For Quick Alerts
ALLOW NOTIFICATIONS  
For Daily Alerts

ಅತಿರೇಕದ ಡಯಟ್ ಮಾಡಿ, ಕೊನೆಗೆ ರೋಗಿಗಳಾಗಿ ಬಿಟ್ಟರು!

By Super
|

ಒಂದು ಕಾಲದಲ್ಲಿ ಭಾರತದಲ್ಲಿ ಆಹಾರದ ಕ್ಷಾಮವಿತ್ತು. ಅಂದಿನ ಪ್ರಧಾನಿ ಶಾಸ್ತ್ರಿಯವರೇ ಒಪ್ಪೊತ್ತು ಊಟಮಾಡಲು ಕರೆನೀಡಿ ಸ್ವತಃ ತಾವೂ ಅನುಸರಿಸುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ. ಆಹಾರಕ್ಕೆ ತಾತ್ವಾರ ಇಂದು ಇಲ್ಲ. ಬದಲಿಗೆ ಇನ್ನಷ್ಟು ಸುಲಭವಾಗಿದೆ. ಸೌಲಭ್ಯಗಳೂ ಹೆಚ್ಚಾಗಿವೆ. ಅಂತೆಯೇ ಸೋಮಾರಿತನವೂ ಮೈಗೂಡಿ ಸ್ಥೂಲಕಾಯವೂ ಹೆಚ್ಚುತ್ತಿದೆ. ಇದನ್ನು ಕಡಿಮೆಗೊಳಿಸಲು ಡಯಟ್ ಮಾಡುವುದು ಅಂದರೆ ಒಂದು ವಿಶಿಷ್ಟ ಬಗೆಯ ಆಹಾರವನ್ನು ಒಂದು ಮಿತಿಯೊಳಗೇ ಸೇವಿಸುವುದು.

ಈ ಕ್ರಮ ಹೆಚ್ಚಾಗಿ ಮೇಲ್ಮಧ್ಯಮ ಮತ್ತು ಮೇಲ್ವರ್ಗದ ಜನತೆಯಲ್ಲಿ ಹೆಚ್ಚು ಕಂಡುಬರುತ್ತಿದೆ. ಉಳಿದ ವರ್ಗದಲ್ಲಿಯೂ ಇದು ಇಲ್ಲವೇ ಇಲ್ಲವಂತಿಲ್ಲ, ಆದರೆ ಇವರ ಸಂಖ್ಯೆ ಕಡಿಮೆ. ಆದರೆ ಇದಕ್ಕೊಂದು ಗುರಿ ಇರುತ್ತದೆ. ಇದಕ್ಕೂ ಮಿಗಿಲಾಗಿ ಡಯಟ್ ಮಾಡುತ್ತಾ ಹೋದರೆ? ಪ್ರಾರಂಭದಲ್ಲಿ ಕಷ್ಟಕರವಾದರೂ ಕ್ರಮೇಣ ದೇಹ ಈ ಕ್ರಮಕ್ಕೆ ಒಗ್ಗಿಕೊಂಡು ಬೇರೆ ಆಹಾರದತ್ತ ಮನಸ್ಸೇ ಬರುವುದಿಲ್ಲ. ಕೆಲವರಿಗೆ ಇದು ಒಂದು ವ್ಯಸನವಾಗಿ ಇದರ ಪರಿಣಾಮ ತೀರಾ ಅತಿರೇಕಕ್ಕೆ ಹೋಗುತ್ತದೆ. ಅಚ್ಚರಿಯ ಜಗತ್ತು: ಇವರು ಕೈಗೆ ಸಿಕ್ಕಿದನ್ನೆಲ್ಲಾ ತಿಂದು ಬಿಡುತ್ತಾರೆ!

ಈ ಲೇಖನದಲ್ಲಿ ಇಂತಹ ಅತಿರೇಕದತ್ತ ಸಾಗಿದವರ ಬಗ್ಗೆ ಕೆಲವು ಅಮೂಲ್ಯ ಮಾಹಿತಿಯನ್ನು ಸಂಗ್ರಹಿಸಿ ಕೆಳಗಿನ ಸ್ಲೈಡ್ ಷೋ ಮೂಲಕ ನೀಡಲಾಗಿದೆ. ಕೆಲವರ ಆರೋಗ್ಯ ತೀರಾ ಹದಗೆಟ್ಟಿದ್ದರೆ ಭಾರತದ ಮಾತಾಜಿ ಎಂಬ ಬಾಬಾ ಕಳೆದ ಎಪ್ಪತ್ತು ವರ್ಷಗಳಿಂದ ಅನ್ನನೀರನ್ನೇ ಕುಡಿಯದೇ ವೈದ್ಯವಿಜ್ಞಾನಕ್ಕೇ ಸವಾಲಾಗಿದ್ದಾರೆ. ಇನ್ನೊಬ್ಬರು ಹದಿಮೂರು ವರ್ಷ ಸತತವಾಗಿ ಕೇವಲ ಚಿಕನ್ ನಗೆಟ್ ತಿಂದರೆ ಇನ್ನೊಬ್ಬ ಮಹಿಳೆ ಕೇವಲ ಬಾಳೆಹಣ್ಣನ್ನೇ ಆಹಾರವಾಗಿಸಿಕೊಂಡಿದ್ದಾರೆ. ಬನ್ನಿ, ಇಂತಹ ವಿಚಿತ್ರ ಸಂಗತಿಗಳ ಬಗ್ಗೆ ಅರಿಯೋಣ....

ಹದಿನೈದು ವರ್ಷಗಳಿಂದ ಚಿಕನ್ ನಗೆಟ್ ತಿನ್ನುತ್ತಿರುವ ಯುವತಿ

ಹದಿನೈದು ವರ್ಷಗಳಿಂದ ಚಿಕನ್ ನಗೆಟ್ ತಿನ್ನುತ್ತಿರುವ ಯುವತಿ

ಸ್ಟ್ಯಾಸಿ ಇರ್ವಿನ್ ಎಂಬ ಯುವತಿಗೆ ಈಗ ಹದಿನೇಳು ವರ್ಷ. ಈಕೆ ಎರಡು ವರ್ಷದವಳಿದ್ದಾಗ ಚಿಕನ್ ನಗೆಟ್ ತಿನ್ನುವ ಅಭ್ಯಾಸ ಅಂಟಿಕೊಂಡಿತು. ಅಂದಿನಿಂದ ಈಕೆ ಚಿಕನ್ ನಗೆಟ್ ಬಿಟ್ಟು ಬೇರೇನನ್ನೂ ತಿಂದೇ ಇಲ್ಲ. ಇತ್ತೀಚೆಗೆ ಕುಸಿದು ಬಿದ್ದ ಈಕೆಯನ್ನು ಆಸ್ಪತ್ರೆಗೆ ಸೇರಿಸಿದ ಬಳಿಕ ಆಕೆಯನ್ನು ಪರೀಕ್ಷಿಸಿದ ಬಳಿಕ ಆಶ್ಚರ್ಯಗೊಂಡರು. ತಕ್ಷಣವೇ ಆಹಾರ ಅಭ್ಯಾಸವನ್ನು ಬದಲಿಸದಿದ್ದರೆ ಆಕೆಗೆ ಸಾವೂ ಸಂಭವಿಸಬಹುದು ಎಂದು ಕಟ್ಟೆಚ್ಚರ ನೀಡಿದ್ದಾರೆ. Image courtesy

ಹದಿಮೂರು ವರ್ಷಗಳಿಂದ ನೂಡಲ್ಸ್ ಮಾತ್ರವೇ ಈಕೆಗೆ ಆಹಾರ

ಹದಿಮೂರು ವರ್ಷಗಳಿಂದ ನೂಡಲ್ಸ್ ಮಾತ್ರವೇ ಈಕೆಗೆ ಆಹಾರ

ಜಾರ್ಜಿ ರೆಡ್ಮನ್ ಎಂಬ ಯುವತಿ Isle of Wight ಎಂಬ ಪ್ರದೇಶದವಳಾಗಿದ್ದು ಕಳೆದ ಹದಿಮೂರು ವರ್ಷಗಳಿಂದ ಕೇವಲ ನೂಡಲ್ಸ್ ಮಾತ್ರ ತಿನ್ನುತ್ತಾ ಬಂದಿದ್ದಾಳೆ. ಹದಿನೆಂಟು ವರ್ಷದ ವಯಸ್ಸಿನ ಈಕೆ ತನ್ನ ಐದನೆಯ ವಯಸ್ಸಿನಿಂದಲೇ ನೂಡಲ್ಸ್ ತಿನ್ನುತ್ತಾ ಬಂದಿದ್ದಾಳೆ. ಈಕೆಯನ್ನು ಪರೀಕ್ಷಿಸಿದ ವೈದ್ಯರು ಈಕೆಯ ಶರೀರ ಎಂಭತ್ತು ವರ್ಷದ ವೃದ್ಧೆಯಂತೆ ಆಗಿದ್ದು ಭಾರೀ ಪ್ರಮಾಣದ ಪೋಷಕಾಂಶಗಳ ಕೊರತೆಯಿಂದ ಹೀಗಾಗಿದೆ ಎಂದು ಹೇಳಿದ್ದಾರೆ. Image courtesy

ಈ ವ್ಯಕ್ತಿಗೆ ಪಿಜ್ಜಾ ಮಾತ್ರ ಪಂಚಪ್ರಾಣ

ಈ ವ್ಯಕ್ತಿಗೆ ಪಿಜ್ಜಾ ಮಾತ್ರ ಪಂಚಪ್ರಾಣ

ಮೇರಿಲ್ಯಾಂಡ್ ರಾಜ್ಯದ ಡಾನ್ ಜಾನ್ಸೆನ್ ಎಂಬ ವ್ಯಕ್ತಿಗೆ ಸಸ್ಯಾಹಾರಿಯಾಗಬೇಕೆಂಬ ಬಯಕೆಯಾಗಿತ್ತು. ಆದರೆ ಇತರರಂತೆ ತರಕಾರಿ ತಿನ್ನುವ ಬದಲು ಚೀಸ್ ನಿಂದ ಮಾಡಿದ ಪಿಜ್ಜಾ ತಿಂದರೆ ಹೇಗೆ ಎಂದು ಮೊದಲು ಪ್ರಾರಂಭಿಸಿದ. ಇದು ಇಪ್ಪತ್ತೈದು ವರ್ಷದ ಹಿಂದಿನ ಕತೆ. ಈ ಚೀಸ್ ಪಿಜ್ಜಾ ಈತನಿಗೆ ಎಷ್ಟು ಹುಚ್ಚು ಹಿಡಿಸಿಬಿಟ್ಟಿತೆಂದರೆ ಅಂದಿನಿಂದ ಆತ ದಿನಕ್ಕೆ ಮೂರೂ ಹೊತ್ತೂ ಚೀಸ್ ಪಿಜ್ಜಾವನ್ನೇ ತಿನ್ನುತ್ತಾ ಬಂದಿದ್ದಾನೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

Image courtesy

ಈ ವ್ಯಕ್ತಿಗೆ ಪಿಜ್ಜಾ ಮಾತ್ರ ಪಂಚಪ್ರಾಣ

ಈ ವ್ಯಕ್ತಿಗೆ ಪಿಜ್ಜಾ ಮಾತ್ರ ಪಂಚಪ್ರಾಣ

ನಡುನಡುವೆ ಬೇಜಾರಾದಾಗ ಮಾತ್ರ ಒಂದು ಬೋಗುಣಿ ನೆನೆಸಿಟ್ಟ ಧಾನ್ಯಗಳನ್ನು ತಿನ್ನುತಿದ್ದ. ಅದೂ ವರ್ಷಕ್ಕೊಂದೋ, ಎರಡೋ ಬಾರಿ ಅಷ್ಟೇ. ಇಷ್ಟು ವರ್ಷಗಳಿಂದಲೂ ಚೀಸ್ ತಿನ್ನುತ್ತಾ ಬಂದಿದ್ದರೂ ಈತನ ರಕ್ತದಲ್ಲಿ ಕೊಲೆಸ್ಟ್ರಾಲ್ ಅಷ್ಟೊಂದು ಹೆಚ್ಚಾಗಿಲ್ಲ, ನಿಯಂತ್ರಣದೊಳಗೇ ಇದೆ ಎಂದು ಈತನನ್ನು ಪರೀಕ್ಷಿಸಿದ ವೈದ್ಯರೂ ಹೇಳಿದ್ದಾರಂತೆ. ಅಂದರೆ ಮುಂದಿನ ಇಪ್ಪತ್ತೈದು ವರ್ಷದವರೆಗೆ ಮೆನು ಬದಲಿಸುವ ಇರಾದೆ ಇರಲಿಕ್ಕಿಲ್ಲ.

ಈತನಿಗೆ ಎರಡು ತಿಂಗಳ ಕಾಲ ಆಲುಗಡ್ಡೆಯೇ ಗತಿ

ಈತನಿಗೆ ಎರಡು ತಿಂಗಳ ಕಾಲ ಆಲುಗಡ್ಡೆಯೇ ಗತಿ

ಕೆಲವರು ಕೋಪವನ್ನು ತೋರ್ಪಡಿಸಿಕೊಳ್ಳಲು ಊಟ ಬಿಡುತ್ತಾರೆ. ಕೆಲವರು ವ್ಯತಿರಿಕ್ತವಾಗಿ ಏನನ್ನು ತಿನ್ನಬೇಡಿ ಎಂದು ಹೇಳುತ್ತಾರೋ ಅದನ್ನೇ ತಿನ್ನುತ್ತಾರೆ. ಆದರೆ ಕ್ರಿಸ್ ವಾಯ್ಟ್ ಎಂಬ ವ್ಯಕ್ತಿ ಪ್ರತಿಭಟನೆಯ ರೂಪದಲ್ಲಿ ಕೇವಲ ಆಲುಗಡ್ಡೆಯನ್ನು ತಿನ್ನಲು ಪ್ರಾರಂಭಿಸಿದ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

Image courtesy

ಈತನಿಗೆ ಎರಡು ತಿಂಗಳ ಕಾಲ ಆಲುಗಡ್ಡೆಯೇ ಗತಿ

ಈತನಿಗೆ ಎರಡು ತಿಂಗಳ ಕಾಲ ಆಲುಗಡ್ಡೆಯೇ ಗತಿ

ದಿನವಿಡೀ ಆಲುಗಡ್ಡೆ ಬಿಟ್ಟರೆ ಬೇರೆ ಆಹಾರವಿಲ್ಲದೇ ಸತತ ಅರವತ್ತು ದಿನ ಪ್ರತಿಭಟಿಸಿದ. ಪ್ರತಿಭಟನೆಯ ಪರಿಣಾಮವೇನಾಯಿತೋ ಗೊತ್ತಿಲ್ಲ, ಆದರೆ ದಿನಕ್ಕೆ ಇಪ್ಪತ್ತು ಆಲುಗಡ್ಡೆ ತಿನ್ನುತ್ತಾ ತಿನ್ನುತ್ತಾ ಎರಡು ತಿಂಗಳಲ್ಲಿ ಭರ್ತಿ ಇಪ್ಪತ್ತೇಳು ಪೌಂಡ್ ತೂಕ ಕಡಿಮೆಯಂತೂ ಖಂಡಿತಾ ಆಯಿತು.

ನಲವತ್ತಾರು ದಿನ ಸತತ ಬಿಯರ್ ಸ್ವಾಹಾ

ನಲವತ್ತಾರು ದಿನ ಸತತ ಬಿಯರ್ ಸ್ವಾಹಾ

ಬಿಯರ್ ಒಂದಿದ್ದರೆ ಒಂಟಿಯಾಗಿ ಒಂದು ವರ್ಷ ದ್ವೀಪದಲ್ಲಿರಬಲ್ಲೆ ಎಂದು ಕೆಲವರು ಕೊಚ್ಚಿಕೊಳ್ಳುತ್ತಾರೆ. ಆದರೆ ಇದು ಸಾಧ್ಯವಾಗದ ಮಾತು. ಆದರೆ ಡೆಸ್ ಮಾಯ್ನೆಸ್ ಎಂಬ ವ್ಯಕ್ತಿ ಒಂದು ವರ್ಷವಲ್ಲದಿದ್ದರೂ ಸತತ ನಲವತ್ತಾರು ದಿನ ಕೇವಲ ಬಿಯರ್ ಕುಡಿದೇ ಕಳೆದ. ಓರ್ವ ಬೌದ್ಧ ಭಿಕ್ಷುವಿನ ರೂಪವನ್ನು ಕೆಲದಿನಗಳ ಕಾಲ ಪಡೆಯಬೇಕು, ಆದರೆ ತನ್ನ ನೆಚ್ಚಿನ ಪೇಯವನ್ನು ಮಾತ್ರ ಬಿಡಬಾರದೆಂಬ ವಿಚಿತ್ರ ಕರಾರನ್ನು ತನಗೇ ವಹಿಸಿಕೊಂಡು ನಲವತ್ತಾರು ದಿನ ಕಾಲ ಪ್ರತಿದಿನ ನಾಲ್ಕೈದು ಬಾಟಲಿ ಬಿಯರ್ ಸೇವಿಸುತ್ತಾ ದಿನ ಕಳೆದ. ನಲವತ್ತೇಳನೇ ದಿನ ಈಸ್ಟರ್ ಹಬ್ಬದಂದು ಮಾಂಸದ ಖಾದ್ಯವೊಂದನ್ನು ಸೇವಿಸಿ ತನ್ನ ಬಿಯರ್ ಮಾತ್ರದ ಉಪವಾಸವನ್ನು ಅಂತ್ಯಗೊಳಿಸಿದ. Image courtesy

ಎಪ್ಪತ್ತು ವರ್ಷಗಳ ಕಾಲ ಅನ್ನಾಹಾರವಿಲ್ಲದೇ ಜೀವಂತವಾಗಿರುವ ಮಾತಾಜಿ

ಎಪ್ಪತ್ತು ವರ್ಷಗಳ ಕಾಲ ಅನ್ನಾಹಾರವಿಲ್ಲದೇ ಜೀವಂತವಾಗಿರುವ ಮಾತಾಜಿ

ಪ್ರಹ್ಲಾಜ್ ಜಾನಿ ಅಥವಾ ಚುನರಿವಾಲಾ ಮಾತಾಜಿ (ಜನನ 13 ಆಗಸ್ಟ್ 1929, ಗುಜರಾತ್) ಓರ್ಬ ಬಾಬಾ ಅಥವಾ ಸಂತರಾಗಿದ್ದು ಇವರಿಗೆ ಈಗ ಎಂಭತ್ತೇಳು ವರ್ಷ. ಆದರೆ ಸುಮಾರು ಕಳೆದ ಎಪ್ಪತ್ತು ವರ್ಷಗಳಿಂದ ಈತ ಒಂದು ತೊಟ್ಟೂ ನೀರು ಕುಡಿದಿಲ್ಲ ಅಥವಾ ಆಹಾರ ಸೇವಿಸಿಲ್ಲ. ಅಂತೆಯೇ ಒಂದು ತೊಟ್ಟೂ ಮೂತ್ರವಿಲ್ಲ ಅಥವಾ ಮಲವಿಲ್ಲ. ಮತ್ತು ಹೇಗೆ ಜೀವಂತವಿದ್ದಾನೆ ಎಂಬ ಪ್ರಶ್ನೆಗೆ ಜನಸಾಮಾನ್ಯರಿಗಿಂತಲೂ ವೈದ್ಯರಿಗೇ ಹೆಚ್ಚು ಕುತೂಹಲವಾಗಿತ್ತು. ಅಹ್ಮದಾಬಾದ್ ನ ಆಸ್ಪತ್ರೆಯೊಂದರಲ್ಲಿ ಮೂವತ್ತು ತಜ್ಞರ ತಂಡ ಈತನ ಚಲನವಲನಗಳ ಬಗ್ಗೆ ಕಣ್ಣಿರಿಸಿ ವೀಡಿಯೋ ಕ್ಯಾಮೆರಾ ಮೂಲಕ ಸತತ ಚಿತ್ರೀಕರಿಸಿ ಅಭ್ಯಾಸ ಮಾಡಿದ್ದಾರೆ. ಈತ ಏನೂ ಸೇವಿಸದಿರುವುದು ಅಥವಾ ವಿಸರ್ಜಿಸದೇ ಇರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಆದರೆ ಈ ವೀಡಿಯೋಗಳನ್ನು ಮಾತ್ರ ಜನಸಾಮಾನ್ಯರಿಗೆ ಪ್ರಸ್ತುತಪಡಿಸಿಲ್ಲ. ಈ ಬಾಬಾರಿಗೇ ಕೇಳಿದರೆ ತಾನು ಸತತ ಯೋಗಾಭ್ಯಾಸ, ತಪಸ್ಸಿನಿಂದ ಸೋಮಚಕ್ರ ಅಥವಾ ಅಮೃತಚಕ್ರವನ್ನು ಸಾಧಿಸಿದ್ದೇನೆಂದೂ ಇದರ ಪರಿಣಾಮವಾಗಿ ಹಣೆಯ ಒಳಗಿನಿಂದ ಅಮೃತಬಿಂದು ದೇಹಕ್ಕೆ ಸ್ರವಿಸಿ ನಿತ್ಯದ ಕಾರ್ಯಕ್ಕೆ ಅಗತ್ಯವಾದ ಶಕ್ತಿ ನೀಡುತ್ತದೆ ಎಂದೂ ಹೇಳುತ್ತಾರೆ. ಅಲ್ಲದೇ ತಾನು ಮಾತ್ರವಲ್ಲ, ಹಿಮಾಲಯದಲ್ಲಿ ಯಾರ ಗಮನಕ್ಕೂ ಬರದಂತೆ ನೂರಾರು ವರ್ಷ ತಪಸ್ಸು ಮಾಡುವವರೂ ಈ ವಿದ್ಯೆಯನ್ನು ಅರಗಿಸಿಕೊಂಡಿರುತ್ತಾರೆ ಎಂದು ತಿಳಿಸುತ್ತಾರೆ. Image courtesy

ಆರುವರೆ ವರ್ಷದಿಂದ ಕೇವಲ ಹಣ್ಣುಗಳನ್ನು ಮಾತ್ರ ಸೇವಿಸುತ್ತಿರುವ ಪ್ರೊಫೆಸರ್

ಆರುವರೆ ವರ್ಷದಿಂದ ಕೇವಲ ಹಣ್ಣುಗಳನ್ನು ಮಾತ್ರ ಸೇವಿಸುತ್ತಿರುವ ಪ್ರೊಫೆಸರ್

ತಪಸ್ಸಿನ ಮೂಲಕ ಮತ್ತು ಸೂರ್ಯನ ಬೆಳಕಿನಿಂದ ಆಹಾರವನ್ನು ಸೃಷ್ಟಿಸಿಕೊಳ್ಳುವೆವು ಎಂದು ನಂಬುವವರನ್ನು Breatharian ಎಂದು ಕರೆಯುತ್ತಾರೆ. ಪ್ರೊ ಮೈಕಲ್ ವೆರ್ನರ್ ಸಹಾ ಇಂತಹ ಓರ್ವ ಖ್ಯಾತ ತಪಸ್ವಿಯಾಗಿದ್ದು ದಿನಕ್ಕೆ ಕೇವಲ ನಾಲ್ಕು ಕಾಫಿ ಮತ್ತು ಎರಡು ಲೋಟ ಹಣ್ಣಿನವನ್ನು ಮಾತ್ರ ಕುಡಿದು ಆರೋಗ್ಯವಾಗಿದ್ದಾರೆ. ಇದು ಕೇವಲ ಒಂದೆರಡು ದಿನಗಳಲ್ಲ, ಈಗಾಗಲೇ ಆರುವರೆ ವರ್ಷ ಕಳೆದಿದ್ದು ಇನ್ನೂ ಮುಂದುವರೆಯುತ್ತಿದೆ. Image courtesy

ಕೇವಲ ಬಾಳೆಹಣ್ಣನ್ನೇ ಆಹಾರವಾಗಿ ಸ್ವೀಕರಿಸಿದ ಮಹಿಳೆ

ಕೇವಲ ಬಾಳೆಹಣ್ಣನ್ನೇ ಆಹಾರವಾಗಿ ಸ್ವೀಕರಿಸಿದ ಮಹಿಳೆ

ಆಹಾರಪದ್ಧತಿಯನ್ನು ವೈಜ್ಞಾನಿಕವಾಗಿ ತಿಳಿಹೇಳುವ ನ್ಯೂಟ್ರಿಷನಿಸ್ಟ್ ಅಥವಾ ಪೋಷಣಶಾಸ್ತ್ರಜ್ಞರು ಇತರರಿಗೆ ಹೇಳುವ ಮುನ್ನ ತಾವೇ ತಮ್ಮ ಆರೋಗ್ಯದ ಮೇಲೆ ಈ ಆಹಾರಪದ್ಧತಿಯನ್ನು ಅನುಸರಿಸುವುದು ಮೇಲು. ಇಂತಹ ಒಂದು ಸವಾಲನ್ನು ಸ್ವೀಕರಿಸಿದ ಪೋಷಣಶಾಸ್ತ್ರಜ್ಞೆ ಯೂಲಾ ತಾರ್ಬಾಥ್ ಎಂಬ ಮಹಿಳೆ ಸತತವಾಗಿ ಹನ್ನೆರಡು ದಿನಗಳ ಕಾಲ ನೀರು ಮತ್ತು ಕೇವಲ ಬಾಳೆಹಣ್ಣನ್ನು ಮಾತ್ರ ಸೇವಿಸಿ ಉತ್ತಮ ಆರೋಗ್ಯ ಪಡೆದಿದ್ದಾರೆ. ಇದೊಂದು ಉತ್ತಮ ಅನುಭವ ಮತ್ತು ಈ ಅವಧಿಯಲ್ಲಿ ತಮ್ಮ ಚರ್ಮದ ಕಾಂತಿ ಹೆಚ್ಚಿದು ಮತ್ತು ಇಪ್ಪತ್ತೆರಡು ಕಿಮೀ ಮ್ಯಾರಥಾನ್ ಓಟ ಓಡಲಿಕ್ಕೂ ಸಾಧ್ಯವಾಗಿದೆ ಎಂದು ಆಕೆ ತಿಳಿಸಿದ್ದಾರೆ. Image courtesy

English summary

Cases Of People Who Followed Extreme Diets

The word "diet" makes us think about various possible diets that are available online in today's world. There is no diet, which you would ignore or haven't tried. However, what happens when you have gone to the extreme level while dieting? Here, in this article, we've shared some of the cases in which people have followed an extreme dieting pattern. The Result?? Well, these are the people who have lost weight or have even gone ahead and spoilt their complete health.
X
Desktop Bottom Promotion