For Quick Alerts
ALLOW NOTIFICATIONS  
For Daily Alerts

  ಈ ಊರಿನಲ್ಲಿ ಕಲಹವೇ ಇಲ್ಲ-ಭ್ರಷ್ಟಾಚಾರವಂತೂ ಇಲ್ಲವೇ ಇಲ್ಲ!

  By Manu
  |

  ಕಾಮಿಕ್ಸ್ ಕಥೆಯೊಂದರಲ್ಲಿ ಪಟ್ಟಣವೊಂದರ ಚಿತ್ರಣವಿದೆ. ಇಲ್ಲಿನ ಜನರು ಹದಿನೆಂಟನೆಯ ಶತಮಾನದಲ್ಲಿಯೇ ಜೀವಿಸಲು ಇಚ್ಛಿಸುತ್ತಾರೆ ಮತ್ತು ಬದಲಾವಣೆಗಳನ್ನು ಸ್ವಾಗತಿಸುವುದಿಲ್ಲ. ಕೃಷಿಯನ್ನೇ ನಂಬಿಕೊಂಡು ಕುದುರೆಗಳ ಮೇಲೆ ಓಡಾಡುತ್ತಾ ಯಾವುದೇ ಆತಂಕವಿಲ್ಲದೇ ನೆಮ್ಮದಿಯಾಗಿ ಬಾಳುತ್ತಿರುತ್ತಾರೆ.     ಬೀದಿ ಬದಿಯ ತಿಂಡಿಗಳ ಸ್ವರ್ಗ, ನಮ್ಮ ಭಾರತ!

  ಇಲ್ಲಿ ಜಾತಿ, ಮತ, ಕಲಹ ಏನೂ ಇಲ್ಲ, ವಿನಿಮಯ ಪದ್ಧತಿ ಇರುವ ಕಾರಣ ಹಣದ ಅಗತ್ಯವೇ ಇಲ್ಲ! ಇಂತಹ ಒಂದು ಪಟ್ಟಣ ನಿಜಕ್ಕೂ ಇದ್ದರೆ ಎಷ್ಟು ಚೆನ್ನಿತ್ತು ಎಂದು ಈ ಕಥೆ ಪೂರ್ತಿಯಾದ ಬಳಿಕ ಎಲ್ಲರಿಗೂ ಖಂಡಿತವಾಗಿಯೂ ಅನ್ನಿಸುತ್ತದೆ.

  ಆದರೆ ಈ ಕಲ್ಪನೆ ಸಾಕಾರವಾದಂತೆ ನಿಜವಾಗಿಯೂ ಒಂದು ಊರು ಈ ಭೂಮಿಯ ಮೇಲೇ ಇದೆ. ಅದೂ ಬೇರೆಲ್ಲೂ ಅಲ್ಲ, ನಮ್ಮ ದೇಶ ಭಾರತದಲ್ಲಿಯೇ! ನಿಮ್ಮ ಕಲ್ಪನೆ ಸಾಕಾರವಾದಂತಹ ಸುಂದರ ನಗರ. ಇಲ್ಲಿ ವ್ಯಕ್ತಿಯ ಅರ್ಹತೆ ಎಂದರೆ ಮಾನವತೆ ಮಾತ್ರ. ಆತನ ಜಾತಿ, ರಾಜಕೀಯ ಇಷ್ಟಗಳು, ಹಣ, ಕಾನೂನು ಯಾವುದೂ ಇಲ್ಲಿ ಪರಿಗಣಿಸಲ್ಪಡುವುದಿಲ್ಲ.  ಭೂಮಿಯ ಮೇಲಿನ ಸ್ವರ್ಗ, ನಮ್ಮ ಕಾಶ್ಮೀರ

  ಕುತೂಹಲ ಮೂಡಿತೇ? ನಿಮ್ಮ ಕುತೂಹಲವನ್ನು ಇನ್ನಷ್ಟು ಕೆರಳಿಸಿ ಹೆಚ್ಚಿನ ಮಾಹಿತಿ ಪಡೆಯಲು ಆ ಊರಿಗೇ ಹೋಗುವಂತೆ ಮಾಡಲೂಬಹುದು. ಅಂದಹಾಗೆ ಈ ಊರಿನ ಹೆಸರು ಆರೋವಿಲ್ಲೆ, ಅಥವಾ 'ಸೂರ್ಯೋದಯದ ನಗರ'.......

  ಈ ಪಟ್ಟಣದ ಸ್ಥಾಪಕರು

  ಈ ಪಟ್ಟಣದ ಸ್ಥಾಪಕರು

  ಈ ನಗರವನ್ನು 1968ರಲ್ಲಿ ಮೀರಾ ಅಲ್ಫಾಸ್ಸಾ ಎಂಬ ಮಹಿಳೆ ಉದ್ಘಾಟಿಸಿದರು. ಇವರನ್ನು ಗೌರವಾರ್ಥವಾಗಿ ಎಲ್ಲರೂ 'ಮಹಾತಾಯಿ' ಅಥವಾ "the Mother" ಎಂದೇ ಕರೆಯುತ್ತಾರೆ. ಈ ನಗರ ವಾಸ್ತವವಾಗಿ ಖ್ಯಾತ ವಾಸ್ತುಶಿಲ್ಪಿ ರೋಜರ್ ಆಂಗರ್ ರವರ ಕಲ್ಪನೆಯ ಸಾಕಾರವಾಗಿದೆ. ಆ ಸಮಯದಲ್ಲಿ ಈ ನಗರದ ಜನಸಂಖ್ಯೆ ಕೇವಲ ಐದು ಸಾವಿರ. Image courtesy

  ಈ ನಗರದ ಧ್ಯೇಯೋದ್ದೇಶಗಳು

  ಈ ನಗರದ ಧ್ಯೇಯೋದ್ದೇಶಗಳು

  ಶಾಂತಿಯಿಂದ ಬಾಳ ಬಯಸುವ ಯಾವುದೇ ದೇಶದ ನಿವಾಸಿಗಳಿಗೆ ಈ ನಗರಕ್ಕೆ ಸ್ವಾಗತವಿದೆ. ಅಂದರೆ ಒಂದರ್ಥದಲ್ಲಿ ಶಾಂತಿಯನ್ನು ಮಾತ್ರ ಬಯಸುವ ಯಾವುದೇ ರಾಷ್ಟ್ರದ ನಾಗರಿಕರು ವಾಸಿಸಬಹುದಾದ ವಿಶ್ವಗ್ರಾಮ.

  ಈ ನಗರದ ಧ್ಯೇಯೋದ್ದೇಶಗಳು

  ಈ ನಗರದ ಧ್ಯೇಯೋದ್ದೇಶಗಳು

  ಅಂದರೆ ಇಲ್ಲಿ ಜನರನ್ನು ಅವರ ಜಾತಿ, ರಾಜಕೀಯ ಸ್ಥಾನಮಾನ, ರಾಷ್ಟ್ರೀಯತೆ ಮೊದಲಾದ ಗುಣವಾಚಕಗಳ ಹೊರತಾಗಿ ಕೇವಲ ಮಾನವತೆಯ ಆಧಾರದ ಮೇಲೆ ಸ್ವಾಗತಿಸಲಾಗುತ್ತದೆ.

  ನಗರದ ಕೇಂದ್ರದಲ್ಲಿರುವ ಮಾತೃಮಂದಿರ

  ನಗರದ ಕೇಂದ್ರದಲ್ಲಿರುವ ಮಾತೃಮಂದಿರ

  ನಗರದ ಕೇಂದ್ರಭಾಗದಲ್ಲಿ ಸುಂದರವಾದ ಚಿನ್ನದ ಬಣ್ಣದ ಬುರುಜು ಇರುವ ಕಟ್ಟಡವಿದೆ. ಈ ಕೇಂದ್ರವನ್ನು ಮಾತೃಮಂದಿರ ಎಂದು ಕರೆಯುತ್ತಾರೆ. ಈ ಕಟ್ಟಡಕ್ಕೆ ಎಲ್ಲರಿಗೂ ಮುಕ್ತ ಮತ್ತು ಉಚಿತ ಪ್ರವೇಶಾವಕಾಶವಿದೆ. ಆದರೆ ಇಲ್ಲಿ ಸದ್ದಿಗೆ ಅವಕಾಶವಿಲ್ಲ. ಧ್ಯಾನದ ಕೇಂದ್ರವಾಗಿರುವ ಈ ಕಟ್ಟಡದಲ್ಲಿ ತೀರಾ ಅಗತ್ಯವಿಲ್ಲದೇ ಮಾತನಾಡುವುದೂ ಸಲ್ಲದು. ಇಲ್ಲಿನ ವಾತಾವರಣದಲ್ಲಿ ಜನರು ಶಾಂತಿ ಮತ್ತು ನೆಮ್ಮದಿಯನ್ನು ಅನುಭವಿಸುತ್ತಾರೆ. ಆದ್ದರಿಂದ ಇಲ್ಲಿ ಬರುವವರು ದೈಹಿಕವಾಗಿ ಮತ್ತು ಮಾನಸಿಕರಾಗಿ ಸದೃಢರಾಗಿರಬೇಕು.

  ನಗರದ ವಿಸ್ತೀರ್ಣ

  ನಗರದ ವಿಸ್ತೀರ್ಣ

  ಇದೊಂದು ಅಪ್ಪಟವಾದ ಯೋಜಿತ ನಗರವಾಗಿದ್ದು ಇದನ್ನು ಸುತ್ತಲೂ ಹಸಿರಿನಿಂದ ಆವೃತವಾಗಿರುವಂತೆ ನಿರ್ಮಿಸಲಾಗಿದೆ. ಒಟ್ಟು 3930 ಎಕರೆ ಜಾಗವನ್ನು ಹೊಂದಿದ್ದು (ಸುಮಾರು ಇಪ್ಪತ್ತು ಚದರ ಕಿಮೀ) ಇದರಲ್ಲಿ ಮನುಷ್ಯರ ವಾಸಕ್ಕೆ 1150 ಎಕರೆಯನ್ನೂ ಮತ್ತು ಸಿಂಹಪಾಲಾದ 2780 ಎಕರೆಯನ್ನು ಹಸಿರು ಬೆಳೆಸಲಿಕ್ಕೂ ಬಳಸಲಾಗಿದೆ.

  ಮದ್ಯನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ

  ಮದ್ಯನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ

  ಈ ನಗರದಲ್ಲಿ ಮದ್ಯದ ಹೆಸರು ಹೇಳಿದರೂ ತಪ್ಪಾಗುತ್ತದೆ. ಏಕೆಂದರೆ ಶಾಂತಿ ಮತ್ತು ಸೌಹಾರ್ದತೆ ಬಯಸುವ ಜನರಿಗೆ ಮದ್ಯದ ಅಗತ್ಯವಿಲ್ಲ ಎಂದು ಈ ನಗರದ ಪ್ರಮುಖ ಧ್ಯೇಯವಾಕ್ಯವಾಗಿದೆ.

  ಮದ್ಯನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ

  ಮದ್ಯನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ

  ಆದ್ದರಿಂದ ಕದ್ದುಮುಚ್ಚಿಯೂ ಇಲ್ಲಿ ಮದ್ಯವನ್ನು ಸೇವಿಸುವಂತಿಲ್ಲ. ಅಷ್ಟೇ ಅಲ್ಲ, ಮದ್ಯ ಸೇವಿಸಿ ನಗರ ಪ್ರವೇಶಕ್ಕೂ ಅವಕಾಶವಿಲ್ಲ. ಅಂಗಡಿಗಳಲ್ಲಂತೂ ಸಿಗುವುದೇ ಇಲ್ಲ, ಹೊರಗಿನಿಂದ ತಂದರೆ ತಪಾಸಣೆಯಲ್ಲಿ ಸಿಕ್ಕಿಬಿದ್ದರೆ ತಕ್ಷಣ ಹೊರಹಾಕಲಾಗುತ್ತದೆ.

  ಭೂಮಿಯ ಮೇಲಿನ ಸ್ವರ್ಗ

  ಭೂಮಿಯ ಮೇಲಿನ ಸ್ವರ್ಗ

  ಈ ನಗರದ ಸೌಂದರ್ಯ, ಶಾಂತಿ, ನೆಮ್ಮದಿ ಮತ್ತು ನಿಃಶಬ್ದತೆ ಯಾರನ್ನೂ ಮನಸೂರೆಗೊಳಿಸದಿರದು. ಒಂದರ್ಥದಲ್ಲಿ ಇದೊಂದು ಭೂಮಿಯ ಮೇಲಿನ ಸ್ವರ್ಗವೇ ಹೌದು. ಅದೂ ಈ ಭಾರತದ ನೆಲದಲ್ಲಿರುವ ಸ್ವರ್ಗವೇ ಹೌದು. ಈ ನಗರಕ್ಕೆ ಪ್ರವೇಶ ಪಡೆಯಲೂ ಅನುಮತಿ ಪಡೆಯಬೇಕು.

  ಭೂಮಿಯ ಮೇಲಿನ ಸ್ವರ್ಗ

  ಭೂಮಿಯ ಮೇಲಿನ ಸ್ವರ್ಗ

  ಈ ನಗರದ ನಿವಾಸಿಗಳಾಗಲೂ ಅರ್ಹತೆ ಪಡೆಯಬೇಕು. ಕೊಂಚ ಅಂತರ್ಜಾಲವನ್ನು ಕೆದಕಿದರೆ ಹೆಚ್ಚು ಮಾಹಿತಿಗಳು ದೊರಕುತ್ತವೆ. ಹಾಗೆ ಹುಡುಕಿದಾಗ ಕಂಡ ಸ್ವಾರಸ್ಯಕರ ಸಂಗತಿಗಳನ್ನು ಕಳಗಿನ ಕಮೆಂಟ್ಸ್ ಸ್ಥಾನದಲ್ಲಿ ಬರೆಯುವ ಮೂಲಕ ನಮಗೂ ತಿಳಿಸಿ.

   

  English summary

  A Town Where No Politics, Corruption Or Religion Is Followed

  Have you ever wondered of living in a place where there is no politics, religious feuds or even fights for money? Yeah, this sounds like a dream, but there is a place like this that truly exists and it exists in our very own country, India! Here, in this article, we are about to share some information on a town in India where one does not judge you based on your religion or as per your political interests, or for the amount of money that you own.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more