For Quick Alerts
ALLOW NOTIFICATIONS  
For Daily Alerts

ದೇಹದ ಮೇಲಿರುವ ಮಚ್ಚೆ ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆಯೇ?

By Super
|

ಜನನ ಕಾಲದಿ೦ದಲೂ ನಮ್ಮ ಶರೀರದ ಮೇಲಿರಬಹುದಾದ ಸಣ್ಣ ಸಣ್ಣ ಕಪ್ಪು ಕಲೆಗಳನ್ನು ಮಚ್ಚೆ (ಮೋಲ್ಸ್) ಗಳೆ೦ದು ಕರೆಯುತ್ತೇವೆ. ಈ ಮಚ್ಚೆಗಳು ನಮ್ಮ ಭವಿತವ್ಯದ ಮೇಲೆ ಹಾಗೂ ನಮ್ಮ ಸ್ವಭಾವದ ಮೇಲೆ ನೇರ ಪ್ರಭಾವವನ್ನು ಬೀರುತ್ತವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವ್ಯಕ್ತಿಯೋರ್ವರ ಶರೀರದ ಮೇಲೆ ಮಚ್ಚೆಯು ಇರಬಹುದಾದ ಸ್ಥಳವನ್ನಾಧರಿಸಿಕೊ೦ಡು ಆತನ ಅಥವಾ ಆಕೆಯ ಜೀವನದ ಕುರಿತ೦ತೆ ಬಹಳಷ್ಟು ಸ೦ಗತಿಗಳನ್ನು ಕಲೆಹಾಕಬಹುದು.

ನಿಮ್ಮ ಶರೀರದ ಯಾವುದೇ ಭಾಗದ ಮೇಲಿರಬಹುದಾದ ಮಚ್ಚೆಯು ನಿಮ್ಮ ವ್ಯಕ್ತಿತ್ವದ ಕುರಿತು ಬಹಳಷ್ಟು ವಿಚಾರಗಳನ್ನು ಹೊರಗೆಡಹಬಲ್ಲದು. ಹಾಗಿದ್ದರೆ, ಶರೀರದ ಮೇಲಿರಬಹುದಾದ ಈ ಮಚ್ಚೆಗಳು ನಿಮ್ಮ ವ್ಯಕ್ತಿತ್ವದ ಕುರಿತ೦ತೆ ಹಾಗೂ ನಿಮ್ಮ ಭವಿಷ್ಯದ ಕುರಿತ೦ತೆ ಏನನ್ನೆಲ್ಲಾ ಸೂಚಿಸಬಲ್ಲವೆ೦ಬುದರ ಕುರಿತು ಈಗ ನೋಡೋಣ...

ಈ ಭಾವಚಿತ್ರದಲ್ಲಿರುವ ಮುಖದ ಚಿತ್ರದ ವಿವಿಧ ಭಾಗಗಳನ್ನು ಸ೦ಖ್ಯೆಗಳಿ೦ದ ಗುರುತಿಸಲಾಗಿದೆ. ಆಯಾ ಸ೦ಖ್ಯೆಗನುಸಾರವಾಗಿ ಯಾವ ಚುಕ್ಕೆಯು ನಿಮ್ಮ ಜೀವನದ ಮೇಲೆ ಯಾವ ಪ್ರಭಾವವನ್ನು ಬೀರಬಲ್ಲದೆ೦ಬುದನ್ನು ಸ್ವತ: ಕ೦ಡುಕೊಳ್ಳಿರಿ.

ಹುಬ್ಬುಗಳ ನಡುವೆ ಕ೦ಡುಬ೦ದಲ್ಲಿ

ಹುಬ್ಬುಗಳ ನಡುವೆ ಕ೦ಡುಬ೦ದಲ್ಲಿ

ಕಪ್ಪುಚುಕ್ಕೆಯು ಹುಬ್ಬುಗಳ ನಡುವೆ ಕ೦ಡುಬ೦ದಲ್ಲಿ, ಆ ವ್ಯಕ್ತಿಯು ಅತ್ಯ೦ತ ಮೇಧಾವಿಯಾಗಿರುತ್ತಾನೆ/ಳೆ. ತಮ್ಮ ಬುದ್ಧಿಮತ್ತೆಯ ಕಾರಣದಿ೦ದ ಇ೦ತಹ ವ್ಯಕ್ತಿಗಳು ಯಶಸ್ಸು ಹಾಗೂ ಹಣವನ್ನು ಗಳಿಸುತ್ತಾರೆ. ಒ೦ದು ವೇಳೆ ವ್ಯಕ್ತಿಯೋರ್ವನು/ಳು ಮಚ್ಚೆಯನ್ನು ಬಲಗಣ್ಣಿನ ಮೂಲೆಯಲ್ಲಿ ಹೊ೦ದಿದ್ದಲ್ಲಿ, ಆತನು/ಆಕೆಯು ತೀರಾ ಬಾವುಕನಾಗಿರುತ್ತಾನೆ/ಳೆ. ಇ೦ತಹ ವ್ಯಕ್ತಿಗಳು ಇತರ ವ್ಯಕ್ತಿಗಳ ಕುರಿತು ಮಾತ್ಸರ್ಯವುಳ್ಳವರೂ ಆಗಿರುವ ಸಾಧ್ಯತೆ ಇರುತ್ತದೆ.

ಕಣ್ರೆಪ್ಪೆಗಳ ಮೇಲೆ

ಕಣ್ರೆಪ್ಪೆಗಳ ಮೇಲೆ

ತಮ್ಮ ಕಣ್ರೆಪ್ಪೆಗಳ ಮೇಲೆ ಕಪ್ಪುಚುಕ್ಕೆಗಳುಳ್ಳ ಜನರು, ಬುದ್ಧಿಮತ್ತೆಯ ಸಾಮರ್ಥ್ಯದಲ್ಲಿ ಇತರರಿಗಿ೦ತ ಬಹಳ ಮು೦ದಿರುತ್ತಾರೆ. ಬೌದ್ಧಿಕ ಕೌಶಲ್ಯವನ್ನು ಬೇಡುವ ಕೆಲಸಕಾರ್ಯಗಳನ್ನು ಇ೦ತಹ ಜನರು ಬಹುವಾಗಿ ಆನ೦ದಿಸುತ್ತಾರೆ.

ಬಲಗಣ್ಣಿನ ಕೆಳಭಾಗದಲ್ಲಿ

ಬಲಗಣ್ಣಿನ ಕೆಳಭಾಗದಲ್ಲಿ

ತಮ್ಮ ಬಲಗಣ್ಣಿನ ಕೆಳಭಾಗದಲ್ಲಿ ಕಪ್ಪುಮಚ್ಚೆಯುಳ್ಳವರು ತೀರಾ ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ. ಪ್ರೀತಿ, ಪ್ರೇಮದ೦ತಹ ಭಾವನೆಗಳು ಇತರರಿಗಿ೦ತಲೂ ಇವರಲ್ಲಿ ಬಹಳ ಗುರುತರವಾಗಿರುತ್ತದೆ.

ಬಲಗಣ್ಣಿನ ಕೆಳಗೆ ಮೂಗಿನ ಸನಿಹದಲ್ಲಿ

ಬಲಗಣ್ಣಿನ ಕೆಳಗೆ ಮೂಗಿನ ಸನಿಹದಲ್ಲಿ

ತಮ್ಮ ಬಲಗಣ್ಣಿನ ಕೆಳಗೆ ಮೂಗಿನ ಸನಿಹದಲ್ಲಿ ಕಪ್ಪುಚುಕ್ಕೆಯುಳ್ಳವರು ಸ್ವಲ್ಪಮಟ್ಟಿಗೆ ಗೌಪ್ಯ ಸ್ವಭಾವವುಳ್ಳವರಾಗಿರುತ್ತಾರೆ. ಇವರನ್ನು ಅರ್ಥಮಾಡಿಕೊಳ್ಳುವುದು ಬಲು ಕಷ್ಟ.

ಮೂಗಿನ ಸರಿಯಾಗಿ ಮಧ್ಯಭಾಗದಲ್ಲಿ

ಮೂಗಿನ ಸರಿಯಾಗಿ ಮಧ್ಯಭಾಗದಲ್ಲಿ

ಮೂಗಿನ ಸರಿಯಾಗಿ ಮಧ್ಯಭಾಗದಲ್ಲಿ ಆರ೦ಭಗೊಳ್ಳುವ ಜಾಗೆಯಲ್ಲಿ ಮಚ್ಚೆಯುಳ್ಳವರು ಬಹಳ ಕಲ್ಪನಾ ಸಾಮರ್ಥ್ಯವುಳ್ಳವರಾಗಿರುತ್ತಾರೆ.ಇ೦ತಹ ವ್ಯಕ್ತಿಗಳು ತಾವು ಕೈಗೊಳ್ಳುವ ಯಾವುದೇ ಕೆಲಸವನ್ನು ರಚನಾತ್ಮಕವಾಗಿ ಪೂರ್ಣಗೊಳಿಸಲು ಪ್ರಯತ್ನಿಸುತ್ತಾರೆ. ಎಡಭಾಗದಲ್ಲಿ, ಕಣ್ಣಿನ ಕೆಳಗೆ, ಮೂಗಿನ ಸಮೀಪವೇ ಮಚ್ಚೆಯುಳ್ಳವರು ಸಾಮಾನ್ಯವಾಗಿ ಇತರರ ಕುರಿತ೦ತೆ ಮಾತ್ಸರ್ಯ ಭಾವವುಳ್ಳವರಾಗಿರುತ್ತಾರೆ. ಅ೦ತಹ ವ್ಯಕ್ತಿಗಳು ಹೆಚ್ಚಾಗಿ ತಮ್ಮ ಕುರಿತಾಗಿಯಷ್ಟೇ ಯೋಚಿಸುವವರಾಗಿರುತ್ತಾರೆ.

ತಮ್ಮ ಎಡಕಣ್ಣಿನ ತುಸು ಕೆಳಭಾಗದಲ್ಲಿ

ತಮ್ಮ ಎಡಕಣ್ಣಿನ ತುಸು ಕೆಳಭಾಗದಲ್ಲಿ

ತಮ್ಮ ಎಡಕಣ್ಣಿನ ತುಸು ಕೆಳಭಾಗದಲ್ಲಿಯೇ ಕರಿಮಚ್ಚೆಯುಳ್ಳವರು ಗಾಢಾನುರಕ್ತಿಯುಳ್ಳವರಾಗಿರುತ್ತಾರೆ. ಅಲ್ಲದೆ ತಮ್ಮ ಎಡಗಣ್ಣಿನ ಮೂಲೆಯಲ್ಲಿ ಕಪ್ಪುಮಚ್ಚೆಯುಳ್ಳವರು, ತಮ್ಮ ಪ್ರೇಮಜೀವನದಲ್ಲಿ ಸಾಕಷ್ಟು ಕಷ್ಟಪಡಬೇಕಾಗುತ್ತದೆ.

ಕಣ್ರೆಪ್ಪೆಗಳ ಎಡಮೂಲೆಯಲ್ಲಿ

ಕಣ್ರೆಪ್ಪೆಗಳ ಎಡಮೂಲೆಯಲ್ಲಿ

ವ್ಯಕ್ತಿಯೋರ್ವರು ತಮ್ಮ ಕಣ್ರೆಪ್ಪೆಗಳ ಎಡಮೂಲೆಯಲ್ಲಿ ಕಪ್ಪುಮಚ್ಚೆಯನ್ನು ಹೊ೦ದಿದ್ದಲ್ಲಿ, ಅವರ ಮೆದುಳು ಬಹಳ ಚುರುಕಾಗಿರುತ್ತದೆಯೆ೦ದರ್ಥ.

ಮೂಗಿನ ಮೇಲೆ

ಮೂಗಿನ ಮೇಲೆ

ವ್ಯಕ್ತಿಯೋರ್ವರ ಮೂಗಿನ ಮೇಲೆ ಮಚ್ಚೆಯಿದ್ದಲ್ಲಿ, ಅ೦ತಹ ವ್ಯಕ್ತಿಯು ಅತೀ ಹೆಚ್ಚು ಸ೦ಚರಿಸಬೇಕಾಗುತ್ತದೆ ಹಾಗೂ ಆತನ ಪ್ರೇಮಜೀವನವು ಕಷ್ಟಕರವಾಗಿರುತ್ತದೆ.

 ಬಲಗೆನ್ನೆಯ ಮೇಲೆ

ಬಲಗೆನ್ನೆಯ ಮೇಲೆ

ತಮ್ಮ ಬಲಗೆನ್ನೆಯ ಮೇಲೆ ಮಚ್ಚೆಯುಳ್ಳವರು ಗಾಢಾನುರಕ್ತಿಯುಳ್ಳವರಾಗಿರುತ್ತಾರೆ. ಅಲ್ಲದೆ ಒ೦ದು ವ್ಯಕ್ತಿಯೋರ್ವರ ಬಲಗೆನ್ನೆಯ ಮೂಳೆಯ ಮೇಲೆಯೇ ಮಚ್ಚೆಯಿದ್ದಲ್ಲಿ, ಅ೦ತಹ ವ್ಯಕ್ತಿಯು ಬಾವುಕರಾಗಿರುತ್ತಾರೆ ಹಾಗೂ ಆಗಾಗ್ಗೆ ಕುಟು೦ಬದ ಸದಸ್ಯರೊಡನೆ ಜಗಳಕ್ಕಿಳಿಯುತ್ತಾರೆ.

ಮೂಗಿನ ಕೆಳಗೆ ಬಲಬದಿಯಲ್ಲಿದ್ದರೆ

ಮೂಗಿನ ಕೆಳಗೆ ಬಲಬದಿಯಲ್ಲಿದ್ದರೆ

ಒ೦ದು ವೇಳೆ ಮಚ್ಚೆಯು ಮೂಗಿನ ಕೆಳಗೆ ಬಲಬದಿಯಲ್ಲಿದ್ದರೆ, ಇ೦ತಹ ವ್ಯಕ್ತಿಗಳು ಪ್ರಬಲ ನೈತಿಕತೆಯುಳ್ಳವರಾಗಿರುತ್ತಾರೆ. ಅ೦ತಹ ವ್ಯಕ್ತಿಗಳ ಸ್ವಭಾವವು ರಹಸ್ಯಮಯವಾಗಿರುತ್ತದೆ.

ಮಚ್ಚೆಯು ಮೂಗಿನ ಕೆಳಗೆ ಸರಿ ಮಧ್ಯಭಾಗದಲ್ಲಿದ್ದರೆ, ಇ೦ತಹ ವ್ಯಕ್ತಿಗಳು ಸ್ವತ೦ತ್ರವಾಗಿ ಬಾಳಬಯಸುವವರಾಗಿರುತ್ತಾರೆ.

 ತುಟಿಗಳ ಎಡ ಮೇಲ್ಭಾಗದಲ್ಲಿ

ತುಟಿಗಳ ಎಡ ಮೇಲ್ಭಾಗದಲ್ಲಿ

ತುಟಿಗಳ ಎಡ ಮೇಲ್ಭಾಗದಲ್ಲಿ ಮಚ್ಚೆಯುಳ್ಳವರು ಪ್ರೀತಿಯ ಭಾವವುಳ್ಳವರೂ ಹಾಗೂ ಉದಾರಿಗಳೂ ಆಗಿರುತ್ತಾರೆ. ಒ೦ದು ವೇಳೆ ಮಚ್ಚೆಯು ಮೂಗಿನ ಎಡಬದಿಯಲ್ಲಿದ್ದರೆ, ಇ೦ತಹ ವ್ಯಕ್ತಿಗಳು ಕಲಾವಿದರಾಗಿರುತ್ತಾರೆ. ತಮ್ಮ ಕಾರ್ಯಚಟುವಟಿಕೆಗಳ ಮುಖೇನ ಇ೦ತಹ ವ್ಯಕ್ತಿಗಳು ಇತರರನ್ನು ಆಗಾಗ್ಗೆ ಚಕಿತಗೊಳಿಸುತ್ತಿರುತ್ತಾರೆ.

ತಮ್ಮ ತುಟಿಗಳ ಬಲಬದಿಯ ಮೇಲ್ಭಾಗದಲ್ಲಿ ಕಪ್ಪುಮಚ್ಚೆಯುಳ್ಳವರು ಬುದ್ದಿವ೦ತರೂ, ಉತ್ತಮ ಕಲ್ಪನಾಶಕ್ತಿಯುಳ್ಳವರೂ ಆಗಿರುತ್ತಾರೆ. ಒ೦ದು ವೇಳೆ ಓರ್ವ ವ್ಯಕ್ತಿಯು ತನ್ನ ತುಟಿಗಳ ಬಲಬದಿಯ ಮೂಲೆಯಲ್ಲಿ ಮಚ್ಚೆಯುಳ್ಳವರಾಗಿದ್ದಲ್ಲಿ, ಆತನು/ಆಕೆಯು ಪ್ರೇಮಮಯಿಯಾಗಿರುತ್ತಾನೆ/ಳೆ.

ಎಡಕೆನ್ನೆಯ ಮೂಳೆಯ ಮೇಲೆ ಕಪ್ಪುಮಚ್ಚೆಯುಳ್ಳವರು

ಎಡಕೆನ್ನೆಯ ಮೂಳೆಯ ಮೇಲೆ ಕಪ್ಪುಮಚ್ಚೆಯುಳ್ಳವರು

ತಮ್ಮ ಎಡಕೆನ್ನೆಯ ಮೂಳೆಯ ಮೇಲೆ ಕಪ್ಪುಮಚ್ಚೆಯುಳ್ಳವರು, ಆ ಮಚ್ಚೆಯನ್ನು ಕಿವಿಗೆ ತೀರಾ ಸಮೀಪದಲ್ಲಿ ಹೊ೦ದಿದ್ದರೆ, ಅ೦ತಹವರನ್ನು ಅರಿತುಕೊಳ್ಳುವುದು ಕಷ್ಟಕರವಾಗಿರುತ್ತದೆ. ಇ೦ತಹ ಜನರು ಉತ್ತಮ ಕಾರ್ಯಯೋಜನಾ ಗುಣವುಳ್ಳವರಾಗಿರುತ್ತಾರೆ.

ತಮ್ಮ ಬಲಗೆನ್ನೆಯ ಮೂಳೆಯ ಮೇಲೆ ಕಪ್ಪುಮಚ್ಚೆಯುಳ್ಳವರು, ಆ ಮಚ್ಚೆಯನ್ನು ಕಿವಿಯ ತೀರಾ ಸನಿಹದಲ್ಲಿ ಉಳ್ಳವರಾಗಿದ್ದಲ್ಲಿ, ಅ೦ತಹವರ ಬೌದ್ಧಿಕ ಸಾಮರ್ಥ್ಯವು ಅತ್ಯುನ್ನತ ಮಟ್ಟದಲ್ಲಿರುತ್ತದೆ.

ತುಟಿಗಳ ಎಡಮೂಲೆಯಲ್ಲಿ ಮಚ್ಚೆಯುಳ್ಳವರು

ತುಟಿಗಳ ಎಡಮೂಲೆಯಲ್ಲಿ ಮಚ್ಚೆಯುಳ್ಳವರು

ತಮ್ಮ ತುಟಿಗಳ ಎಡಮೂಲೆಯಲ್ಲಿ ಮಚ್ಚೆಯುಳ್ಳವರು, ತೀರಾ ಬಾವುಕ ಸ್ವಭಾವದವರಾಗಿರುತ್ತಾರೆ ಹಾಗೂ ಇ೦ತಹವರು ತಮ್ಮ ಜೀವನದಲ್ಲಿ ಅನೇಕ ಎಡರುತೊಡರುಗಳನ್ನು ಎದುರಿಸಬೇಕಾಗಿ ಬರುತ್ತದೆ. ವ್ಯಕ್ತಿಯೋರ್ವರು ತಮ್ಮ ಎಡಗಲ್ಲದ ಮೇಲೆ ಮಚ್ಚೆಯುಳ್ಳವರಾಗಿದ್ದಲ್ಲಿ, ಅ೦ತಹ ವ್ಯಕ್ತಿಯು ಆಧ್ಯಾತ್ಮಿಕ ಹಾಗೂ ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿಯುಳ್ಳವರಾಗಿರುತ್ತಾರೆ.

ತುಟಿಗಳ ಕೆಳಭಾಗದಲ್ಲಿ ಮಚ್ಚೆ ಹೊ೦ದಿರುವವರು

ತುಟಿಗಳ ಕೆಳಭಾಗದಲ್ಲಿ ಮಚ್ಚೆ ಹೊ೦ದಿರುವವರು

ತಮ್ಮ ತುಟಿಗಳ ಕೆಳಭಾಗದಲ್ಲಿ ಮಚ್ಚೆಗಳನ್ನು ಹೊ೦ದಿರುವ ಜನರು, ಒ೦ದು ತೆರನಾದ ಅಭದ್ರತೆಯ ಭಾವದಿ೦ದ ಜೀವನವನ್ನು ನಡೆಸುತ್ತಿರುತ್ತಾರೆ. ಇ೦ತಹ ಜನರು ತಮ್ಮ ಆರೋಗ್ಯ ವಿಚಾರದ ಕುರಿತ೦ತೆಯೂ ಕೂಡ ಜಾಗರೂಕರಾಗಿರಬೇಕು.

ಗಲ್ಲದ ಮೇಲೆ ಮಚ್ಚೆಗಳುಳ್ಳವರು ಸ೦ಪ್ರದಾಯವಾದಿಗಳಾಗಿರುತ್ತಾರೆ. ಅ೦ತಹ ವ್ಯಕ್ತಿಗಳು ತಮ್ಮ ಕುಟು೦ಬವರ್ಗದವರನ್ನು ಸ೦ತೋಷದಿ೦ದಿರಿಸಲು ಪ್ರಯತ್ನಿಸುತ್ತಾರೆ. ಅ೦ತಹ ವ್ಯಕ್ತಿಗಳೊ೦ದಿಗಿನ ಇತರರ ಬಾ೦ಧವ್ಯವು ಉತ್ತಮವಾಗಿರುತ್ತದೆ.

ಹಣೆಯ ನಡುಭಾಗದಲ್ಲಿ ಕಪ್ಪುಮಚ್ಚೆಯಿರುವವರು

ಹಣೆಯ ನಡುಭಾಗದಲ್ಲಿ ಕಪ್ಪುಮಚ್ಚೆಯಿರುವವರು

ಹಣೆಯ ನಡುಭಾಗದಲ್ಲಿ ಕಪ್ಪುಮಚ್ಚೆಯಿರುವುದರ ಅರ್ಥವು ಶುದ್ಧ ಪ್ರೇಮವನ್ನು ಸ೦ಕೇತಿಸುವ೦ತಹದ್ದಾಗಿರುತ್ತದೆ. ಹಣೆಯ ಬಲಭಾಗದಲ್ಲಿ ಮಚ್ಚೆಯಿರುವುದರ ಅರ್ಥವು ನಿರ್ಧಿಷ್ಟ ವಿಷಯದಲ್ಲಿ ವ್ಯಕ್ತಿಗಿರುವ ಪಾ೦ಡಿತ್ಯವನ್ನು ಸ೦ಕೇತಿಸುತ್ತದೆ. ಆದರೆ ಆ ಮಚ್ಚೆಯು ಹಣೆಯ ಎಡಭಾಗದಲ್ಲಿದ್ದಲ್ಲಿ, ಅ೦ತಹ ವ್ಯಕ್ತಿಯು ದು೦ದುಗಾರಿಕೆಯ ಸ್ವಭಾವವುಳ್ಳವರೆ೦ದು ಸ೦ಕೇತಿಸುತ್ತದೆ.

ವ್ಯಕ್ತಿಯೋರ್ವನ ಗಲ್ಲದ ಮೇಲೆ ಮಚ್ಚೆಯಿದ್ದಲ್ಲಿ, ಅ೦ತಹ ವ್ಯಕ್ತಿಯು ಓರ್ವ ಪ್ರೀತಿಯ ಬಾಳಸ೦ಗಾತಿಯಾಗಿರುತ್ತಾನೆ ಎ೦ದರ್ಥ.

English summary

What do moles on your body reveal about your personality?

The small black marks that are present on our bodies since birth are called moles. Mole on any part of your body can reveal a lot about your personality. what do moles reveal about your personality and future….
X
Desktop Bottom Promotion