Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಲಿಪ್‌ಸ್ಟಿಕ್‌ಗೂ, ನಿಮ್ಮ ವ್ಯಕ್ತಿತ್ವಕ್ಕೂ ಎತ್ತಿಂದೆತ್ತ ಸಂಬಂಧ?
ಜನ ಇತರರ ಸ್ವಭಾವವನ್ನು ತಿಳಿದುಕೊಳ್ಳಲು ಭಾರೀ ಕುತೂಹಲವನ್ನು ಹೊಂದಿರುತ್ತಾರೆ. ಇನ್ನೂ ಕೆಲವರಿಗೆ ತಮ್ಮಲ್ಲಿ ಅಡಗಿರುವ ವ್ಯಕ್ತಿತ್ವವನ್ನು ತಿಳಿದುಕೊಳ್ಳಲು ಕುತೂಹಲ ಇರುತ್ತದೆ. ಅದಕ್ಕಾಗಿ ಅವರು ದಿನ ಭವಿಷ್ಯ, ವರ್ಷ ಭವಿಷ್ಯ ಮತ್ತು ಅದರ ಜೊತೆಗೆ ಬರುವ ರಾಶಿ ಸ್ವಭಾವವನ್ನು ಕುರಿತು ತಿಳಿದುಕೊಳ್ಳಲು ಕುತೂಹಲವನ್ನು ವ್ಯಕ್ತಪಡಿಸುತ್ತಾರೆ. ಇತ್ತೀಚೆಗೆ ಹುಟ್ಟಿದ ದಿನಾಂಕದ ಆಧಾರದ ಮೇಲೆ ಸಂಖ್ಯಾಶಾಸ್ತ್ರದ ಪ್ರಕಾರ ಸ್ವಭಾವ ಹೇಳುತ್ತಾರೆ, ಇನ್ನೂ ಕೆಲವರು ಫೋಟೋ ನೋಡಿ, ಕಣ್ಣು ರೇಖೆ ನೋಡಿ ಅವರ ಸ್ವಭಾವವನ್ನು ಹೇಳುತ್ತಾರೆ. ಅಷ್ಟೇ ಏಕೆ ಕೆಲವರು ಕಾಫಿ ಕಪ್ ನೋಡಿ ಅವರ ಸ್ವಭಾವವನ್ನು ಹೇಳುತ್ತಾರೆ. ಗಿಣಿ ಶಾಸ್ತ್ರ, ಹಸ್ತ ಸಾಮುದ್ರಿಕಾ, ಇತ್ಯಾದಿಗಳನ್ನು ನೋಡಿ ಸ್ವಭಾವವನ್ನು ಹೇಳುವುದು ಹಳೆಯ ಪದ್ಧತಿಗಳಲ್ಲಿ ಒಂದಾಗಿದೆ.
ಇತ್ತೀಚೆಗೆ ನಾನಾ ರೀತಿಯಲ್ಲಿ ಸ್ವಭಾವಗಳನ್ನು ಹೇಳುವ ಬಗೆ ಆರಂಭಗೊಂಡಿದೆ. ಬೋಲ್ಡ್‌ಸ್ಕೈನಲ್ಲಿ ನಾವು ಉಗುರುಗಳು ಏನು ಸೂಚಿಸುತ್ತವೆ ಎಂಬ ಬಗ್ಗೆ ಲೇಖನ ಪ್ರಕಟಿಸಿದ್ದೆವು. ಇಂದು ನಾವು ಮತ್ತೊಂದು ವಿಶೇಷ ಅಂಶವನ್ನು ನೋಡಿ ನಿಮ್ಮ ಸ್ವಭಾವವನ್ನು ತಿಳಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಅದು ನಿಮ್ಮ ಲಿಪ್‌ಸ್ಟಿಕ್ ಗುರುತು!. ಹೌದು ನಿಮ್ಮ ಲಿಪ್‌ಸ್ಟಿಕ್ ಮುದ್ರೆಯು ನೀವು ಸಾಮಾಜಿಕವಾಗಿ ಹೇಗೆ ಬೆರೆಯುತ್ತೀರಿ ಎಂಬುದನ್ನು ತಿಳಿಸುತ್ತದೆ. ನಿಮ್ಮಲ್ಲಿ ಅಡಗಿರುವ ಪ್ರತಿಭೆಗಳನ್ನು ಸಹ ಇದು ಹೊರತೋರಿಸುತ್ತದೆ. ಉಗುರು ನೋಡಿ ಭವಿಷ್ಯ ಹೇಳಬಹುದಂತೆ! ನಂಬುತ್ತೀರಾ..?
ಲಿಪ್‌ಸ್ಟಿಕ್ ಆಕಾರ ಸಹ ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿ ಇರುತ್ತದೆ. ಏಕೆಂದರೆ ಪ್ರಪಂಚದಲ್ಲಿ ಇರುವವರೆಲ್ಲರೂ ಒಬ್ಬರಿಗಿಂತ ಒಬ್ಬರು ವಿಭಿನ್ನವಲ್ಲವೇನು? ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ, ನಿಮ್ಮ ತುಟಿಗಳಿಗೆ ಲಿಪ್‌ಸ್ಟಿಕ್ ಹಚ್ಚಿಕೊಳ್ಳುವ ಲಿಪ್‌ಸ್ಟಿಕ್ ಹೊರತೆಗೆಯಿರಿ. ಅದರ ಮೇಲ್ತುದಿಯನ್ನು ನೋಡಿ ಆಗ ನಿಮಗೆ ನಿಮ್ಮ ಸ್ವಭಾವದ ಪರಿಚಯ ಅದರಿಂದಲೆ ಸಿಕ್ಕುತ್ತದೆ. ಬನ್ನಿ ಇನ್ನು ತಡ ಏಕೆ, ಲಿಪ್‌ಸ್ಟಿಕ್ ನಮ್ಮ ಕುರಿತು ಏನು ಹೇಳುತ್ತದೆ ಎಂಬುದರ ಕುರಿತು ಮತ್ತಷ್ಟು ಮಾಹಿತಿಯನ್ನು ಕಲೆಹಾಕೋಣ ಬನ್ನಿ....

ವೃತ್ತಾಕಾರವಾಗಿರುವ ತುದಿ
ವೃತ್ತಾಕಾರವಾಗಿರುವ ತುದಿಯನ್ನು ಹೊಂದಿರುವ ಮಹಿಳೆಯರ ಸ್ವಭಾವದಲ್ಲಿ ಸ್ಥಿರತೆಯಿರುವುದಿಲ್ಲ. ಅವರ ಸ್ವಭಾವವು ಬದಲಾಗುತ್ತಲೆ ಇರುತ್ತದೆ. ಅವರು ತಮ್ಮ ವಿಚಾರಗಳನ್ನು ಇತರರ ಮುಂದೆ ನಿರ್ಭಿತಿಯಿಂದ ಹಂಚಿಕೊಳ್ಳುತ್ತ ಇರುತ್ತಾರೆ. ಜನರು ಅವರನ್ನು ತುಂಬಾ ಇಷ್ಟಪಡುತ್ತಾರೆ, ಇಲ್ಲವೇ ತುಂಬಾ ದ್ವೇಷಿಸುತ್ತಾರೆ. ಅವರು ಹೊರಗಿನಿಂದ ತುಂಬಾ ಕಠಿಣವಾಗಿರುತ್ತಾರೆ, ಆದರೆ ಇತರರಿಗೆ ಸಹಾಯ ಮಾಡಲು ಮೊದಲು ಬರುವವರು ಇವರೇ ಆಗಿರುತ್ತಾರೆ.

ಸಮತಟ್ಟಾದ ತುದಿ
ಈ ಬಗೆಯ ಲಿಪ್‌ಸ್ಟಿಕ್ ಇರುವವರು ಮಾತಿನ ಮಲ್ಲಿಯರು ಮತ್ತು ಮೋಡಿ ಮಾಡುವ ಗುಣವುಳ್ಳವರು ಆಗಿರುತ್ತಾರೆ. ಇವರು ತುಂಬಾ ಬುದ್ಧಿವಂತರು, ಬದಲಾವಣೆಯನ್ನು ಬಯಸುವವರು ಆಗಿರುತ್ತಾರೆ. ಜನರು ಇವರ ಜೊತೆಗೆ ಇರಲು ಬಯಸುತ್ತಾರೆ. ಆದರೆ ಇವರು ವಾದ ಮಾಡುವುದರಲ್ಲಿ ಒಳ್ಳೆಯವರಲ್ಲ, ಇದರಿಂದ ಜನರಿಗೆ ಕೋಪ ಬರುತ್ತದೆ. ಇವರು ಒಂದು ರೊಮ್ಯಾಂಟಿಕ್ ಅಥವಾ ಕಾಮಿಡಿ ಚಲನಚಿತ್ರವನ್ನು ನೋಡುವುದರ ಬದಲಿಗೆ ಡಾಕ್ಯುಮೆಂಟರಿಯನ್ನು ನೋಡಲು ಇಷ್ಟಪಡುತ್ತಾರೆ.

ಚೂಪಾದ ತುದಿ
ಈ ಬಗೆಯ ಜನರು ಆಕರ್ಷಕವಾಗಿ ಇರುತ್ತಾರೆ ಮತ್ತು ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ. ಇವರು ಫ್ಲರ್ಟ್ ಮಾಡುವುದರಲ್ಲಿ ನಿಸ್ಸೀಮರಾಗಿರುತ್ತಾರೆ. ಅದು ಅವರ ಜನ್ಮಜಾತವಾಗಿ ಬಂದಿರುವ ಕಲೆಯಾಗಿರುತ್ತದೆ. ಈ ಮಹಿಳೆಯರನ್ನು ಜನ ಸುಲಭವಾಗಿ ತಪ್ಪಾಗಿ ಅರ್ಥೈಸುತ್ತಾರೆ, ಆದರೆ ಅವರ ಪ್ರತಿಭೆ ಮತ್ತು ಸಾಧನೆಗಳನ್ನು ಜನರು ಸಹ ಹೊಗಳುತ್ತಾರೆ.

ಮೂಲ ಆಕಾರಕ್ಕೆ ಸನಿಹವಾಗಿರುವ ಆಕಾರ
ಈ ಬಗೆಯ ಲಿಪ್ಸ್ಟಿಕ್ ಹೊಂದಿರುವವರು ತೀರಾ ಸೂಕ್ಷ್ಮತೆಯನ್ನು ಮೈಗೂಡಿಸಿಕೊಂಡಿರುತ್ತಾರೆ. ಇವರು ಇತರರನ್ನು ಬೇಕೆಂದೆ ನೋಯಿಸುವುದಿಲ್ಲ. ನೀತಿ ನಿಯಮಗಳ ಪಾಲನೆಯಲ್ಲಿ ಇವರು ತುಂಬಾ ನಿಖರತೆ ಹೊಂದಿರುತ್ತಾರೆ. ಯಾವುದೇ ಕಾರಣಕ್ಕು ಅದನ್ನು ಮುರಿಯಲು ಹೋಗುವುದಿಲ್ಲ. ಕೆಲಸ ಮತ್ತು ವೈಯಕ್ತಿಕ ಜೀವನಕ್ಕೆ ಹೆಚ್ಚಿನ ಒತ್ತು ನೀಡುವ ಗುಣ ಇವರಲ್ಲಿ ಇರುತ್ತದೆ.

ಚೂಪಾದ ತುದಿ
ತಮ್ಮ ಸುತ್ತ ಇರುವ ಜನರ ಮೇಲೆ ಇದ್ದಕ್ಕಿದ್ದಂತೆ ಕ್ರಶ್ ಇವರಿಗೆ ಬಂದು ಬಿಡುವ ಗುಣ ಇವರಿಗೆ ಇರುತ್ತದೆ. ಪ್ರಕೃತಿಯನ್ನು ಇಷ್ಟಪಡುವ ಸ್ವಭಾವ ಇವರಿಗೆ ಇರುತ್ತದೆ. ಇವರು ಕಾಲ್ಪನಿಕ ಶಕ್ತಿಯನ್ನು ಹೊಂದಿರುತ್ತಾರೆ ಮತ್ತು ಸೃಜನಶೀಲತೆಯನ್ನು ಸಹ ಹೊಂದಿರುತ್ತಾರೆ. ಅದನ್ನು ಚೆನ್ನಾಗಿ ಸಹ ಬಳಸಿಕೊಳ್ಳುತ್ತಾರೆ.

ಚೂಪಾದ ಅಲಗಿನಂತಹ ತುದಿ
ಈ ಬಗೆಯ ಲಿಪ್ಸ್ಟಿಕ್ ಹೊಂದಿರುವವರು ಒಳ್ಳೆಯ ನಾಯಕತ್ವ ಗುಣಗಳನ್ನು ಹೊಂದಿರುತ್ತಾರೆ ಮತ್ತು ಅತಿ ಹೆಚ್ಚು ಮಹತ್ವಾಕಾಂಕ್ಷಿಗಳಾಗಿರುತ್ತಾರೆ. ಎಲ್ಲೇ ಹೋಗಲಿ ಇವರು ಜನರ ಆಕರ್ಷಣೆಗೆ ಪಾತ್ರರಾಗಿರುತ್ತಾರೆ. ಇವರ ಹಾಸ್ಯ ಪ್ರಜ್ಞೆಗೆ ಜನ ತಲೆದೂಗುತ್ತಾರೆ. ಆದರೂ ಇವರು ಇತರರನ್ನು ಆಳುವ ಸ್ವಭಾವವನ್ನು ಹೊಂದಿರುತ್ತಾರೆ. ಇದರಿಂದ ಹಲವರ ವಿರೋಧವನ್ನು ಎದುರಿಸುತ್ತಾರೆ. ಇವರು ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸುತ್ತಾರೆ. ಇದರಿಂದಾಗಿ ಜನ ಇವರ ಮೇಲೆ ಹೆಚ್ಚು ಅವಲಂಬಿತರಾಗುತ್ತಾರೆ.

ಚಪ್ಪಟೆಯಾದ ತುದಿ
ಈ ಬಗೆಯ ಲಿಪ್‌ಸ್ಟಿಕ್ ಇರುವವರು ಯಾವುದೇ ಸವಾಲಿಗೆ ಅಂಜುವುದಿಲ್ಲ. ಇದು ಅವರಿಗೆ ಹಲವಾರು ಸಾಧನೆಗಳನ್ನು ಮಾಡುವ ಅವಕಾಶವನ್ನು ಒದಗಿಸುತ್ತದೆ. ಅವರು ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು, ಯಾವುದೇ ಮಟ್ಟಕ್ಕೆ ಹೋಗಲು ಸಹ ತಯಾರಾಗಿರುತ್ತಾರೆ. ಸ್ನೇಹಕ್ಕೆ ಇವರು ಹೆಚ್ಚಿನ ಬೆಲೆಯನ್ನು ನೀಡುತ್ತಾರೆ.



Click it and Unblock the Notifications









