For Quick Alerts
ALLOW NOTIFICATIONS  
For Daily Alerts

  ಹಂತಕರ ಪ್ರೇಮಪಾಶಕ್ಕೆ ಬಿದ್ದವರ ಖತರ್ನಾಕ್ ಲವ್ ಸ್ಟೋರಿ!

  By Hemanth
  |

  ಪ್ರೀತಿ ಅನ್ನುವುದು ಎಲ್ಲಿ ಹೇಗೆ ಬೇಕಾದರೂ ಹುಟ್ಟಬಹುದು. ಇದಕ್ಕೆ ದೇಶ, ಭಾಷೆ, ಬಡವ ಶ್ರೀಮಂತ ಎನ್ನುವ ಭೇದಭಾವವಿಲ್ಲ. ಯಾರು ಯಾರನ್ನು ಬೇಕಾದರೂ ಪ್ರೀತಿಸಬಹುದು. ಪ್ರೀತಿಸಲು ಕಾರಣಗಳೇ ಬೇಕಾಗಿಲ್ಲ. ಅಂತಹದರಲ್ಲೂ ಅಪರಾಧ ಜಗತ್ತಿನಲ್ಲಿ ಇರುವಂತಹವರನ್ನು ಪ್ರೀತಿಸುವುದೆಂದರೆ ಅದು ನಿಜವಾದ ಪ್ರೀತಿಯೇ ಅಲ್ಲವೇ?

  ಕೆಲವೊಂದು ಕೊಲೆಗಾರರು ಹಾಗೂ ಅಪರಾಧಿಗಳು ತಮ್ಮ ಶಿಕ್ಷೆ ಅನುಭವಿಸುತ್ತಿರುವಂತೆ ಪ್ರೀತಿಯ ಬಲೆಗೆ ಬಿದ್ದು ಬಳಿಕ ಆ ಹುಡುಗಿಯನ್ನೇ ಮದುವೆಯಾದ ಬಗ್ಗೆ ನಾವಿಲ್ಲಿ ಹೇಳಲು ಹೊರಟಿದ್ದೇವೆ. ಅದರಲ್ಲೂ ಕೆಲವರು ಜೈಲಿನಿಂದ ತಪ್ಪಿಸಿಕೊಂಡು ಹೋಗಿ ತಮ್ಮ ಸಂಗಾತಿಯನ್ನು ಭೇಟಿಯಾಗಿದ್ದಾರೆ. ಇನ್ನು ಕೆಲವರಿಗೆ ಜೈಲಿನಲ್ಲಿ ಇರುವಾಗಲೇ ಮಕ್ಕಳು ಆಗಿದೆ.

  ಕೆಲವೊಂದು ಹುಡುಗಿಯರು ಇಂತಹ ಅಪರಾಧಿಗಳ ಮನಸ್ಸು ಮೃಧುವಾಗಿದೆ ಎಂದು ಹೇಳಿದ್ದಾರೆ. ಪ್ರೀತಿಗೆ ಬಿದ್ದ ಕೆಲವರು ಇದೇ ಕೊಲೆಗಾರರಿಂದ ಕೊಲೆಯಾಗಿ ಹೋದರೆ, ಇನ್ನು ಕೆಲವರು ಅವರಿಗೆ ತಪ್ಪಿಸಿಕೊಳ್ಳಲು ನೆರವಾಗಿದ್ದಾರೆ. ಇಂತಹ ಕೆಲವು ವಿಚಿತ್ರ ಪ್ರೇಮಕಥೆಗಳ ಬಗ್ಗೆ ನೀವು ತಿಳಿದುಕೊಳ್ಳಿ.

  Crazy Killers And Their Love Stories
   

  ಅಪರಾಧಿಗೆ ತಪ್ಪಿಸಿಕೊಳ್ಳಲು ನೆರವಾದ ಜೈಲು ಸಿಬ್ಬಂದಿ

  ಜೈಲಿನ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಟಾಬಿ ಯಂಗ್ ಎಂಬಾಕೆಯ ವೈವಾಹಿಕ ಜೀವನ ಅಷ್ಟೊಂದು ಉತ್ತಮವಾಗಿ ಸಾಗುತ್ತಿರಲಿಲ್ಲ. ಇದನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದ ಅಲ್ಲಿದ್ದ ಅಪರಾಧಿ ಜಾನ್ ಮರ್ನಡ್ ಎಂಬಾತ ಆಕೆಯ ಭಾವನೆಗಳನ್ನು ಬಳಸಿಕೊಂಡ ಮತ್ತು ಜೈಲಿನಿಂದ ತಪ್ಪಿಸಿಕೊಳ್ಳಲು ಆಕೆಯ ನೆರವು ಪಡೆದ. ಆದರೆ ಇವರಿಬ್ಬರ ಪ್ರೇಮಕಥೆ ಹೆಚ್ಚು ಸಮಯ ಸಾಗಲಿಲ್ಲ. ಕೇವಲ ಎರಡೇ ವಾರದಲ್ಲಿ ಅವರಿಬ್ಬರನ್ನು ಬಂಧಿಸಲಾಯಿತು.

  ಸರಣಿ ಹಂತಕನಿಗಾಗಿ ವಕೀಲ ಪತಿಯನ್ನೇ ಬಿಟ್ಟ ಸರ್ಕಾರಿ ವಕೀಲೆ

  Crazy Killers And Their Love Stories

  ಸರ್ಕಾರಿ ವಕೀಲೆಯಾಗಿದ್ದ ರೊಸಲಿ ಮಾರ್ಟಿನ್ಜ್ ಎಂಬಾಕೆ ಆಸ್ಕರ್ ರಾಯ್ ಬೊಲಿನ್ ಎಂಬ ಸರಣಿ ಹಂತಕನ ಪರವಾಗಿ ವಾದ ಮಾಡುತ್ತಿದ್ದಳು. ಆತನ ಕಥೆಯನ್ನು ಕೇಳಿದ ಆಕೆ ಆತನ ಪ್ರೇಮದಲ್ಲಿ ಸಿಲುಕಿ ಇದರಿಂದ ಹೊರಬರದಂತೆ ಆದಳು. ಗಲ್ಲು ಶಿಕ್ಷೆಗೆ ಗುರಿಯಾಗಲಿದ್ದ ಸರಣಿ ಹಂತಕನಿಗಾಗಿ ವಕೀಲೆ ತನ್ನ ನಾಲ್ಕು ಮಕ್ಕಳು ಹಾಗೂ ವಕೀಲನಾಗಿದ್ದ ಪತಿಯನ್ನು ಬಿಟ್ಟು ಹೋದಳು.

  ಮೊದಲ ಪತ್ನಿಯನ್ನೇ ಕೊಂದ! 

  Crazy Killers And Their Love Stories

  ಮೊದಲ ಪತ್ನಿಯನ್ನು ಕೊಂದ ಆರೋಪದ ಮೇಲೆ ಫಿಲಿಪ್ ಕಾರ್ಲ್ ಜಬ್ಲೊನಸ್ಕಿ ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಿದ್ದ. ಇದೇ ವೇಳೆ ಆತ ತನಗೊಬ್ಬಳು ಪತ್ರಮಿತ್ರ ಬೇಕೆಂದು ಜಾಹೀರಾತು ಹಾಕಿದ. ಇದನ್ನು ನೋಡಿದ ಕರೋಲ್ ಸ್ಪಿಡೊನಿ ಎಂಬಾಕೆ ಆತನಿಗೆ ಪತ್ರಮಿತ್ರೆಯಾದಳು. ಅವರಿಬ್ಬರಲ್ಲಿ ಪ್ರೀತಿ ಮೂಡಿತು. ಮದುವೆ ಕೂಡ ಆದರು. ಆದರೆ ಕೆಲವೇ ಸಮಯದಲ್ಲಿ ಆಕೆ ಹಾಗೂ ಆಕೆಯ ತಾಯಿಯನ್ನು ಆತ ಕೊಲೆ ಮಾಡಿದ.

  ನೈಟ್ ಸ್ಟಾಕರ್ ರಿಚರ್ಡ್ ರಮಿರೆಜ್ ಮದುವೆ

  Crazy Killers And Their Love Stories

  ರಿಚರ್ಡ್ ರಮಿರೆಜ್ ಎಂಬಾತನನ್ನು ನೈಟ್ ಸ್ಟಾಕರ್ ಎಂದೇ ಕರೆಯಲಾಗುತ್ತಿತ್ತು. ಆತ ಕೊಲೆ, ಅತ್ಯಾಚಾರ ಮಾಡುತ್ತಿದ್ದ. ಆತನಿಗೆ ಬಲಿಯಾದವರು ಸುಮಾರು 14 ಮಂದಿ. ಆದರೆ ಡೊರೀನ್ ಲಿಯೊ ಎಂಬಾಕೆ ಆತನಲ್ಲಿ ಏನೋ ವಿಶೇಷ ಕಂಡು ಆತನನ್ನು ಮದುವೆಯಾದಳು. ಆತನಿಗೂ ಅಪರಾಧಕ್ಕೂ ಯಾವುದೇ ಸಂಬಂಧವಿಲ್ಲವೆಂದು ಆಕೆ ಹೇಳುತ್ತಿದ್ದಳು. 1996ರ ಅಕ್ಟೋಬರ್ 3ರಂದು ಅವರಿಬ್ಬರು ಮದುವೆಯಾಗಿದ್ದರು. 2006ರಲ್ಲಿ ರಮಿರೆಜ್ ಜೈಲಿನಲ್ಲಿ ಸಾವನ್ನಪ್ಪಿದ.

  English summary

  Crazy Killers And Their Love Stories

  These are the stories of crazy lovers who've wooed women with their charm and have even got married, escaped, and even fathered a child while they were still in the prison. This article is about the ladies who found the softer side of these criminals. Some were even murdered by the same criminals, while others helped them to escape. Find out more about these interesting love stories of crazy killers, read on!
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more