Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಏಕಾಂತದಲ್ಲಿದ್ದಾಗ ಮಾಡುವ ತುಂಟಾಟಗಳು ಒಂದೇ ಎರಡೇ?
ಪ್ರತಿ ಮನುಷ್ಯನು ದಿನದ ಸ್ವಲ್ಪ ಹೊತ್ತಾದರು ಏಕಾಂತದಲ್ಲಿ ಏಕಾಂಗಿಯಾಗಿ ಕಳೆಯಬೇಕು ಎಂದು ಭಾವಿಸುತ್ತಾನೆ. ಈ ಏಕಾಂತವು ಮನುಷ್ಯನಿಗೆ ಚೇತೋಹಾರಿ ಅನುಭವ ನೀಡುವ ಕಾಲವಾಗಿರುತ್ತದೆ. ಕೆಲವರು ಈ ಸಮಯವನ್ನು ತಮ್ಮ ಮನಃಸಂತೋಷಕ್ಕಾಗಿ ಬಳಸಿಕೊಳ್ಳುತ್ತಾರೆ. ಇನ್ನೂ ಕೆಲವರು ಸೃಜನಶೀಲತೆಗೆ ಬಳಸಿಕೊಳ್ಳುತ್ತಾರೆ. ಇನ್ನೂ ಕೆಲವರು ವಿಚಿತ್ರವಾದ ಕೆಲಸಗಳನ್ನು ಮಾಡುತ್ತಾರೆ.
ಆದರೆ ಸಾಮಾನ್ಯವಾಗಿ ಜನರು ಏನು ಮಾಡುತ್ತಾರೆ ಎಂಬುದನ್ನು ನಾವು ಬಹುತೇಕ ಸಮಯದಲ್ಲಿ ನೋಡಲು ಆಗುವುದಿಲ್ಲ. ಇಲ್ಲಿ ನಾವು ಅಂತಹ ಕೆಲಸಗಳು ಯಾವುವು ಎಂಬುದನ್ನು ಪಟ್ಟಿ ಮಾಡಿ ನಿಮಗಾಗಿ ತಂದಿದ್ದೇವೆ. ಈ ಪಟ್ಟಿಯಲ್ಲಿರುವ ಕೆಲಸಗಳನ್ನು ನೀವು ಮಾಡಿರಬಹುದು. ಇನ್ನೂ ಕೆಲವನ್ನು ಮುಂದೆ ಮಾಡಬಹುದು ಅಥವಾ ದಿನ ನಿತ್ಯ ಮಾಡುತ್ತಿರಬಹುದು. ಇನ್ನೇಕೆ ತಡ ಏಕಾಂತವೇ ಸ್ವರ್ಗವೇ....ಎಂದು ಹಾಡು ಹೇಳುತ್ತ, ಅವರ ಪ್ರಪಂಚಕ್ಕೆ ಹೋಗೋಣ ಬನ್ನಿ...

ಡಾನ್ಸ್ ಡಾನ್ಸ್ ರಾಜಾ ಡಾನ್ಸ್!
ಯಾರು ನೋಡುತ್ತಿಲ್ಲ ಎಂದು ಮನಸ್ಸಿಗೆ ಬಂದಂತೆ ಡಾನ್ಸ್ ಮಾಡುವ ಜನರು ಅದೆಷ್ಟು ಜನ!. ಶವರ್ ಕೆಳಗೆ, ಬೆಡ್‌ರೂಮಿನಲ್ಲಿ, ಅಲ್ಲಿ-ಇಲ್ಲಿ ಇವರ ಡಾನ್ಸ್ ರಾಜಾ ಡಾನ್ಸ್ ನಡೆಯುತ್ತಿರುತ್ತದೆ. ಇದನ್ನೇ ಆತ್ಮ ವಿಶ್ವಾಸ ಎನ್ನುವುದು!

ವಾದ-ಪ್ರತಿವಾದ
ಒಂದು ಕಾಲ್ಪನಿಕ ವಾದವನ್ನು ಹುಟ್ಟು ಹಾಕಿಕೊಂಡು, ಅದಕ್ಕೆ ಪ್ರತಿಕ್ರಿಯಿಸುವ ಹವ್ಯಾಸವನ್ನು ಹಲವರು ಬೆಳೆಸಿಕೊಂಡಿರುತ್ತಾರೆ. ಅದರಲ್ಲೂ ಅವರು ಇವರು ಹೆಚ್ಚಾಗಿ ಇವರನ್ನು ನಿಂದಿಸುತ್ತಿದ್ದರೆ! ಆಗ ಇದು
ಕಡ್ಡಾಯವಾಗಿ ಇರುತ್ತದೆ.

ವಿಚಿತ್ರ ಧ್ವನಿಯನ್ನು ಮಾಡುವುದು
ಮಿಮಿಕ್ರಿ ಮಾಡಲು ಪ್ರಯತ್ನಿಸುವ ಹಾಗೆ, ಇವರು ಸದ್ದುಗಳನ್ನು ಮಾಡುತ್ತಿರುತ್ತಾರೆ. ಒಂದಲ್ಲ ಒಂದು ದಿನ ಮಿಮಿಕ್ರಿ ಮಾಡಿಯೇ ಮಾಡುತ್ತಾರೆ ಎನ್ನುವ ರೀತಿ ಇವರ ಪ್ರಯತ್ನ ಸಾಗುತ್ತದೆ. ಆದರೆ ಹೀಗೆ ಮಾಡುವಾಗ ನಿಮ್ಮ ನೆರೆಹೊರೆಯವರು ಬಂದು ನೋಡುತ್ತಾರೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಿ.

ವಿಚಿತ್ರವಾಗಿ ಮುಖ ಮಾಡಿಕೊಳ್ಳುವುದು
ಇದೇಕೆ ಹೀಗೆ? ಏನೋ ನೆನೆಸಿಕೊಂಡು ವಿಚಿತ್ರವಾಗಿ ಅದಕ್ಕೆ ಪ್ರತಿಕ್ರಿಯಿಸುತ್ತಾರೆ. ಚಿತ್ರ ವಿಚಿತ್ರವಾಗಿ ಮುಖ ಮಾಡಿಕೊಂಡು ಸಂತೋಷಪಡುವ ಜನರನ್ನು ನೀವು ನೋಡಿದರೆ ಮಾತ್ರ ಅರ್ಥವಾಗುತ್ತದೆ ಬಿಡಿ.

ನಮ್ಮ ಜೊತೆಗೆ ನಾವೇ ಮಾತನಾಡಿಕೊಳ್ಳುವುದು
ಇದು ಏಕಾಂತದ ದಿವ್ಯ ವರ. ನಮ್ಮ ಜೊತೆಗೆ ನಾವೇ ಮಾತನಾಡಿಕೊಳ್ಳುವುದು. ನಮ್ಮ ಜೊತೆಗೆ ನಾವೇ ಅತ್ಯುತ್ತಮ ಆಪ್ತ ಮಿತ್ರರಾಗುವ ಕಾಲ. ನಮ್ಮೊಂದಿಗೆ ನಾವೇ ಚರ್ಚಿಸಿಕೊಳ್ಳುವ ಕಾಲ, ನೋಡುವವರಿಗೆ ತಮಾಷೆಯಾಗಬಹುದು. ಅದರೆ ಇದನ್ನು ಮುಂದುವರಿಸಿ, ನೋಡಿ ಆಗ ಅದರಿಂದ ಬರುವ ಫಲಿತಾಂಶವನ್ನು!.

ರಸ ಮಂಜರಿ!!
ನಮ್ಮಲ್ಲೂ ಒಬ್ಬ ಗಾಯಕ ಇದ್ದಾನೆ. ಅವರು ಯಾರೂ ಇಲ್ಲದಾಗ ಮಾತ್ರ ಹಾಡುತ್ತಾನೆ. ಶವರ್ ಕೆಳಗೆ, ಬಾತ್‌ರೂಮಿನಲ್ಲಿ, ಇತ್ಯಾದಿ ಕಡೆ. ಈ ರಸ ಮಂಜರಿಯನ್ನು ಕೇಳುವವರೆ ಧನ್ಯ ಬಿಡಿ. ಅದೆಂತಹ ಹಾಡುಗಳು, ಅದೆಂತಹ ಸಾಹಿತ್ಯ!! ವಾವ್ ವಾವ್.

ಸುಮ್ ಸುಮ್ನೆ ಎಗರುತ್ತಾರೆ
ಅದೇನೋ, ಒಲಂಪಿಕ್ ಲಾಂಗ್ ಜಂಪ್‌ಗೆ ತಯಾರಿ ನಡೆಸುವ ರೀತಿ, ಜಂಪ್ ಮಾಡುತ್ತಾ ಇರುತ್ತಾರೆ. ಆದರೆ ಹಾಸಿಗೆ ಮತ್ತು ಸೋಪಾ ಮೇಲೆ ಈ ತಯಾರಿ ಮಾಡುವುದು ಎಷ್ಟು ಸರಿ. ಆದರೆ ಈ ಕ್ರಿಯೆ ನಮ್ಮಲ್ಲಿರುವ ಮಗುವನ್ನು ಹೊರಗೆ ತರುತ್ತದೆಯಂತೆ!



Click it and Unblock the Notifications
