For Quick Alerts
ALLOW NOTIFICATIONS  
For Daily Alerts

ಅತೀಂದ್ರಿಯ ಶಕ್ತಿಗಳ ಅಬ್ಬರ, ಅನುಭವ ಮಾತ್ರ ಭೀಕರ

By Super
|

ಶೇಕ್ಸ್ ಪಿಯರ್ ನ ಖ್ಯಾತ ಗ್ರಂಥವಾದ ಹ್ಯಾಮ್ಲೆಟ್ ನಲ್ಲಿ ಒಂದೆಡೆ ಹೀಗೆ ಹೇಳಲಾಗಿದೆ:"ಹೊರೇಶಿಯೋ, ನೀನು ಕನಸಿನಲ್ಲಿ ಕಲ್ಪಿಸಿರುವದಕ್ಕಿಂತಲೂ ಹೆಚ್ಚು ಭೂಮಿ ಮತ್ತು ಸ್ವರ್ಗದಲ್ಲಿವೆ" ಈ ವಾಕ್ಯ ನೂರಾರು ವರ್ಷಗಳಿಂದ ತತ್ವಜ್ಞಾನಿಗಳಲ್ಲಿ ದ್ವಂದ್ವ ಹುಟ್ಟಿಸುತ್ತಾ ಬಂದಿದೆ. ಏಕೆಂದರೆ ಭೂಮಿ ಮತ್ತು ಸ್ವರ್ಗದಲ್ಲಿ ಇರದವು ಭೂತಗಳಾಗಿರಬಹುದು ಎಂಬ ಊಹಾಪೋಹಕ್ಕೆ ಇದು ಎಡೆಮಾಡಿದೆ. ಇದು ನಿಜವೋ ಸುಳ್ಳೋ ಬೇರೆ ಪ್ರಶ್ನೆ, ಆದರೆ ಹಲವೆಡೆ ಜನರು ಅತೀಂದ್ರಿಯ ಶಕ್ತಿಗಳ ಇರುವಿಕೆಯನ್ನು ಗಮನಿಸಿದ್ದಾರೆ. ಇದಕ್ಕೆ ಸೂಕ್ತವಾದ ವಿವರಣೆ ಇದುವರೆಗೆ ಲಭ್ಯವಾಗಿಲ್ಲದಿರುವುದು ಇದರ ನಿಗೂಢತೆಗೆ ಇನ್ನಷ್ಟು ಮೆರುಗು ನೀಡಿದೆ.

ಭೂತ ಮತ್ತು ಅತೀಂದ್ರಿಯ ಶಕ್ತಿಗಳ ಬಗ್ಗೆ ಜಗತ್ತಿನಲ್ಲಿ ಲಕ್ಷಾಂತರ ಕಥೆಗಳಿದ್ದು ಇವುಗಳ ಉಪಸ್ಥಿತಿ ಇರುವ ಸ್ಥಳಗಳೂ ಭೂತಬಂಗಲೆಗಳೆಂಬ ಹಣೆಪಟ್ಟಿ ಹೊಂದಿವೆ. ನೀವು ಇದುವರೆಗೆ ಈ ಬಗ್ಗೆ ಹಲವಾರು ಕಥೆಗಳನ್ನು ಓದಿರಬಹುದು ಅಥವಾ ಚಲನಚಿತ್ರ, ಟೀವಿ ಧಾರಾವಾಹಿಗಳನ್ನು ನೋಡಿರಬಹುದು. ಆದರೆ ನಿಮಗೆ ಇದರ ಅನುಭವವಾಗಿದೆಯೇ? ಇದರ ಕಲ್ಪನೆಯೇ ಭಯಭೀತವಾಗಿಸುತ್ತದೆ ಅಲ್ಲವೇ? ಒಂದು ವೇಳೆ ನೀವು ಹೊಸ ಮನೆ ಅಥವಾ ಸ್ಥಳಕ್ಕೆ ಹೋದಾಗ ಇದರಲ್ಲಿ ಅತೀಂದ್ರಿಯ ಅನುಭವಗಳಾಗಬಹುದೆಂಬ ಅನುಮಾನವಿದ್ದು ಇದು ಯಾವ ರೀತಿಯಲ್ಲಾಗಬಹುದೆಂಬ ಕಲ್ಪನೆ ಇಲ್ಲದಿದ್ದರೆ ಕೆಳಗಿನ ಸ್ಲೈಡ್ ಷೋ ನಲ್ಲಿ ನೀಡಿರುವ ವಿವರಣೆಗಳು ನಿಮ್ಮ ನೆರವಿಗೆ ಬರಲಿವೆ. ಎಂತಹ ಧೈರ್ಯವಂತನ ಎದೆ ನಡುಗಿಸುವ ಭಯಂಕರ ಸ್ಥಳಗಳು!

ನೀವು ವಾಸಿಸಲು ಹೋಗುತ್ತಿರುವ ಸ್ಥಳ ಭೂತಪ್ರೇತಗಳ ಆವಾಸಸ್ಥಾನ ಹೌದೋ ಅಲ್ಲವೋ ಎಂಬ ಅನುಮಾನ ಮೂಡಿದರೆ ಏನು ಮಾಡುವಿರಿ? ಭೂತದ ಕಾಟಕ್ಕೆ ಒಳಗಾಗಿ ಭಯಭೀತರಾಗುವ ಬದಲು ಇದರ ಲಕ್ಷಣಗಳನ್ನು ಅರಿತರೆ ಉತ್ತಮವಲ್ಲವೇ? ಏಕೆಂದರೆ ಪ್ರತಿ ಭೂತದ ಆವಾಸ ಸ್ಥಾನದಲ್ಲಿ ಈ ಅತೀಂದ್ರಿಯ ಶಕ್ತಿಗಳು ಕೆಲವು ಸೂಚನೆಗಳನ್ನು ನೀಡುತ್ತವೆ. ಇದರಲ್ಲಿ ಯಾವುದೇ ಒಂದು ಲಕ್ಷಣ ಕಂಡುಬಂದರೂ ಇಲ್ಲಿ ಭೂತಗಳಿರಬಹುದೆಂಬ ನಿಮ್ಮ ಅನುಮಾನ ಇನ್ನಷ್ಟು ದೃಢಪಡಿಸಲಿದೆ. ಇದು ಹೊಸ ಸ್ಥಳ ನಿಮಗೆ ಸೂಕ್ತವೇ ಅಲ್ಲವೋ ಎಂದು ನಿರ್ಧರಿಸಲು ನೆರವಾಗಲಿದೆ:

ವಿಚಿತ್ರ ಸದ್ದುಗಳು

ವಿಚಿತ್ರ ಸದ್ದುಗಳು

ಭೂತಗ್ರಸ್ತ ಸ್ಥಳಗಳಲ್ಲಿ ಅತಿ ಸಾಮಾನ್ಯವಾಗಿ ಕಂಡುಬರುವ ಲಕ್ಷಣವೆಂದರೆ ವಿಚಿತ್ರ ಸದ್ದುಗಳು. ಇದರಲ್ಲಿ ಯಾರೋ ನಡೆದಾಡಿದಂತೆ, ಮೆಟ್ಟಿಲು ಹತ್ತಿದಂತೆ, ಅಟ್ಟದಲ್ಲಿ ಏನೋ ಎಳೆದಾಡಿದಂತೆ ಸದ್ದು ಕೇಳಿಬರುತ್ತದೆ. ಈ ಸದ್ದು ಸತತವಾಗಿದ್ದರೆ ಈ ಸ್ಥಳವನ್ನು ಬದಲಿಸುವುದರ ಬಗ್ಗೆ ಯೋಚಿಸಬೇಕಾಗಬಹುದು.

ಅಸಾಧಾರಣವಾದ ಪ್ರಾಣಿಗಳ ನಡವಳಿಕೆ

ಅಸಾಧಾರಣವಾದ ಪ್ರಾಣಿಗಳ ನಡವಳಿಕೆ

ಅತೀಂದ್ರಿಯ ಶಕ್ತಿಗಳನ್ನು ಗ್ರಹಿಸುವಲ್ಲಿ ಮನುಷ್ಯರಿಗಿಂತ ಪ್ರಾಣಿಗಳು ಹೆಚ್ಚು ಸಂವೇದನಾಶೀಲವಾಗಿವೆ. ವಿಶೇಷವಾಗಿ ನಾಯಿ ಮತ್ತು ಬೆಕ್ಕುಗಳು ಅತೀಂದ್ರಿಯ ಶಕ್ತಿಗಳನ್ನು ಗ್ರಹಿಸುತ್ತವೆ. ನಿಮ್ಮ ಗಮನಕ್ಕೆ ಬರದ ಯಾವುದೋ ವಿಷಯ ಅಥವಾ ಅತೀಂದ್ರಿಯ ಶಕ್ತಿಯನ್ನು ನಿಮ್ಮ ಮನೆಯ ಸಾಕುನಾಯಿ ಮತ್ತು ಬೆಕ್ಕುಗಳು ಗ್ರಹಿಸಿದಂತೆ ಕಂಡುಬಂದರೆ ಈ ಬಗ್ಗೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಏರುಪೇರು

ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಏರುಪೇರು

ಅತೀಂದ್ರಿಯ ಶಕ್ತಿಗಳ ಇರುವಿಕೆಯನ್ನು ಮಾನವನ ಇಂದ್ರಿಯಗಳು ಗ್ರಹಿಸಲು ಸಾಧ್ಯವಾಗದಿದ್ದರೂ ಕೆಲವು ಎಲೆಕ್ಟ್ರಾನಿಕ್ ಉಪಕರಣಗಳು ಸಮರ್ಥವಾಗಿ ಗ್ರಹಿಸಬಲ್ಲವು. ಥಟ್ಟನೇ ದೀಪ ಮತ್ತು ಪಂಖಗಳು ನಿಂತುಬಿಡುವುದು, ಟೀವಿಯ ಚ್ಯಾನೆಲ್ಲುಗಳು ತನ್ನಿಂತಾನೇ ಬದಲಾಗುವುದು, ಟೀವೀ ಪರದೆಯಲ್ಲಿ ಅಡ್ಡಗೆರೆಗಳು ಮೂಡುವುದು, ಬಂದ್ ಬಾಡಿದ್ದ ರೇಡಿಯೋದಿಂದ ಅಸ್ಪಷ್ಟವಾದ ಸದ್ದುಗಳು ಮೂಡುವುದು ಮೊದಲಾದ ಯಾವುದೇ ಲಕ್ಷಣ ನಿಮ್ಮ ಮನೆ ಭೂತಗ್ರಸ್ತವಾಗಿದೆ ಎಂದು ತಿಳಿಸುತ್ತದೆ.

 ವಿಚಿತ್ರವಾದ ಪರಿಮಳ

ವಿಚಿತ್ರವಾದ ಪರಿಮಳ

ಭೂತಗಳಿರುವ ಸ್ಥಳದಲ್ಲಿ ವಿಶಿಷ್ಟವಾದ, ವಿವರಿಸಲಾಗದ ವಾಸನೆ ತುಂಬಿರುತ್ತದೆ. ಈ ವಾಸನೆ ಭೂಮಿಯ ಮೇಲಿರುವ ಯಾವುದೇ ಪರಿಚಿತ ವಾಸನೆಗೆ ಹೋಲಿಕೆ ಇಲ್ಲದ ಕಾರಣ ಇದನ್ನು ಕಂಡುಕೊಳ್ಳುವುದೂ ಕಷ್ಟ.

ವಿಚಿತ್ರವಾದ ಪರಿಮಳ

ವಿಚಿತ್ರವಾದ ಪರಿಮಳ

ಕೆಲವೊಮ್ಮೆ ಪರಿಚಿತವಾದ ವಾಸನೆಗಳು, ಉದಾಹರಣೆಗೆ ಆಹಾರ ಅಥವಾ ಹೊಗೆಯ ವಾಸನೆ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುತ್ತದೆ. ಇದು ಸಹಾ ಭೂತಗಳ ಇರುವಿಕೆಯನ್ನು ಸೂಚಿಸುತ್ತದೆ.

ವಸ್ತುಗಳ ಸ್ಥಾನಪಲ್ಲಟವಾಗುತ್ತದೆ

ವಸ್ತುಗಳ ಸ್ಥಾನಪಲ್ಲಟವಾಗುತ್ತದೆ

ಸಾಮಾನ್ಯವಾಗಿ ತೊಂದರೆ ಕೊಡದ ಭೂತಗಳು ಮನುಷ್ಯರನ್ನು ಆಟವಾಡಿಸುವುದರಲ್ಲಿ ಸಂತೋಷ ಪಡೆದುಕೊಳ್ಳುತ್ತವೆ ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಏಕೆಂದರೆ ಸಾಮಾನ್ಯವಾಗಿ ಮನುಷ್ಯರಿಗೆ ತೊಂದರೆಯಾಗದ ಆವಾಸಸ್ಥಾನಗಳಲ್ಲಿ ವಸ್ತುಗಳು ಅತ್ತಿಂದಿತ್ತ ಸ್ಥಾನಪಲ್ಲಟವಾಗಿರುವುದನ್ನು ಕಂಡುಕೊಳ್ಳಲಾಗಿದೆ.

ವಸ್ತುಗಳ ಸ್ಥಾನಪಲ್ಲಟವಾಗುತ್ತದೆ

ವಸ್ತುಗಳ ಸ್ಥಾನಪಲ್ಲಟವಾಗುತ್ತದೆ

ಇಲ್ಲಿಟ್ಟ ವಸ್ತು ಇನ್ನೊಂದೆಡೆ ಇರುವುದು, ಕಿಟಕಿ ಬಾಗಿಲುಗಳನ್ನು ಮುಚ್ಚಿದ್ದರೂ ಮರುದಿನ ಬೆಳಿಗ್ಗೆ ತೆರೆದಿರುವುದು, ಪಾತ್ರೆಗಳು ಹಾರಾಡುವುದು, ಗಾಜು ಒಡೆಯುವುದು ಮೊದಲಾದವುಗಳು ಸಾಮಾನ್ಯವಾದ ಚೇಷ್ಟೆಗಳಾಗಿವೆ.

ವಿಚಿತ್ರ ದರ್ಶನಗಳು

ವಿಚಿತ್ರ ದರ್ಶನಗಳು

ಭೂತಗ್ರಸ್ತವಾದ ಸ್ಥಳಗಳಲ್ಲಿ ಆತ್ಮಗಳು ಕೆಲವೊಮ್ಮೆ ತಮ್ಮ ಇರುವಿಕೆಯನ್ನು ದೃಶ್ಯರೂಪದಲ್ಲಿ ಪ್ರಕಟಿಸುತ್ತವೆ. ಉದಾಹರಣೆಗೆ ವಿಚಿತ್ರವಾದ ನೆರಳು, ಹೊಗೆಯಂತಿರುವ ಮನುಷ್ಯಾಕೃತಿ, ಇದರ ಚಿತ್ರ ತೆಗೆದರೆ ಅಲ್ಲಿ ಖಾಲಿಯಾಗಿರುವುದು ಮೊದಲಾದ ಲಕ್ಷಣಗಳು ಕಂಡುಬರುತ್ತವೆ. ಇವು ಸಹಾ ಮನೆಯಲ್ಲಿ ಭೂತಗಳ ಇರುವಿಕೆಯನ್ನು ಸ್ಪಷ್ಟಪಡಿಸುತ್ತವೆ.

ವಿವರಿಸಲಾಗದ ಅನುಭವಗಳು

ವಿವರಿಸಲಾಗದ ಅನುಭವಗಳು

ಕೆಲವೊಮ್ಮೆ ದೂರದಿಂದ ಯಾರಾದರೂ ನಮ್ಮನ್ನು ತದೇಕಚಿತ್ತದಿಂದ ಗಮನಿಸುತ್ತಿದ್ದುದು ನಮ್ಮ ಗಮನಕ್ಕೆ ಬಂದರೆ ನಮಗೆ ಇರಿಸು ಮುರುಸುಂಟಾಗುತ್ತದೆ. ಭೂತಗಳ ವಾಸಸ್ಥಾನದಲ್ಲಿಯೂ ಈ ಅನುಭವವಾಗುತ್ತದೆ. ಈ ಸ್ಥಳದಲ್ಲಿ ಮಲಗಿದ ಬಳಿಕ ಕನಸಿನಲ್ಲಿ ವಿವರಿಸಲಾಗದ ದೃಶ್ಯಗಳು ಕಂಡುಬರುತ್ತವೆ. ಯಾರೋ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸಿದಂತೆ, ನಿಮ್ಮಿಂದ ಸಹಾಯ ಬೇಡಿದಂತೆ, ತಮಗೆ ಮುಕ್ತಿ ನೀಡಲು ಸಹಕರಿಸುವಂತೆ ಮೊದಲಾದ ಅನುಭವಗಳಾಗುತ್ತವೆ.

ವಿವರಿಸಲಾಗದ ಅನುಭವಗಳು

ವಿವರಿಸಲಾಗದ ಅನುಭವಗಳು

ಇವೆಲ್ಲವೂ ಅತೀಂದ್ರಿಯ ಜಗತ್ತಿನ ಇರುವಿಕೆಯ ಅಸಾಮಾನ್ಯ ಅನುಭವಗಳಾಗಿವೆ. ಆದರೆ ಇದುವರೆಗೆ ಈ ಬಗ್ಗೆ ಸ್ಪಷ್ಟವಾದ ವಿವರಣೆಯನ್ನು ನೀಡಲು ಯಾರಿಗೂ ಸಾಧ್ಯವಿಲ್ಲ. ಭೂತಗಳು ಇಲ್ಲ ಎಂದೂ ಎದೆ ತಟ್ಟೆ ಹೇಳಲಾಗದು. ಆದರೆ ಈ ಸ್ಥಳದಲ್ಲಿ ವಾಸ್ತವ್ಯ ಹೂಡದೇ, ತನ್ಮೂಲಕ ತಮ್ಮನ್ನು ಮತ್ತು ತಮ್ಮ ಮನೆಯವರನ್ನು ಅಪಾಯಕ್ಕೆ ಒಡ್ಡದೇ ಇರುವುದು ಉತ್ತಮ ನಿರ್ಧಾರವಾಗಿದೆ.

Read more about: ನಗರ ಜೀವನ urban life
English summary

What Makes A House Feel Haunted

“There are more things in heaven and earth, Horatio, Than are dreamt of in your philosophy”- there are lots of controversy regarding Hamlet’s statement to Horatio. It is a debatable issue whether ghosts exist or not, but many people has sensed something abnormal around themselves which don’t have any logical explanations. There are stories and myths which state that ghosts exist. And when they make a house their dwelling place, it becomes haunted.
X
Desktop Bottom Promotion