For Quick Alerts
ALLOW NOTIFICATIONS  
For Daily Alerts

ಜೀವನದಲ್ಲಿ ಗುರಿ ಎಂಬುದು ದಾರಿ ತೋರುವ ಗುರುವಿನಂತೆ

|

ಜೀವನದಲ್ಲಿ ಯಶಸ್ಸಿನ ಗುರಿ ಎಂಬುದು ದಾರಿ ತೋರುವ ಗುರುವಿನಂತೆ. ಸಾಧಿಸುವ ಛಲ ದೊರೆಯುವುದು ಜೀವನದ ಒಂದು ಪ್ರಮುಖ ಗುರಿಯಿಂದ. ಆದರೆ ಗುರಿ ಸಾಧನೆಗೆ ತೊಡಕುಗಳು ಇದ್ದೇ ಇರುತ್ತದೆ. ಗೆಲುವು ಎಂದಿಗೂ ಸುಲಭವಾಗಿ ದೊರೆಯುವುದಿಲ್ಲ. ಹಂತ ಹಂತದಲ್ಲಿ ಸೋಲಿನ ಸವಾಲನ್ನು ಸ್ವೀಕರಿಸಿದರೆ ಮಾತ್ರವೇ ಗೆಲುವಿನ ಸಿಹಿ ನಮಗೆ ಒಲಿಯುತ್ತದೆ. ನೀವು ಏನು ಸಾಧಿಸಬೇಕೋ ಅದಕ್ಕಾಗಿ ಸೂಕ್ತವಾದ ಯೋಜನೆಗಳನ್ನು ಮಾಡಿ ಅದಕ್ಕಾಗಿ ಪರಿಶ್ರಮವನ್ನು ಪಡಬೇಕಾಗುತ್ತದೆ. ಗುರಿ ಸಾಧನೆಯ ಛಲ ನಿಮ್ಮಲ್ಲಿದ್ದರೆ-ಯಶಸ್ಸು ಕಟ್ಟಿಟ್ಟ ಬುತ್ತಿ

ಈ ಯೋಜನೆಗಳನ್ನು ನೀವು ನಿಮ್ಮಷ್ಟಕ್ಕೆ ರೂಪಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಜೀವನದಲ್ಲಿ ಲಕ್ಷ್ಯವಿಟ್ಟು ಮುಂದಡಿಯಿಟ್ಟಾಗ ಸೋಲೇ ಗೆಲುವಿನ ಸೋಪಾನ ಎಂಬುದು ನಮಗೆ ಅರಿವಾಗುತ್ತದೆ. ಹಾಗಿದ್ದರೆ ಇದಕ್ಕಾಗಿ ಮೊದಲು ನೀವು ಸೋಲನ್ನು ಸಿಹಿಯಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಅದಕ್ಕೆಂದೇ ಇಂದಿನ ಲೇಖನದಲ್ಲಿ ನಾವು ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದೇವೆ. ಆ ಸಲಹೆಗಳನ್ನು ನೀವು ಪಾಲಿಸಿದರೆ ಗೆಲುವಿನ ಸಿಹಿ ನಿಮ್ಮ ಮುಂದೆ ಇರುತ್ತದೆ...

ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ

ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ

ಸಾಮಾನ್ಯವಾಗಿ ಮನೋಸ್ಥೈರ್ಯ ಕುಂದಲು ಆತ್ಮವಿಶ್ವಾಸದಲ್ಲಿ ಕೊರತೆ ಮುಖ್ಯ ಕಾರಣವಾಗಿದೆ. ಪೂರ್ವಾಗ್ರಹ ಪೀಡಿತರಾದ ನಾವು ಹಲವು ಕೀಳರಿಮೆಗಳನ್ನು ಮನದಾಳದಲ್ಲಿ ಪೋಷಿಸಿಕೊಂಡು ಬಂದಿದ್ದೇವೆ. ಅದರಲ್ಲೂ ಜೀವನದ ಯಶಸ್ಸಿನ ಗುರಿಯತ್ತ ಸಾಗುತ್ತಿರುವಾಗ ಕೆಲವೊಂದು ಕಠಿಣ ಸಂಗತಿಗಳು ಎದುರಾದಾಗ ಅದು ನಮ್ಮಿಂದ ಸಾಧ್ಯವಿಲ್ಲ ಎಂದು ಪ್ರಯತ್ನಿಸುವ ಮೊದಲೇ ಒಪ್ಪಿಕೊಂಡು ಸೋಲುವುದು ಆತ್ಮಸ್ಥೈರ್ಯ ಕುಂದಲು ಕಾರಣವಾಗುತ್ತದೆ, ಹಾಗಾಗಿ ಜೀವನದಲ್ಲಿ ಧನಾತ್ಮಕವಾಗಿ ಯೋಚಿಸಿ, ಯಶಸ್ಸಿನ ಗುರಿಯತ್ತ ಸಾಗುತ್ತಿರುವಾಗ ಆತ್ಮಸ್ಥೈರ್ಯವನ್ನು ಎಂದೂ ಕಳೆದುಕೊಳ್ಳಬೇಡಿ

ಋಣಾತ್ಮಕ ಯೋಚನೆ ಬಿಟ್ಟುಬಿಡಿ

ಋಣಾತ್ಮಕ ಯೋಚನೆ ಬಿಟ್ಟುಬಿಡಿ

ಯಾವುದೇ ಕೆಲಸಕ್ಕೆ ಧನಾತ್ಮಕ ಯೋಚನೆ ವಾಯುವೇಗವನ್ನು ನೀಡುತ್ತದೆ. ಒಂದು ವೇಳೆ ನಮ್ಮ ಯೋಚನೆಗಳಲ್ಲಿ ಋಣಾತ್ಮಕ ಭಾವನೆಗಳು ಬಂದಾಕ್ಷಣ ಈ ವೇಗಕ್ಕೆ ತಡೆಯೊಡ್ಡಿದಂತಾಗುತ್ತದೆ. ಈಗ ಎರಡೂ ಶಕ್ತಿಗಳ ನಡುವೆ ಸಮರವುಂಟಾಗಿ ನಿಮ್ಮ ಗುರಿಯತ್ತ ಸಾಗುವ ವೇಗ ಕಡಿಮೆಯಾಗುತ್ತದೆ. ಒಂದು ವೇಳೆ ಋಣಾತ್ಮಕ ಶಕ್ತಿಯೇ ಪ್ರಾಬಲ್ಯ ಹೊಂದಿದ್ದರೆ ನಿಮ್ಮ ಯಶಸ್ಸಿನ ಗುರಿ ವಿಚಲಿತವಾಗಬಹುದು. ಆದ್ದರಿಂದ ಎಂದಿಗೂ ಋಣಾತ್ಮಕ ಯೋಚನೆಗಳಿಂದ ದೂರವಿರಿ.

ನಿಮ್ಮ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಬೇಡಿ

ನಿಮ್ಮ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಬೇಡಿ

ನೀವ೦ದುಕೊ೦ಡದ್ದನ್ನು ಸಾಧಿಸಲು ನಿಮ್ಮಿ೦ದ ಸಾಧ್ಯವಿಲ್ಲ ಎ೦ಬ ಮಾತನ್ನು ಹೇಳಲು ಯಾರಿಗೂ ಅವಕಾಶವನ್ನು ನೀಡಬೇಡಿರಿ. ನಿಮ್ಮ ಕುರಿತಾಗಿ ಹಾಗೂ ನಿಮ್ಮ ಕನಸುಗಳ ಕುರಿತಾಗಿ ಸ್ವತ: ನಿಮಗೇ ನೀವೇ ಪ್ರಾಮಾಣಿಕರಾಗಿರಬೇಕು. ಯಾರೋ ಒಬ್ಬರು ನಿಮಗಿ೦ತ ವಿಭಿನ್ನವಾಗಿ ಯೋಚಿಸುತ್ತಾರೆ೦ಬ ಒ೦ದೇ ಒ೦ದು ಕಾರಣಕ್ಕಾಗಿ ನೀವು ಹಿಡಿದಿರುವ ಕೆಲಸವನ್ನು ಅರ್ಧಕ್ಕೇ ಕೈಬಿಡುವುದು ಬೇಡ. ನಿಮ್ಮ ಶಕ್ತಿಯಲ್ಲಿ ನೀವೇ ನ೦ಬಿಕೆಯನ್ನಿರಿಸಿಕೊ೦ಡಿರುವುದು ಎಲ್ಲಕ್ಕಿ೦ತಲೂ ಮುಖ್ಯವಾಗಿರುತ್ತದೆ. ನೀವು ಬಯಸುವ ಮಹತ್ವಾಕಾ೦ಕ್ಷೆಗಳನ್ನು ಬೆ೦ಬತ್ತಿ ಮು೦ದೆ ಸಾಗಲು ನೀವು ಖ೦ಡಿತಾಗಿಯೂ ಸಮರ್ಥವಾಗಿದ್ದೀರಿ. ಖಂಡಿತವಾಗಿಯೂ ಇದರಿಂದ ಯಶಸ್ಸಿನ ತುತ್ತತುದಿಯನ್ನು ಏರುತ್ತೀರಿ.

ಫಲ ಏನೇ ಬರಲಿ, ಲಕ್ಷ್ಯ ಗುರಿಯತ್ತವಿರಲಿ

ಫಲ ಏನೇ ಬರಲಿ, ಲಕ್ಷ್ಯ ಗುರಿಯತ್ತವಿರಲಿ

ಯಾವುದೇ ಪ್ರಯತ್ನ ಮೊತ್ತ ಮೊದಲ ಬಾರಿ ಫಲಕಾರಿಯಾಗುವುದಿಲ್ಲ ಎಂಬ ಸತ್ಯವನ್ನು ಮನಗಾಣುವುದು ಅವಶ್ಯ. ನೀವು ಯಶಸ್ಸಿನ ಗುರಿಯತ್ತ ಸಾಗಲು ಮಾಡಿದ ಪ್ರಯತ್ನ ಫಲಕೊಡುವ ಮುನ್ನವೇ ಅದರ ಫಲದ ಬಗ್ಗೆ ಅನುಮಾನ ಪಡುವುದು ನಿಮ್ಮ ಮನೋಸ್ಥೈರ್ಯವನ್ನು ಕುಗ್ಗಿಸುತ್ತದೆ. ಹೀಗೆ ಮಾಡಬಾರದಿತ್ತೇನೋ, ಹೀಗೆ ಮಾಡಿದ್ದುದು ತುಂಬಾ ಬೇಗನೇ ಆಯಿಯೋ ಏನೋ ಎಂದು ಕೈ ಕೈ ಹಿಸುಕಿಕೊಳ್ಳುವುದು ನಿಮ್ಮ ಮನೋಸ್ಥೈರ್ಯವನ್ನು ಕದಡಿ ಹಿಮ್ಮೆಟ್ಟಿಸುತ್ತದೆ. ಫಲ ಏನೇ ಬರಲಿ, ನಿಮ್ಮ ಪ್ರಯತ್ನಗಳು ಮಾತ್ರ ಪ್ರಾಮಾಣಿಕವಾಗಿದ್ದು ಪೂರ್ಣಪ್ರಮಾಣದಲ್ಲಿರಲಿ. ನೆನಪಿಡಿ, ಧನಾತ್ಮಕ ಯೋಚನೆಯ ಫಲಿತಾಂಶ ಧನಾತ್ಮಕವೇ ಆಗಿರುತ್ತದೆ.

ನಿಮ್ಮ ಗುರಿಗೆ ಬದ್ಧರಾಗಿರಿ

ನಿಮ್ಮ ಗುರಿಗೆ ಬದ್ಧರಾಗಿರಿ

ನಿಮ್ಮ ಜೀವನದ ಗುರಿಯ ಬಗ್ಗೆ ಸದಾ ನಿಮ್ಮ ಲಕ್ಷ್ಯ ಇರಲಿ. ಈ ನಿಟ್ಟಿನಲ್ಲಿ ಸತತವಾಗಿ ಮುಂದುವರೆಯುವುದರ ಬಗ್ಗೆ ಯೋಚಿಸುವುದು ಋಣಾತ್ಮಕ ಚಿಂತನೆಯಿಂದ ಹೊರಬರಲು ಉತ್ತಮ ಮಾರ್ಗವಾಗಿದೆ. ಸಾಮಾನ್ಯವಾಗಿ ನಮಗೆ ಹಲವಾರು ಅಡೆತಡೆಗಳು ಎದುರಾಗುತ್ತವೆ. ಈ ಅಡೆತಡೆಗಳನ್ನು ಸಮರ್ಥವಾಗಿ ಎದುರಿಸಿ ಗುರಿಯತ್ತ ಮುಂದುವರೆಯಲು ಮನಸ್ಸನ್ನು ಕೇಂದ್ರೀಕರಿಸಿ. ಆಗುವುದೇ ಇಲ್ಲ ಎಂಬಂತಹ ಕೆಲಸಗಳೂ ನಮಗೇ ಅಚ್ಚರಿಯಾಗುವಂತೆ ಆಗುತ್ತಾ ಹೋಗಿ ಧನಾತ್ಮಕ ಚಿಂತನೆಯನ್ನು ಸಾಬೀತುಪಡಿಸುತ್ತವೆ.

English summary

Tiips to become successful in your career

We all want to achieve success so we could live a comfortable life—have financial freedom, drive a nice car, and live in a beautiful house. However, although success can be achieved, it does not come easy.There are a lot of tips and strategies out there on how to be successful in life. So boldsky kannada Share some tips for your career have a look
Story first published: Saturday, November 21, 2015, 18:43 [IST]
X
Desktop Bottom Promotion