'ಈಸಬೇಕು ಇದ್ದು ಜೈಸಬೇಕು' ಏನಂತೀರಿ?

By Deepu

ಸ್ಪರ್ಧೆ ಎಲ್ಲಿಲ್ಲ ಹೇಳಿ? ಸಣ್ಣ ತರಗತಿಯ ಮಕ್ಕಳಿಂದ ಹಿಡಿದು ದೊಡ್ಡ ಹುದ್ದೆಯಲ್ಲಿರುವ ಪ್ರತಿಭಾವಂತ ವ್ಯಕ್ತಿಗಳ ನಡುವೆಯೂ ಸ್ಪರ್ಧೆ ಎಂಬುದು ಕಟ್ಟುನಿಟ್ಟಾಗಿದೆ. ಮೇಲ್ನೋಟದಲ್ಲಿ ಉತ್ತಮ ಬಾಂಧವ್ಯದಲ್ಲಿದ್ದರೂ ವ್ಯವಹಾರದ ವಿಷಯಕ್ಕೆ ಒಬ್ಬರನ್ನು, ಇನ್ನೊಬ್ಬರು ಮಣಿಸಬೇಕು ಎನ್ನುವ ಛಲವೇ ಎದ್ದುಗಾಣುತ್ತಿರುತ್ತದೆ. ಆದರೆ ಇದು ಆರೋಗ್ಯಕರವಾಗಿದ್ದರೆ ಯಾವುದೇ ದುಃಖ ಸಂಭವಿಸುವುದಿಲ್ಲ ಆದರೆ ಇದುವೇ ಇನ್ನೊಬ್ಬರ ಏಳಿಗೆಯನ್ನು ಸಹಿಸಲು ಬಯಸುವುದಿಲ್ಲ ಎಂದಾದಲ್ಲಿ ಅದು ಕೇಡು ಬಯಸಿದವರನ್ನೇ ಸುಟ್ಟು ಹಾಕುತ್ತದೆ.

ಉನ್ನತ ಮಟ್ಟದಲ್ಲಿರುವ ಸಂಸ್ಥೆಗಳಲ್ಲಿ ಸ್ಪರ್ಧೆ ಎಂಬುದು ಸಾಮಾನ್ಯ ಪ್ರಕ್ರಿಯೆಯಾಗಿದ್ದು ಅಲ್ಲಿ ಉದ್ಯೋಗ ನಿರ್ವಹಿಸುವ ಪ್ರತಿಯೊಬ್ಬ ಉದ್ಯೋಗಿಗೂ ಇದರ ಬಿಸಿ ತಟ್ಟುತ್ತಿರುತ್ತದೆ. ಕೆಲವೊಂದು ಕಂಪೆನಿಗಳಂತೂ ತಮ್ಮ ಉದ್ಯೋಗಿಗಳಿಂದ ಬಹಳಷ್ಟನ್ನು ನಿರೀಕ್ಷಿಸುತ್ತಾ ಅವರನ್ನು ಬೇರೆ ಬೇರೆ ಆಮಿಷಗಳಿಗೆ ಒಡ್ಡುವುದರ ಮೂಲಕ ಅವರಿಂದ ಕೆಲಸವನ್ನು ಸಾಧಿಸಿಕೊಳ್ಳುತ್ತಾರೆ. ಅದೇ ರೀತಿ ಉದ್ಯೋಗಿಗೂ ತಮ್ಮ ಮೇಲಾಧಿಕಾರಿ ಕೊಟ್ಟಿರುವ ಕೆಲಸವನ್ನು ಯಶಸ್ವಿಯಾಗಿ ಮುಗಿಸುವ ಕಾತರ ಎದ್ದುಕಾಣುತ್ತಿರುತ್ತದೆ. ಇದಕ್ಕಾಗಿ ಅವರು ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳಲೂ ಸಿದ್ಧರಾಗಿರುತ್ತಾರೆ. ಕೆಲಸದ ಒತ್ತಡ ಹಗುರಾಗಿಸಲು 9 ಸರಳ ಸಲಹೆಗಳು

ಆದರೂ ಉದ್ಯೋಗದಲ್ಲಿ ಯಶಸ್ಸನ್ನು ಕಾಣುತ್ತಾ ನೀವು ಒಬ್ಬ ಆದರ್ಶ ಉದ್ಯೋಗಿ ಎಂಬುದನ್ನು ಸಾಧಿಸಿ ತೋರಿಸುವ ಪ್ರತಿಭೆ ನಿಮ್ಮಲ್ಲಿರಬೇಕು. ಯಾವುದಾದರೂ ಕೆಲಸವನ್ನು ನೀಡಿದರೆ ಅದನ್ನು ಕ್ಲಪ್ತ ಸಮಯದಲ್ಲಿ ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಇವರು ಸಾಧಿಸಿ ತೋರಿಸುತ್ತಾರೆ ಎಂಬ ನಂಬಿಕೆ ನಿಮ್ಮ ಕೆಲಸ ನೀಡುವವರಲ್ಲಿ ಇರಬೇಕು. ಆ ವಿಶ್ವಾಸವನ್ನು ನೀವು ಗಳಿಸಿಕೊಳ್ಳಬೇಕು ಎಂದಾದಲ್ಲಿ ನೀವು ಹೇಗೆ ಎಂಬುದನ್ನು ತೋರಿಸಿಕೊಡಬೇಕು. ಅದಕ್ಕೆಂದೇ ಇಂದಿನ ಲೇಖನದಲ್ಲಿ ನೀವೊಬ್ಬ ಯಶಸ್ವಿ ಉದ್ಯೋಗಿ ಎಂಬುದನ್ನು ತೋರಿಸಲು ಸಹಾಯ ಮಾಡುವ ಕೆಲವೊಂದು ಅಂಶಗಳನ್ನು ನೀಡುತ್ತಿದ್ದು ಈ ಅಂಶಗಳು ನಿಮ್ಮ ಕಾರ್ಯದಲ್ಲಿ 100 % ಯಶಸ್ಸನ್ನು ದಯಪಾಲಿಸಲು ನೆರವಾಗಲಿದೆ.

ನಿಮ್ಮ ಕೆಲಸವನ್ನು ಚೆನ್ನಾಗಿ ಅರಿತುಕೊಳ್ಳಿ

ನಿಮ್ಮ ಕೆಲಸವನ್ನು ಚೆನ್ನಾಗಿ ಅರಿತುಕೊಳ್ಳಿ

ನಿಮ್ಮ ಸಂಸ್ಥೆಯಲ್ಲಿ ನೀವು ಎಂದಿಗೂ ಯಶಸ್ಸನ್ನು ಹೊಂದಿದವರೇ ಆಗಿರಬೇಕು ಎಂದಾದಲ್ಲಿ ನೀವು ಮಾಡುವ ಕೆಲಸವನ್ನು ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳಿ. ನಿಮ್ಮ ಗುರಿಯನ್ನು ಹೇಗೆ ತಲುಪಬೇಕು ಎಂಬುದನ್ನು ಕೆಲಸದ ಬಗೆಗಿನ ಜ್ಞಾನ ತಿಳಿಸಿ ಕೊಡುತ್ತದೆ.

ನಿಮ್ಮನ್ನು ಮೇಲ್ದರ್ಜೆಗೇರಿಸಿರುವ ಕಾರಣವನ್ನು ತಿಳಿದುಕೊಳ್ಳಿ

ನಿಮ್ಮನ್ನು ಮೇಲ್ದರ್ಜೆಗೇರಿಸಿರುವ ಕಾರಣವನ್ನು ತಿಳಿದುಕೊಳ್ಳಿ

ನಿಮ್ಮನ್ನು ನಿಮ್ಮ ಸಂಸ್ಥೆ ಮೇಲಿನ ಹುದ್ದೆಗೆ ನೇಮಿಸಿದೆ ಎಂದಾದಲ್ಲಿ ಅವರು ನಿಮ್ಮಿಂದ ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದನ್ನು ತಿಳಿಯಿರಿ. ಅವರು ನಿಮ್ಮ ಮೇಲೆ ಕೆಲವೊಂದು ನಂಬಿಕೆಗಳನ್ನಿಟ್ಟುಕೊಂಡು ನಿಮಗೆ ಉತ್ತಮ ಹುದ್ದೆಯನ್ನು ನೀಡಿರುವುದರಿಂದ ಆ ನಂಬಿಕೆಯನ್ನು ಉಳಿಸಿಕೊಳ್ಳಿ. ಅಂತೆಯೇ ನಿಮ್ಮ ಗುರಿಯನ್ನು ತಲುಪುವಲ್ಲಿ ಸಫಲರಾಗಿ.

ಕೆಲಸವನ್ನು ಯೋಜಿಸಿಕೊಳ್ಳಿ

ಕೆಲಸವನ್ನು ಯೋಜಿಸಿಕೊಳ್ಳಿ

ಯಾವುದೇ ಕೆಲಸವನ್ನು ಆರಂಭಿಸುವ ಮುನ್ನ ಸೂಕ್ತವಾದ ಯೋಜನೆಯನ್ನು ರೂಪಿಸಿಕೊಳ್ಳುವುದು ಅಗತ್ಯವಾಗಿದೆ. ಇಷ್ಟು ದಿನಗಳ ಒಳಗಾಗಿ ಈ ಕೆಲಸವನ್ನು ಮುಗಿಸಬೇಕು ಎಂಬ ಯೋಜನೆಯನ್ನು ರೂಪಿಸಿಕೊಂಡಲ್ಲಿ ಅದನ್ನು ಪರಿಪೂರ್ಣವಾಗಿ ಮುಗಿಸುವ ಕಲೆ ನಿಮಗೆ ಬಂದೊದಗುತ್ತದೆ. ಯಾವುದೇ ಅಡಚಣೆಯನ್ನು ದೂರ ಮಾಡುವ ಛಾತಿ ನಿಮ್ಮಲ್ಲಿ ಉದ್ಭವವಾಗುತ್ತದೆ.

ಇಂದಿನ ಕೆಲಸವನ್ನು ಇಂದೇ ಮುಗಿಸಿ

ಇಂದಿನ ಕೆಲಸವನ್ನು ಇಂದೇ ಮುಗಿಸಿ

ಆಯಾಯ ದಿನದ ಕೆಲಸವನ್ನು ಅಂದಂದೇ ಮುಗಿಸಿಕೊಳ್ಳುವುದು ಒಬ್ಬ ಯಶಸ್ವಿ ಉದ್ಯೋಗಿಗೆ ಬೇಕಾದ ಪ್ರಮುಖ ಗುಣವಾಗಿದೆ. ಯಾವುದೇ ಕೆಲಸವನ್ನು ನೀವು ಮುಂದೂಡುತ್ತಾ ಹೋದಂತೆ ಅದು ನಿಮಗೆ ಭಾರವಾಗಿ ಬಿಡಬಹುದು. ಆದ್ದರಿಂದ ಅಂದಿನ ಕೆಲಸವನ್ನು ಅಂದೇ ಮುಗಿಸಿಕೊಳ್ಳುವುದಕ್ಕೆ ಆದ್ಯತೆ ನೀಡಿ.

ಒತ್ತಡ ಬೇಡ

ಒತ್ತಡ ಬೇಡ

ಯಾವುದೇ ಕೆಲಸವನ್ನು ಮುಗಿಸಲು ತೀವ್ರ ರೀತಿಯ ಒತ್ತಡವನ್ನು ನಿಮ್ಮ ಮೇಲೆ ಹೇರಿಕೊಳ್ಳಬೇಡಿ. ಅಂದಂದಿನ ಕೆಲಸವನ್ನು ನೀವು ಅಂದೇ ಮುಗಿಸಿಕೊಂಡಲ್ಲಿ ಒತ್ತಡವಿಲ್ಲದೆ ಯಶಸ್ವಿಯಾಗಿ ನೀವು ಹಿಡಿದ ಕೆಲಸವನ್ನು ನಿಮಗೆ ಮುಗಿಸಿಕೊಳ್ಳಬಹುದು.

ವಿರಾಮ ತೆಗೆದುಕೊಳ್ಳುವುದು

ವಿರಾಮ ತೆಗೆದುಕೊಳ್ಳುವುದು

ಒಂದೇ ಕಡೆ ನಿರಂತರವಾಗಿ ಕೆಲಸ ಮಾಡುವುದು ನಿಮಗೆ ಕೆಲಸದ ಮೇಲಿನ ಏಕಾಗ್ರತೆಯನ್ನು ಕುಗ್ಗಿಸಬಹುದು. ಅಂತೆಯೇ ಬೆನ್ನು ನೋವು ಮೊದಲಾದ ಕಿರಿಕಿರಿಗೆ ನಿಮ್ಮನ್ನು ನೂಕಬಹುದು. ಆದ್ದರಿಂದ ಕೆಲಸದ ನಡುವೆ ಒಂದಿಷ್ಟು ವಿರಾಮವನ್ನು ತೆಗೆದುಕೊಳ್ಳಿ. ಈ ವಿರಾಮ ಹೆಚ್ಚು ದೀರ್ಘವಾಗದಿರಲಿ. ಆದಷ್ಟು ಕೆಲಸ ನಡುವೆ ನಿಮಗೆ ಕೊಂಚ ಆರಾಮವನ್ನು ನೀಡುವ ಸಣ್ಣ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ.

ಕೆಲಸದ ವೇಳಾಪಟ್ಟಿ

ಕೆಲಸದ ವೇಳಾಪಟ್ಟಿ

ನೀವು ಮಾಡುತ್ತಿರುವ ಕೆಲಸವನ್ನು ಕುರಿತು ಆಗಾಗ್ಗೆ ಅಪ್‌‌ಡೇಟ್‌‌ಗಳನ್ನು ತಿಳಿದುಕೊಳ್ಳಲು ಒಂದು ನೋಟ್‌‌ಬುಕ್ ಅನ್ನು ನಿರ್ವಹಿಸಿಕೊಳ್ಳಿ. ಕೆಲಸ ಎಷ್ಟು ಮುಗಿದಿದೆ ಇನ್ನೆಷ್ಟು ಬಾಕಿ ಇದೆ ಯೋಜಿಸಿದ ದಿನಗಳಲ್ಲಿ ಈ ಕೆಲಸವನ್ನು ಪೂರೈಸಲು ಅದನ್ನು ಮಾಡಿ ಮುಗಿಸುವುದು ಹೀಗೆ ಈ ರೀತಿಯಲ್ಲಿ ನಿಮ್ಮ ವೇಳಾಪಟ್ಟಿಯನ್ನು ಸಿದ್ಧಮಾಡಿಟ್ಟುಕೊಳ್ಳಿ.

ಇತರರ ಸಹಾಯವನ್ನು ಪಡೆದುಕೊಳ್ಳುವುದು

ಇತರರ ಸಹಾಯವನ್ನು ಪಡೆದುಕೊಳ್ಳುವುದು

ನೀವು ಮಾಡುತ್ತಿರುವ ಕೆಲಸ ನಿಮ್ಮಿಂದ ಒಬ್ಬರಿಂದಲೇ ಸಾಧ್ಯವಾಗುತ್ತಿಲ್ಲ ಎಂದಾದಲ್ಲಿ ಅದಕ್ಕಾಗಿ ಸಮಯವನ್ನು ಹಾಳುಮಾಡಬೇಡಿ. ಇತರರ ಸಹಾಯವನ್ನು ಪಡೆದುಕೊಂಡು ಅವರಿಂದ ಸಲಹೆಗಳನ್ನು ಪಡೆದುಕೊಂಡು ಅದನ್ನು ಮುಗಿಸಿಕೊಳ್ಳಿ. ಇತರರ ಸಹಾಯವನ್ನು ಪಡೆದುಕೊಳ್ಳಲು ಹಿಂಜರಿಯಬೇಡಿ. ಇದರಿಂದ ಯಾವುದೇ ಕೆಡುಕು ನಿಮಗುಂಟಾಗುವುದಿಲ್ಲ.

ಕೆಲಸಕ್ಕೆ ಬದ್ಧರಾಗಿರುವುದು

ಕೆಲಸಕ್ಕೆ ಬದ್ಧರಾಗಿರುವುದು

ಒಂದು ಕೆಲಸವನ್ನು ನೀವು ಕೈಗೆತ್ತಿಕೊಂಡ ನಂತರ ಎಂದಿಗೂ ಮುಂದಿಟ್ಟ ಹೆಜ್ಜೆಯನ್ನು ಹಿಂದಕ್ಕೆ ಇರಿಸಿಕೊಳ್ಳಬೇಡಿ. 'ಈಸಬೇಕು ಇದ್ದು ಜೈಸಬೇಕು' ಎಂಬ ಮಾತಿನಂತೆಯೇ ನೀವು ಕೈಗೆತ್ತಿಕೊಂಡಿರುವ ಯಶಸ್ವಿಯಾಗಿ ನಿರ್ವಹಿಸುವವರೆಗೂ ಹಿಂಜರಿಯಬೇಡಿ. ನನ್ನಿಂದ ಇದು ಸಾಧ್ಯ ಎಂಬುದನ್ನು ಮನನ ಮಾಡಿಕೊಂಡು ಮುಂದುವರಿಯಿರಿ. ಖಂಡಿತ ಯಶಸ್ಸಿನ ಬಾಗಿಲು ನಿಮಗಾಗಿ ತೆರೆದಿರುತ್ತದೆ.'

ನಿಮ್ಮ ಮೇಲೆ ನಂಬಿಕೆ ಇರಿಸಿಕೊಳ್ಳಿ

ನಿಮ್ಮ ಮೇಲೆ ನಂಬಿಕೆ ಇರಿಸಿಕೊಳ್ಳಿ

ನಿಮ್ಮ ಮೇಲೆ ನೀವು ನಂಬಿಕೆ ಇರಿಸಿಕೊಳ್ಳುವುದು ಅತಿ ಮುಖ್ಯವಾದುದು. ನನ್ನಿಂದ ಈ ಕೆಲಸ ಸಾಧ್ಯ ಎಂಬ ಆತ್ಮವಿಶ್ವಾಸವನ್ನು ಮೊದಲು ನಿಮ್ಮಲ್ಲಿ ಬೆಳೆಸಿಕೊಳ್ಳಿ. ನಿಮ್ಮಿಂದ ಆಗುವ ಪ್ರಯತ್ನವನ್ನು ಮಾಡಿ ಉತ್ತಮ ಪ್ರತಿಫಲ ಖಂಡಿತ ನಿಮ್ಮದಾಗುತ್ತದೆ.

Story first published: Monday, December 14, 2015, 13:21 [IST]
X
Desktop Bottom Promotion