For Quick Alerts
ALLOW NOTIFICATIONS  
For Daily Alerts

ಪ್ರಕೃತಿ ವಿಕೋಪ: ಚಿತ್ತವನ್ನೇ ಕೆದಕುವ ಅಪರೂಪದ ಚಿತ್ರಗಳು

By Super Admin
|

ನಿಸರ್ಗ ಮುನಿಸಿಕೊಂಡಾಗ ಮನುಷ್ಯನೆಷ್ಟು ಕುಬ್ಜನೆಂಬುದು ಅರಿವಾಗುತ್ತದೆ. ಪ್ರಕೃತಿವಿಕೋಪಗಳನ್ನು ತಡೆಯುವುದು ಅಸಾಧ್ಯ. ಎಷ್ಟೋ ಪ್ರಕೋಪಗಳಿಗೆ ನಾವು, ಮನುಷ್ಯರೇ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರಣರಾಗಿದ್ದೇವೆ. ಇದುವರೆಗೆ ನಮ್ಮ ಸ್ವಾರ್ಥಕ್ಕಾಗಿ ಮಾಡಿದ ತಪ್ಪನ್ನು ಹಿಂದೆ ಪಡೆಯಲು ಸಾಧ್ಯವಿಲ್ಲ. ಆದರೆ ಮುಂದೆ ಕೈಗೊಳ್ಳಬೇಕಾದ ಕ್ರಮಕ್ಕೆ ಈ ಪ್ರಕೋಪಗಳು ಮಾಹಿತಿ ಮತ್ತು ನೆರವು ನೀಡಬಲ್ಲವು. ಪ್ರಕೃತಿಯ ರುದ್ರ, ನರ್ತನಕ್ಕೆ, ಅಂದು ದೇಶವೇ ಬೆಚ್ಚಿ ಬಿದ್ದಿತು

ಈ ವಿಕೋಪಗಳನ್ನು ಆ ಸಮಯದಲ್ಲಿ ಸೆರೆಹಿಡಿದ ಛಾಯಾಚಿತ್ರಗಳು ವಿಶ್ಲೇಷಕರಿಗೆ ಹಾಗೂ ಮುಂದಿನ ಕ್ರಮ ಕೈಗೊಳ್ಳಬೇಕಾದ ಜವಾಬ್ದಾರಿಯುತ ವ್ಯಕ್ತಿಗಳಿಗೆ ಅತಿ ಹೆಚ್ಚಿನ ನೆರವು ನೀಡುತ್ತವೆ. ಆ ಘಳಿಗೆಯಲ್ಲಿ ಆ ಸ್ಥಳದಲ್ಲಿ ಉಪಸ್ಥಿತರಿದ್ದು ಆ ಕ್ಷಣದಲ್ಲಿ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ ಈ ಛಾಯಾಚಿತ್ರಗಳು ಅತ್ಯಪರೂಪ ಮಾತ್ರವಲ್ಲ, ಅಪೂರ್ವವೂ ಆಗಿವೆ. ವಿಜ್ಞಾನಿಗಳಿಗೂ ಯಕ್ಷ ಪ್ರಶ್ನೆಯಂತೆ ಕಾಡುವ ಭೂಕಂಪದ ರಹಸ್ಯ!

ಪ್ರಕೃತಿ ವಿಕೋಪ ಸಂಭವಿಸಿದ ಸರಿಯಾದ ಕ್ಷಣದಲ್ಲಿ ಈ ಚಿತ್ರಗಳನ್ನು ಸೆರೆಹಿಡಿದಿದ್ದು ಇದರಲ್ಲಿ ಕೆಲವಂತೂ ನಮ್ಮ ಚಿತ್ತವನ್ನೇ ಕಲಕಿ ಉದ್ಗಾರವನ್ನು ಹೊರಡಿಸುವಷ್ಟಿವೆ. ಇನ್ನುಳಿದವು, ಅಬ್ಬಾ ದೇವರೇ, ಆ ಕ್ಷಣದಲ್ಲಿ ನಾನು ಅಲ್ಲಿರಲಿಲ್ಲವಲ್ಲ! ಎಂದು ಉದ್ಗರಿಸುವಂತಾಗುತ್ತದೆ. ಬನ್ನಿ, ಇಂತಹ ಕೆಲವು ಅಪೂರ್ವ ಛಾಯಾಚಿತ್ರಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡುತ್ತಾ ಸಾಗೋಣ:

ಐಸ್ ಲ್ಯಾಂಡ್‌ನ ಐಯಾ ಫ್ಯತ್ಲಾ ಯೋಕುಲ್ ಜ್ವಾಲಾಮುಖಿ

ಐಸ್ ಲ್ಯಾಂಡ್‌ನ ಐಯಾ ಫ್ಯತ್ಲಾ ಯೋಕುಲ್ ಜ್ವಾಲಾಮುಖಿ

ಇತ್ತೀಚೆಗೆ, ಅಂದರೆ 2010ರಲ್ಲಿ ಐಸ್ ಲ್ಯಾಂಡ್ ನಲ್ಲಿರುವ ಐಯಾ ಫ್ಯತ್ಲಾ ಯೋಕುಲ್ (Eyjafjallajokull) ಎಂಬ ಹೆಸರಿನ ಈ ಜ್ವಾಲಾಮುಖಿ ಬಲು ಒತ್ತಡದಿಂದ ಸ್ಪೋಟಿಸಿತು. ಇದರ ಒಡಲಿನಿಂದ ಹೊರಬಿದ್ದ ಬಿಸಿಬಿಸಿ ಲಾವಾ, ಮಾಗ್ಮಾ ಎಂಬ ಕುದಿದ್ರವದ ನದಿಯಲ್ಲಿ ಬಂಡೆಗಳು ತೇಲುತ್ತಾ ಹೊರಹರಿಯಿತು. ಇದರ ಹೊಗೆಯಲ್ಲಿದ್ದ ಧೂಳು ಮೋಡದಂತೆ ದಟ್ಟೈಸಿದ್ದು ಭಾರೀ ಪ್ರಮಾಣದಲ್ಲಿ ಬೂದಿ ತುಂಬಿಕೊಂಡಿದ್ದ ಕಾರಣ ಆ ಮಾರ್ಗದ ವಿಮಾನಗಳನ್ನೇ ಸ್ಥಗಿತಗೊಳಿಸಬೇಕಾಗಿ ಬಂದಿತ್ತು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

Image courtesy

ಐಸ್ ಲ್ಯಾಂಡ್‌ನ ಐಯಾ ಫ್ಯತ್ಲಾ ಯೋಕುಲ್ ಜ್ವಾಲಾಮುಖಿ

ಐಸ್ ಲ್ಯಾಂಡ್‌ನ ಐಯಾ ಫ್ಯತ್ಲಾ ಯೋಕುಲ್ ಜ್ವಾಲಾಮುಖಿ

ಇದರ ಪರಿಣಾಮವಾಗಿ ಯೂರೋಪ್ ಮತ್ತು ಉತ್ತರ ಅಮೇರಿಕಾದ ಪ್ರವಾಸಿಗರು ನಡುಮಾರ್ಗದಲ್ಲಿ ಹಲವು ದಿನಗಳವರೆಗೆ ಪ್ರಯಾಣವನ್ನು ಸ್ಥಗಿತಗೊಳಿಸಬೇಕಾಗಿ ಬಂದಿತ್ತು. ರಾತ್ರಿ ಹೊತ್ತು ಸಿಡಿದ ಈ ಜ್ವಾಲಾಮುಖಿಯ ಧೂಳಿನ ಮೋಡ ಮೇಲೇರುತ್ತಿದ್ದಂತೆಯೇ ಅಲ್ಲಿಂದ ಸಿಡಿಲುಗಳು ನೆಲಕ್ಕೆ ಅಪ್ಪಳಿಸುತ್ತಿದ್ದ ಕ್ಷಣದಲ್ಲಿಯೇ ತೆಗೆದ ಈ ಚಿತ್ರ ಅತ್ಯಂತ ಅಪರೂಪದ್ದಾಗಿದೆ.

ಹೈವೇಯನ್ನೇ ಮುಚ್ಚಿದ ಕ್ಯಾಲಿಫೋರ್ನಿಯಾದ ಈ ಭೂಜರಿತ

ಹೈವೇಯನ್ನೇ ಮುಚ್ಚಿದ ಕ್ಯಾಲಿಫೋರ್ನಿಯಾದ ಈ ಭೂಜರಿತ

ಕ್ಯಾಲಿಫೋರ್ನಿಯಾದ ಮಾಂಟೇರೇ ಕೌಂಟಿ ಎಂಬ ಪ್ರದೇಶದಲ್ಲಿ 2011ರ ಮಾರ್ಚ್ 17ರಂದು ರಸ್ತೆಯಡಿಯ ದೊಡ್ಡದೊಂದು ಭಾಗ ಧಿಡೀರನೇ ಕುಸಿದಿತ್ತು. ಇದರೊಂದಿಗೆ ಇದರ ಮೇಲೆ ಕಟ್ಟಿದ್ದ ರಸ್ತೆಯೂ ಕುಸಿಯಿತು. ಅದೃಷ್ಟವಶಾತ್ ಆ ಸಮಯದಲ್ಲಿ ಅಲ್ಲಿ ಯಾವುದೇ ವಾಹನವಿಲ್ಲದಿದ್ದ ಕಾರಣ ಯಾವುದೇ ಅನಾಹುತ ಸಂಭವಿಸದಿದ್ದರೂ ನಿಲುಗಡೆಗೊಂಡ ಮಾರ್ಗದ ಕಾರಣ ಸಂಚಾರ ಸ್ಥಗಿತಗೊಂಡಿತ್ತು. Image courtesy

ಸಾಗರದತ್ತ ಹರಿದ ಕುದಿಕುದಿಯುವ ಲಾವಾನದಿ

ಸಾಗರದತ್ತ ಹರಿದ ಕುದಿಕುದಿಯುವ ಲಾವಾನದಿ

ಜ್ವಾಲಾಮುಖಿಗಳ ಚಿತ್ರ ತೆಗೆಯುವುದು ದುಃಸಾಧ್ಯದ ಕೆಲಸ. ಏಕೆಂದರೆ ಯಾವುದೇ ಕ್ಷಣದಲ್ಲಿ ಎರಗಬಹುದಾದ ಬಿಸಿಬಿಲಿ ಲಾವಾ ಜೀವವನ್ನೇ ತೆಗೆಯಬಹುದು. ಆದರೂ ಜೀವವನ್ನು ಪಣಕ್ಕಿಟ್ಟು ಕೆಲವು ಛಾಯಾಗ್ರಾಹಕರು ಈ ಚಿತ್ರಗಳನ್ನು ತೆಗೆಯಲು ಮುಂದೆ ಧಾವಿಸುತ್ತಾರೆ. ಇಂತಹವರಿಗೆ ಲಾವಾ ಹಂಟರ್ ಎಂದು ಕರೆಯುತ್ತಾರೆ. ಇಂತಹ ಓರ್ವ ವ್ಯಕ್ತಿ ಮೈಲ್ಸ್ ಮೋರ್ಗಾನ್.

Image courtesy

ಸಾಗರದತ್ತ ಹರಿದ ಕುದಿಕುದಿಯುವ ಲಾವಾನದಿ

ಸಾಗರದತ್ತ ಹರಿದ ಕುದಿಕುದಿಯುವ ಲಾವಾನದಿ

ಅಮೇರಿಕಾದ ಆರೆಗಾನ್ ರಾಜ್ಯದ ಪೋರ್ಟ್ ಲ್ಯಾಂಡ್ ನಿವಾಸಿಯಾದ ಇವರಿಗೆ ಹವಾಯಿ ದ್ವೀಪಗಳ ಜ್ವಾಲಾಮುಖಿಗಳ ಲಾವದ್ರವ ಹರಿಯುವ ಚಿತ್ರ್ತತೆಗೆಯುವುದೇ ಒಂದು ಜೀವನದ ಉದ್ದೇಶವಾಗಿತ್ತು. ಎಷ್ಟೋ ಸಮಯದವರೆಗೆ ಸೂಕ್ತ ಸಮಯಕ್ಕೆ ಕಾದು ಕಡೆಗೂ ಒಂದು ದಿನ ಲಾವಾ ಸ್ಪೋಟಿಸಿ ಆ ಕುದಿಕುದಿಯುವ ಕಿತ್ತಳೆಬಣ್ಣದ ನದಿ ಸಾಗರದತ್ತ ಸಾಗುವ ಈ ಚಿತ್ರವನ್ನು ತೆಗೆದು ವಿಶ್ವವಿಖ್ಯಾತಿ ಪಡೆದೇ ಬಿಟ್ಟರು.

Image courtesy

ಪಾಲಿನೇಷ್ಯಾದ ಟೋಂಗಾದಲ್ಲಿ ಸಂಭವಿಸಿದ ಸಾಗರದಾಲದ ವಿಸ್ಪೋಟ

ಪಾಲಿನೇಷ್ಯಾದ ಟೋಂಗಾದಲ್ಲಿ ಸಂಭವಿಸಿದ ಸಾಗರದಾಲದ ವಿಸ್ಪೋಟ

ನಮ್ಮ ಸಾಗರದಾಳದಲ್ಲಿ ಎಷ್ಟೋ ಜ್ವಾಲಾಮುಖಿಗಳಿವೆ. ಇವುಗಳಲ್ಲಿ ಯಾವುದಾದರೂ ಬಿರಿದರೆ ಇದರ ಪರಿಣಾಮ ನೀರಿನ ಮೇಲೆ ಕಾಣುವ ಸಂಭವ ಬಹಳ ಕಡಿಮೆ. ಆದರೆ ಪಾಲಿನೇಷ್ಯಾದಲ್ಲಿರುವ ಹುಂಗಾ ಟೋಂಗಾ ಎಂಬ ದ್ವೀಪದ ಬಳಿ 2009ರ ಮಾರ್ಚ್ 16ರಂದು ಟೋಂಗಾ ದೇಶದ ರಾಜಧಾನಿ ಟೋಗಾಪಟು ನಿಂದ ಸುಮಾರು ಹನ್ನೊಂದು ಕಿ.ಮೀ ದೂರದಲ್ಲಿ ಸಮುದ್ರದ ಆಳದಲ್ಲಿ ಸಂಭವಿಸಿದ ಭೂಕಂಪದ ಕಾರಣ ಜ್ವಾಲಾಮುಖಿಯೊಂದು ಸ್ಫೋಟಿಸಿ ಇದರ ತುತ್ತ ತುದಿಯ ಭಾಗ ಸಾಗರದಿಂದ ಕೆಲವು ಮೀಟರುಗಳಷ್ಟು ಮೇಲಕ್ಕೆ ಬರುವಷ್ಟು ಚಿಮ್ಮಿಸಿತ್ತು.

Image courtesy

ಪಾಲಿನೇಷ್ಯಾದ ಟೋಂಗಾದಲ್ಲಿ ಸಂಭವಿಸಿದ ಸಾಗರದಾಲದ ವಿಸ್ಪೋಟ

ಪಾಲಿನೇಷ್ಯಾದ ಟೋಂಗಾದಲ್ಲಿ ಸಂಭವಿಸಿದ ಸಾಗರದಾಲದ ವಿಸ್ಪೋಟ

ಅದೇ ಕ್ಷಣದಲ್ಲಿ ಕ್ಲಿಕ್ಕಿಸಿದ ಈ ಛಾಯಾಚಿತ್ರ ಅತ್ಯಂತ ಅಪರೂಪ ಮತ್ತು ಅಮೂಲ್ಯದ್ದಾಗಿದೆ. ನಾಲ್ಕು ದಿನಗಳ ಬಳಿಕ ಇದರ ಬಗ್ಗೆ ಸಂಶೋಧನೆ ನಡೆಸಿದ ತಜ್ಞರು ಸಮುದ್ರದಾಳದಲ್ಲಿ ಸಂಭವಿಸಿದ 7.6ರಿಕ್ಟರ್ ಮಾಪಕದ ಭೂಕಂಪವೇ ಇದಕ್ಕೆ ಕಾರಣ ಎಂದು ಪ್ರಕಟಿಸಿದರು.

ಇಂಡೋನೇಶಿಅಯದ ಸುನಾಮಿಯಿಂದ ಓಡುತ್ತಿರುವ ನಾಗರಿಕರು

ಇಂಡೋನೇಶಿಅಯದ ಸುನಾಮಿಯಿಂದ ಓಡುತ್ತಿರುವ ನಾಗರಿಕರು

ಯಾವುದೇ ಮುನ್ಸೂಚನೆಯಿಲ್ಲದೇ ತೆಂಗಿನ ಮರದಷ್ಟು ಎತ್ತರದ ಅಲೆಯೊಂದು ಧಿಡೀರನೇ ಮೇಲೆದ್ದು ವಾಯುವೇಗದಲ್ಲಿ ಧಾವಿಸಿದರೆ ಹೇಗಾಗಬಾರದು? 2004ರ ಡಿಸೆಂಬರ್ ಇಪ್ಪತ್ತಾರರಂದು ಅಪ್ಪಳಿಸಿದ 9.1-9.3 ರಿಕ್ಟರ್ ಮಾಪಕದ ಭೂಕಂಪದಿಂದ ಎದ್ದ ಈ ದೈತ್ಯ ಅಲೆಗಳ ಕಾರಣ ಹದಿನಾಲ್ಕು ರಾಷ್ಟ್ರಗಳ 230,000 ಕ್ಕೂ ಹೆಚ್ಚು ಜನರು ಮರಣ ಹೊಂದಿದ್ದರು.

ಇಂಡೋನೇಶಿಅಯದ ಸುನಾಮಿಯಿಂದ ಓಡುತ್ತಿರುವ ನಾಗರಿಕರು

ಇಂಡೋನೇಶಿಅಯದ ಸುನಾಮಿಯಿಂದ ಓಡುತ್ತಿರುವ ನಾಗರಿಕರು

ಇದರಲ್ಲಿ ಇಂಡೋನೇಶ್ಯಾದಲ್ಲಿಯೇ 168,000ಜನರು ಸಾವನ್ನಪ್ಪಿದ್ದರು. ಇಂಡೋನೇಶ್ಯಾದ ಸಂಭವಿಸಿದ ಈ ದುರಂತದ ಕೆಲವೇ ಕ್ಷಣಗಳ ಹಿಂದೆ ತೆಗೆದ ಈ ಚಿತ್ರ ನೋಡಿದವರ ಯಾರದ್ದೇ ಮನ ಕಲಕದಿರದು.

ಯಮುನಾ ನದಿಯಲ್ಲಿ ಭಾರೀ ಮಳೆಗೆ ಬಲಿಯಾದ ಜನರು

ಯಮುನಾ ನದಿಯಲ್ಲಿ ಭಾರೀ ಮಳೆಗೆ ಬಲಿಯಾದ ಜನರು

2006ರಲ್ಲಿ ಉತ್ತರಖಂಡ ರಾಜ್ಯದಲ್ಲಿ ಮಾಮೂಲಿಗಿಂತಲೂ ಬಲುಹೆಚ್ಚು ಪ್ರಮಾಣದಲ್ಲಿ ಮಾನ್ಸೂನ್ ಮಳೆಯಾದ ಕಾರಣ ಹತ್ತು ಹಲವು ಕಡೆ ಭೂಕುಸಿತ, ನೆರೆ ಮೊದಲಾದ ಕಾರಣಗಳಿಂದ ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು. ಇನ್ನೂ ಸಾವಿರಾರು ಜನರು ನಾಪತ್ತೆಯಾದರು. ಅಷ್ಟೇ ಅಲ್ಲ, ನದಿಯ ಮೇಲಿದ್ದ ದೋಣಿಗಳಲ್ಲಿದ್ದ ಡಜನ್ನುಗಟ್ಟಲೆ ಜನ ಮಳೆನೀರು ತುಂಬಿಕೊಂಡು ಮುಳಿಗಿದ ದೋಣಿಗಳ ಕಾರಣ ಮರಣ ಹೊಂದಿದ್ದರು.

Image courtesy

ಐಸ್ ಲ್ಯಾಂಡ್ ನ ಅವಳಿ ಚಂಡಮಾರುತ

ಐಸ್ ಲ್ಯಾಂಡ್ ನ ಅವಳಿ ಚಂಡಮಾರುತ

ಸಾಮಾನ್ಯವಾಗಿ ಚಂಡಮಾರುತಗಳು ಭೂಮಿಯ ಉತ್ತರಾರ್ಧ ಗೋಳದಲ್ಲಿದ್ದರೆ ಅಪ್ರದಕ್ಷಿಣಾಕಾರದಲ್ಲಿ ಸುತ್ತುತ್ತವೆ. 2010ರಲ್ಲಿ ಮಾತ್ರ ಐಸ್ ಲ್ಯಾಂಡ್ ದೇಶದ ಆಗಸದಲ್ಲಿ ಒಂದಲ್ಲ, ಬದಲಿಗೆ ಎರಡು ಚಂಡಮಾರುತಗಳು ಎರಗಿದ್ದುದನ್ನು ಈ ಉಪಗ್ರಹ ಚಿತ್ರಗಳು ತೋರಿಸುತ್ತವೆ.

English summary

Amazing Photos Of Natural Disasters

Natural calamities are something that no man can stop from occuring. Now there's very less time for us to undo our mistakes in order to save mother Earth. In this article, we are here to share some of the most amazing photos of natural disasters that were captured right at the moment. . So, find out more about these amazing photos of natural disasters that were captured right at the moment, which can totally amaze you.
X
Desktop Bottom Promotion