Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಈ ದೇಶಗಳ ಜನರು ಮದ್ದೇ ತಿನ್ನಲ್ಲವಂತೆ! ನಂಬುತ್ತೀರಾ..?
ಶ್ರೀಮಂತನೇ ಆಗಿದ್ದರೂ ಆತನಿಗೆ ಅನಾರೋಗ್ಯ ಬಂದೇ ಬರುತ್ತದೆ ಎನ್ನುವ ಮಾತಿದೆ. ಇದು ನಿಜ ಕೂಡ. ಆದರೆ ಕೆಲವೊಂದು ದೇಶಗಳಲ್ಲಿ ಜನರು ಅನಾರೋಗ್ಯಕ್ಕೊಳಗಾಗುವುದು ಅಪರೂಪವಂತೆ. ಇದನ್ನು ಕೇಳಿ ನಮಗೆ ಅಚ್ಚರಿಯಾದರೂ ಇದನ್ನು ನಂಬಲೇಬೇಕು. ಮುಂದೆ ಓದಿ...
ರೋಗ ಹೇಳಿಕೇಳಿ ಬರುವುದಿಲ್ಲ. ಅದು ಯಾರನ್ನು ಬೇಕಿದ್ದರೂ ಕಾಡಬಹುದು. ಎಂತಹ ಶ್ರೀಮಂತನೇ ಆಗಿದ್ದರೂ ಆತನಿಗೆ ಅನಾರೋಗ್ಯ ಬಂದೇ ಬರುತ್ತದೆ ಎನ್ನುವ ಮಾತಿದೆ. ಇದು ನಿಜ ಕೂಡ. ಆದರೆ ಕೆಲವೊಂದು ದೇಶಗಳಲ್ಲಿ ಜನರು ಅನಾರೋಗ್ಯಕ್ಕೊಳಗಾಗುವುದು ಅಪರೂಪವಂತೆ. ಇದನ್ನು ಕೇಳಿ ನಮಗೆ ಅಚ್ಚರಿಯಾದರೂ ಇದನ್ನು ನಂಬಲೇಬೇಕು. ಈ ದೇಶದಲ್ಲಿರುವ ಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿನ ಮಟ್ಟದಲ್ಲಿದೆ ಮತ್ತು ಅವರು ಯಾವುದೇ ಪರಿಸ್ಥಿತಿಯನ್ನು ಎದುರಿಸಬಲ್ಲರು.

ಈ ಲೇಖನದಲ್ಲಿ ಇಂತಹ ದೇಶಗಳ ಬಗ್ಗೆ ನಾವು ತಿಳಿಸಿಕೊಡಲಿದ್ದೇವೆ. ಯಾವ ದೇಶಗಳಲ್ಲಿ ತುಂಬಾ ಆರೋಗ್ಯವಾಗಿ ಉಳಿಯಬಹುದು ಮತ್ತು ದೇಹವನ್ನು ಔಷಧಿ ತೆಗೆದುಕೊಳ್ಳದೆ ಯಾವ ರೀತಿ ಕಾಪಾಡಿಕೊಳ್ಳಬಹುದು ಎಂದು ಇಲ್ಲಿ ಹೇಳಲಾಗಿದೆ. ಇಲ್ಲಿ ಕೊಟ್ಟಿರುವ ದೇಶಗಳನ್ನು ಓದುತ್ತಿರುವಂತೆ ನೀವು ಕೂಡ ವೀಸಾ ಪಡೆದು ಅಲ್ಲಿಗೆ ತೆರಳುವ ತಯಾರಿ ಮಾಡಬಹುದು. ವಿಚಿತ್ರ ಕಾಯಿಲೆ ಇರುವ ಹಾಲಿವುಡ್ ಸೆಲೆಬ್ರಿಟಿಗಳು
ಕತಾರ್
ಈ ದೇಶದಲ್ಲಿ ರಾಷ್ಟ್ರೀಯ ಆರೋಗ್ಯ ಸುರಕ್ಷಾ ವ್ಯವಸ್ಥೆಯಿದೆ. ಕತಾರ್‌ನ ಜನರು ಇತರ ದೇಶಗಳ ಜನರಿಗಿಂತ ಹೆಚ್ಚು ಆರೋಗ್ಯವಾಗಿರುತ್ತಾರೆ. ಈ ದೇಶದ ಜನರಲ್ಲಿ ಉನ್ನತ ಮಟ್ಟದ ರೋಗ ನಿರೋಧಕ ಶಕ್ತಿಯಿದೆ. ಇಲ್ಲಿನ ಸರಕಾರ ಆರೋಗ್ಯದ ಬಗ್ಗೆ ಎಷ್ಟು ಗಮನಹರಿಸುತ್ತಿದೆ ಎಂದರೆ ಇಲ್ಲಿನ ಪ್ರತೀ 1000 ಜನರಿಗೆ 7.7 ಜನ ವೈದ್ಯರಿದ್ದಾರೆ ಮತ್ತು ಇಲ್ಲಿ ಸಾವಿನ ಸಂಖ್ಯೆ ತುಂಬಾ ಕಡಿಮೆ.
ಜಪಾನ್
ಕಳೆದ 65 ವರ್ಷಗಳಲ್ಲಿ ಇಲ್ಲಿನ ಜನಸಂಖ್ಯೆ ಕೇವಲ ¼ ಭಾಗದಷ್ಟು ಮಾತ್ರ ಹೆಚ್ಚಾಗಿರುವುದು ಇಲ್ಲಿನ ಜನರ ಆರೋಗ್ಯ ಮತ್ತು ಹೆಚ್ಚು ವರ್ಷ ಜೀವಿಸುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಈ ದೇಶದಲ್ಲಿ ಆಗಾಗ ವೈದ್ಯಕೀಯ ಪರೀಕ್ಷೆ, ಆರೈಕೆ ಮತ್ತು ಸೋಂಕಿನಿಂದ ಬರುವ ಕಾಯಿಲೆಗಳ ನಿರ್ನಾಮ ಮಾಡಲಾಗುತ್ತದೆ. ನಿಮ್ಮ ಆರೋಗ್ಯ ಸುಧಾರಿಸಲು ಬೇರೆ ದೇಶಕ್ಕೆ ಹೋಗಬೇಕೆಂದಿದ್ದರೆ ಆಗ ಜಪಾನ್ ಒಳ್ಳೆಯ ಆಯ್ಕೆ. ಪ್ರಾಣಾಂತಿಕ ಕಾಯಿಲೆ ಇದ್ದರೂ, ಉತ್ತಮ ಸಾಧನೆ ಗೈದ ಧೀರರು
ಲಕ್ಸಂಬರ್ಗ್
ಈ ದೇಶದ ಜನರು ಆರೋಗ್ಯಕ್ಕಾಗಿ ಅತೀ ಹೆಚ್ಚಿನ ಹಣವನ್ನು ವ್ಯಯ ಮಾಡುತ್ತಾರೆ. ಇಲ್ಲಿನ ಜನರು ಅನಾರೋಗ್ಯಕ್ಕೆ ಒಳಗಾಗುವುದು ತುಂಬಾ ಕಡಿಮೆ. ಆದರೆ ಇಲ್ಲಿನ ಜನರು ಬೊಜ್ಜು ಬೆಳೆಸಿರುವ ಹಾಗೂ ಅತಿಯಾದ ಮದ್ಯಪಾನ ಮಾಡುವುದರಿಂದ ಈ ದೇಶದ ರೇಟಿಂಗ್ ಕುಸಿದಿದೆ.
ಸ್ವಿಟ್ಜರ್ಲೆಂಡ್
ಭೂಮಿಯ ಅತ್ಯಂತ ಸುಂದರ ತಾಣಗಳಲ್ಲಿ ಒಂದಾಗಿರುವ ಸ್ವಿಟ್ಜರ್ಲೆಂಡ್ ವಿಶ್ವದಲ್ಲಿ ಮೂರನೇ ಅತೀ ಆರೋಗ್ಯವಂತ ದೇಶವಾಗಿದೆ. ಇಲ್ಲಿ 1000ದಲ್ಲಿ 1 ವ್ಯಕ್ತಿ ಮಾತ್ರ ಸಾವನ್ನಪ್ಪುತ್ತಾನೆ. ಇದರಿಂದ ಈ ದೇಶ ಭೂಮಿಯ ಮೇಲೆ ಉಳಿಯಲು ಅತ್ಯಂತ ಯೋಗ್ಯವೆನಿಸಿದೆ. ವಿಚಿತ್ರ ಕಾಯಿಲೆಗಳು-ನೆನೆಸಿಕೊಂಡರೇ ಭಯವಾಗುತ್ತದೆ..!



Click it and Unblock the Notifications


