Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಅಬ್ಬಬ್ಬಾ, ತಮ್ಮ ಮನೆಯ ಮೇಲೆ ಇವರಿಗೆ ಎಷ್ಟೊಂದು ವ್ಯಾಮೋಹ!
ಅಭಿವೃದ್ಧಿಯಾಗಬೇಕಾದರೆ ಏನಾದರೂ ತ್ಯಾಗ ಮಾಡಲೇಬೇಕಾಗುತ್ತದೆ. ನಮ್ಮ ನಗರಗಳು ಸುಂದರವಾಗಲು ಮರಗಳು ಹಾಗೂ ಪ್ರಕೃತಿಯನ್ನು ನಾಶ ಮಾಡಿ ಕಟ್ಟಡಗಳನ್ನು ಕಟ್ಟುತ್ತಾರೆ. ಕಟ್ಟಡಗಳನ್ನು ಕಟ್ಟಲು ಕೇವಲ ಪ್ರಕೃತಿ ಮಾತ್ರ ನಾಶವಾಗುವುದಲ್ಲ, ಕೆಲವೊಂದು ಮನೆಗಳನ್ನು ವಶಪಡಿಸಿಕೊಂಡು ನಗರವನ್ನು ಸುಂದರ ಹಾಗೂ ಅಭಿವೃದ್ಧಿ ಮಾಡಬೇಕಾಗುತ್ತದೆ. ಆದರೆ ಇಂತಹ ಸಮಯದಲ್ಲಿ ಮನೆಯವರಿಗೆ ಸಿಗುವ ಪರಿಹಾರ ಮಾತ್ರ ತುಂಬಾ ಕಡಿಮೆ.

Image courtesy
ಈ ಪರಿಹಾರವನ್ನು ಪಡೆದುಕೊಂಡು ಅವರು ಬೇರೆ ಕಡೆ ಇದೇ ರೀತಿಯ ಮನೆಯನ್ನು ಖರೀದಿಸಲು ಸಾಧ್ಯವಿಲ್ಲ. ಯಾಕೆಂದರೆ ಬೆಲೆ ಅಷ್ಟು ಗಗನಕ್ಕೇರಿರುತ್ತದೆ. ಇಂತಹ ಸಂದರ್ಭದಲ್ಲಿ ಕೆಲವು ಮನೆಯ ಮಾಲಕರು ಕಟ್ಟಡ ಕಟ್ಟುವವರಿಗೆ ತಮ್ಮ ಮನೆಯನ್ನು ಬಿಟ್ಟುಕೊಡಲು ನಿರಾಕರಿಸಿದ್ದಾರೆ. ಇದರಿಂದಾಗಿ ಕೆಲವೊಂದು ಮನೆಗಳನ್ನು ಹಾಗೆ ಬಿಟ್ಟು ಅಭಿವೃದ್ಧಿ ಕೆಲಸ, ಕಟ್ಟಡ ಹಾಗೂ ರಸ್ತೆಗಳನ್ನು ಮಾಡಲಾಗಿದೆ. ಇಂತವರ ಬಗ್ಗೆ ಈ ಲೇಖನದಲ್ಲಿ ವಿವರ ನೀಡಲಾಗಿದೆ.
360 ಡಿಗ್ರಿಯಲ್ಲಿ ರಸ್ತೆ ಕಾಣಿಸುವ ಮನೆ
ಚೀನಾದಲ್ಲಿ ನಾಲ್ಕು ಪಥಗಳ ಪ್ಲೈಓವರ್ ಗೆ ಜಾಗ ಬಿಟ್ಟುಕೊಡಲು ನಿರಾಕರಿಸಿದಾಗ ಗುತ್ತಿಗೆದಾರರು ಮೂರು ಮನೆಗಳನ್ನು ಹಾಗೆ ಬಿಟ್ಟು ಸುತ್ತಲು ನಾಲ್ಕು ಪಥಗಳ ಫ್ಲೈಓವರ್ ನಿರ್ಮಿಸಿದ್ದಾರೆ. ಮನೆಗಳನ್ನು ಮಾರಲು ಮಾಲಕರು ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಲ್ಡರ್‌ಗಳು ಹೀಗೆ ಮಾಡಬೇಕಾಯಿತು.
Image courtesy
ವೃದ್ಧ ದಂಪತಿ ನಿರಾಕರಣೆ
ಚೀನಾದ ವೃದ್ಧ ಲೂ ಬಯೊಗೆನ್ ಮತ್ತು ಆತನ ಪತ್ನಿ ಅರ್ಧ ಕೆಡವಿದ ಮನೆಯಲ್ಲೇ ಜೀವಿಸುತ್ತಿದ್ದಾರೆ. ಇವರು ಇರುವುದು ಚೀನಾದ ಝೆಜಿಯಾಂಗ್ ವೆಂಗ್ಲಿಂಗ್ ನಲ್ಲಿ. ಸರಕಾರ ನೀಡುತ್ತಿರುವ ಪರಿಹಾರ ಸಾಕಾಗುತ್ತಿಲ್ಲವೆಂದು ವೃದ್ಧ ದಂಪತಿಯ ಆರೋಪವಾಗಿದೆ. ವೃದ್ಧ ದಂಪತಿಯ ಸುರಕ್ಷತೆಗಾಗಿ ಐದು ಮಹಡಿಯ ಕಟ್ಟಡದಲ್ಲಿ ಒಂದು ಕೋಣೆಯನ್ನು ಹಾಗೆ ಬಿಡಲಾಗಿದೆ.
ಕೈಗಾರಿಕಾ ವಲಯದ ಮಧ್ಯದಲ್ಲಿರುವ ಮನೆ



Click it and Unblock the Notifications


