Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
ನಮಗೆ ಚಿನ್ನದ ವಿಚಾರದಲ್ಲಿ ಯಾಕೆ ಇಷ್ಟೊಂದು ವ್ಯಾಮೋಹ?
ನಂಬಿದರೆ ನಂಬಿ ಬಿಟ್ಟರೆ ಬಿಡಿ, ಆದರೆ ಇತ್ತೀಚಿನ ಅಧ್ಯಾಯನದ ಪ್ರಕಾರ ಚಿನ್ನದ ವಿಚಾರದಲ್ಲಿ ಮಾತ್ರ ಭಾರತವನ್ನು ಯಾರೂ ಮೀರಿಸಲು ಆಗುವುದಿಲ್ಲವಂತೆ! ಇದಕ್ಕೆಲ್ಲಾ ಕಾರಣವಿಷ್ಟೇ ನಮ್ಮಲ್ಲಿರುವ ಚಿನ್ನದ ಮೇಲಿನ ವ್ಯಾಮೋಹ! ಹೌದು ಆಶ್ಚರ್ಯವಾದರೂ ಇದೂ ನಿಜ, ಶೇಕಡಾ.99 ರಷ್ಟು ಭಾರತೀಯ ಮಹಿಳೆಯರು ಚಿನ್ನದ ವಿಷಯ ಬಂದರೆ ಕರಗಿ ಹೋಗುತ್ತಾರೆ. ಯಾವುದೇ ಮದುವೆಯಾಗಲಿ, ಜಾತಿ, ಧರ್ಮ ಭೇದವಿಲ್ಲದೆ ವಧುವಿಗೆ ಚಿನ್ನದಿಂದ ಅಲಂಕಾರ ಮಾಡುತ್ತಾರೆ.
ಚಿನ್ನ ಕೊಳ್ಳಲೆಂದೆ ಒಂದು ಹಬ್ಬವು ಸಹ ಭಾರತದಲ್ಲಿ ನಡೆಯುತ್ತದೆ, ಅಕ್ಷಯ ತೃತೀಯ ಎಂದು ಕರೆಯಲಾಗುವ ಈ ಹಬ್ಬವನ್ನು ಚಿನ್ನ ಕೊಳ್ಳುವ ಹಬ್ಬವೆಂದೆ ಪರಿಗಣಿಸಲಾಗಿದೆ. ಹೀಗೆ ಹಬ್ಬ ಹರಿದಿನ, ಹುಟ್ಟು ಹಬ್ಬ, ಮದುವೆ, ಮದುವೆಯಾಗಿ ಒಂದು ತಿಂಗಳಿಗೆ ಕರಿಮಣಿ ಸರ, ನಾಮಕರಣ, ಕಿವಿ ಚುಚ್ಚುವುದು, ಇತ್ಯಾದಿ ಇತ್ಯಾದಿ ಭಾರತೀಯರಿಗೆ ಚಿನ್ನ ಧರಿಸಲು ಹಲವಾರು ಕಾರಣಗಳು ಮತ್ತು ಸಂಭ್ರಮಗಳು ದೊರೆಯುತ್ತವೆ.

ಇದೆಲ್ಲ ನೋಡಿದರೆ ನಮ್ಮ ಭಾರತೀಯ ಮಹಿಳೆಯರಿಗೆ ಚಿನ್ನದ ಮೇಲೆ ವಿಪರೀತ ವ್ಯಾಮೋಹ ಇರುವುದು ಗೊತ್ತಾಗುತ್ತೆ. ಸಂಶಯವಿದ್ದರೆ ನಿಮ್ಮ ಮನೆಯಲ್ಲಿನ ಹೆಂಗಸರನ್ನು ನೋಡಿ. ಮೈ ಮೇಲೆ ಹಾಕಿಕೊಳ್ಳಲು ಒಡವೆಗಳು ಇಲ್ಲದಿದ್ದರೆ, ಅವರು ಯಾವುದೇ ಸಮಾರಂಭಕ್ಕೆ ಬರುವುದಿಲ್ಲ. ಇದು ಏಕೆ ಎಂದು ಇಂದು ಚರ್ಚಿಸೋಣ ಬನ್ನಿ. ಚಿನ್ನಾ ಚಿನ್ನಾ ನೀನು ಅದೆಷ್ಟು ಚೆನ್ನಾ?
ಏಕೆಂದರೆ ಇದು ಸಂಪತ್ತಿನ ಪ್ರತೀಕ
ಚಿನ್ನವು ಸಂಪತ್ತಿನ ಪ್ರತೀಕ. ಹಾಗಾಗಿ ಚಿನ್ನವನ್ನು ಖರೀದಿಸಿದರೆ ಜೀವನದಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ,ಎಂಬುದನ್ನು ಇದು ಸೂಚಿಸುತ್ತದೆ. ಅಷ್ಟೇ ಅಲ್ಲದೆ ಚಿನ್ನವು ಲಕ್ಷ್ಮಿಯ ಸ್ವರೂಪ ಎಂದು ಸಹ ಖರೀದಿಸುತ್ತಾರೆ. ಹೀಗಾಗಿ ಚಿನ್ನದ ಮೇಲೆ ಭಾರತೀಯರಿಗೆ ಒಂದು ಬಗೆಯ ಮೋಹ.
ಏಕೆಂದರೆ ಇದಕ್ಕೆ ಹೆಚ್ಚು ಬೆಲೆಯಿರುತ್ತದೆ
ಚಿನ್ನಕ್ಕೆ ಯಾವಾಗಲು ಬೆಲೆಯಿರುತ್ತದೆ. ಕಷ್ಟಗಳಲ್ಲಿ, ಹಣ ಬೇಕಾದಾಗ ಚಿನ್ನ ಇದ್ದರೆ ಅದನ್ನು ಅಡವಿಟ್ಟು ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಹಿಂದಿನ ಕಾಲದಿಂದಲೂ ನಡೆದು ಬಂದ ಪದ್ಧತಿ. ಅದಕ್ಕಾಗಿ ಚಿನ್ನ ಎಂದರೆ ಒಂದು ಠೇವಣಿಯಂತೆ ಅದನ್ನು ಖರೀದಿಸಿ ಮನೆಯಲ್ಲಿ ಇರಿಸಿಕೊಳ್ಳುತ್ತಾರೆ. ಸಮಯ ಬಂದಾಗ ಅದನ್ನು ಗಿರವಿ ಇಟ್ಟು ಸಾಲ ಪಡೆದು ಮತ್ತೆ ಬಿಡಿಸಿಕೊಳ್ಳುತ್ತಾರೆ.
ಚಿನ್ನವೆಂದರೆ ಪೂಜ್ಯನೀಯ
ಹೌದು ಕೆಲವು ಭಾರತೀಯರು ಚಿನ್ನವಿಲ್ಲದಿದ್ದರೆ ಮನೆಯಿಂದ ಹೊರಗೆ ಕಾಲೇ ಇರಿಸುವುದಿಲ್ಲ. ಚಿನ್ನವೆಂದರೆ ಅವರಿಗೆ ಒಂದು ಬಗೆಯ ಬಗೆಯ ದೈವಿಕ ವಸ್ತುವಿದ್ದಂತೆ ಅದನ್ನು ಧರಿಸಿದರೆ ಭಾರತೀಯರಿಗೆ ಒಂದು ಹೆಮ್ಮೆ ತಾನೇ ತಾನಾಗಿ ದೊರೆಯುತ್ತದೆ. ಚಿನ್ನವಿಲ್ಲದಿದ್ದರೆ ದುಃಖಪಡುವ ಮಟ್ಟಕ್ಕೆ ನಾವು ಅದನ್ನು ಪ್ರೀತಿಸುತ್ತೇವೆ.
ಏಕೆಂದರೆ ಇದು ಸಂಪ್ರದಾಯಬದ್ಧವಾದುದು
ಹೌದು ಚಿನ್ನವೆಂಬುದು ಒಂದು ಸಾಂಪ್ರದಾಯಿಕ ಲೋಹ. ಹಲವಾರು ಕುಟುಂಬಗಳಲ್ಲಿ ಚಿನ್ನವನ್ನು ಒಂದು ಆಸ್ತಿಯಂತೆ, ವಂಶದ ಗೌರವದಂತೆ ಹಿರಿಯರಿಂದ ಕಿರಿಯರಿಗೆ ನೀಡಲ್ಪಡುತ್ತದೆ. ತಾಯಿ-ಮಗಳಿಗೆ, ಅತ್ತೆ-ಸೊಸೆಗೆ, ತಂದೆ-ಮಗನಿಗೆ ಚಿನ್ನವನ್ನು ಪೂರ್ವಿಕರ ಸ್ವತ್ತಾಗಿ ನೀಡುತ್ತಾರೆ. ಈ ಅಂಶವು ಸಹ ಚಿನ್ನದ ಮೇಲೆ ಭಾರತೀಯರಿಗೆ ಪ್ರೀತಿ ಉಕ್ಕುವಂತೆ ಮಾಡುತ್ತದೆ.
ಏಕೆಂದರೆ ಇದು ರಾಜ ಉಡುಗೊರೆಯಾಗಿದೆ
ಭಾರತೀಯ ಹೆಣ್ಣು ಮಕ್ಕಳಿಗೆ ಏನು ನೀಡಿದರು ಖುಷಿಯಾಗುವುದಿಲ್ಲ. ಅದೇ ಅವರಿಗೆ ಚಿನ್ನ ನೀಡಿದರೆ ಆಗ ಅವರ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಚಿನ್ನವನ್ನು ಅವರು ತಮ್ಮ ಸ್ವಂತದ್ದು ಎನ್ನುವ ಭಾವನೆಯಿಂದ ಇಷ್ಟಪಟ್ಟು ಧರಿಸುತ್ತಾರೆ. ಏಕೆಂದರೆ ಇದಕ್ಕೆ ಅಷ್ಟು ಬೆಲೆ ಮಾರುಕಟ್ಟೆಯಲ್ಲಿರುವುದು ಸಹ ವಾಸ್ತವ. ಚಿನ್ನವನ್ನು ಧರಿಸಿದ ಭಾರತೀಯ ನಾರಿ ಅಪ್ಸರೆಯಂತೆ ಕಂಗೊಳಿಸುತ್ತಾಳೆ. ಅದೂ ಸಹ ಚಿನ್ನಕ್ಕೆ ಹೆಂಗಸರು ಮಾರು ಹೋಗಲು ಒಂದು ಕಾರಣವಾಗಿದೆ.
ಇದು ಸ್ಥಾನಮಾನದ ಸಂಕೇತ
ಹೌದು ಚಿನ್ನವೆಂದರೆ ಒಂದು ಸ್ಥಾನ ಮಾನ. ಚಿನ್ನವೆಂದರೆ ಒಂದು ಅಂತಸ್ತು. ಮದುವೆ-ಮುಂಜಿ ಶುಭ ಕಾರ್ಯಗಳಲ್ಲಿ ಹೆಂಗಸರ ಕಣ್ಣುಗಳು ಯಾರು ಯಾರು ಎಷ್ಟು ಚಿನ್ನವನ್ನು ಧರಿಸಿದ್ದರು ಎಂಬುದರ ಸುತ್ತ ಓಡಾಡುತ್ತಿರುತ್ತದೆ. ಆದ್ದರಿಂದ ಇದು ನಿಜವಾಗಿ ನಿಮ್ಮ ಸ್ಥಾನಮಾನವನ್ನು ಅಳೆಯುವ ಲೋಹವಾಗಿ ಸಹ ಗುರುತಿಸಲ್ಪಡುತ್ತದೆ. ನೀವು ಎಷ್ಟು ಚಿನ್ನ ಧರಿಸಿದರೆ ನಿಮ್ಮ ಸ್ಥಾನಮಾನ ಅಷ್ಟು ಮೇಲೆ ಹೋಗುತ್ತದೆ ಎಂಬ ನಂಬಿಕೆ ನಮ್ಮ ಭಾರತೀಯರಲ್ಲಿದೆ.



Click it and Unblock the Notifications



