For Quick Alerts
ALLOW NOTIFICATIONS  
For Daily Alerts

ನಮ್ಮ ದೇಹದೊಳಗೇ ನಡೆಯುತ್ತಿದೆ ಅಚ್ಚರಿಗಳ ಸರಮಾಲೆ!

By Super
|

ಮಾನವದೇಹವನ್ನು ಪ್ರತಿದಿನ ಅಭ್ಯಸಿಸುವ ವೈದ್ಯರಿಗೂ ಎಲ್ಲಾ ತಿಳಿದಿದೆ ಎಂದು ಹೇಳಲಾಗದು. ಏಕೆಂದರೆ ನಮ್ಮ ದೇಹವೊಂದು ವಿಸ್ಮಯಗಳ ಆಗರವಾಗಿದ್ದು ಪ್ರತಿದಿನವೂ ವೈದ್ಯಲೋಕರಿಂದ ಹೊಸ ಹೊಸ ವಿಷಯಗಳು ಹೊರಬರುತ್ತಲೇ ಇರುತ್ತವೆ. ಪ್ರತಿ ಅಂಗಕ್ಕೂ ತನ್ನದೇ ಆದ ಸಾಮರ್ಥ್ಯವಿದ್ದು ಇದರಲ್ಲಿ ಕೆಲವು ಮಾತ್ರ ನಮಗೆ ಇದುವರೆಗೆ ತಿಳಿದಿದೆ. ಇದರ ಇತರ ಸಾಮರ್ಥ್ಯಗಳ ಬಗ್ಗೆ ಅರಿವಾಗುತ್ತಾ ಹೋದಂತೆ ಅಚ್ಚರಿ ಮೂಡುತ್ತಲೇ ಹೋಗುತ್ತದೆ. ಉದಾಹರಣೆಗೆ ಯಕೃತ್, ನಮ್ಮ ದೇಹದ ಅಂಗಗಳಲ್ಲಿ ಕತ್ತರಿಸಿದರೆ ಬೆಳೆಯುವ ಸಾಮರ್ಥ್ಯ ಹೊಂದಿರುವ ಅಂಗವೆಂದರೆ ಇದೊಂದೇ. ಮನುಷ್ಯನ ಶರೀರದ ಬಗ್ಗೆ 9 ಅಚ್ಚರಿಯ ವಿಷಯಗಳು

ಸಾಮಾನ್ಯ ಜನರು ಒಟ್ಟಾರೆ ಆರೋಗ್ಯವನ್ನು ಮಾತ್ರ ಪರಿಗಣಿಸುತ್ತಾರೆ. ಯಾವುದಾದರೊಂದು ಅಂಗದಲ್ಲಿ ನೋವಾದರೆ ಮಾತ್ರ "ಈ ನೋವನ್ನು ಬಿಟ್ಟು ಬೇರೆ ಯಾವುದನ್ನೂ ಬೇಕಾದರೂ ಸಹಿಸಬಲ್ಲೆ" ಎಂಬ ಮಾತನಾಡುತ್ತಾರೆ. ಆದರೆ ಪ್ರತಿ ಅಂಗದ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಿದಾಗ ಇವು ಎಷ್ಟು ಜಟಿಲವಾಗಿ ಒಂದಕ್ಕೊಂದು ಬೆಸೆದುಕೊಂಡಿವೆ ಮತ್ತು ಅವಲಂಬಿತವಾಗಿವೆ ಎಂದು ಅಚ್ಚರಿಗೊಳಗಾಗುತ್ತೇವೆ.

ಆರೋಗ್ಯದ ಬಗ್ಗೆ ಕಾಳಜಿ ಇರುವ ಎಲ್ಲರಿಗೂ ಈ ಮಾಹಿತಿಗಳು ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ನಾವು ಮಾಡುತ್ತಿರುವ ತಪ್ಪುಗಳು ಕಂಡುಬಂದು ಇದನ್ನು ಮುಂದೆ ಪುನರಾವರ್ತಿಸದಿರಲು ಸಾಧ್ಯವಾಗುತ್ತದೆ. ಪ್ರತಿ ಅಂಗದ ಬಗ್ಗೆ ತಿಳಿಯುತ್ತಾ ಇದರ ಅಳಕ್ಕೆ ಇಳಿಯುತ್ತಾ ಹೋದಂತೆ ಇದರ ಪ್ರತಿ ಜೀವಕೋಶಗಳು ಈ ಅಂಗದ ಕಾರ್ಯನಿರ್ವಹಣೆಗಾಗಿ ಯಾವ ರೀತಿಯಲ್ಲಿ ರೂಪುಗೊಂಡಿದೆ ಎಂದು ತಿಳಿದುಬರುತ್ತದೆ. ಬನ್ನಿ, ಇಂತಹ ಅದ್ಭುತ ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡುತ್ತಾ ಸಾಗೋಣ, ಅಚ್ಚರಿಯಲ್ಲಿ ಮುಳುಗೋಣ:

ಮಾಹಿತಿ #1

ಮಾಹಿತಿ #1

ಬೆರಳುಗಳ ನೆಟಿಕೆ ತೆಗೆಯುವಾಗ ಬರುವ ಶಬ್ದ ಎಲ್ಲಿಂದ ಬರುತ್ತದೆ ಗೊತ್ತೇ? ಬರೆ ಬೆರಳುಗಳಲ್ಲ, ಕುತ್ತಿಗೆ, ಬೆನ್ನುಮೂಳೆ ಸಹಾ ಇಂತಹ ಸದ್ದು ಹೊರಡಿಸುತ್ತವೆ. ವಾಸ್ತವವಾಗಿ ಪ್ರತಿ ಮೂಳೆಗಳ ಸಂದುಗಳಲ್ಲಿ ಕೀಲೆಣ್ಣೆಯಂತೆ ಕೆಲಸ ಮಾಡುವ ದ್ರವವಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಾಹಿತಿ #1

ಮಾಹಿತಿ #1

ಈ ದ್ರವದಲ್ಲಿ ನೈಟ್ರೋಜನ್ ಕರಗಿದ್ದು ಪ್ರತಿಬಾರಿ ಮೂಳೆಗಳು ಅಲುಗಾಡಿದಾಗ ನಿಧಾನವಾಗಿ ಗುಳ್ಳೆಯ ರೂಪದಲ್ಲಿರುತ್ತವೆ. ಬೆರಳುಗಳನ್ನು ಮಡಚಿದಾಗ ಈ ಗುಳ್ಳೆಗಳಿಗೆ ಸ್ಥಳ ಇಲ್ಲದೇ ಒಡೆಯುವುದೇ ನೆಟಿಕೆ. ಆಗಾಗ ಮಾಡುವುದರಿಂದ ತೊಂದರೆ ಇಲ್ಲವಾದರೂ ಸತತವಾಗಿ ಮತ್ತು ನೋವುಂಟಾಗುವಷ್ಟು ಒತ್ತಿದರೆ ಇದು ಮೂಳೆಗಳ ಸಂದುಗಳಿಗೆ ಘಾಸಿಯುಂಟು ಮಾಡಬಹುದು.

ಮಾಹಿತಿ #2

ಮಾಹಿತಿ #2

ಬೆವರಿನ ವಾಸನೆ ಎಂದು ನಾವೆಲ್ಲಾ ಹೇಳುತ್ತೇವೆ. ವಾಸ್ತವವಾಗಿ ಬೆವರು ಚರ್ಮದ ಸೂಕ್ಷ್ಮರಂಧ್ರಗಳಿಂದ ಹೊರಬಂದಾಗ ಇದು ಅಪ್ಪಟ ನೀರು ಮಾತ್ರ ಆಗಿರುತ್ತದೆ. ಆದರೆ ಚರ್ಮದ ಸೂಕ್ಷ್ಮರಂಧ್ರಗಳಲ್ಲಿ ಕೊಳೆತುಂಬಿಕೊಂಡಿದ್ದು ಇದರಲ್ಲಿ ಮನೆಮಾಡಿದ್ದ ಬ್ಯಾಕ್ಟೀರಿಯಾಗಳಿಗೆ ನೀರು ದೊರೆತ ತಕ್ಷಣ ಈ ಕೊಳೆಯನ್ನು ಕೊಳೆಸಲು ಪ್ರಾರಂಭಿಸುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಾಹಿತಿ #2

ಮಾಹಿತಿ #2

ಇದು ದುರ್ವಾಸನೆಯಿಂದ ಕೂಡಿರುತ್ತದೆ. ಆದ್ದರಿಂದ ಸ್ನಾನ ಮಾಡದವರ ಮೈಯ ಬೆವರು ದುರ್ವಾಸನೆ ಸೂಸುತ್ತಿರುತ್ತದೆ. ಆದ್ದರಿಂದ ನಮ್ಮ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಎಷ್ಟು ಅಗತ್ಯ ಎಂದು ಈಗ ತಿಳಿಯಿತೇ?

ಮಾಹಿತಿ #3

ಮಾಹಿತಿ #3

ರಕ್ತದಾನ ಪ್ರಾಣದಾನಕ್ಕೆ ಸಮಾನ ಎಂದು ವೈದ್ಯರು ತಿಳಿಸುತ್ತಾರೆ. ರಕ್ತಕ್ಕೆ ಬದಲಾಗಿ ಯಾವುದೇ ದ್ರವ ಈ ಲೋಕದಲ್ಲಿ ಲಭ್ಯವಿಲ್ಲ. ಏಕೆಂದರೆ ಪ್ರತಿ ತೊಟ್ಟಿನಲ್ಲಿಯೂ 250,000 ಪ್ಲೇಟ್ಲೆಟ್ ಮತ್ತು 10,000 ಬಿಳಿ ರಕ್ತಕಣಗಳಿದ್ದು ಸತತವಾಗಿ ರೋಗಗಳ ವಿರುದ್ಧ ಹೋರಾಡುತ್ತಿರುತ್ತವೆ. ಮತ್ತು ಕೆಂಪು ರಕ್ತಕಣಗಳು? ಪ್ರತಿ ತೊಟ್ಟಿನಲ್ಲಿ 50,00,000 ಕಣಗಳಿವೆ.

ಮಾಹಿತಿ #4

ಮಾಹಿತಿ #4

ಈ ಮಾಹಿತಿ ನಿಮ್ಮ ಮೆದುಳನ್ನು ಅಲ್ಲಾಡಿಸಬಹುದು. ಮೆದುಳಿನ ಚಿತ್ರ ನೋಡಿದಾಗ ಇದೊಂದು ಭಾರೀ ಮಡಿಕೆಗಳಿರುವ ಅಂಗ ಎಂದು ಗಮನಿಸಬಹುದು. ಈ ಮಡಿಕೆಗಳೇಕಿವೆ? ಈ ಪ್ರಶ್ನೆಗೆ ಮೆದುಳಿನ ಹೊರಪದರದ ವಿಸ್ತಾರ ಉತ್ತರ ನೀಡುತ್ತದೆ. ಮೆದುಳಿನ ಹೊರಪದರದ ಜೀವಕೋಶಗಳಲ್ಲಿಯೇ ಮೆದುಳಿನ ಸಾಮರ್ಥ್ಯ ಅಡಗಿದ್ದು 1.3ಚದರ ಮೀಟರ್ ವಿಸ್ತಾರದ ಈ ಅಂಗವನ್ನು ಇದನ್ನು ಹಾಗೇ ತಲೆಯೊಳಗೆ ತುಂಬಿಸಬೇಕಾದರೆ ನಮ್ಮ ತಲೆ ಈಗಿರುವುದಕ್ಕಿಂತಲೂ ನಾಲ್ಕು ಪಟ್ಟು ದೊಡ್ಡದಾಗಿಸಬೇಕಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಾಹಿತಿ #4

ಮಾಹಿತಿ #4

ಆದ್ದರಿಂದ ಇದನ್ನು ಕಾಗದ ಮುದ್ದೆ ಮಾಡಿದಾಗ ಉಂಟಾಗುವ ನೆರಿಗೆಗಳಂತೆ ನಿಸರ್ಗವೇ ಇದನ್ನು ಮಡಿಕೆಗಳ ರೂಪದಲ್ಲಿ ಸಂಕುಚಿತಗೊಳಿಸಿ ತಲೆಬುರುಡೆಯೊಳಗಿರಿಸಿದೆ. ಮಗುವಿಗೆ ಆರು ವರ್ಷವಾಗುತ್ತಿದ್ದಂತೆಯೇ ಮೆದುಳಿನ ಗಾತ್ರ ಹಿರಿಯರ ಮೆದುಳಿನ 90% ಪಡೆದುಕೊಂಡುಬಿಟ್ಟಿರುತ್ತದೆ.

ಮಾಹಿತಿ #5

ಮಾಹಿತಿ #5

ನಮ್ಮ ದೇಹದ ಅಂಗಾಂಶಗಳು, ರಕ್ತ, ಚರ್ಮ, ಕೂದಲು ಮೊದಲಾದವುಗಳು ಸತತವಾಗಿ ಪುನರ್ಜೀವನ ಪಡೆಯುತ್ತಿರುತ್ತವೆ. ಅಂದರೆ ಇದರ ಜೀವಕೋಶಗಳ ಆಯಸ್ಸು ನಿಯಮಿತವಾಗಿದ್ದು ಇವು ಸತ್ತು ಹೊಸ ಜೀವಕೋಶಗಳು ಹುಟ್ಟುತ್ತವೆ. ಆದರೆ ಅಂಗಗಳು ಆ ತರಹವಲ್ಲ. ಹೃದಯ, ಕರುಳು, ರಕ್ತನಾಳಗಳು ಮೊದಲಾದವು ಜೀವಮಾನವಿಡೀ ಹಾಗೇ ಇರುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಾಹಿತಿ #5

ಮಾಹಿತಿ #5

ಅಂದರೆ ನಿಸರ್ಗ ಇದರ ಆಯಸ್ಸು ಸುಮಾರು ನೂರು ವರ್ಷ ಬಾಳುವಂತೆ ನಿರ್ಮಿಸಿದೆ. (ಕತ್ತೆಗಳಿಗೆ ಹದಿನೈದು ವರ್ಷವಂತೆ) ಈ ಅಂಗಗಳಿಗೆ ಘಾಸಿಯಾದರೆ ಅಥವಾ ತೊಂದರೆ ಉಂಟಾದರೆ ಇದರ ಭಾಗವನ್ನು ಕತ್ತರಿಸುವಂತಿಲ್ಲ. ಆದರೆ ಇದಕ್ಕೆ ಅಪವಾದ ಎಂದರೆ ಯಕೃತ್. ಇದೊಂದು ಅಂಗ ಮಾತ್ರ ಮತ್ತೆ ಬೆಳೆಯಬಲ್ಲ ಸಾಮರ್ಥ್ಯ ಹೊಂದಿದ್ದು ದಾನರೂಪದಲ್ಲಿ ಒಂದು ಭಾಗವನ್ನು ಇತರರಿಗೆ ನೀಡಲೂಬಹುದಾಗಿದೆ.

ಮಾಹಿತಿ #5

ಮಾಹಿತಿ #5

ನಮ್ಮ ಬಾಯಿಯಲ್ಲಿ ಸತತವಾಗಿ ಲಾಲಾರಸ ಉತ್ಪತ್ತಿಯಾಗುತ್ತಲೇ ಇರುತ್ತದೆ. ಊಟದ ಸಮಯದಲ್ಲಿ ಹೆಚ್ಚಿದ್ದು ಇತರ ಸಮಯದಲ್ಲಿ ಕಡಿಮೆ ಇರುತ್ತದೆ. ಒಂದು ದಿನದ ಅವಧಿಯಲ್ಲಿ ಬಾಯಿಯಲ್ಲಿ ಒಸರುವ ಲಾಲಾರಸವನ್ನು ಸಂಗ್ರಹಿಸಿ ಅಳೆದರೆ ಎಷ್ಟಾಗುತ್ತದೆ ಗೊತ್ತೇ? ಆರು ಕಪ್ ಅಥವಾ ಒಂದೂವರೆ ಲೀಟರ್!.

English summary

Amazing Facts About Our Body

Human body is full of surprises and has incredible functionalities that make up a person. When you learn about these interesting facts about your body, you would be amazed on how creatively our body has been made. This includes the minute details of how well designed our organs are or how functional our body parts are.So, have a look at these mind-boggling facts on our human body and be amazed.
X
Desktop Bottom Promotion