ನೀರಿನಲ್ಲಿ ಮುಳುಗಿದ್ದ ಕಟ್ಟಡಗಳು, ಇಲ್ಲಿ ಮತ್ತೆ ಗೋಚರಿಸುತ್ತಿವೆ!

By manu

ನಿಸರ್ಗದೊಂದಿಗೆ ಆಟವಾಡಬೇಡಿ ಎಂದು ತಜ್ಞರು ಎಚ್ಚರಿಸುತ್ತಾ ಬಂದಿದ್ದರೂ ಮಾನವ ತನ್ನ ಸೌಕರ್ಯಗಳಿಗಾಗಿ ನಿಸರ್ಗವನ್ನು ಲೂಟಿ ಮಾಡುತ್ತಾ ಬಂದಿರುವುದು ಶತಮಾನಗಳಿಂದ ನೋಡುತ್ತಾ ಬಂದಿದ್ದೇವೆ. ಇದರ ಪರಿಣಾಮವಾಗಿ ಹಲವಾರು ನಿಸರ್ಗ ಪ್ರಕೋಪಗಳನ್ನು ಕಾಣಬೇಕಾಗಿದೆ. ಮಳೆಯ ಕಾಲದಲ್ಲಿ ಮಳೆಯಾಗದೇ ಆಗಬೇಕಾದ ಕಾಲದಲ್ಲಿ ಭೋರೆಂದು ಸುರಿಯುವುದು, ತ್ಸುನಾಮಿ, ಎಲ್ ನಿನೋ, ಚಂಡಮಾರುತ, ಭೂಕಂಪ ಮೊದಲಾದ ಉಗ್ರ ಪ್ರಕೋಪಗಳ ಪರಿಣಾಮವನ್ನು ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡು, ಆಸ್ತಿ ಪಾಸ್ತಿಗೆ ಹಾನಿ ಮಾಡಿಕೊಂಡು ಅನುಭವಿಸಬೇಕಾಗಿದೆ. ನೀರಿನಾಳದ ಈ ಹೋಟೆಲ್‌ಗಳು, ವಿಶ್ವದ ನೂತನ ಅದ್ಭುತಗಳು

ಅಮೂಲ್ಯ ಜೀವಹಾನಿಯ ಜೊತೆಗೇ ಪರಂಪರೆಯ ಕುರುಹಾಗಿ ಉಳಿದು ಬಂದಿದ್ದ ಸ್ಮಾರಕಗಳೂ ಧರಾಶಾಯಿಯಾಗಿವೆ. ಕೆಲವು ಕಳೆದೇ ಹೋಗಿವೆ. ಇಂತಹ ಕಳೆದ ಸ್ಮಾರಕಗಳನ್ನು ನೋಡಬೇಕೆಂದರೆ ವರ್ಷಗಟ್ಟಲೆ, ಕೆಲವೊಮ್ಮೆ ಶತಮಾನಗಟ್ಟಲೆ ಸಮಯ ಬೇಕಾಗಬಹುದು. ಇಂದಿನ ಲೇಖನದಲ್ಲಿ ನಿಸರ್ಗ ಪ್ರಕೋಪ ಅಥವಾ ಮಾನವನ ಕೈವಾಡದಿಂದ ನೀರಿನೊಳಗಿದ್ದರೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿರುವ ಕೆಲವು ಕಟ್ಟಡಗಳನ್ನು ಉಲ್ಲೇಖಿಸಲಾಗಿದೆ.

ನೀರಿನ ಮಟ್ಟ ಏರುತ್ತಾ ಹೋದಂತೆ ನೀರಿನೊಳಗೆ ಅಂತರ್ಧಾನವಾಗುತ್ತಾ ಹೋದ ಈ ಕಟ್ಟಡಗಳು ಕ್ರಮೇಣ ನೀರು ಕಡಿಮೆಯಾದಂತೆ ತಮ್ಮ ಅಸ್ತಿತ್ವವನ್ನು ತೋರುತ್ತವೆ. ಇದಕ್ಕೆ ನಮ್ಮ ಕರ್ನಾಟಕದ ಉದಾಹರಣೆ ನೀಡುವುದಾದರೆ ಲಿಂಗನಮಕ್ಕಿ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಿರುವ ದೇವಾಲಯ. ನೀರಿನ ಮಟ್ಟ ಅತ್ಯಂತ ಕಡಿಮೆಯಾದಾಗ ಇದು ಗೋಚರವಾಗುತ್ತದೆ. ಬನ್ನಿ, ವಿಶ್ವದಲ್ಲಿರುವ ಇಂತಹ ಕೆಲವು ಕಟ್ಟಡಗಳನ್ನು ನೋಡೋಣ...

ನೀರಿನಲ್ಲಿ ಅರ್ಧ ಮುಳುಗಿರುವ ಸೆಂಟ್ ನಿಕೋಲಸ್ ರವರ ಚರ್ಚ್

ನೀರಿನಲ್ಲಿ ಅರ್ಧ ಮುಳುಗಿರುವ ಸೆಂಟ್ ನಿಕೋಲಸ್ ರವರ ಚರ್ಚ್

ಯೂರೋಪಿನ ಮೆಸಡೋನಿಯಾ ರಾಷ್ಟ್ರದಲ್ಲಿರುವ ಮಾವ್ರೋವೋ ಎಂಬ ಬೃಹತ್ ಕೆರೆಯ ದಡದಿಂದ ಕೊಂಚವೇ ದೂರದಲ್ಲಿ ಸುಂದರ ಚರ್ಚ್ ಒಂದು ಅರ್ಧಭಾಗ ನೀರಿನಲ್ಲಿ ಮುಳುಗಿದೆ. ಇದನ್ನು ನೀರಿನಲ್ಲಿ ಮುಳುಗಿರುವಂತೇನೂ ಕಟ್ಟಿರಲಿಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

Image courtesy
ನೀರಿನಲ್ಲಿ ಅರ್ಧ ಮುಳುಗಿರುವ ಸೆಂಟ್ ನಿಕೋಲಸ್ ರವರ ಚರ್ಚ್

ನೀರಿನಲ್ಲಿ ಅರ್ಧ ಮುಳುಗಿರುವ ಸೆಂಟ್ ನಿಕೋಲಸ್ ರವರ ಚರ್ಚ್

ಆದರೆ ಸ್ಥಳೀಯ ವಿದ್ಯುತ್ ಸ್ಥಾವರಕ್ಕೆ ನೀರು ನೀಡಲೆಂದು ಕೃತಕವಾಗಿ ನಿರ್ಮಿಸಿದ ಈ ಕೆರೆಯ ನೀರು ತುಂಬಿಕೊಂಡು ಮೇಲೇರಿದಂತೆ ಚರ್ಚ್ ಅರ್ಧಭಾಗ ಮುಳುಗಿದೆ.

ಮೆಕ್ಸಿಕೋದ ಈ ನಾನೂರು ವರ್ಷ ಪುರಾತನ ಚರ್ಚ್ ನೀರಿನಿಂದ ಎದ್ದು ಬಂದಿದೆ

ಮೆಕ್ಸಿಕೋದ ಈ ನಾನೂರು ವರ್ಷ ಪುರಾತನ ಚರ್ಚ್ ನೀರಿನಿಂದ ಎದ್ದು ಬಂದಿದೆ

ಸುಮಾರು ಹದಿನಾರನೇ ಶತಮಾನದಲ್ಲಿ ಕೆಲವು ಪಾದ್ರಿಗಳ ತಂಡವೊಂದು ಕೈಯಾರೆ ಕಟ್ಟಿದ ಇತಿಹಾಸವಿರುವ ಈ ಚರ್ಚ್ 1966ರವರೆಗೂ ಪ್ರಮುಖ ಪ್ರಾರ್ಥನಾ ಸ್ಥಳವಾಗಿತ್ತು. ಆದರೆ 1966ರಲ್ಲಿ ಸಮೀಪದ ನೆಜಹುವಾಲ್ಕೋಯೋಟಲ್ (Nezahualcoyotl) ಎಂಬ ಸ್ಥಳದಲ್ಲಿ ಕಟ್ಟಲಾದ ಜಲಾಶಯದ ನೀರು ತುಂಬಿಕೊಳ್ಳುತ್ತಾ ಹೋದಂತೆ ಏರಿದ ನೀರಿನಲ್ಲಿ ಈ ಚರ್ಚ್ ಸಂಪೂರ್ಣವಾಗಿ ಮುಳುಗಿ ಹೋಗಿತ್ತು.

Image courtesy

ಮೆಕ್ಸಿಕೋದ ಈ ನಾನೂರು ವರ್ಷ ಪುರಾತನ ಚರ್ಚ್ ನೀರಿನಿಂದ ಎದ್ದು ಬಂದಿದೆ

ಮೆಕ್ಸಿಕೋದ ಈ ನಾನೂರು ವರ್ಷ ಪುರಾತನ ಚರ್ಚ್ ನೀರಿನಿಂದ ಎದ್ದು ಬಂದಿದೆ

ಕಳೆದ ವರ್ಷ ಅಂದರೆ 2015ರಲ್ಲಿ ನೀರಿನ ಮಟ್ಟ ಅಪಾರವಾಗಿ ಇಳಿದು ಹಿಂದೆಂದೂ ಇಲ್ಲದ 82 ಅಡಿಗಳ ಮಟ್ಟಕ್ಕೆ ಇಳಿದಂತೆ ನಿಧಾನವಾಗಿ ಈ ಚರ್ಚ್ ಮತ್ತೆ ಪ್ರತ್ಯಕ್ಷವಾಗಿತ್ತು.

Image courtesy

ಆರ್ಜೆಂಟೀನಾದ ಪಟ್ಟಣ ಮೂವತ್ತು ವರ್ಷದ ಬಳಿಕ ನೀರಿನಿಂದ ಮೇಲಕ್ಕೆ ಬಂದಿದೆ

ಆರ್ಜೆಂಟೀನಾದ ಪಟ್ಟಣ ಮೂವತ್ತು ವರ್ಷದ ಬಳಿಕ ನೀರಿನಿಂದ ಮೇಲಕ್ಕೆ ಬಂದಿದೆ

ಅರ್ಜೆಂಟೀನಾ ದೇಶದ ಲಾಗೋ ಎಪೆಕ್ಯೂಯೆನ್ ಎಂಬ ಸ್ಥಳದಲ್ಲಿ ಸುಮಾರು ಮೂವತ್ತು ವರ್ಷಗಳ ಹಿಂದೆ ಪ್ರವಾಸಿಗರಿಗಾಗಿ ಒಂದು ಪಟ್ಟಣವನ್ನು ಸ್ಥಾಪಿಸಲಾಗಿತ್ತು. ಆದರೆ ನಿಧಾನವಾಗಿ ಈ ಪ್ರದೇಶವನ್ನು ಆವರಿಸಿದ ಪ್ರವಾಹದ ನೀರು ಈ ಪ್ರದೇಶದ ಬಹಳಷ್ಟು ಸ್ಥಳವನ್ನು ಸುಮಾರು ಹತ್ತು ಮೀಟರ್ ಆಳದ ನೀರಿನಲ್ಲಿ ಮುಳುಗಿಸಿತು. ಇದರಲ್ಲಿ ಈ ಪಟ್ಟಣವೂ ನೀರಿನಲ್ಲಿ ಮುಳುಗಿತು. ಇತ್ತೀಚೆಗೆ ನೀರು ಕಡಿಮೆಯಾದಂತೆ ಈ ಪಟ್ಟಣ ಮತ್ತೊಮ್ಮೆ ಗೋಚರಿಸಿದೆ.

Image courtesy

ವರ್ಷದ ಒಂಭತ್ತು ತಿಂಗಳು ನೀರಿನಲ್ಲಿ ಮುಳುಗಿರುವ ದ್ವೀಪ

ವರ್ಷದ ಒಂಭತ್ತು ತಿಂಗಳು ನೀರಿನಲ್ಲಿ ಮುಳುಗಿರುವ ದ್ವೀಪ

ಚೀನಾದಲ್ಲಿರುವ ಮುವೋಡಾವೋಕ್ಸಿ ನದಿಯ ಖನಿಜಭಾಗದಲ್ಲಿರುವ ಜಾರ್ಜಸ್ ಜಲಾಶಯಕ್ಕೆ ಪ್ರತಿವರ್ಷ ಲಕ್ಷಾಂತರ ಚೀನೀಯರು ಭೇಟಿ ನೀಡುತ್ತಾರೆ. ಏಕೆಂದರೆ ಈ ಪ್ರದೇಶದಲ್ಲಿ ಆಮೆಯಾಕಾರದ ದ್ವೀಪವೊಂದಿದ್ದು ಇದು ವರ್ಷದಲ್ಲಿ ಕೇವಲ ಮೂರು ತಿಂಗಳು ಮಾತ್ರ ನೀರಿನಿಂದ ಮೇಲಕ್ಕೆ ಗೋಚರಿಸುತ್ತದೆ. ವಾಸ್ತವವಾಗಿ ಈ ದ್ವೀಪ ನೈಸರ್ಗಿಕವಲ್ಲ, ಬದಲಿಗೆ ಜಲಾಶಯದ ನೀರಿನ ಮಟ್ಟವನ್ನು ನಿಯಂತ್ರಿಸಲು ಮಾನವರೇ ನಿರ್ಮಿಸಿದ ಕೃತಕ ದ್ವೀಪ. Image courtesy

ನೀರಿನಾಳದ ಉದ್ಯಾನವಾಗಿ ಪರಿಣಮಿಸುವ ಅಭಯಾರಣ್ಯ

ನೀರಿನಾಳದ ಉದ್ಯಾನವಾಗಿ ಪರಿಣಮಿಸುವ ಅಭಯಾರಣ್ಯ

ಆಸ್ಟ್ರಿಯಾ ದೇಶದ ಸ್ಟೈರಿಯಾ ಎಂಬ ಪ್ರದೇಶದಲ್ಲಿರುವ ವಿಶಾಲ ಕೆರೆ ತನ್ನ ನಿಸರ್ಗ ಸೌಂದರ್ಯ ಮತ್ತು ಉತ್ತಮ ಹವಾಗುಣಕ್ಕಾಗಿ ಪ್ರಖ್ಯಾತಿ ಪಡೆದಿದೆ. ಇದರ ಪಚ್ಚೆಹಸಿರು ಬಣ್ಣದ ನೀರಿನ ನೋಟ ಸುಲಭವಾಗಿ ಮರೆಯಲು ಸಾಧ್ಯವಿಲ್ಲ. ಸುಮಾರು ಒಂದೆರಡು ಮೀಟರ್ ಆಳದ ಈ ಕೆರೆಯ ದಡ ವಿಹಾರಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಆದರೆ ಪ್ರತಿ ವರ್ಷದ ವಸಂತ ಋತುವಿನಲ್ಲಿ ಅಕ್ಕಪಕ್ಕದ ಬೆಟ್ಟದ ಮೇಲೆ ಸಂಗ್ರಹವಾಗಿದ್ದ ಮಂಜು ಕರಗಿ ಕೆಳಕ್ಕಿಳಿಯುತ್ತಿದ್ದಂತೆಯೇ ಕೆರೆದ ದಡವನ್ನು ತುಂಬಿಕೊಳ್ಳುತ್ತಾ ನೀರಿನ ಮಟ್ಟ ಹನ್ನೆರಡು ಮೀಟರ್ ಆಳಕ್ಕೆ ನಿಲ್ಲುತ್ತದೆ. ಅಂದರೆ ನಡೆದಾಡಿದ ಈ ಸ್ಥಳವವೀಗ ನೀರಿನಾಳದ ಸುಂದರ ಉದ್ಯಾನವಾಗಿ ಪರಿವರ್ತಿತವಾಗುತ್ತದೆ. Image courtesy

ಭೂಕಂಪದ ಪರಿಣಾಮವಾಗಿ ನೀರಿನಲ್ಲಿ ಮುಳುಗಿದ ಪಟ್ಟಣ

ಭೂಕಂಪದ ಪರಿಣಾಮವಾಗಿ ನೀರಿನಲ್ಲಿ ಮುಳುಗಿದ ಪಟ್ಟಣ

ಚೀನಾದಲ್ಲಿ 2008ರಲ್ಲಿ ಭೂಕಂಪದ ಪರಿಣಾಮವಾಗಿ ನೀರಿನ ಮಟ್ಟದಲ್ಲಿ ಆದ ಏರುಪೇರು ಒಂದು ಪುಟ್ಟ ಪಟ್ಟಣವನ್ನು ನೀರಿನಲ್ಲಿ ಮುಳುಗಿಸಿತ್ತು. ನಂತರ ಸುಮಾರು ಐದು ವರ್ಷಗಳ ಬಳಿಕ ನೀರಿನ ಮಟ್ಟ ನಿಧಾನವಾಗಿ ಇಳಿದಂತೆ ಪಟ್ಟಣದ ಹತ್ತು ಎತ್ತರದ ಕಟ್ಟಡಗಳೂ, ಕೆಲವು ಮನೆ, ಕಛೇರಿ ಹಾಗೂ ಪ್ರಾಥಮಿಕ ಶಾಲೆಯೊಂದು ಮತ್ತೆ ನೀರಿನಿಂದ ಮೇಲಕ್ಕೆ ಗೋಚರಿಸಿವೆ. Image courtesy

English summary

Buildings That Emerged From Water

In this article, we've shared information on some of the buildings that have emerged from water. Initially, when the peak of the buildings start appearing from under the water, it does make you skip your heartbeat, but when you learn in depth about these places, you would only be amazed how powerful nature is. Find out about some of the buildings that have resurfaced after a couple of years. Have a look.
X
Desktop Bottom Promotion