸಂಪೂರ್ಣವಾದ ಸುರಕ್ಷತೆ, ಉತ್ತಮ ದೇಹದಾರ್ಢ್ಯತೆ ಹಾಗೂ ಮಾನಸಿಕ ಆರೋಗ್ಯವನ್ನು ಹೊಂದಿರುವುದೂ ಅಗತ್ಯ...

ಕುದುರೆ ಸವಾರಿ

ಕುದುರೆ ಸವಾರಿ

ಕುದುರೆ ಸವಾರಿ ಒಂದು ಕೌಶಲ್ಯವಾಗಿದ್ದು ಇದನ್ನು ಪ್ರತ್ಯೇಕವಾಗಿ ಕಲಿಯಬೇಕಾಗುತ್ತದೆ. ಏಕೆಂದರೆ ಕುದುರೆ ನಡೆಯುವಾಗ ಅದರ ಬೆನ್ನು ಮೇಲೆ ಕೆಳಗೆ ಹೋಗುವುದು ಹಾಗೂ ಅದರ ದೇಹ ಉರುಟಾಗಿರುವ ಕಾರಣ ಸವಾರನಿಗೆ ಕುರ್ಚಿಯ ಮೇಲೆ ಕುಳಿತಂತಾಗುವುದಿಲ್ಲ. ಅಲ್ಲದೇ ಕುದುರೆ ಯಾವ ಸಮಯದಲ್ಲಿ ಹೇಗೆ ವರ್ತಿಸುತ್ತದೆ ಎಂದು ಖಡಾಖಂಡಿತವಾಗಿ ಹೇಳಲಾಗುವುದಿಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕುದುರೆ ಸವಾರಿ

ಕುದುರೆ ಸವಾರಿ

ಅದಕ್ಕೆ ಕುದುರೆಯ ಮನಸ್ಸನ್ನು ಗೆಲ್ಲುವುದು ಅಗತ್ಯ. ಕುದುರೆಗಳು ತಾವು ಇಷ್ಟಪಟ್ಟ ಸವಾರನನ್ನೇ ಏರಲು ಒಲವು ತೋರುವ ಕಾರಣ ಸವಾರನಿಗೆ ಕುದುರೆಗಳ ಬಗ್ಗೆ ಸಾಕಷ್ಟು ಅರಿವಿದ್ದು ಅದರ ಮನವನ್ನು ಗೆಲ್ಲುವ ಬಗೆಯನ್ನು ಕಲಿತ ಬಳಿಕವೇ ನಿಜವಾದ ಸವಾರಿ ಸಾಧ್ಯ.

ಬೇಸ್ ಜಂಪಿಂಗ್

ಬೇಸ್ ಜಂಪಿಂಗ್

ಕಡಿದಾದ ಬೆಟ್ಟದ ಅಂಚಿನಿಂದ, ವಿಮಾನದಿಂದ, ಕಟ್ಟಡದ ಎತ್ತರದಿಂದ ನೇರವಾಗಿ ಕೆಳಗೆ ಧುಮುಕಿ ಅರ್ಧ ಎತ್ತರವನ್ನು ಯಾವುದೇ ರಕ್ಷಣೆಯಿಲ್ಲದೇ ಗಾಳಿಯಲ್ಲಿ ತೇಲಿ ಆ ಬಳಿಕ ಪ್ಯಾರಾಶೂಟ್ ತೆರೆದು ವೇಗವನ್ನು ಕಡಿಮೆಗೊಳಿಸಿ ನಿಧಾನಕ್ಕೆ ಇಳಿಯುವುದು ಈ ಕ್ರೀಡೆಯ ಲಕ್ಷಣ.

ಬೇಸ್ ಜಂಪಿಂಗ್

ಬೇಸ್ ಜಂಪಿಂಗ್

ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ಈ ಸಾಹಸವನ್ನು ರೋಮಾಂಚನ ಹೆಚ್ಚಿಸಲು ಬಳಸಲಾಗುತ್ತದೆ. ಆದರೆ ವಾಸ್ತವವಾಗಿ ಇದೊಂದು ಅತ್ಯಂತ ಅಪಾಯಕಾರಿಯಾದ ಕ್ರೀಡೆಯಾಗಿದ್ದು ಒಂದು ಚಿಕ್ಕ ತಪ್ಪು ಸಹಾ ಮಾರಣಾಂತಿಕವಾಗಿದೆ. ಪ್ಯಾರಾಶೂಟ್ ತೆರೆಯಲು ಒಂದು ಕ್ಷಣ ತಡವಾದರೂ ಜೀವನ ಕೊನೆಗೊಳ್ಳಬಹುದು.

ಮೋಟಾರ್ ಸೈಕಲ್ ರೇಸಿಂಗ್

ಮೋಟಾರ್ ಸೈಕಲ್ ರೇಸಿಂಗ್

ವೇಗವನ್ನು ಬಯಸುವ ಯುವಜನತೆಯ ನೆಚ್ಚಿನ ಸವಾರಿ ಎಂದರೆ ಮೋಟಾರು ಸೈಕಲ್ ಗಳು ಅಥವಾ ಬೈಕ್ ಗಳು. ಕಪ್ಪು ಜ್ಯಾಕೆಟ್, ಕೈಗಳಿಗೆ ಕೈಗವಸು ತೊಟ್ಟು ಹೆಲ್ಮೆಟ್, ಶೂ ಧರಿಸಿ ಬೈಕ್ ವೇಗವಾಗಿ ಓಡಿಸಿದರೆ ಜಗತ್ತಿನ ಸುಂದರಿಯರೆಲ್ಲಾ ತಮ್ಮತ್ತ ಮೋಹಗೊಳ್ಳುತ್ತಾರೆ ಎಂಬ ಭ್ರಮೆಯಲ್ಲಿ ಈ ಯುವಕರಿರುತ್ತಾರೆ. ತಮ್ಮ ವೇಗವನ್ನು ತೋರಿಸಿ ತನಗಿಂತ ವೇಗವಾಗಿ ಓಡಿಸುವವರು ಜಗತ್ತಿನಲ್ಲಿಯೇ ಇಲ್ಲ ಎಂದು ತೋರಿಸಿಕೊಡಲು ಈ ರೇಸುಗಳು ಸೂಕ್ತ ತಾಣವಾಗಿವೆ.

ಮೋಟಾರ್ ಸೈಕಲ್ ರೇಸಿಂಗ್

ಮೋಟಾರ್ ಸೈಕಲ್ ರೇಸಿಂಗ್

ಆದರೆ ಅತ್ಯಂತ ಹೆಚ್ಚಿನ ವೇಗದಲ್ಲಿದ್ದಾಗ ತಪ್ಪಿದ ನಿಯಂತ್ರಣದಿಂದ ಬೈಕಿನಿಂದ ಉರುಳಿಬಿದ್ದ ಸವಾರನ ಮುರಿದ ಮೂಳೆಗಳು, ಆಳವಾದ ಗಾಯಗಳು, ತರಚಿದ ಗಾಯಗಳು ಮೊದಲಾದವುಗಳಿಗೆ ಈ ಹೆಲ್ಮೆಟ್ ಮತ್ತು ಜ್ಯಾಕೆಟ್ ಯಾವುದೇ ರೀತಿಯ ರಕ್ಷಣೆ ಸಾಧ್ಯವಿಲ್ಲ ಎಂದು ತಿಳಿದುಬರುತ್ತದೆ. ಆದರೂ ಈ ಅಪಾಯಕಾರಿಯಾದ ಕ್ರೀಡೆಯಲ್ಲಿ ಭಾಗವಹಿಸಲು ಯುವಜನತೆ ಹೆಚ್ಚಿನ ಅಸ್ಥೆ ತೋರುತ್ತಾರೆ.

ಗೂಳಿ ಸವಾರಿ

ಗೂಳಿ ಸವಾರಿ

ಅಮೇರಿಕಾದ ಅತಿ ಪುರಾತನ ಕ್ರೀಡೆಯಾದ ಗೂಳಿಸವಾರಿಯಲ್ಲಿ ಗೂಳಿಯನ್ನು ಬಿಗಿಯಾಗಿ ಕಟ್ಟಿ ಇದರ ಮೇಲೆ ಸವಾರ ಹತ್ತಿ ಕುಳಿದ ಬಳಿಕ ಸಡಿಲಗೊಳಿಸಲಾಗುತ್ತದೆ. ತಮ್ಮ ಬೆನ್ನ ಮೇಲೆ ಸವಾರಿಯನ್ನು ಸಹಿಸದ ಐನೂರು ಆರುನೂರು ಕೇಜಿ ತೂಕದ ಗೂಳಿಗಳು ವೃತ್ತಾಕಾರದಲ್ಲಿ ತಿರುಗುತ್ತಾ ಈ ಸವಾರನನ್ನು ಕೆಡವಲು ಯತ್ನಿಸುತ್ತದೆ.

ಗೂಳಿ ಸವಾರಿ

ಗೂಳಿ ಸವಾರಿ

ಈ ಗೂಳಿಯ ಮೇಲೆ ಹತ್ತು ಸೆಕೆಂಡ್ ಕಳೆದರೆ ಸವಾರ ಗೆದ್ದಂತೆ. ಆದರೆ ಗೂಳಿ ಸವಾರರನ್ನು ಎತ್ತೆಸೆದು ತನ್ನ ಗೊರಸುಗಳಿಂದ ತುಳಿದರೆ ದೊಡ್ಡ ಬಸ್ಸಿನಡಿ ಸಿಲುಕಿದ ದೇಹದಂತಾಗುವ ಅಪಾಯಗಳಿವೆ.

ರೆಸ್ಲಿಂಗ್

ರೆಸ್ಲಿಂಗ್

ಈ ಕ್ರೀಡೆಯಲ್ಲಿ ಕೇವಲ ವೃತ್ತಿಪರರು ಮಾತ್ರ ಆಡಬೇಕೆಂಬ ನಿಯಮವಿದೆ. ಏಕೆಂದರೆ ಪೆಟ್ಟು ತಿನ್ನುವುದೇ ಈ ಕ್ರೀಡೆಯ ಮುಖ್ಯ ಭಾಗ. ಚಿಕ್ಕಂದಿನಿಂದಲೇ ಪೆಟ್ಟುಗಳನ್ನು ತಿಂದೂ ತಿಂದೂ ದೇಹವನ್ನು ಈ ನೋವುಗಳನ್ನು ಸಹಿಸುವಂತೆ ಬೆಳೆಸಿದ ವೃತ್ತಿಪರರಿಗೆ ಮಾತ್ರ ಈ ಆಟವನ್ನು ಆಡಲು ಸಾಧ್ಯ. ಇಲ್ಲದಿದ್ದರೆ ಈ ಕ್ರೀಡೆಯಲ್ಲಿ ಬೀಳುವ ಪೆಟ್ಟು ಮಾರಣಾಂತಿಕವಾಗುತ್ತವೆ.

ರಗ್ಬಿ

ರಗ್ಬಿ

ಚೆಂಡು ಹಿಡಿದ ಆಟಗಾರನ ಮೇಲೆ ಉಳಿದ ಎಲ್ಲಾ ಆಟಗಾರರು ಮುಗಿಬೀಳುವ ಆಟವಾದ ರಗ್ಬಿ ಸಹಾ ಒಂದು ಅಪಾಯಕಾರಿ ಆಟವಾಗಿದೆ.

ರಗ್ಬಿ

ರಗ್ಬಿ

ಏಕೆಂದರೆ ಹಲವಾರು ಆಟಗಾರರ ಭಾರದ ಒತ್ತಡದಲ್ಲಿ ಕೆಳಗೆ ಸಿಲುಕಿದ ಆಟಗಾರನಿಗೆ ಉಸಿರೆಳೆದುಕೊಳ್ಳುವುದೇ ಕಷ್ಟವಾಗುತ್ತದೆ. ಬೆನ್ನುಮೂಳೆಯ ಮುರಿತ, ಮೂಗಿನಲ್ಲಿ ರಕ್ತ ಸೋರುವುದು ಮೊದಲಾದವು ಈ ಕ್ರೀಡೆಯಲ್ಲಿ ಸಾಮಾನ್ಯವಾಗಿವೆ.

ಬಾಕ್ಸಿಂಗ್

ಬಾಕ್ಸಿಂಗ್

ನೇರವಾಗಿ ಮುಖ ಮತ್ತು ಮೂಗಿನ ಮೇಲೆ ಹೊಡೆತ ನೀಡುವ ಬಾಕ್ಸಿಂಗ್ ಒಂದು ಅತ್ಯಂತ ಅಪಾಯಕಾರಿ ಆಟವಾಗಿದೆ. ಎದುರಾಳಿಯನ್ನು ಸೋಲಿಸುವ ಅಂತಿಮ ಹೊಡೆತ ಅಥವಾ ನಾಕೌಟ್ ಹೊಡೆತ ಎಷ್ಟೊಂದು ಅಪಾಯಕಾರಿ ಎಂದರೆ ತಲೆಯೊಳಗಣ ಮೆದುಳು ಅಲ್ಲಾಡಿಬಿಡುತ್ತದೆ. ಬಾಯಿ-ಮೂಗಿನಿಂದ ರಕ್ತ ಸೋರುವುದು ಸಾಮಾನ್ಯ. ಈ ಆಟದಲ್ಲಿ ಹೊಡೆತ ನೀಡದಿದ್ದರೆ ಹೊಡೆತ ತಿನ್ನುವ ಅಪಾಯವಿದೆ.

ಬಾಕ್ಸಿಂಗ್

ಬಾಕ್ಸಿಂಗ್

ಬಾಕ್ಸಿಂಗ್ ಜಗತ್ತಿನ ರಾಜನಂತೆ ಮೆರೆದ ಮೊಹಮ್ಮದ್ ಆಲಿಯವರ ದೇಹ ಇಂದು ಬಾಕ್ಸಿಂಗ್ ಕಾರಣ ಅತಿಯಾಗಿ ಬಳಲಿ ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿ ಶಿಥಿಲವಾಗಿರುವುದೇ ಈ ಕ್ರೀಡೆಯ ಭಯಾನಕತೆಗೆ ಹಿಡಿದ ಕೈಗನ್ನಡಿಯಾಗಿದೆ.

ಬಿಗ್ ವೇವ್ ಸರ್ಫಿಂಗ್

ಬಿಗ್ ವೇವ್ ಸರ್ಫಿಂಗ್

ಆರಡಿಗೂ ಎತ್ತರದ ಅಲೆಗಳು ಬೀಳುವ ಸ್ಥಾನದಲ್ಲಿ ಮರದ ಅಥವಾ ವಿಶೇಷ ತೇಲುವ ವಸ್ತುವಿನಿಂದ ತಯಾರಿಸಿದ ಹಲಗೆಯೊಂದನ್ನು ತೇಲಿಸಿ ಅದರ ಮೇಲೆ ಜಾರುತ್ತಾ ಸವಾರಿ ಮಾಡುವುದು ಸರ್ಫಿಂಗ್ ಕ್ರೀಡೆಯಾಗಿದೆ. ಈ ಕ್ರೀಡೆಯಲ್ಲಿ ಪರಿಣಿತಿ ಪಡೆಯಲು ಈಜು, ದೇಹವನ್ನು ಸಮತೋಲನದಲ್ಲಿರಿಸುವುದು, ಅಲೆಗಳ ಪರಿಯನ್ನು ಅರಿಯುವುದು ಅಗತ್ಯವಾಗಿದೆ. ಇಲ್ಲದಿದ್ದರೆ ಕೊಂಚ ಎಚ್ಚರ ತಪ್ಪಿದರೂ ತಲೆಕೆಳಗಾಗಿ ಸಮುದ್ರದ ನೆಲಕ್ಕೆ ತಲೆ ಬಡಿದು ಪ್ರಜ್ಞೆ ಕಳೆದುಕೊಂಡು ಈಜಲಾಗದೇ ಮುಳುಗಿ ಮೃತಪಡುವ ಅಪಾಯವಿದೆ.

ಚಿಯರ್ ಲೀಡಿಂಗ್

ಚಿಯರ್ ಲೀಡಿಂಗ್

ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳ ಹುಮ್ಮಸ್ಸನ್ನು ಹೆಚ್ಚಿಸುವ ಚಿಯರ್ ಲೀಡರ್ ಹುಡುಗಿಯರು ಒಂದೇ ಲಯದಲ್ಲಿ ನರ್ತಿಸುತ್ತಾ ಫಳಫಳ ಹೊಳೆಯುವ ಚಿಕ್ಕ ಉಡುಗೆ ಮತ್ತು ಬ್ಯಾಡಗೆಗಳನ್ನು ಪ್ರದರ್ಶಿಸುತ್ತಾ ಕರ್ತವ್ಯ ನಿಭಾಯಿಸುತ್ತಾರೆ. ಆದರೆ ವೇಗದ ಗತಿಯ ಹಾಡಿಗೆ ನರ್ತಿಸುವ ಭರದಲ್ಲಿ ಒಂದು ವೇಳೆ ಲಯ ತಪ್ಪಿ ಯಾರದಾದರೊಬ್ಬರ ನರ್ತನದ ಹೆಜ್ಜೆ ತಪ್ಪಾದರೆ ಇದರ ಪರಿಣಾಮ ಭೀಕರವಾಗಿರುತ್ತದೆ. ವಿಶೇಷವಾಗಿ ಒಂದು ಕಾಲನ್ನು ವಿರುದ್ಧ ದಿಕ್ಕಿನಲ್ಲಿ ಗಾಳಿಯಲ್ಲಿ ತಿರುಗಿಸುವ ವೇಳೆ ಸಹನರ್ತಕಿಯ ತಲೆಗೆ ಬಿದ್ದ ಹೊಡೆತ ಅಪಾಯಕಾರಿಯಾಗಿದೆ.

ಹಾಕಿ

ಹಾಕಿ

ಭಾರತದ ರಾಷ್ಟ್ರೀಯ ಕ್ರೀಡೆಯಾಗಿರುವ ಹಾಕಿ ಸಹಾ ಒಂದು ಅಪಾಯಕಾರಿಯಾದ ಕ್ರೀಡೆಯಾಗಿದೆ. ಸತತವಾಗಿ ಒಂದೇ ಭಂಗಿಯಲ್ಲಿ ಹಾಕಿ ಸ್ಟಿಕ್ ನಿಂದ ಚೆಂಡಿಗೆ ಹೊಡೆಯುವ ಹೊಡೆತ ಚೆಂಡಿನ ಬದಲು ಮೂಳೆಗೆ ಬಿದ್ದರೆ ಇದರ ಆಘಾತದಿಂದ ಮೂಳೆ ಮುರಿಯುವ ಸಾಧ್ಯತೆ ಇದೆ.

ಹಾಕಿ

ಹಾಕಿ

ಅಲ್ಲದೇ ಒಳಗಣ ರಕ್ತಸ್ರಾವ, ಮೆದುಳಿನ ಆಘಾತಕ್ಕೂ ಕಾರಣವಾಗಬಲ್ಲುದು. ಆದ್ದರಿಂದ ಹಾಕಿ ಆಟಗಾರರಿಗೆ ಸೂಕ್ತ ತರಬೇತಿ ಹಾಗೂ ಸತತ ಅಭ್ಯಾಸ ಅಗತ್ಯವಾಗಿದೆ.

X
Desktop Bottom Promotion