Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಾಯಿಗಳ ಬಗ್ಗೆ ಇರುವ ಒಂದಿಷ್ಟು ಇಂಟರೆಸ್ಟಿಂಗ್ ಸಂಗತಿ
ನಾಯಿ ಎಂದರೆ ಸಾಕು, ನಿಯತ್ತಿಗೆ ಹೆಸರಾದ ಒಂದು ಪ್ರಾಣಿ ಎಂಬ ಕಲ್ಪನೆ ನಮ್ಮ ಮನದಲ್ಲಿ ಮೂಡುತ್ತದೆ. ಹೌದು, ನಾಯಿಗಳೆಂದರೆ ಹಾಗೆ, ಅವು ಪ್ರಾಮಾಣಿಕತೆಗೆ, ಪ್ರೀತಿಗೆ ಮತ್ತು ಶಿಸ್ತಿಗೆ ಹೆಸರಾದ ಪ್ರಾಣಿಗಳು. ಹಲವಾರು ಅಧ್ಯಯನಗಳು ನಾಯಿಗಳ ಮೇಲೆ ನಡೆದಿವೆ. ಅವುಗಳ ಪ್ರಕಾರ ಈ ನಾಯಿಗಳನ್ನು ಸಾಕು ಪ್ರಾಣಿಯಾಗಿ ಹೊಂದಿರುವವರು ತನ್ನ ಖಿನ್ನತೆ ಮತ್ತು ಒತ್ತಡವನ್ನು ನಾಯಿಗಳ ಪ್ರೀತಿಯಿಂದ ಕಳೆದುಕೊಳ್ಳುತ್ತಾರೆ ಎಂದು ತಿಳಿದು ಬಂದಿದೆ. ಅವುಗಳು ನಿಮ್ಮ ಸಂತೋಷ ಮತ್ತು ದುಃಖಗಳನ್ನು ಸಹ ಹಂಚಿಕೊಳ್ಳುತ್ತವೆ ಎಂಬುದು ಜಗತ್ತಿಗೆ ಗೊತ್ತಿರುವ ಸತ್ಯ. ನಿಮ್ಮ ಬಳಿ ಒಂದು ನಾಯಿ ಇದ್ದರೆ ನೀವು ಯಾವತ್ತಿಗೂ ಒಂಟಿ ಎಂಬ ಭಾವನೆಯನ್ನು ಹೊಂದುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಈ ಶ್ವಾನಗಳು ಮನೆಯಲ್ಲಿದ್ದರೆ ಕಾವಲುಗಾರ ಬೇಕಾಗಿಲ್ಲ
ವಾಸ್ತವ ಏನಂದರೆ ನಾಯಿಗಳು ಮಾನವರ ಒಳ್ಳೆಯ ಮಿತ್ರರು ಸಹ ಹೌದು. ನಾಯಿಗಳಿಗೆ ಮನುಷ್ಯರ ಭಾವನೆಗಳು ಮತ್ತು ಮೂಡ್ ಚೆನ್ನಾಗಿ ಅರ್ಥವಾಗುತ್ತವೆ. ಅವುಗಳು ನಿಮ್ಮನ್ನು ಖುಷಿಯಾಗಿ ಇರಿಸಲು ಸಾಕಷ್ಟು ಶ್ರಮಪಡುತ್ತವೆ. ಒಮ್ಮೆ ನೀವು ನಾಯಿಯ ಜೊತೆಗೆ ಪಳಗಲು ಮತ್ತು ಜೀವಿಸಲು ಆರಂಭಿಸಿದರೆ ಸಾಕು, ನೀವು ಪ್ರೀತಿಯ ಅರ್ಥಕ್ಕೆ ಹೊಸ ವ್ಯಾಖ್ಯಾನವನ್ನು ಬರೆಯಲು ಆರಂಭಿಸುತ್ತೀರಿ.
ನಾಯಿಗಳು ತಮ್ಮ ಯಜಮಾನರಿಂದ ಹೆಚ್ಚಿಗೆ ಏನನ್ನು ಬಯಸುವುದಿಲ್ಲ. ಆದರು ಅವುಗಳು ಅನ್ನ ಹಾಕಿದ ತನ್ನ ಧಣಿಗೆ ಪ್ರಾಮಾಣಿಕವಾಗಿರುತ್ತದೆ. ಪ್ರಪಂಚದಲ್ಲಿ ಮನುಷ್ಯರಿಗೆ ಅತಿ ಹೆಚ್ಚು ಬೆಲೆ ನೀಡುವ ಪ್ರಾಣಿ ಎಂದರೆ ಅದು ನಾಯಿ ಮಾತ್ರ. ಬನ್ನಿ ಅವುಗಳ ಕುರಿತು ಕೆಲವೊಂದು ಕುತೂಹಲಕಾರಿ ಸಂಗತಿಗಳನ್ನು ತಿಳಿದುಕೊಳ್ಳೋಣ...

ವಾಸ್ತವ #1
ನಿಮ್ಮ ನಾಯಿಯ ಮೂಗು ನಿಮಗಿಂತ 10,000 ಪಟ್ಟು ಶಕ್ತಿಶಾಲಿ. ಆದ್ದರಿಂದಲೇ ನಾಯಿಗಳು ವಾಸನೆಯಿಂದಲೇ ಏನನ್ನು ಬೇಕಾದರು ಕಂಡು ಹಿಡಿಯುತ್ತವೆ.

ವಾಸ್ತವ #2
ಅಧ್ಯಯನದ ಪ್ರಕಾರ ತಿಳಿದುಬಂದಿರುವ ವಿಚಾರವೇನೆಂದರೆ, ನಾಯಿಯ ಡಿಎನ್‌ಎ ಮತ್ತು ಬೂದು ತೋಳದ ಡಿಎನ್‌ಎ ಎರಡೂ ಒಂದೇ ರೀತಿ ಇರುತ್ತದೆಯಂತೆ. ಆದ್ದರಿಂದಲೇ ಕೆಲವೊಂದು ನಾಯಿಯ ತಳಿಗಳು ತೋಳಗಳಂತೆ ಇರುತ್ತವೆ.

ವಾಸ್ತವ #3
ನಿಮ್ಮ ನಾಯಿಯು ಸಹ ನಿಮ್ಮಂತೆ ಬೆವರುತ್ತದೆ. ಆದರೆ ನಾಯಿಯು ಕೇವಲ ಮೂಗು ಮತ್ತು ಪಾದಗಳಲ್ಲಿ ಮಾತ್ರ ಬೆವರುತ್ತದೆ.

ವಾಸ್ತವ #4
ಒಮ್ಮೊಮ್ಮೆ ನಾಯಿಗಳು ನಿಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತವೆ. ನಾಯಿಗಳು ಸಹ ಮಾನವರಂತೆ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿ, ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತವೆ!

ವಾಸ್ತವ #5
ಕೆಲವೊಂದು ಅಧ್ಯಯನಗಳ ಪ್ರಕಾರ ನಾಯಿಯು ಸುಮಾರು 30,000 ವರ್ಷಗಳ ಹಿಂದೆಯೇ ಮಾನವರ ಉತ್ತಮ ಮಿತ್ರನಾಗಿ ಗುರುತಿಸಿಕೊಂಡಿತು ಎಂದು ತಿಳಿದುಬಂದಿದೆ.

ವಾಸ್ತವ #6
ಡೇಟಿಂಗ್ ಸಮೀಕ್ಷೆಯ ಪ್ರಕಾರ ಯಾವ ಗಂಡಸು ನಾಯಿಯನ್ನು ಮುದ್ದಾಗಿ ಸಾಕಿರುತ್ತಾನೆಯೋ, ಆತನನ್ನು ಹೆಂಗಸರು ಇಷ್ಟಪಡುತ್ತಾರಂತೆ!

ವಾಸ್ತವ #7
ಒಂದು ವೇಳೆ ನೀವು ನಾಯಿಗೆ ಚಾಕೊಲೇಟ್ ಅನ್ನು ನೀಡಿದರೆ, ನಿಮ್ಮ ನಾಯಿಯ ಆರೋಗ್ಯ ಹಾಳಾಗುತ್ತದೆ. ಅಪರೂಪದ ಸಂದರ್ಭಗಳಲ್ಲಿ ನಿಮ್ಮ ನಾಯಿ ಇದರಿಂದ ಮರಣವನ್ನು ಸಹ ಹೊಂದಬಹುದು!

ವಾಸ್ತವ #8
ನಾಯಿಗಳು ಸಹ ಬುದ್ಧಿವಂತ ಪ್ರಾಣಿಗಳು ಎಂಬುದರಲ್ಲಿ ಸಂಶಯವಿದೆಯೇ? ಅವುಗಳು ನಿಮ್ಮ ಎರಡು ವರ್ಷದ ಮಗುವಿನಂತೆ, ಸುಮಾರು ನೂರು ಪದಗಳನ್ನು ಅರ್ಥ ಮಾಡಿಕೊಳ್ಳಬಲ್ಲವು.



Click it and Unblock the Notifications
