ಇಡೀ ಜಗತ್ತನ್ನೇ ಆಳಲು ಬರುತ್ತಿದ್ದಾರೆ-ಯಂತ್ರಮಾನವರು..!

By Super

ಅಸಿಮೋ, ಹೆಸರು ಕೇಳಿದ್ದೀರಾ? ಇದು ಯಾವುದೇ ಜೀವಿಯಲ್ಲ, ಆದರೆ ಒಂದು ರೋಬೋಟ್ ಅಥವಾ ಯಂತ್ರಮಾನವನ ಹೆಸರು. ಕಾರು ತಯಾರಿಕಾ ಸಂಸ್ಥೆ 2000 ಇಸವಿಯಲ್ಲಿ ಮೊದಲ ಬಾರಿ ಇದನ್ನು ಪ್ರಾರಂಭಿಸಿ ಪ್ರತಿವರ್ಷ ಒಂದಲ್ಲಾ ಒಂದು ಬದಲಾವಣೆಯನ್ನು ಮಾಡುತ್ತಾ ಬಂದಿದೆ.

ವಿಶೇಷವಾಗಿ ಪ್ರತಿವರ್ಷದ ಹೊಸಕಾರುಗಳ ಪ್ರದರ್ಶನದಲ್ಲಿ ಅಸಿಮೋ ಸಹಾ ಒಂದು ಆಕರ್ಷಣೆಯ ಕೇಂದ್ರವಾಗುತ್ತದೆ. ಹೆಚ್ಚೂ ಕಡಿಮೆ ಮಾನವ ಧ್ವನಿಯನ್ನು ಅನುಸರಿಸಿ ಹಲವು ಕೆಲಸಗಳನ್ನು ಮಾಡುವ ಅಸಿಮೋ ಯಂತ್ರಮಾನವನ ಉಡುಗೆ ತೊಟ್ಟ ಚಿಕ್ಕ ಬಾಲಕನಂತೆಯೇ ಕಾಣುತ್ತಾನೆ. ಈ ಅಸಿಮೋ ನನ್ನು ನೋಡಲೆಂದೇ ಕಾರುಪ್ರದರ್ಶನದ ಉತ್ಸವಗಳಲ್ಲಿ ಜನರು ಜಮಾಯಿಸುತ್ತಾರೆ.

ಅಷ್ಟೇ ಏಕೆ, ರೋಬಾಟಿಕ್ಸ್ ಅಥವಾ ರೋಬೋಟ್‌ಗಳು ತಂತ್ರಜ್ಞಾನವನ್ನು ವಿವಿಧ ಕಾರ್ಯಗಳ ಬಳಕೆಗೆ ಉಪಯೋಗಿಸುವುದು ಇಂದಿನ ವೇಗದ ಯುಗಕ್ಕೆ ಅನಿವಾರ್ಯವಾಗಿದೆ. ಇದರ ಪ್ರಮುಖ ಬೆಳವಣಿಗೆಯೆಂದರೆ ಮಾನವರ ನರವ್ಯವಸ್ಥೆಗೆ ಯಂತ್ರಗಳು ಸ್ಪಂದಿಸುವಂತೆ ಮಾಡುವುದು. ಕಳೆದ ವರ್ಷದ ಫೀಫಾ ಫುಟ್ಬಾಲ್ ಪ್ರಾರಂಭೋತ್ಸವ ಹೇಗಾಯ್ತೆಂದು ಗೊತ್ತೇ?

ಕಾಲಿಲ್ಲದ ಬಾಲಕನೊಬ್ಬ ಕೃತಕ ಕಾಲಿನಿಂದ ಚೆಂಡಿಗೆ ಲಘುವಾಗಿ ಒದೆಯುವ ಮೂಲಕ. ಇದು ರೋಬೋಟ್‌ಗಳು ಅಂಗವಿಕಲರ ಪಾಲಿಗೆ ನವಜೀವನವನ್ನು ನೀಡಬಹುದಾದ ಕ್ರಿಯೆಗೆ ನೀಡಿದ ಚಾಲನೆಯಾಗಿದೆ. ಬನ್ನಿ, ಈ ರೋಬೋಟ್‌ಗಳ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆಯೋಣ..

 ಪ್ರಥಮ ಯಂತ್ರಮಾನವ ಬಂದಿದ್ದು 1939

ಪ್ರಥಮ ಯಂತ್ರಮಾನವ ಬಂದಿದ್ದು 1939

ಯಂತ್ರಮಾನವನ ಕಲ್ಪನೆ ಕಥೆ ಕಾದಂಬರಿಗಳಲ್ಲಿ ಬಹಳ ಹಿಂದೆ ಬಂದಿದ್ದರೂ ವಾಸ್ತವವಾಗಿ ಏಳಡಿ ಎತ್ತರದ ಯಂತ್ರಮಾನವನ ಕಲ್ಪನೆಗೆ ನಿಜರೂಪ ಕೊಟ್ಟಿದ್ದು ವೆಸ್ಟಿಂಗ್ ಹೌಸ್ ಎಂಬ ಸಂಸ್ಥೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

 ಪ್ರಥಮ ಯಂತ್ರಮಾನವ ಬಂದಿದ್ದು 1939

ಪ್ರಥಮ ಯಂತ್ರಮಾನವ ಬಂದಿದ್ದು 1939

ಈ ಯಂತ್ರಮಾನವ ಚಲಿಸಲಾರದಾಗಿದ್ದರೂ ಏಳುನೂರಕ್ಕೂ ಹೆಚ್ಚು ಪದಗಳನ್ನು ಉಚ್ಛರಿಸಲು ಸಾಧ್ಯವಾಗಿತ್ತು. ಬಳಿಕ ಈ ಯಂತ್ರಮಾನವ Sex Kittens Go to College ಎಂಬ 1960ರ ಚಲನಚಿತ್ರದಲ್ಲಿಯೂ ಕಾಣಿಸಿಕೊಂಡಿತು.

ರೋಬೋಟ್‌ನಿಂದ ಪ್ರಥಮ ಅಪಘಾತ

ರೋಬೋಟ್‌ನಿಂದ ಪ್ರಥಮ ಅಪಘಾತ

ಯಂತ್ರಮಾನವನಿಂದ ನೇರವಾಗಿ ಯಾವುದೇ ಸಾವುಗಳು ಸಂಭವಿಸದೇ ಇದ್ದರೂ ಜಪಾನಿನ ಕಾವಾಸಾಕಿ ಕಾರ್ಖಾನೆಯಲ್ಲಿ 1981ರಲ್ಲಿ ಬೃಹತ್ ಯಂತ್ರದ ಬಾಹುವೊಂದರಲ್ಲಿ ಸಿಲುಕಿಕೊಂಡು ಕಾರ್ಮಿಕರೊಬ್ಬರು ಮೃತಪಟ್ಟಿದ್ದು ಪ್ರಥಮ ಅಪಘಾತವಾಗಿ ದಾಖಲಾಗಿದೆ.

ಯಂತ್ರಮಾನವನ ಕಲ್ಪನೆ ಮೂಡಿದ್ದು 1495ರಲ್ಲಿ

ಯಂತ್ರಮಾನವನ ಕಲ್ಪನೆ ಮೂಡಿದ್ದು 1495ರಲ್ಲಿ

495ರಲ್ಲಿಯೇ ಲಿಯೋನಾರ್ಡೋ ಡ ವಿನ್ಸಿಯವರು ಯಂತ್ರಮಾನವನ ಕಲ್ಪನೆಯನ್ನು ತಮ್ಮ ಚಿತ್ರಗಳಲ್ಲಿ ಮೂಡಿಸಿದ್ದರು. ಈ ಚಿತ್ರಗಳನ್ನು ಆಧರಿಸಿ ನಾಸಾದ ಅಭಿಯಂತರರಾದ ಮಾರ್ಕ್ ರೋಶೆಯಿಂ ರವರು ಇದರ ಪ್ರತಿರೂಪವನ್ನು ನಿರ್ಮಿಸಿದರು. ಇದನ್ನು ಮಂಗಳನಲ್ಲಿ ಮಾನವ ವಸಾಹತುಗಳನ್ನು ನಿರ್ಮಿಸುವ ಕಲ್ಪನೆಗೆ ಪೂರಕವಾಗಿ ಬಳಸಿಕೊಳ್ಳಲಾಯಿತು.

ಕ್ರಿ.ಪೂ ಐದನೆಯ ಶತಮಾನದಲ್ಲಿಯೇ ಹಾರಿದ್ದ ಯಂತ್ರಹಕ್ಕಿ

ಕ್ರಿ.ಪೂ ಐದನೆಯ ಶತಮಾನದಲ್ಲಿಯೇ ಹಾರಿದ್ದ ಯಂತ್ರಹಕ್ಕಿ

ಕ್ರಿ.ಪೂರ್ವ ಐದನೆಯ ಶತಮಾನದ ಮಹಾನ್ ಮೇಧಾವಿ ಪ್ಲೇಟೋ ರವರ ಗೆಳೆಯ ಆರ್ಕಿಟಾಸ್ (Archytas) ಎಂಬುವರು ಆ ಸಮಯದಲ್ಲಿಯೇ ಸಂಕುಚಿತ ಗಾಳಿ ಅಥವಾ ಹಬೆಯನ್ನು ಉಪಯೋಗಿಸಿ ಹಕ್ಕಿಯ ರೆಕ್ಕೆಗಳು ಬಡಿಯುವಂತೆ ಮಾಡಿ ಹಾರುವ ಯಂತ್ರಹಕ್ಕಿಯೊಂದನ್ನು ಆವಿಷ್ಕರಿಸಿದ್ದರು ಎಂದು ಇತಿಹಾಸದಲ್ಲಿ ತಿಳಿದಿದ್ದರೂ ಈ ಮಾಹಿತಿಯನ್ನು ಇದುವರೆಗೆ ಖಚಿತಪಡಿಸಲಾಗಿಲ್ಲ.

ಅಮೇರಿಕಾದ ಸೈನಯದಲ್ಲಿ ನಾಲ್ಕು ಸಾವಿರ ರೋಬೋಟ್‌ಗಳಿವೆ

ಅಮೇರಿಕಾದ ಸೈನಯದಲ್ಲಿ ನಾಲ್ಕು ಸಾವಿರ ರೋಬೋಟ್‌ಗಳಿವೆ

ಅಚ್ಚರಿಯ ವಿಷಯವೆಂದರೆ ಅಮೇರಿಕಾದ ಸೈನ್ಯದಲ್ಲಿ ನಾಲ್ಕು ಸಾವಿರದಷ್ಟು ಯಂತ್ರಮಾನವರಿದ್ದಾರೆ. ಇವುಗಳಲ್ಲಿ ಪ್ರಮುಖವಾದವು ಎಂದರೆ reconnaissance Talon bot ಎಂಬ ಯಂತ್ರಮಾನವ ಬಾಂಬುಗಳನ್ನು ಕಂಡುಹಿಡಿದು ನಿಷ್ಕ್ರಿಯಗೊಳಿಸಬಲ್ಲ ಸಾಮರ್ಥ್ಯ ಹೊಂದಿದೆ.

ಅಮೇರಿಕಾದ ಸೈನಯದಲ್ಲಿ ನಾಲ್ಕು ಸಾವಿರ ರೋಬೋಟ್‌ಗಳಿವೆ

ಅಮೇರಿಕಾದ ಸೈನಯದಲ್ಲಿ ನಾಲ್ಕು ಸಾವಿರ ರೋಬೋಟ್‌ಗಳಿವೆ

ಇದರ ಸಾಮರ್ಥ್ಯ ಸಾಬೀತಾಗಿದ್ದು ಇರಾಕ್ ಮೇಲಿನ ಧಾಳಿಯಲ್ಲಿ ರಸ್ತೆಬದಿಯ ಬಾಂಬುಗಳನ್ನು ನಿಷ್ಕ್ರಿಯಗೊಳಿಸಲು ಮತ್ತು ಅಫ್ಘಾನಿಸ್ತಾನದಲ್ಲಿ ಒಸಾಮಾ ಬಿನ್ ಲಾದೆನ್ ಅಡಗಿದ್ದ ತಾಣವನ್ನು ಬಾಂಬುಗಳಿಂದ ಸುತ್ತುವರೆಯಲಾಗಿದ್ದು ಆ ಅಪಾಯಕಾರಿ ಸ್ಥಳದಿಂದ ಹೊರತೆಗೆಯಲು ಬಳಸಲಾಯಿತು.

ಕೊಳೆತ ಸೇಬುಗಳಿಂದ ವಿದ್ಯುತ್ ಉತ್ಪಾದಿಸುವ ರೋಬೋಟ್

ಕೊಳೆತ ಸೇಬುಗಳಿಂದ ವಿದ್ಯುತ್ ಉತ್ಪಾದಿಸುವ ರೋಬೋಟ್

ಬ್ರಿಟನ್ನಿನ ಬ್ರಿಸ್ಟಲ್ ರೋಬಾಟಿಕ್ಸ್ ಪ್ರಯೋಗಾಲಯದ ವಿಜ್ಞಾನಿ ಕ್ರಿಸ್ ಮೆಲ್ಹುವಿಷ್ ಎಂಬುವರು ಕೊಳೆತ ಸೇಬು ಮತ್ತು ಸತ್ತ ನೊಣಗಳನ್ನು ಬಳಸಿ ಜೈವಿಕ ಇಂಧನ ಬಳಸಿ ವಿದ್ಯುತ್ ಉತ್ಪಾದಿಸುವ ಯಂತ್ರಮಾನವನನ್ನು ತಯಾರಿಸಿದರು.

ಕೊಳೆತ ಸೇಬುಗಳಿಂದ ವಿದ್ಯುತ್ ಉತ್ಪಾದಿಸುವ ರೋಬೋಟ್

ಕೊಳೆತ ಸೇಬುಗಳಿಂದ ವಿದ್ಯುತ್ ಉತ್ಪಾದಿಸುವ ರೋಬೋಟ್

ಇದರ ಉದ್ದೇಶವಿಷ್ಟೇ, ಯಂತ್ರಮಾನವರು ಮಾನವರ ಹಸ್ತಕ್ಷೇಪವಿಲ್ಲದೇ ತಮ್ಮ ಆಹಾರ (ವಿದ್ಯುತ್)ವನ್ನು ತಾವೇ ಉತ್ಪಾದಿಸಿಕೊಂಡು ಸ್ವತಃ ಅಸ್ತಿತ್ವದಲ್ಲಿರುವಂತೆ ಮಾಡುವುದು.

Story first published: Friday, September 18, 2015, 23:28 [IST]
X
Desktop Bottom Promotion