For Quick Alerts
ALLOW NOTIFICATIONS  
For Daily Alerts

ಹೌದು..! ನಿಜವಾದ ಸ್ನೇಹಿತರು ಅಂದರೆ ಇವರೇ...

By Manu
|

ನಾವು ಹೇಗೆ ಇರುತ್ತೇವೆ ಮತ್ತು ಏನು ಮಾಡುತ್ತೇವೆ ಎಂಬುದು ನಾವು ಓಡಾಡುವ ಮತ್ತು ಒಡನಾಡುವ ಐದು ಜನರಿಂದ ಪ್ರಭಾವಿತವಾಗಿರುತ್ತದೆ ಎಂದು ಹೇಳುತ್ತಾರೆ. ಅದಕ್ಕೆ ಶತಮಾನಗಳ ಹಿಂದೆಯೇ ವಚನಕಾರರೇ ಹೇಳಿದ್ದರು ಸಜ್ಜನರ ಸಂಗ ಮಾಡು, ದುರ್ಜನರ ಸಂಗ ಮಾಡಬೇಡ ಎಂದು. ಅಂದರೆ ನಮ್ಮ ಜೀವನವು ಬಹುತೇಕ ಸ್ನೇಹಿತರಿಂದ ಪ್ರಭಾವಿತಗೊಳ್ಳುತ್ತದೆ ಎಂದಾಯಿತು. ಬಹುತೇಕ ಜನರು ತಾವು ಜೀವನದಲ್ಲಿ ಪಡೆದ ಯಶಸ್ಸನ್ನು ಸ್ನೇಹಿತರಿಗೆ ನೀಡಿರುತ್ತಾರೆ. ಹೆಚ್ಚಿನ ಮಹಿಳೆಯರಿಗೆ ಇರುವ 10 ರೀತಿಯ ಸ್ನೇಹಿತರು

ಇನ್ನೂ ಕೆಲವರು ತಾವು ಮಾಡಿದ ಕೆಟ್ಟ ಕಾರ್ಯಕ್ಕೆ ಸ್ನೇಹಿತರ ಪ್ರೇರೇಪಣೆಯೇ ಕಾರಣ ಎನ್ನುತ್ತಾರೆ. ನಕಾರಾತ್ಮಕವಾದುದನ್ನು ಬಿಡೋಣ. ಒಬ್ಬ ಮನುಷ್ಯ ಜೀವನದಲ್ಲಿ ಯಶಸ್ಸಿನ ಶಿಖರ ಏರಬೇಕೆಂದರೆ ಅಪ್ಪ-ಅಮ್ಮ, ಬಂಧು-ಬಳಗ ಎಷ್ಟು ಪ್ರಭಾವ ಬೀರುತ್ತದೆಯೋ, ಅದಕ್ಕಿಂತ ಹೆಚ್ಚಿನ ಪ್ರಭಾವ ಸ್ನೇಹಿತರ ವಲಯ ಮಾಡುತ್ತದೆ. ಬನ್ನಿ ನಿಜವಾದ ಸ್ನೇಹಿತರು ಮಾತ್ರ ಮಾಡುವ ಉಪಕಾರವೇನು ಎಂಬುದನ್ನು ತಿಳಿದುಕೊಳ್ಳೋಣ....

ಒಳ್ಳೆಯದನ್ನು ಮಾತ್ರ ನೋಡುತ್ತಾರೆ

ಒಳ್ಳೆಯದನ್ನು ಮಾತ್ರ ನೋಡುತ್ತಾರೆ

ನೀವು ನಿಮ್ಮ ಸ್ನೇಹಿತರನ್ನು ಮೆಚ್ಚಿಸಬೇಕಾದ ಅಗತ್ಯವಿಲ್ಲ. ಅವರ ಮುಂದೆ ನಾಟಕ ಮಾಡಬೇಕಿಲ್ಲ. ಏಕೆಂದರೆ ಅವರಿಗೆ ನಿಮ್ಮ ಒಳ್ಳೆಯತನ ಗೊತ್ತಿರುತ್ತದೆ. ಅವರಿಗೆ ನೀವು ಯಾರು ಎಂಬ ನೈಜ ಚಿತ್ರಣ ಸಿಕ್ಕಿರುತ್ತದೆ.

ನಿಜವಾಗಿ ನೀವೇ ಆಗಿರುತ್ತೀರಿ....

ನಿಜವಾಗಿ ನೀವೇ ಆಗಿರುತ್ತೀರಿ....

ನಿಮ್ಮ ಸ್ನೇಹಿತರ ಮುಂದೆ ನೀವು ಕೃತಕ ನಗು, ಅಳು, ಗಂಭೀರತೆ ಯಾವುದನ್ನು ಇರಿಸಿಕೊಳ್ಳದೆ ನೀವು ನೀವಾಗಿರುತ್ತೀರಿ.

ದಯೆ ಇರುತ್ತದೆ

ದಯೆ ಇರುತ್ತದೆ

ಸ್ನೇಹಿತರಿಗೆ ಸಂಕಟ ಬಂದಾಗ ವೆಂಕಟರಮಣನನ್ನು ನೆನೆಯುವ ಮೊದಲು ಸ್ನೇಹಿತರನ್ನು ನೆನೆಯುತ್ತಾರೆ. ಸ್ನೇಹಿತರಿಗೆ ಸಮಸ್ಯೆ ಬಂದಿದೆ ಎಂದರೆ ಯಾರೇ ಆಗಲಿ ಆಹ್ವಾನವಿಲ್ಲದೆ ಹೋಗಿ ನಿಲ್ಲುತ್ತಾರೆ, ನಿಜವಾದ ಸ್ನೇಹಿತರು. ಸಮಸ್ಯೆ ಬಂದಾಗ ವ್ಯಕ್ತಿ ಕರೆ ಮಾಡುವ ಮೊದಲ ಪಟ್ಟಿಯಲ್ಲಿ ಸ್ನೇಹಿತರೆ ಹೆಚ್ಚಿರುತ್ತಾರೆ. ದಯಾಗುಣ ಸ್ನೇಹದ ಇನ್ನೊಂದು ಮುಖ.

ತಪ್ಪು ಮಾಡೋದು ಸಹಜ ಕಣೋ

ತಪ್ಪು ಮಾಡೋದು ಸಹಜ ಕಣೋ

ನಿಜವಾದ ಸ್ನೇಹಿತರು ತಪ್ಪು ಮಾಡಿದ ಸ್ನೇಹಿತರನ್ನು ಹೀಯಾಳಿಸುವುದಿಲ್ಲ. ನಾವು ಮನುಜರೋ, ನಾವು ಮನುಜರೋ, ತಪ್ಪು ಮಾಡೋದು ನಮಗೆ ಸಹಜ ಕಣೋ ಎಂದು ಸುಮ್ಮನಾಗುತ್ತಾರೆ. ಆ ತಪ್ಪಿನಲ್ಲೂ ಒಂದು ಜೋಕ್ ಮಾಡಿಕೊಂಡು ಪರಿಸ್ಥಿತಿಯನ್ನು ತಿಳಿಗೊಳಿಸುತ್ತಾರೆ.

ಅಧಿಕಾರದ ಸಮತೋಲನ

ಅಧಿಕಾರದ ಸಮತೋಲನ

ನಿಜವಾದ ಸ್ನೇಹಿತರು ತಾನೇ ಸ್ಟಾರ್ ರೀತಿ ಮೆರೆಯಬೇಕು ಎಂದು ಬಯಸುವುದಿಲ್ಲ. ಇತರೆ ಸ್ನೇಹಿತರನ್ನು ತಮ್ಮ ಆಳುಗಳ ರೀತಿ ಕಾಣುವುದಿಲ್ಲ. ಅವರು ಪ್ರತಿಯೊಬ್ಬ ಸ್ನೇಹಿತನ ಬಲಾಬಲವನ್ನು ತಿಳಿದಿರುತ್ತಾರೆ. ಒಂದೊಂದು ಕೆಲಸಕ್ಕೂ ಒಬ್ಬನ ನಾಯಕತ್ವದಲ್ಲಿ ಅವರು ಮುನ್ನಡೆಯುತ್ತಾರೆ. ಅವರು ಇನ್ನೊಬ್ಬರಿಗೆ ತಿಳಿ ಹೇಳುತ್ತಾರೆ. ತಾವು ಸಹ ಇನ್ನೊಬ್ಬರ ಮಾತು ಕೇಳುತ್ತಾರೆ.

ಕ್ಷಮಿಸುವ ಗುಣ

ಕ್ಷಮಿಸುವ ಗುಣ

ಸ್ನೇಹಿತರ ಜೀವನ ಸುಖದಿಂದಲೇ ಕೂಡಿರುವುದಿಲ್ಲ. ಅಲ್ಲಿ ಜಗಳಗಳು ಸಹ ಇರುತ್ತವೆ. ಅದೆಂತಹ ಜಗಳ ಎಂದರೆ ಪ್ರತಿ ಬಾರಿ ಜಗಳ ಆದ ಮೇಲೆ ಅವರ ಸ್ನೇಹ ಮತ್ತಷ್ಟು ಗಾಢವಾಗುತ್ತ ಸಾಗುತ್ತದೆ. ಒಬ್ಬರನ್ನೊಬ್ಬರು ಅವರು ಕ್ಷಮಿಸುತ್ತಾ ಇರುತ್ತಾರೆ. ಹೆಚ್ಚೆಚ್ಚು ಅರ್ಥ ಮಾಡಿಕೊಳ್ಳುತ್ತಾರೆ.

ಒಳ್ಳೆಯದನ್ನು ಆಚರಿಸುತ್ತಾರೆ

ಒಳ್ಳೆಯದನ್ನು ಆಚರಿಸುತ್ತಾರೆ

ಸಂಭ್ರಮಗಳು ಸ್ನೇಹಿತರ ವಲಯದ ಅವಿಭಾಜ್ಯ ಅಂಗ. ಏನಮ್ಮಾ ಅದೇ ಖುಷಿಗೆ ಪಾರ್ಟಿ ಇಲ್ಲವಾ? ಎಂಬುದು ಇವರು ಯಾವಾಗಲು ಹೇಳುವ ಮಾತಾಗಿರುತ್ತದೆ. ಸಣ್ಣ ಸಣ್ಣ ಖುಷಿಯನ್ನು ಸಹ ಇವರು ಒಟ್ಟಿಗೆ ಆಚರಿಸುತ್ತಾರೆ.

ಸ್ನೇಹವನ್ನು ಸಹ ಬೆಳೆಸಬೇಕು

ಸ್ನೇಹವನ್ನು ಸಹ ಬೆಳೆಸಬೇಕು

ಸ್ನೇಹವು ಮರದಂತೆ ನಮಗೆ ನೆರಳು ನೀಡುತ್ತದೆ. ಅದಕ್ಕೆ ನಾವು ಗೊಬ್ಬರ ನೀರು ಹಾಕಿ ಬೆಳೆಸಬೇಕಾಗುತ್ತದೆ. ಪ್ರತಿ ವರ್ಷ ಹುಟ್ಟು ಹಬ್ಬ, ಹಬ್ಬ ಹರಿದಿನಕ್ಕೆ ಶುಭಾಶಯ, ಒಂದು ಅಭಿನಂದನೆ ಇವೇ ಅದಕ್ಕೆ ಅಗತ್ಯ. ಮಿಸ್ಡ್ ಕಾಲ್ ಬಂದರೂ ಮರೆಯದೆ ಕರೆ ಮಾಡಿ ಮಾತನಾಡಿದರೆ ಎಂತಹ ಸ್ನೇಹವಾದರು ಉಳಿಯುತ್ತದೆ.

English summary

8 Things That Real Friends Do

Some believe that you are the average of the five people you spend the most time with. This goes for friendships, too. Here are some of the qualities that I am grateful for in my friends. While different people have different qualities, just thinking about them makes me smile. Take a look and see which ones you can match to the people in your lives.
X
Desktop Bottom Promotion