For Quick Alerts
ALLOW NOTIFICATIONS  
For Daily Alerts

ವ್ಯಕ್ತಿಯ ರಕ್ತದ ಗುಂಪು, ಆತನ ಜಾತಕವನ್ನೇ ಬಿಚ್ಚಿಡುತ್ತದೆ!

|

ಈ ಜಗತ್ತಿನಲ್ಲಿ ಪ್ರತಿ ವ್ಯಕ್ತಿಯ ಸ್ವಭಾವ ಮತ್ತು ವ್ಯಕ್ತಿತ್ವ ಭಿನ್ನವಾಗಿದೆ. ಕೇವಲ ವ್ಯಕ್ತಿಯ ಚಹರೆ ಆತನ ಅಥವಾ ಆಕೆಯ ವ್ಯಕ್ತಿತ್ವವನ್ನು ತೋರ್ಪಡಿಸುವುದಿಲ್ಲ. ವಾಸ್ತವವಾಗಿ ನೋಡಲು ಸುಂದರವಾಗಿ ಕಾಣುವ ವ್ಯಕ್ತಿಗಳು ಕೇವಲ ಆಕರ್ಷಣೀಯವಾಗಿರುತ್ತಾರೆಯೇ ವಿನಃ ಅವರ ನಿಜವಾಜ ವ್ಯಕ್ತಿತ್ವವೇ ನೈಜ ಸೌಂದರ್ಯವಾಗಿದೆ. ನೋಡಲು ಸುಂದರರಲ್ಲದ ಗಾಂಧೀಜಿ ಜಗತ್ತಿನ ಆಕರ್ಷಣೆ ಪಡೆದಿರಲು ಅವರ ವ್ಯಕ್ತಿತ್ವವೇ ಕಾರಣ. ಆದರೆ ಪ್ರತಿ ವ್ಯಕ್ತಿಯ ವ್ಯಕ್ತಿತ್ವಕ್ಕೆ ಅವರ ಬಾಹ್ಯ ರೂಪಕ್ಕಿಂತಲೂ ಅವರ ಆಂತರಿಕ ಲಕ್ಷಣಗಳು ಹೆಚ್ಚು ಸಂಬಂಧಪಟ್ಟಿವೆ.

ಅದರಲ್ಲೂ ಮುಖ್ಯವಾಗಿ ಪ್ರತಿ ವ್ಯಕ್ತಿಯ ರಕ್ತದ ಗುಂಪು ಆ ವ್ಯಕ್ತಿಯ ಮನೋಭಾವ, ಆರೋಗ್ಯ, ಸಹಜಗುಣ ಮತ್ತು ಯಾವ ಕ್ಷೇತ್ರದಲ್ಲಿ ಇವರು ಸಬಲರು ಮತ್ತು ಅಸಮರ್ಥರು ಎಂಬ ಬಗ್ಗೆ ಅಮೂಲ್ಯ ಮಾಹಿತಿಯನ್ನು ನೀಡುತ್ತದೆ. ಇದನ್ನು ಯಾವುದೇ ಜ್ಯೋತಿಷಿ ಅಥವಾ ಸಾಮಾನ್ಯರು ಹೇಳಿದ್ದಲ್ಲ, ಜಪಾನ್ ನಲ್ಲಿ ನಡೆದ ಒಂದು ಸಂಶೋಧನೆಯ ಮೂಲಕ ಈ ಬಗ್ಗೆ ಅತಿ ಆಳವಾದ ಅಧ್ಯಯನ ನಡೆಸಿದ ತಜ್ಞರೇ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಓರ್ವ ವ್ಯಕ್ತಿಯ ರಕ್ತದ ಗುಂಪು ಮತ್ತು ಇತರ ವಿವರಗಳನ್ನು ಪಡೆದು ಆತನ ಅಥವಾ ಆಕೆಯ ವ್ಯಕ್ತಿತ್ವವನ್ನು ಕಂಡುಹಿಡಿಯಬಹುದು. ಇದೇ ಕಾರಣಕ್ಕೆ ಜಪಾನಿನ ಜ್ಯೋತಿಷಿಗಳು (ಹೌದು, ಜಪಾನ್‌ ನಲ್ಲಿಯೂ ಜ್ಯೋತಿಷಿಗಳಿದ್ದಾರೆ) ವ್ಯಕ್ತಿಯ ಕುಂಡಲಿಯ ಬದಲಿಗೆ ರಕ್ತದ ಗುಂಪು ಯಾವುದು ಎಂದು ವಿಚಾರಿಸುತ್ತಾರೆ.

ಅಷ್ಟಕ್ಕೂ ರಕ್ತದ ಗುಂಪಿನಿಂದ ವ್ಯಕ್ತಿತ್ವ ಗೊತ್ತಾದರೇನು ಫಲ? ಇದನ್ನು ಇತರ ವಿಧಾನದಿಂದಲೂ ಪಡೆದುಕೊಳ್ಳಬಹುದಲ್ಲವೇ? ಹೌದು, ವ್ಯಕ್ತಿತ್ವದ ಬಗ್ಗೆ ವಿವರ ಪಡೆದುಕೊಳ್ಳಬಹುದಾದರೂ ಭವಿಷ್ಯದಲ್ಲಿ ಎದುರಾಗಬಹುದಾದ ಆರೋಗ್ಯದ ಅಪಾಯಗಳನ್ನಲ್ಲ. ರಕ್ತದ ಗುಂಪಿನಿಂದ ಈ ಬಗ್ಗೆ ಹಲವು ಮುನ್ನೆಚ್ಚರಿಕೆ ಪಡೆದುಕೊಳ್ಳುವ ಮೂಲಕ ಭವಿಷ್ಯದಲ್ಲಿ ಎದುರಾಗಬಹುದಾದ ಭಾರೀ ಗಂಡಾಂತರದಿಂದ ಪಾರಾಗಬಹುದು.  ಇನ್ನು ಟೀ ಕುಡಿಯುವ ಮೊದಲು 'ರಕ್ತದ ಗುಂಪು' ತಿಳಿದಿರಲಿ!

ಮನುಷ್ಯರ ರಕ್ತವನ್ನು ಒಟ್ಟು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಎ, ಬಿ, ಎಬಿ ಮತ್ತು ಒ ಎಂಬ ಹೆಸರಿನ ಈ ನಾಲ್ಕು ಗುಂಪಿನ ರಕ್ತಗಳು ಪ್ರೇಮ, ಉದ್ಯೋಗ, ಸಾಮಾಜಿಕ ಜೀವನ, ಸಮಾಜದಲ್ಲಿರುವ ವ್ಯಕ್ತಿಗಳೊಂದಿಗೆ ಒಡನಾಟ ಮತ್ತು ಒಟ್ಟಾರೆ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ನಿಮ್ಮ ರಕ್ತದ ಗುಂಪು ಯಾವುದು ಎಂದು ತಿಳಿದುಕೊಂಡಿರುವುದು.

ಒಂದು ವೇಳೆ ನಿಮಗೆ ಗೊತ್ತಿದ್ದರೆ ನಿಮ್ಮ ಬಗ್ಗೆ ನಿಮಗೇ ಅರಿವಿರದ ಹಲವು ಕುತೂಹಲಕಾರಿ ವಿಷಯಗಳನ್ನು ಕೆಳಗಿನ ಲೇಖನದಲ್ಲಿ ನೀಡಿರುವ ಮಾಹಿತಿಗಳು ಬಹಿರಂಗಪಡಿಸಿ ನಿಮ್ಮನ್ನು ಚಕಿತಗೊಳಿಸಬಹುದು. ಅಷ್ಟೇ ಅಲ್ಲ, ನಿಮ್ಮ ನಿಕಟವರ್ತಿಗಳ ರಕ್ತದ ಗುಂಪನ್ನು ಅರಿಯುವ ಮೂಲಕ ಅವರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಎಚ್ಚರ ವಹಿಸಲು ಸಾಧ್ಯವಾಗುತ್ತದೆ. ಏಕೆಂದರೆ ನಮ್ಮ ನಡುವಣ ಗೋಮುಖವ್ಯಾಘ್ರಗಳನ್ನು ಅರಿಯಲು ಇದರಿಂದ ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಇತರರು ನಿಮ್ಮನ್ನು ಯಾವ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂಬ ಮಾಹಿತಿಯನ್ನೂ ಪಡೆಯಬಹುದು. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಷೋ ಮೂಲಕ ನೋಡೋಣ... 

 

ಎ. ಗುಂಪಿನ ರಕ್ತ: ಸಾಮಾನ್ಯ ಲಕ್ಷಣಗಳು

ಎ. ಗುಂಪಿನ ರಕ್ತ: ಸಾಮಾನ್ಯ ಲಕ್ಷಣಗಳು

ಈ ಗುಂಪಿನ ರಕ್ತದ ವ್ಯಕ್ತಿಗಳು ಸಾಮಾನ್ಯವಾಗಿ ಸಹನಶೀಲರಾಗಿರುತ್ತಾರೆ. ಇವರು ತಮ್ಮ ಭಾವನೆಗಳನ್ನು ಹತ್ತಿಕ್ಕಿಕೊಳ್ಳುವಲ್ಲಿ ಇತರರಿಗಿಂತ ಹೆಚ್ಚು ಸಮರ್ಥರು. ಇವರು ಸಾಮಾನ್ಯವಾಗಿ ತಮ್ಮ ಕೆಲಸದಲ್ಲಿ ಶ್ರೇಷ್ಠತೆ ಮತ್ತು ಪರಿಪೂರ್ಣತೆಯನ್ನು ಬಯಸುತ್ತಾರೆ ಮತ್ತು ಇವನ್ನು ಸಾಧಿಸಲು ಸಂಪೂರ್ಣ ಜವಾಬ್ದಾರಿ ಹೊತ್ತು ತಮ್ಮ ಸಾಮರ್ಥ್ಯವನ್ನು ಧಾರೆ ಎರೆಯುತ್ತಾರೆ. ಇವರು ತಮ್ಮ ಕರ್ತರ್ವ್ಯದ ಕುರಿತು ಹೆಚ್ಚು ಜವಾಬ್ದಾರಿಯುತ, ವಿಶ್ಲೇಷಕ, ಸೃಜನಶೀಲರೂ ಆಗಿರುತ್ತಾರೆ. ಸಮಾಜದಲ್ಲಿ ಇವರು ಜನರೊಂದಿಗೆ ಉತ್ತಮ ವ್ಯವಹಾರವನ್ನಿಟ್ಟುಕೊಂಡು ಸಂಭಾವಿತರಾಗಿರುತ್ತಾರೆ. ಆದರೆ ಇವರ ವ್ಯಕ್ತಿತ್ವದ ಋಣಾತ್ಮಕ ಅಂಶಗಳೆಂದರೆ ಕೆಲಸದಲ್ಲಿ ಪರಿಪೂರ್ಣತೆಯ ಪಡೆಯುವ ಭರದಲ್ಲಿ ಇತರರನ್ನು ಕಡೆಗಣಿಸುವಿಕೆ, ಅತಿ ಹೆಚ್ಚಿನ ಸಂವೇದನೆ, ಯಾವುದೇ ವಿಷಯದ ಬಗೆಗಿನ ಒಲವನ್ನು ಅತಿರೇಕಕ್ಕೆ ಕೊಂಡೊಯ್ಯುವುದು, ಹೊಸ ವ್ಯಕ್ತಿಗಳೊಂದಿಗೆ ಬೆರೆಯಲು ಮಾತನಾಡಲು ಹಿಂದೇಟು ಹಾಕುವುದು, ತಮ್ಮದೇ ವಲಯದಲ್ಲಿ ಬಂದಿಗಳಾಗಿರುವುದು, ಅತೀವ ಸೂಕ್ಷ್ಮಮತಿಗಳಾಗಿರುವುದು ಮೊದಲಾದವು.

ಎ. ಗುಂಪಿನ ರಕ್ತ: ಔದ್ಯೋಗಿಕ ಬದುಕು

ಎ. ಗುಂಪಿನ ರಕ್ತ: ಔದ್ಯೋಗಿಕ ಬದುಕು

ಈ ಗುಂಪಿನ ರಕ್ತದ ವ್ಯಕ್ತಿಗಳು ತಮ್ಮ ಉದ್ಯೋಗದಲ್ಲಿ ಅತ್ಯಂತ ವಿಶ್ವಾಸಾರ್ಹರಾಗಿರುತ್ತಾರೆ. ಇವರಿಗೆ ಕರ್ತವ್ಯವೇ ದೇವರಾಗಿದ್ದು ಇದಕ್ಕಾಗಿ ತಮ್ಮ ಎಲ್ಲಾ ಸಾಮರ್ಥ್ಯವನ್ನು ಧಾರೆ ಎರೆಯುತ್ತಾರೆ. ಸಾಮಾನ್ಯವಾಗಿ ಇವರು ಕೆಲವನ್ನು ಪೂರ್ಣಗೊಳಿಸಲು ತಮ್ಮ ಸಾಮರ್ಥ, ಸಮಯ ಮತ್ತು ಸೌಲಭ್ಯಗಳ ಮಿತಿಯನ್ನು ಮೀರಿ ಹೋಗುವ ಕಾರಣ ಇವರು ಅತೀವ ದಣಿವನ್ನು ಅನುಭವಿಸುತ್ತಾರೆ ಹಾಗೂ ಈ ಕೆಲಸದಲ್ಲಿ ಅತಿ ಹೆಚ್ಚಿನ ಮಗ್ನತೆ ಇತರರಿಗೆ ಕಿರಿಕಿರಿ ತರಿಸಬಹುದು. ಉದಾಹರಣೆಗೆ ಯಾವುದೋ ಪ್ರಕರಣವನ್ನು ತಲೆಯಲ್ಲಿ ತುಂಬಿಕೊಂಡ ಪೋಲೀಸ್ ಅಧಿಕಾರಿ ಮನೆಗೆ ಬಂದ ಬಳಿಕವೂ ಇದರ ಬಗ್ಗೆಯೇ ಯೋಚಿಸುತ್ತಿದ್ದು ಮನೆಯ ಸದಸ್ಯರೊಂದಿಗೆ ಸರಿಯಾಗಿ ಬೆರೆಯದಿರುವುದು ಅವರಿಗೆ ಉದ್ಯೋಗದಲ್ಲಿ ಹೆಚ್ಚಿನ ಉನ್ನತಿ ದೊರೆತರೂ ಕುಟುಂಬದಲ್ಲಿ ಹೆಚ್ಚಿನ ಆತ್ಮೀಯತೆಯನ್ನು ಕಳೆದುಕೊಳ್ಳುತ್ತಾರೆ.

ಎ. ಗುಂಪಿನ ರಕ್ತ: ಪ್ರೇಮದ ಬದುಕು

ಎ. ಗುಂಪಿನ ರಕ್ತ: ಪ್ರೇಮದ ಬದುಕು

ಈ ಗುಂಪಿನ ರಕ್ತದ ವ್ಯಕ್ತಿಗಳು ಜನಜಂಗುಳಿಯನ್ನು ಇಷ್ಟಪಡದ ಕಾರಣ ಹೊಸ ಸಂಬಂಧವನ್ನು ಅವರು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಇವರು ತಮ್ಮ ಪ್ರೇಮಿಗೂ ತಮ್ಮ ಪ್ರೇಮವನ್ನು ನಿವೇದಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಸ್ನೇಹಿತರನ್ನೂ ಇವರು ಅತಿ ಕಾಳಜಿಯಿಂದ ಆಯ್ದುಕೊಂಡು ತಮ್ಮ ಸ್ನೇಹಕ್ಕೆ ಅರ್ಹರು ಎಂದು ಖಚಿತಪಡಿಸಿಕೊಂಡ ಬಳಿಕವೇ ನಿಕಟವರ್ತಿಗಳಾಗುತ್ತಾರೆ. ಆದರೆ ಒಮ್ಮೆ ಇವರು ತಮ್ಮ ಸ್ನೇಹಿತರು ಮತ್ತು ಪ್ರೇಮಿಯನ್ನು ಖಚಿತಪಡಿಸಿಕೊಂಡ ಬಳಿಕ ಪ್ರಾಣಕ್ಕೆ ಪ್ರಾಣ ಕೊಡುವಷ್ಟು ನಿಕಟವರ್ತಿಗಳಾಗುತ್ತಾರೆ.

ಬಿ. ಗುಂಪಿನ ರಕ್ತ: ಸಾಮಾಜಿಕ ಬದುಕು

ಬಿ. ಗುಂಪಿನ ರಕ್ತ: ಸಾಮಾಜಿಕ ಬದುಕು

ಈ ಗುಂಪಿನ ರಕ್ತದ ವ್ಯಕ್ತಿಗಳು ಸದಾ ಗುಂಪಿನಲ್ಲಿರುವುದನ್ನು ಇಷ್ಟಪಡುತ್ತಾರೆ. ಅಲ್ಲದೇ ಗುಂಪಿನಿಂದ ಸಾಧ್ಯವಾಗುವ ಕಾರ್ಯದ ಮುಂದಾಳತ್ವ ವಹಿಸಲು ಸಮರ್ಥರಿರುತ್ತಾರೆ. ಇವರು ತಮ್ಮದೇ ನಿರ್ಧಾರಗಳನ್ನು ತಳೆದು ಇತರರ ಸಲಹೆಗಳಿಗೆ ಬೆಲೆಕೊಡದ ಕಾರಣ ಗುಂಪಿನಲ್ಲಿ ಒಡಕು ಮೂಡಲೂ ಕಾರಣರಾಗುತ್ತಾರೆ.

ಬಿ ಗುಂಪಿನ ರಕ್ತ: ಔದ್ಯೋಗಿಕ ಬದುಕು

ಬಿ ಗುಂಪಿನ ರಕ್ತ: ಔದ್ಯೋಗಿಕ ಬದುಕು

ಈ ಗುಂಪಿನ ರಕ್ತದ ವ್ಯಕ್ತಿಗಳು ಸಾಮಾನ್ಯವಾಗಿ ತಮ್ಮದೇ ನಿಯಮಗಳನ್ನು ರೂಪಿಸಿಕೊಳ್ಳುವವರಾಗಿದ್ದು ಇತರರು ಈ ನಿಯಮಕ್ಕೆ ಒಳಪಡಬೇಕೆಂದು ಬಯಸುತ್ತಾರೆ. ಇವರು ಇತರರೊಂದಿಗೆ ಹೊಂದಿಕೊಳ್ಳದ

ಕಾರಣ ಇತರರು ಸಹಾ ಉದ್ಯೋಗದಲ್ಲಿ ಹೆಚ್ಚು ಸಹಕಾರ ನೀಡುವುದಿಲ್ಲ. ಆದರೆ ಇವರು ತಮ್ಮ ಕೆಲಸದಲ್ಲಿ ದೊಡ್ಡ ದೊಡ್ಡ ಕನಸುಗಳನ್ನು ಹೊಂದಿದ್ದು ಇದಕ್ಕಾಗಿ ಏನನ್ನೂ ಮಾಡಲು ಸಿದ್ಧರಿರುವ ಕಾರಣ ಜೀಹುಜೂರ್ ಎಂದು ಹೇಳಿದ್ದನ್ನೆಲ್ಲಾ ಚಾಚೂ ತಪ್ಪದೆ ನಿರ್ವಹಿಸುವ ತಂಡದೊಂದಿಗೆ ಅಸಾಧ್ಯವನ್ನೂ ಸಾಧಿಸಬಲ್ಲರು.

ಬಿ ಗುಂಪಿನ ರಕ್ತ: ಪ್ರೇಮದ ಬದುಕು

ಬಿ ಗುಂಪಿನ ರಕ್ತ: ಪ್ರೇಮದ ಬದುಕು

ಇವರು ತಮ್ಮ ಉದ್ಯೋಗದಂತೆಯೇ ತಮ್ಮ ಜವಾಬ್ದಾರಿ ಮತ್ತು ಪ್ರೇಮದಲ್ಲಿಯೂ ಬೇಜವಾಬ್ದಾರಿ ತೋರುವ ಕಾರಣ ವಿಶೇಷವಾಗಿ ಪ್ರೇಮದ ವಿಷಯದಲ್ಲಿ ಹೆಚ್ಚಿನ ತಾಳ್ಮೆ ತೋರಬೇಕಾಗುತ್ತದೆ. ಸಾಮಾನ್ಯವಾಗಿ ಇವರು ಕೋಪದ ಭರದಲ್ಲಿ ಮನಸ್ಸಿಗೆ ಬಂದದ್ದನ್ನು ತೋರ್ಪಡಿಸಿಕೊಳ್ಳುತ್ತಾರಾದರೂ ತಮ್ಮ ಪ್ರೇಮಿಗಳನ್ನು ಅಪಾರವಾಗಿ ಪ್ರೀತಿಸುತ್ತಾರೆ. ಇವರು ಪ್ರೇಮದ ಜೊತೆಗೆ ತಮಾಷೆಯನ್ನೂ ಇಷ್ಟಪಡುತ್ತಾರೆ.

ಎಬಿ. ಗುಂಪಿನ ರಕ್ತ: ಸಾಮಾಜಿಕ ಬದುಕು

ಎಬಿ. ಗುಂಪಿನ ರಕ್ತ: ಸಾಮಾಜಿಕ ಬದುಕು

ಇವರು ಅತೀವ ಸ್ನೇಹಪರರಾಗಿರುವ ಕಾರಣ ತಮ್ಮ ಸ್ನೇಹಿತರಿಗಾಗಿ ಏನನ್ನೂ ಮಾಡಲು ಸಿದ್ಧರಿರುತ್ತಾರೆ. ಇವರ ನಡವಳಿಕೆ ಇತರರಿಗೆ ಹೆಚ್ಚಿನ ಕುತೂಹಲ ಮೂಡಿಸುತ್ತದೆ. ಇವರು ತಮಾಷೆಯನ್ನು ಇಷ್ಟಪಡುವವರೂ ತಮ್ಮ ಸುತ್ತಮುತ್ತಲಿನವರನ್ನು ನಗಿಸುತ್ತಾ ಇರುವವರೂ ಆಗಿದ್ದಾರೆ. ಇವರು ಬುದ್ದಿಜೀವಿಗಳ ನಡುವೆ ಸಂಭಾಷಣೆಯನ್ನು ನಡೆಸಲು ಇಷ್ಟಪಡುತ್ತಾರೆ. ಇವರು ಅತ್ಯುತ್ತಮ ವಾಗ್ಮಿಗಳೂ ಆಗಿರುತ್ತಾರೆ. ಆದರೆ ಇವರ ಥಟ್ಟನೇ ಬದಲಾಗುವ ಮನೋಭಾವ ಮತ್ತು ಭಾವಪರವಶತೆ ಇವರ ಬಗ್ಗೆ ಭಿನ್ನ ನಿರ್ಧಾರ ತಳೆಯುವಂತೆ ಮಾಡುತ್ತದೆ.

ಎಬಿ ಗುಂಪಿನ ರಕ್ತ: ಪ್ರೇಮದ ಬದುಕು

ಎಬಿ ಗುಂಪಿನ ರಕ್ತ: ಪ್ರೇಮದ ಬದುಕು

ಈ ಗುಂಪಿನ ರಕ್ತದ ವ್ಯಕ್ತಿಗಳು ತಮ್ಮ ಜೀವನಸಂಗಾತಿಯನ್ನು ಅತೀವ ಪ್ರೇತಿಸುವವರಾಗಿದ್ದು ತಮ್ಮ ಪ್ರಾಣಗೆಳೆಯ/ಗೆಳತಿಯಂತೆ ಕಾಣುತ್ತಾರೆ. ಇವರು ಸದಾ ತಮ್ಮ ಜೀವನಸಂಗಾತಿಯೊಂದಿಗೇ ಹೆಚ್ಚಿನ

ಸಮಯವನ್ನು ಕಳೆಯಲು ಇಚ್ಛಿಸುತ್ತಾರೆ ಹಾಗೂ ಎಲ್ಲಾ ಕ್ಷಣಗಳನ್ನು ಸಂತೋಷವಾಗಿ ಮತ್ತು ಪ್ರೇಮದಲ್ಲಿ ಕಳೆಯಲು ಇಚ್ಛಿಸುತ್ತಾರೆ. ಆದರೆ ಇವರು ಅತೀವ ಸೂಕ್ಷ್ಮಮತಿಗಳಾಗಿರುವ ಕಾರಣ ತಮ್ಮ ಜೀವನಸಂಗಾತಿ ಮತ್ತು ಸ್ನೇಹಿತರ ಚಿಕ್ಕಪುಟ್ಟ ತಪ್ಪುಗಳನ್ನೂ ಇವರು ಅತೀವವಾಗಿ ಹಚ್ಚಿಕೊಂಡು ವ್ಯಾಕುಲರಾಗುತ್ತಾರೆ. ಇವರೊಂದಿಗೆ ಜೀವನ ಸಾಗಿಸಲು ಇವರನ್ನು ಕೊಂಚ ಅರ್ಥ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.

ಒ ಗುಂಪಿನ ರಕ್ತ: ಸಾಮಾನ್ಯ ಲಕ್ಷಣಗಳು

ಒ ಗುಂಪಿನ ರಕ್ತ: ಸಾಮಾನ್ಯ ಲಕ್ಷಣಗಳು

ಈ ಗುಂಪಿನ ವ್ಯಕ್ತಿಗಳು ಸ್ನೇಹಪರರೂ, ತಮ್ಮ ಕರ್ತ್ಯವ್ಯವನ್ನು ಎಷ್ಟೇ ತೊಡಕುಗಳಿದ್ದರೂ ನಿರ್ವಹಿಸುವವರೂ, ದೃಢಸಂಕಲ್ಪವುಳ್ಳವರೂ, ಅತ್ಯಂತ ಪ್ರಾಮಾಣಿಕರು, ಕುತೂಹಲ ವ್ಯಕ್ತಪಡಿಸುವ ವ್ಯಕ್ತಿತ್ವದವರೂ ದಯಾಪರರೂ ಆಗಿದ್ದಾರೆ. ಆದರೆ ಇವರ ಋಣಾತ್ಮಕ ಅಂಶಗಳೆಂದರೆ ಇವರು ತಮ್ಮ ವಸ್ತುಗಳ ಬಗ್ಗೆ ಅತಿಹೆಚ್ಚಿನ ಒಲವು ಉಳ್ಳವರಾಗಿದ್ದು ಇತರರು ಇದನ್ನು ಉಪಯೋಗಿಸಲು ಇಚ್ಛಿಸುವುದಿಲ್ಲ. ಕೆಲವೊಮ್ಮೆ ಅಹಂಕಾರಿಗಳೂ, ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವವರೂ ಮತ್ತು ಹೊಸ ಆಕರ್ಷಣೆಗೆ ಸುಲಭವಾಗಿ ಒಳಗಾಗುವವರೂ ಆಗಿರುತ್ತಾರೆ. ತಮ್ಮ ಉದ್ದೇಶಗಳಿಗೆ ವಿರೋಧ ಒಡ್ಡುವವರನ್ನು ಇವರು ಪ್ರತಿರೋಧಿಸಿ ಜಗಳಕಾಯಲೂ ಸಿದ್ಧರಿರುತ್ತಾರೆ.

ಒ ಗುಂಪಿನ ರಕ್ತ: ಸಾಮಾಜಿಕ ಬದುಕು

ಒ ಗುಂಪಿನ ರಕ್ತ: ಸಾಮಾಜಿಕ ಬದುಕು

ಈ ಗುಂಪಿನ ರಕ್ತದ ವ್ಯಕ್ತಿಗಳು ಸಾಮಾನ್ಯವಾಗಿ ವಿಶಾಲ ಮನೋಭಾವವುಳ್ಳವರಾಗಿದ್ದು ಎಲ್ಲರೊಂದಿಗೆ ಸುಲಭವಾಗಿ ಬೆರೆಯಬಲ್ಲವರಾಗಿರುತ್ತಾರೆ. ಇವರು ಹೆಚ್ಚಿನ ಜನರ ಸ್ನೇಹವನ್ನು ಬಯಸುತ್ತಾರೆ ಹಾಗೂ ಸ್ನೇಹಿತರಿಗೆ ಮತ್ತು ಅಗತ್ಯವುಳ್ಳವರಿಗೆ ತಮ್ಮ ಸಾಮರ್ಥ್ಯದ ನೆರವು ನೀಡುವ ಮೂಲಕ ಎಲ್ಲರ ಪ್ರಶಂಸೆ ಮತ್ತು ವಿಶ್ವಾಸಾರ್ಹತೆಯನ್ನು ಗಳಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಇತರರಿಗೆ ನೀಡುವ ನಿಃಸ್ವಾರ್ಥ ಸೇವೆಯ ಕಾರಣ ಇವರು ಎಲ್ಲರಿಗೆ ಬೇಕಾಗುವ ವ್ಯಕ್ತಿಯಾಗಿರುತ್ತಾರೆ.

ಒ ಗುಂಪಿನ ರಕ್ತ: ಔದ್ಯೋಗಿಕ ಬದುಕು

ಒ ಗುಂಪಿನ ರಕ್ತ: ಔದ್ಯೋಗಿಕ ಬದುಕು

ಇವರು ತಮ್ಮ ಕರ್ತ್ಯವ್ಯಕ್ಕೆ ಪ್ರಥಮ ಆದ್ಯತೆ ನೀಡುವವರಾಗಿದ್ದು ಹೆಚ್ಚಿನ ಯಶಸ್ಸು ಪಡೆಯುತ್ತಾರೆ. ಇವರು ತಮ್ಮ ಉದ್ಯೋಗದಲ್ಲಿ ಉನ್ನತಿಯನ್ನು ಪಡೆಯಲು ತಮ್ಮ ಸಾಮರ್ಥಕ್ಕೂ ಹೆಚ್ಚಿನದ್ದನ್ನು ನೀಡುವ ಕಾರಣ ಅಸಾಧ್ಯವನ್ನು ಸಾಧಿಸಲು ಅರ್ಹರಾಗಿರುತ್ತಾರೆ. ಆದರೆ ಇತರ ಆಕರ್ಷಣೆಗಳಿಗೆ ಸುಲಭವಾಗಿ ಮಣಿಯುವ ಇವರು ಕೆಲವೊಮ್ಮೆ ತಮ್ಮ ಉದ್ದೇಶದಿಂದಲೇ ವಿಮುಖರಾಗುತ್ತಾರೆ. ಆದರೆ ಸೂಕ್ತ ಮಾರ್ಗದರ್ಶನದ ಮೂಲಕ ಇವರಿಂದ ಅಸಾಧ್ಯವನ್ನು ಮಾಡಿಸಬಹುದು.

ಒ ಗುಂಪಿನ ರಕ್ತ: ಪ್ರೇಮದ ಬದುಕು

ಒ ಗುಂಪಿನ ರಕ್ತ: ಪ್ರೇಮದ ಬದುಕು

ಇವರು ಸಾಮಾನ್ಯವಾಗಿ ಬೇರೆಯವರಿಗೆ ಸಮಯ ನೀಡುವ ಪರಿಯನ್ನು ಇವರ ಜೀವನಸಂಗಾತಿಗಳು ಇಷ್ಟಪಡುವುದಿಲ್ಲ. ಇವರು ತಮ್ಮ ಜೀವನಸಂಗಾತಿಯನ್ನು ಅಪಾರವಾಗಿ ಪ್ರೀತಿಸುತ್ತಾರಾದರೂ ಇದನ್ನು ಸುಲಭವಾಗಿ ತೋರ್ಪಡಿಸಿಕೊಳ್ಳುವುದಿಲ್ಲ. ಇವರು ತಮ್ಮ ಪ್ರೇಮದ ಬಗ್ಗೆ ಕೊಂಚ ನಿರ್ಲಕ್ಷ ತೋರುತ್ತಾರೆ. ಆದರೆ ತಮ್ಮ ಜವಾಬ್ದಾರಿ, ಕರ್ತವ್ಯದ ಕುರಿತು ಇವರು ಸದಾ ಹೆಚ್ಚಿನ ಕಾಳಜಿ ವಹಿಸುವ ಕಾರಣ ಇವರ ಜೀವನಸಂಗಾತಿಗಳು ನಿರಾಳರಾಗಿರುತ್ತಾರೆ. ಆದ್ದರಿಂದ ಇವರನ್ನು ಇವರ ಜೀವನಸಂಗಾತಿಗಳು ಅರ್ಥಮಾಡಿಕೊಳ್ಳುವುದು ಅಗತ್ಯ.

English summary

Things Your Blood Type Says About You

Do you know that your blood type can predict your temperament, personality, nature, health, and your strong and wear areas. A research conducted in Japan on blood type and personality has shown that a blood group and personality can be closely related to each other. The characteristics of a person is based on his or her blood type. That is why, in Japan, astrologers ask for the blood group instead of a zodiac sign.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more