Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಿಶ್ವವನ್ನೇ ತನ್ನತ್ತ ಸೆಳೆಯುತ್ತಿರುವ ವಿಶಿಷ್ಟ ಸಾಹಸಗಳು
ಇಂಟರ್ನೆಟ್ ಒಂದು ಇದ್ದರೆ ನೀವು ಮಾಡುವಂತಹ ಯಾವುದೇ ಸಾಹಸಗಳು ಕೂಡ ಕಾಡ್ಗಿಚ್ಚಿನಂತೆ ಹರಡಿ ವಿಶ್ವದೆಲ್ಲೆಡೆ ವ್ಯಾಪಿಸುತ್ತದೆ. ನೀವು ಮಾಡುವಂತಹ ಸಮಾಜ ಸೇವೆ ಆಗಿರಬಹುದು ಅಥವಾ ದೊಡ್ಡ ಮಟ್ಟದ ಸಾಹಸವೇ ಆಗಿರಬಹುದು. ಅದು ಒಂದೇ ನಿಮಿಷದಲ್ಲಿ ವೀಡಿಯೋ ಮೂಲಕ ಜನರನ್ನು ತಲುಪಿ ಅದೊಂದು ಟ್ರೆಂಡ್ ಆಗಿಬಿಡಬಹುದು.
ಇಂತಹ ಹಲವಾರು ಸಾಹಸಗಳನ್ನು ನಾವು ಇಂಟರ್ನೆಟ್‌ನಲ್ಲಿ ನೋಡುತ್ತಲಿರುತ್ತೇವೆ. ಕೆಲವೊಂದು ಸಾಹಸಗಳು ತುಂಬಾ ಅಪಾಯಕಾರಿ ಹಾಗೂ ಜೀವಕ್ಕೆ ಅಪಾಯವನ್ನು ಉಂಟು ಮಾಡಬಹುದು. ಆದರೂ ನಾವು ಅದನ್ನು ಮಾಡುತ್ತೇವೆ ಮತ್ತು ಎಲ್ಲರೂ ಇದನ್ನು ನೋಡಬೇಕೆಂದು ಬಯಸುತ್ತೇವೆ.

ಆದರೆ ಇಂತಹ ಸಾಹಸಗಳನ್ನು ಮಾಡುವಾಗ ಏನೇ ಆದರೂ ಕೂಡ ಅದಕ್ಕೆ ನಾವೇ ಜವಾಬ್ದಾರರಾಗುತ್ತೇವೆ. ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ಇಂತಹ ಕೆಲವೊಂದು ವೀಡಿಯೋಗಳನ್ನು ನೋಡಿ ನಾವು ಕೂಡ ಇದನ್ನು ಒಮ್ಮೆಯಾದರೂ ಮಾಡಲು ಪ್ರಯತ್ನಿಸಿರುತ್ತೇವೆ. ಇಂತಹದ್ದೇ ಕೆಲವೊಂದು ಸಾಹಸಗಳನ್ನು ಇಲ್ಲಿ ನೀಡಲಾಗಿದೆ. ಓದಿಕೊಳ್ಳಿ....
ಬೆಂಕಿಯ ಸಾಹಸ
ಇದು ತುಂಬಾ ಕ್ರೇಜಿಯಾಗಿರುವ ಸಾಹಸ. ದೇಹದ ಒಂದು ಭಾಗಕ್ಕೆ ಆಲ್ಕೋಹಾಲ್ ಅಥವಾ ಬೆಂಕಿಹತ್ತಿಕೊಳ್ಳುವ ಯಾವುದೇ ದ್ರಾವಣವನ್ನು ಸ್ಪ್ರೇ ಮಾಡಿಕೊಂಡು ಅದಕ್ಕೆ ಬೆಂಕಿ ಹಚ್ಚುವುದು. ಇದು ತುಂಬಾ ಅಪಾಯಕಾರಿ. ಆದರೆ ಇಂಟರ್ನೆಟ್‌ನಲ್ಲಿ ಹದಿಹರೆಯದವರು ಇಂತಹ ಸಾಹಸಗಳನ್ನು ಮಾಡುವಂತಹ ಹಲವಾರು ವೀಡಿಯೋಗಳಿವೆ.
Image courtesy
ಹೊಕ್ಕಳು ಮುಟ್ಟುವ ಸಾಹಸ
ಸಾಮಾಜಿಕ ಜಾಲ ತಾಣಗಳಲ್ಲಿ ಹುಚ್ಚೆಬ್ಬಿಸಿರುವ ಇದನ್ನು ಬೆಲ್ಲಿ ಬಟನ್ ಸಾಹಸ ಎನ್ನುತ್ತಾರೆ. ಇದು ಮೊದಲು ಚೀನಾದಲ್ಲಿ ಆರಂಭವಾಗಿ ಈಗ ವಿಶ್ವದೆಲ್ಲೆಡೆ ವ್ಯಾಪಿಸಿದೆ. ಜನರು ತಮ್ಮ ಹೊಕ್ಕಳು ಸ್ಪರ್ಶಕ್ಕೆ ಕೈಯನ್ನು ಹಿಂದಿನಿಂದ ತಂದು ಸ್ಪರ್ಶಿಸುವ ಚಿತ್ರವನ್ನು ತಾವೇ ಚಿತ್ರೀಕರಿಸಬೇಕು. ಇದು ಒಂದು ರೀತಿಯ ಸಾಹಸವೇ ಸರಿ.
ಕಾಂಡಮ್ ಚಾಲೆಂಜ್
Image courtesy
ಈ ಸಾಹಸವನ್ನು ಹಲವಾರು ಜನರು ಪ್ರಯತ್ನಿಸಿರುವ ವೀಡಿಯೋವನ್ನು ನೀವು ನೋಡಿರಬಹುದು. ಕಾಂಡಮ್ ನಲ್ಲಿ ನೀರನ್ನು ತುಂಬಿಕೊಂಡು ಚಾಲೆಂಜ್ ಸ್ವೀಕರಿಸುವ ವ್ಯಕ್ತಿಯ ತಲೆಯ ಮೇಲೆ ಇದನ್ನು ಇಡಲಾಗುತ್ತದೆ. ಇದರಲ್ಲಿ ವಿಶೇಷ ಏನೆಂದರೆ ವ್ಯಕ್ತಿಯ ಕುತ್ತಿಗೆ ಹಾಗೂ ಮುಖದ ಮೇಲೆ ಇದನ್ನು ಹಾಗೆ ಕಟ್ಟಬೇಕು.
ಅಂಟುಪಟ್ಟಿ ಸಾಹಸ
Image courtesy



Click it and Unblock the Notifications



