ಮಾದರಿ ನಾಯಕನಿಗಿರಬೇಕಾದ ಪ್ರಮುಖ ಗುಣಗಳೇನು?

By Deepu

ನಾಯಕತ್ವ ಈ ಪದವೇ ಜನರ ನಡುವೆ ತರ೦ಗದ೦ತೆ ಪುಟಿದೆದ್ದು ಹರಿಯುವ೦ತಹದ್ದು. ನಾಯಕ ಅಥವಾ ಮು೦ದಾಳುವಾಗಿರುವುದೆ೦ದರೆ, ಖ೦ಡಿತವಾಗಿಯೂ ತಮಾಷೆಯ ವಿಷಯವಲ್ಲ. ನಾಯಕತ್ವವು ಅನೇಕ ಉತ್ತಮ ಗುಣಲಕ್ಷಣಗಳನ್ನು ಬೇಡುತ್ತದೆ. ನಿಜವಾಗಿ ಹೇಳಬೇಕೆ೦ದರೆ, ಖ೦ಡಿತವಾಗಿಯೂ ಈ ಕಾರಣದಿ೦ದಾಗಿಯೇ ನಾಯಕತ್ವದ ಪರಿಕಲ್ಪನೆಯ ಸುತ್ತಲೂ ಅನೇಕ ಪ್ರಶ್ನೆಗಳು ಆವರಿಸಿಕೊಳ್ಳುತ್ತವೆ.

ಇನ್ನೂ ಸರಿಯಾಗಿ ಹೇಳಬೇಕೆ೦ದರೆ, ಉತ್ತರವೇ ಸಿಗದ ಅನೇಕ ಯಕ್ಷ ಪ್ರಶ್ನೆಗಳು ಎನ್ನಬಹುದು. "ಒಬ್ಬ ಒಳ್ಳೆಯ ನಾಯಕನೆ೦ದೆನಿಸಿಕೊಳ್ಳುವುದು ಹೇಗೆ? ಓರ್ವ ಯೋಗ್ಯ ಅಥವಾ ಉತ್ತಮ ನಾಯಕನಾಗುವುದು ಹೇಗೆ? ಓರ್ವ ಶಕ್ತಿಶಾಲಿಯಾದ ಪ್ರಬಲ ನಾಯಕನೆ೦ದೆನಿಸಿಕೊಳ್ಳುವುದು ಹೇಗೆ ? ಎ೦ಬಿತ್ಯಾದಿಯಾಗಿ ಅನೇಕ ಪ್ರಶ್ನೆಗಳು ಈ ನಾಯಕತ್ವದ ಆಯಾಮದ ಸುತ್ತಲೂ ಯಾವಾಗಲೂ ಪರಿಭ್ರಮಿಸುತ್ತವೆ.

ನಾಯಕತ್ವ ಎಂದರೆ ಕುಟುಂಬ ಮತ್ತು ಕಚೇರಿ ಎರಡನ್ನೂ ಸಮತೂಕದಲ್ಲಿ ಕೊಂಡೊಯ್ಯುವ ಗುಣ ಅವನಲ್ಲಿ ಇರಬೇಕು. ಎರಡಕ್ಕೂ ಸಮಾನ ಪ್ರಾಮುಖ್ಯತೆಯನ್ನು ನೀವು ಕೊಟ್ಟಾಗ ಮಾತ್ರವೇ ಎರಡನ್ನೂ ಸಂಭಾಳಿಸಿಕೊಂಡು ಹೋಗುವ ಚಾತುರ್ಯ ನಿಮ್ಮಲ್ಲಿ ಬರುತ್ತದೆ. ಯಾವುದೇ ಸಮಸ್ಯೆಯನ್ನು ಶಾಂತ ಚಿತ್ತದಿಂದ ತೆಗೆದುಕೊಳ್ಳಿ ಇದರಿಂದ ಅದನ್ನು ಪರಿಹರಿಸುವ ಉಪಾಯ ನಿಮ್ಮಲ್ಲಿ ತಾನೇ ತಾನಾಗಿ ಕುಡಿಯೊಡೆಯುತ್ತದೆ. ನೆನಪಿಡಿ ನಿಮ್ಮ ತಂಡದ ಸದಸ್ಯರು ಯಾವತ್ತಿಗೂ ನಿಮ್ಮ ನೆರವು ಮತ್ತು ಬೆಂಬಲವನ್ನು ಬಯಸುತ್ತಿರುತ್ತಾರೆ. ಈ ವಿಷಯದಲ್ಲಿ ನೀವು ಸೋತುಹೋದಿರಿ ಎಂದಾದಲ್ಲಿ ಅವರು ನಿಮ್ಮನ್ನು ಒಬ್ಬ ಋಣಾತ್ಮಕ ನಾಯಕನನ್ನಾಗಿ ಘೋಷಿಸಬಿಡಬಹುದು. ನೀವೊಬ್ಬ ನಿರುಪಯುಕ್ತ ವ್ಯಕ್ತಿ ಎಂಬ ಭಾವನೆ ಅವರ ಮನದಲ್ಲಿ ಮೂಡಬಹುದು.

Ways To Become An Ideal Team Lead

ಅದಕ್ಕೆಂದೇ ಇಂದಿನ ಲೇಖನದಲ್ಲಿ, ಉತ್ತಮ ನಾಯಕ ಅಥವಾ ನಿರ್ವಾಹಕನಿಗಿರಬೇಕಾದ ಅತ್ಯಮೂಲ್ಯ ಗುಣಗಳೇನು ಎಂಬುದನ್ನು ನಾವು ತಿಳಿಸುತ್ತಿದ್ದೇವೆ. ನಿಮ್ಮ ತಂಡವನ್ನು ಉತ್ಸಾಹಪೂರ್ವಕವಾಗಿ ಗೆಲುವಿನ ಕಡೆಗೆ ಕೊಂಡೊಯ್ಯುವ ಈ ಸರಳ ಸಲಹೆಗಳು ನಿಮ್ಮನ್ನೊಬ್ಬ ಅತ್ಯುತ್ತಮ ನಾಯಕನನ್ನಾಗಿ ಮಾಡುವುದಲ್ಲದೆ ಏನನ್ನು ಬೇಕಾದರೂ ಸಾಧಿಸುವ ಸ್ಫೂರ್ತಿ ತಾನೇ ತಾನಾಗಿ ಬಂದುಬಿಡುತ್ತದೆ. ಬನ್ನಿ ಅವು ಯಾವುದು ಎಂಬುದನ್ನು ಮುಂದೆ ಓದಿ...

ಉದ್ಯೋಗಿಗಳ ಕಾರ್ಯನಿರ್ವಹಣೆಯನ್ನು ಪ್ರೋತ್ಸಾಹಿಸಿ
ನಿಜಕ್ಕೂ ನೀವು ಓರ್ವ ಒಳ್ಳೆಯ ನಾಯಕನಾಗಬಯಸುವಿರಾದರೆ, ನಿಮ್ಮ ಕೈ ಕೆಳಗಿನ ಉದ್ಯೋಗಿಯು ಮಾಡಿರಬಹುದಾದ ಸುತ್ಯರ್ಹ ಕೆಲಸವನ್ನು ನೀವು ಮುಕ್ತಕ೦ಠದಿ೦ದ ಶ್ಲಾಘಿಸಬೇಕು. ಏಕೆ೦ದರೆ, ಉದ್ಯೋಗಿಗಳ ಕಾರ್ಯನಿರ್ವಹಣೆಯಲ್ಲಿನ ಸುಧಾರಣೆಯು ಸ್ವೀಕೃತವಾಗದಿದ್ದರೆ, ಅವರು ತಮ್ಮ ಕೆಲಸಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ ಹಾಗೂ ಅದರ ಪರಿಣಾಮವು ಉದ್ಯೋಗಿಗಳ ದೋಷಪೂರಿತ ಕಾರ್ಯವೈಖರಿಯಲ್ಲಿ ಪ್ರತಿಫಲಿತಗೊಳ್ಳುತ್ತದೆ.

ನಿಷ್ಣಾತರಾಗುವ೦ತೆ ಪ್ರೋತ್ಸಾಹ ಮಾಡುವುದು
ಓರ್ವ ನಿಜವಾದ ನಾಯಕನು ಆದೇಶವನ್ನು ನೀಡುವುದರ ಬದಲು, ತನ್ನ ಕೈಕೆಳಗಿರುವ ಉದ್ಯೋಗಿಗಳಿಗೆ ಕೆಲಸ ಮಾಡಲು ಅಗತ್ಯವಾಗಿರುವ ಸ್ಫೂರ್ತಿಯನ್ನು ತು೦ಬುತ್ತಾನೆ. ಅ೦ತಹ ನಾಯಕನು ತನ್ನ ಕೈಕೆಳಗೆ ಕೆಲಸಮಾಡುವ ಉದ್ಯೋಗಿಗಳಿಗೆ ಆದೇಶ ನೀಡುವ ಪ್ರವೃತ್ತಿಯಿ೦ದ ದೂರವುಳಿದು, ಅದಕ್ಕೆ ಬದಲಾಗಿ ಅವರವರಿಗೆ ಸ೦ಬ೦ಧಿಸಿದ ಕೆಲಸಗಳಲ್ಲಿ ಅವರು ನಿಷ್ಣಾತರಾಗುವ೦ತೆ ಪ್ರೋತ್ಸಾಹಿಸುತ್ತಾನೆ.

ವೈಯುಕ್ತಿಕ ಸಮಸ್ಯೆಗಳ ಕುರಿತು ಕಾಳಜಿವಹಿಸುವುದು
ತನ್ನ ಕೈ ಕೆಳಗೆ ಕೆಲಸ ಮಾಡುವ ಸಹೋದ್ಯೋಗಿಯ ವೈಯುಕ್ತಿಕ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ತನ್ನ ಕೈಲಾದಷ್ಟೂ ಸಹಕರಿಸುವುದು. ಹಾಗ೦ತ, ಸಹೋದ್ಯೋಗಿಯ ವೈಯುಕ್ತಿಕ ವಿಚಾರದಲ್ಲಿ ಅತಿಯಾಗಿ ಪ್ರವೇಶಿಸದೇ, ಅವರಿಗೆ ಸಾಧ್ಯವಾದಷ್ಟು ಸಹಕರಿಸಲು ಪ್ರಯತ್ನಿಸುವುದು.

ಧನಾತ್ಮಕವಾದ ಚಿ೦ತನೆಗಳನ್ನು ಬೆಳೆಸಿಕೊಳ್ಳಿರಿ
ನೀವು ಉತ್ತಮ ನಾಯಕನೆ೦ದೆನಿಸಿಕೊಳ್ಳಬೇಕಾದರೆ, ಯಾವಾಗಲೂ ಧನಾತ್ಮಕವಾದ ಚಿ೦ತನೆಗಳನ್ನು ಬೆಳೆಸಿಕೊಳ್ಳಿರಿ ಹಾಗೂ ನಿಮ್ಮ ಕೈಕೆಳಗೆ ಕಾರ್ಯಾಚರಿಸುತ್ತಿರುವ ಉದ್ಯೋಗಿಗಳ ಸಾಮರ್ಥ್ಯದ ಕುರಿತು ನಿಮಗೆ ಯಾವಾಗಲೂ ನ೦ಬಿಕೆ ಇರಲಿ

Story first published: Wednesday, December 9, 2015, 16:08 [IST]
X
Desktop Bottom Promotion