For Quick Alerts
ALLOW NOTIFICATIONS  
For Daily Alerts

ವಿಶ್ವ ಛಾಯಾಗ್ರಹಣ ದಿನ: ಕ್ಯಾಮೆರಾಗಳ ಇತಿಹಾಸ ಕೆಣಕಿದಾಗ..!

By Arshad
|

ಜಗತ್ತಿನ ವಿಸ್ಮಯ, ನೈಜ ಚಿತ್ರಣಗಳನ್ನು ಸೆರೆಹಿಡಿಯುವ ಛಾಯಾಗ್ರಹಣ ಅತ್ಯಂತ ಸವಾಲಿನ ಹಾಗೂ ಸೃಜನಾತ್ಮಕ ಕಲೆ/ವೃತ್ತಿ. ಜಾಗತಿಕ ಮಟ್ಟದಲ್ಲಿ ಛಾಯಾಗ್ರಹಣಕ್ಕೆ ಕೊಟ್ಟಿರುವ ಪ್ರಾಮುಖ್ಯತೆಯ ಪ್ರತೀಕವಾಗಿ ಪ್ರತಿ ವರ್ಷ ಆಗಸ್ಟ್ 19ರಂದು ವಿಶ್ವ ಛಾಯಾಗ್ರಾಹಣ ದಿನ ಆಚರಿಸಲಾಗುತ್ತಿದೆ. 2019ರ ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ ಕ್ಯಾಮೆರಾಗಳ ಕುರಿತ ಹಲವು ಅಚ್ಚರಿಯ ಮಾಹಿತಿಗಳನ್ನು ನೋಡೋಣ ಬನ್ನಿ.

ಸುಮಾರು ಹತ್ತು ವರ್ಷಗಳ ಹಿಂದಿನವರೆಗೂ ಕ್ಯಾಮೆರಾ ಅಂದರೆ ಉಳ್ಳವರ ಅಥವಾ ವೃತ್ತಿಪರರ ಸೊತ್ತಾಗಿತ್ತು. ಛಾಯಾಚಿತ್ರಗಳಿಗಾಗಿ ಛಾಯಾಗ್ರಾಹಕರ ಸೇವೆ ಪಡೆಯಬೇಕಾಗಿತ್ತು. ಡಿಜಿಟಲ್ ತಂತ್ರಜ್ಞಾನದ ಮೂಲಕ ಇದು ಮೊಬೈಲುಗಳಿಗೆ ಇಳಿದಿದ್ದೇ ತಡ, ಹಿಂದಿನ ದುಬಾರಿ ಕ್ಯಾಮೆರಾಗಳೆಲ್ಲಾ ಮೂಲೆಗುಂಪಾದವು. ಜನಸಾಮಾನ್ಯರ ಕೈಗೂ ಎಟಕುವಂತಾದ ಬಳಿಕ ಈಗಂತೂ ಕ್ಯಾಮೆರಾ ಇಲ್ಲದ ವ್ಯಕ್ತಿಯೇ ಇಲ್ಲವಾದಂತಾಗಿದೆ.

ಆದರೆ ಕ್ಯಾಮೆರಾಗಳ ಇತಿಹಾಸ ಗಮನಿಸಿದರೆ ಇದು ಸಾಗಿ ಬಂದ ದಾರಿ ಬಹಳ ರೋಚಕ. ಕ್ಯಾಮೆರಾಗಳ ಕುರಿತಾದ ಮಾಹಿತಿಗಳೂ ಅಚ್ಚರಿ ಮೂಡಿಸುತ್ತವೆ.1923ರಲ್ಲಿ 2.79ಮಿಲಿಯನ್ ಡಾಲರ್ ಕೊಟ್ಟು ಕೊಂಡುಕೊಂಡ ಕ್ಯಾಮೆರಾದಿಂದ ತೆಗೆದ ಫೋಟೋಗಿಂತಲೂ ಇಂದಿನ ಮೂರು ಸಾವಿರ ರೂಪಾಯಿಯ ಮೊಬೈಲಿನಿಂದ ತೆಗೆದ ಚಿತ್ರ ಚೆನ್ನಾಗಿರುತ್ತದೆ.

World Photography Day is held on August 19 every year, simply because that was the day the French government allowed the daguerreotype process to be known to the world. The process had been invented by Joseph Nicèphore Nièpce and Louis Daguerre. The process was officially verified and approved by the French Academy of Sciences

ಮೊದಲ ಡಿಜಿಟಲ್ ಕ್ಯಾಮೆರಾ

1975ರಲ್ಲಿ ಈಸ್ಟ್ ಮನ್ ಕೋಡಾಕ್ ಸಂಸ್ಥೆಯಲ್ಲಿ ಅಭಿಯಂತರರಾಗಿದ ಸ್ಟೀವ್ ಸಾಸ್ಸನ್ (Steve Sasson) ಜಗತ್ತಿನ ಮೊದಲ ಡಿಜಿಟಲ್ ಕ್ಯಾಮೆರಾವನ್ನು ಅಭಿವೃದ್ಧಿಪಡಿಸಿದರು. ಇದು ಸುಮಾರು ಎಂಟು ಪೌಂಡ್ (3.62 ಕೇಜಿ) ತೂಕ ಹೊಂದಿದ್ದು 0.01 ಮೆಗಾಪಿಕ್ಸೆಲ್ ನಲ್ಲಿ ಕಪ್ಪು ಬಿಳಿಪು ಚಿತ್ರ ತೆಗೆಯುತ್ತಿತ್ತು. ಫೋಟೋ ಕ್ಲಿಕ್ ಮಾಡಿದ ಇಪ್ಪತ್ತಮೂರು ನಿಮಿಷದ ಬಳಿಕ ಚಿತ್ರ ಮೂಡುತ್ತಿತ್ತು. ಅಂದಿನ ದಿನಕ್ಕಿದು ಕ್ರಾಂತಿಯೇ ಆಗಿತ್ತು.

ಕ್ಯಾಮೆರಾಕ್ಕೂ ಮೊದಲೇ ಬಂದಿದ್ದ ಕ್ಯಾಮೆರಾ ಆಬ್ಸ್ಕ್ಯೂರಾ

ಪ್ರಪಂಚಕ್ಕೆ ಕ್ಯಾಮೆರಾ ಬರುವ ಮೊದಲೇ ದೊಡ್ಡ ಪೆಟ್ಟಿಗೆಯ ಒಂದು ಬದಿಯಲ್ಲಿ ಚಿಕ್ಕ ತೂತು ಮಾಡಿ ಅದರಿಂದ ಆಚೆಬದಿಯ ಚಿತ್ರವನ್ನು ತಲೆಕೆಳಗಾಗಿ ನೋಡಬಹುದಾಗಿದ್ದ ಕ್ಯಾಮೆರಾ ಆಬ್ಸ್ಕ್ಯೂರಾ (camera obscura) ಎಂಬ ಸಾಧನವನ್ನು ಬಳಸಲಾಗುತ್ತಿತ್ತು. ಈ ಬಿಂಬವನ್ನು ಕೇವಲ ನೋಡಲು ಅಥವಾ ಇದನ್ನು ನೋಡಿ ಕೈಚಿತ್ರ ರಚಿಸಲು ಬಳಸಲಾಗುತ್ತಿತ್ತು. 1827ರಲ್ಲಿ ಜೋಸೆಫ್ ನಿಸೆಫೋರ್ ನೀಪ್ಸಿ (Joseph Nicephore Niepce) ಎಂಬ ವಿಜ್ಞಾನಿ ಈ ಪೆಟ್ಟಿಗೆಯಲ್ಲಿ ಮೂಡಿದ ಬಿಂಬವನ್ನು ಚಿತ್ರವೊಂದರಲ್ಲಿ ಸೆರೆಹಿಡಿಯಲು ಸಫಲರಾದರು.

World photography day: Interesting Facts About Photography

ಎತ್ತರದಿಂದ ತೆಗೆದ ಪ್ರಥಮ ಛಾಯಾಚಿತ್ರ

ಎತ್ತರದಿಂದ ತೆಗೆದ ಪ್ರಥಮ ಛಾಯಾಚಿತ್ರ ಎಂಬ ಹೆಗ್ಗಳಿಕೆ ಪಡೆದವರು ಫ್ರಾನ್ಸ್ ನ ಛಾಯಾಚಿತ್ರಗಾರ ಗಾಸ್ಪರ್ ಫೆಲಿಕ್ಸ್ ಟೂರ್ನಾಚನ್ (Gaspar Felix Tournachon).1858ರಲ್ಲಿ ಇವರು ಬಿಸಿಗಾಳಿ ತುಂಬಿದ ಬಲೂನ್ ಒಂದರಲ್ಲಿ ಗಾಳಿಯಲ್ಲಿ ಹಾರಾಡುತ್ತಾ ತೆಗೆದ ಚಿತ್ರಕ್ಕೆ ಈ ದಾಖಲೆ ಲಭಿಸಿದೆ.

ವಿಶ್ವದ ಅತಿ ದುಬಾರಿ ಕ್ಯಾಮೆರಾ

1923ರಲ್ಲಿ ಲೀಕಾ ಓ ಸೀರೀಸ್ (Leica O-Series) ಎಂಬ ಕ್ಯಾಮೆರಾವೊಂದು ವೆಸ್ಟ್ ಲಿಚ್ ಹರಾಜಿನಲ್ಲಿ ಸುಮಾರು 2.79ಮಿಲಿಯನ್ ಡಾಲರುಗಳಿಗೆ ಮಾರಾಟವಾಗಿತ್ತು.

1907ರಲ್ಲಿ ಬಂದ ಬಣ್ಣದ ಚಿತ್ರ

1907ರಲ್ಲಿ ಲ್ಯೂಮಿಯರ್ ಸಹೋದರರು ಪ್ರಸ್ತುತಪಡಿಸಿದ ಆಟೋಕ್ರೋಮ್ ಪ್ಲೇಟ್ ಎಂಬ ತಂತ್ರಜ್ಞನದ ಮೂಲಕ ಬಣ್ಣದ ಚಿತ್ರಗಳನ್ನು ಮುದ್ರಿಸಲು ಸಾಧ್ಯವಾಯಿತು.

World Photography Day is held on August 19 every year, simply because that was the day the French government allowed the daguerreotype process to be known to the world. The process had been invented by Joseph Nicèphore Nièpce and Louis Daguerre. The process was officially verified and approved by the French Academy of Sciences

ವಿಶ್ವದ ಪ್ರಥಮ ರೋಲ್ ಫಿಲ್ಮ್ ನಿರ್ಮಿಸಿದವ ಆತ್ಮಹತ್ಯೆಗೆ ಶರಣಾದ

ಒಂದು ಬಾರಿ ಒಂದು ಚಿತ್ರ ತೆಗೆದ ಬಳಿಕ ಇನ್ನೊಂದನ್ನು ಏರಿಸಲು ಭಾರೀ ಸಮಯ ತಗಲುತ್ತಿದ್ದುದು 1888ರಲ್ಲಿ ರೋಲ್ ಗಳ ಪ್ರಸ್ತುತಿಯ ಬಳಿಕ ಬದಲಾಯಿತು. ಈ ರೋಲುಗಳನ್ನು ಪರಿಚಯಿಸಿದ ಜಾರ್ಜ್ ಈಸ್ಟ್ ಮನ್ ರವರು ಇದಕ್ಕಾಗಿ ಸೆ.4 1888ರಂದು ಪೇಟೆಂಟ್ ಸಹಾ ಪಡೆದರು. ಆದರೆ 1932ರಲ್ಲಿ ಅವರಿಗೆ ಎಪ್ಪತ್ತೇಳು ವಯಸ್ಸಾಗಿದ್ದಾಗ ಆತ್ಮಹತ್ಯೆಗೆ ಶರಣಾದರು. ಸಾವಿಗೂ ಮೊದಲು ಬರೆದ ಪತ್ರದಲ್ಲಿ ' ನನ್ನ ಕೆಲಸ ಮುಗಿದಿದೆ, ಇನ್ನೇಕೆ ಕಾಯುವುದು?' ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.

2013ರಲ್ಲಿ ದಾಖಲೆ ಪ್ರಮಾಣದ ಚಿತ್ರಗಳು ಫೇಸ್ ಬುಕ್ ನಲ್ಲಿ ದಾಖಲು

ಪ್ರತಿದಿನ ಲಕ್ಷಾಂತರ ಚಿತ್ರಗಳು ಫೇಸ್ ಬುಕ್ ಗೆ ಬರುತ್ತಿದೆ. ಆದರೆ ಆಗಸ್ಟ್ 2013ರಲ್ಲಿ ಪ್ರತಿದಿನ ಸರಾಸರಿ 350 ಮಿಲಿಯನ್ ಚಿತ್ರಗಳು ಫೇಸ್ ಬುಕ್ ಗೆ ಅಪ್ಲೋಡ್ ಆಗಿವೆ. ಇಂದಿನವರೆಗೆ ಸುಮಾರು 240 ಬಿಲಿಯನ್ ಚಿತ್ರಗಳು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಆಗಿವೆ.

ಛಾಯಾಚಿತ್ರ ಸ್ಪರ್ಧೆಗೆ ಕಳಿಸಲು 168,208 ಚಿತ್ರಗಳು ಸಾಕೇ?

ವಿಕಿ ಲವ್ ಮೊಮೆಂಟ್ಸ್ ಎಂಬ ಛಾಯಾಚಿತ್ರ ಸ್ಪರ್ಧೆಗೆ ನೆದರ್ಲ್ಯಾಂಡಿನ ವೆರೇನಿಗಿಂಗ್ (Vereniging) ಎಂಬುವರು 2011ರ ಜುಲೈ ಒಂದರಿಂದ 31 ಸೆಪ್ಟೆಂಬರ್ ವರೆಗೆ ಒಟ್ಟು 168,208 ಚಿತ್ರಗಳನ್ನು ಕಳಿಸಿದ್ದು ಇದುವರೆಗಿನ ಗಿನ್ನಿಸ್ ದಾಖಲೆಯಾಗಿದೆ.

World photography day: Interesting Facts About Photography

ಭಾರತೀಯನ ಬಳಿ ಅತಿ ಹೆಚ್ಚಿನ ಕ್ಯಾಮೆರಾಗಳು

ವಿಶ್ವದಲ್ಲಿಯೇ ಅತಿ ಹೆಚ್ಚು ಹಳೆಯ ಕ್ಯಾಮೆರಾಗಳ ಸಂಗ್ರಹವಿರುವುದು ಮುಂಬೈಯ ದಿಲೀಶ್ ಪಾರೀಖ್ ರವರ ಬಳಿ. ಇವರ ಬಳಿ ಅತ್ಯಮೂಲ್ಯವಾದ 4,425 ಹಳೆಯ ಕ್ಯಾಮೆರಾಗಳ ಸಂಗ್ರಹವಿದೆ.

English summary

World photography day: Interesting Facts About Photography

World Photography Day is held on August 19 every year, simply because that was the day the French government allowed the daguerreotype process to be known to the world. The process had been invented by Joseph Nicèphore Nièpce and Louis Daguerre. The process was officially verified and approved by the French Academy of Sciences
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more