Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದಿನನಿತ್ಯದ ವಸ್ತುಗಳ ಮೇಲೆ ತಟ್ಟಲಿದೆಯೇ ಬಜೆಟ್ ಬಿಸಿ?
ವಿಶ್ವದ ಒಂದೆಡೆ ಆಸ್ಕರ್ ಕಲರವ ಮುಗಿಲು ಮುಟ್ಟಿದ್ದರೆ ಇನ್ನೊಂದೆಡೆ, ಬಜೆಟ್ ಬಿಸಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬೇಕಾದ್ದು ಅನಿವಾರ್ಯವಾಗಿದೆ. ಬಜೆಟ್ ಬಗೆಗಿನ ಸುದ್ದಿ ಜನಸಾಮಾನ್ಯರಿಗೆ ನಿರಾಳತೆಯನ್ನು ನೀಡಿದೆಯೇ ಅಥವಾ ಅವರುಗಳನ್ನು ಇನ್ನಷ್ಟು ಸಂಕಟಕ್ಕೆ ನೂಕಿದೆಯೇ ಎಂಬುದನ್ನೇ ಬಜೆಟ್ ಮಂಡನೆ ತಿಳಿಸಲಿದೆ.
ದಿನನಿತ್ಯದ ವಸ್ತುಗಳ ಬೆಲೆ ಗಗನ ಚುಂಬಿಯಾಗಿದೆಯೇ ಮತ್ತು ಇದಕ್ಕನುಗುಣವಾಗಿ ಖರ್ಚುವೆಚ್ಚಗಳನ್ನು ಹೇಗೆ ಸರಿದೂಗಿಸಬೇಕು ಎಂಬುದನ್ನು ಬಜೆಟ್ ಮಂಡನೆ ತಿಳಿಸಲಿದೆ. ಹಾಲು, ವಿದ್ಯುತ್, ಆಹಾರ ಪದಾರ್ಥಗಳು, ವೈದ್ಯಕೀಯ ಉತ್ಪನ್ನಗಳು, ಇಲೆಕ್ಟ್ರಾನಿಕ್ ಉಪಕರಣಗಳ ದರಗಳನ್ನು ಬಜೆಟ್ ಒಳಗೊಂಡಿದೆ.
ಈ ವರ್ಷದ ಬಜೆಟ್ ಮಧ್ಯಮ ವರ್ಗ ಮತ್ತು ಕೆಳವರ್ಗದ ಜನರಿಗೆ ಕೊಂಚ ನಿರಾಳತೆಯನ್ನು ನೀಡಿದ್ದರೆ ಹೆಚ್ಚು ವರಮಾನ ಇರುವವರು ಇದರ ಬಿಸಿಯನ್ನು ತೀವ್ರವಾಗಿಯೇ ಅನುಭವಿಸಲಿದ್ದಾರೆ. ಕಡಿಮೆ ಸಂಬಳದೊಂದಿಗೆ ಹೆಚ್ಚುವರಿ ತೆರಿಗೆಯ ಹೊರೆ ಶೀಸಾಮಾನ್ಯನ ಜೇಬಿಗೆ ಕತ್ತರಿ ಹಾಕುವುದು ನಿಜ.
ಕೆಲವೊಂದು ವಸ್ತುಗಳ ಬೆಲೆ ಈ ಬಾರಿ ದುಬಾರಿಯಾಗಲಿದ್ದು ಅವುಗಳ ಪಟ್ಟಿಯನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ. ಬೆಲೆ ಹೆಚ್ಚಳವಾಗಿರುವ ವಸ್ತುಗಳು ಮತ್ತು ಅವುಗಳ ಖರೀದಿಯಲ್ಲಿ ನಿಮ್ಮ ತೀರ್ಮಾನ ಹೇಗಿರಬೇಕು ಎಂಬುದನ್ನೇ ಇಲ್ಲಿ ತಿಳಿಸಲಿದ್ದೇವೆ, ಮುಂದೆ ಓದಿ...

ಪ್ರತಿಷ್ಠಿತ ಹಾಲಿನ ಉತ್ಪನ್ನಗಳು
ಪ್ರತಿಷ್ಠಿತ ಹಾಲಿನ ಉತ್ಪನ್ನಗಳಾದ ಪನೀರ್, ಚೀಸ್, ಐಸ್ ಕ್ರೀಮ್ ಮೊದಲಾದ ಹಾಲಿನ ಉತ್ಪನ್ನಗಳು ತೀವ್ರ ಸಂಕಷ್ಟವನ್ನು ಎದುರಿಸಲಿದೆ.

ತಂಬಾಕು ಉತ್ಪನ್ನಗಳು
2016-17 ರಲ್ಲಿ ಎಲ್ಲಾ ತಂಬಾಕು ಉತ್ಪನ್ನಗಳು ತೀವ್ರ ದರಹೆಚ್ಚಳವನ್ನು ಕಂಡುಕೊಳ್ಳಲಿದೆ. ದೇಶದಲ್ಲಿ ಧೂಮಪಾನ ಮಾಡುವವರ ಸಂಖ್ಯೆಯನ್ನು ದರಹೆಚ್ಚಳದ ಬಿಸಿ ಕಡಿಮೆಗೊಳಸಲಿದೆ ಎಂಬುದಂತೂ ನಿಜ

ಚಿನ್ನದ ಬೆಲೆ
ಕಳೆದ ವರ್ಷಕ್ಕಿಂತಲೂ ಈ ವರ್ಷ ಚಿನ್ನದ ಬೆಳೆ ಗಗನಕ್ಕೇರಿದೆ. ಚಿನ್ನ ಆಮದು ವಿಚಾರದಲ್ಲೂ ಬೆಲೆ ಮಿತಿಮೀರಲಿದ್ದು ಆಮದು ಸುಂಕದಲ್ಲಿ ಹೆಚ್ಚಳವನ್ನು ಕಂಡುಕೊಳ್ಳುವುದರ ಜೊತೆಗೆ ಚಿನ್ನ ಗಗನ ಕುಸುಮವಾಗಲಿದೆ.

ಆಲ್ಕೋಹಾಲ್
ಸ್ನೇಹಿತರ ಜೊತೆಗೂಡಿ ಪಾರ್ಟಿ ನಡೆಸುವ ಅಭಿಲಾಷೆ ನಿಮ್ಮದಾಗಿದ್ದರೆ ಅದಕ್ಕೆ ಭಾರೀ ಹೊಡೆತ ಬೀಳುವುದಂತೂ ನಿಜ. ಮದ್ಯದ ಬೆಲೆ ತೀಕ್ಷ್ಣ ಏರಿಕೆಯನ್ನು ಕಾಣಲಿದ್ದು ಮದ್ಯ ಪ್ರೇಮಿಗಳು ಮದ್ಯವನ್ನು ಸೇವಿಸುವ ಮುನ್ನ ಕೊಂಚ ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ ಎದುರಾಗಲಿದೆ.

ಸೌಂದರ್ಯ ವರ್ಧಕ ಸಾಮಾಗ್ರಿಗಳು
ಹೆಣ್ಮಕ್ಕಳಿಗೆ ಈ ಸುದ್ದಿ ನಿಜಕ್ಕೂ ತಡೆದುಕೊಳ್ಳಲಾರದ ವೇದನೆಯಾಗಿ ಪರಿಣಮಿಸುವುದಂತೂ ಖಂಡಿತ! ಸೌಂದರ್ಯ ವರ್ಧಕಗಳ ಬೆಲೆ ಏರಿಕೆಯನ್ನು ಕಾಣಲಿದ್ದರೂ ಇವುಗಳ ಖರೀದಿಯಲ್ಲಿ ಯಾವುದೇ ರಾಜಿಯನ್ನು ಹೆಂಗಳೆಯರು ಮಾಡಲಾರರು ಎಂಬುದಂತೂ ನಿಜ



Click it and Unblock the Notifications
