ಬದುಕಿನ ಪಾಠ ಕಲಿಸಿಕೊಡುವ ಕಾಮಿಕ್ ಪವರ್ ಪಫ್ ಗರ್ಲ್ಸ್

ಕಾರ್ಟೂನ್ ನೆಟ್‍ವರ್ಕ್ ನಮಗಾಗಿ ಕೆಲವೊಂದು ಅದ್ಭುತ ಕಾರ್ಟೂನ್‍ಗಳನ್ನು ನೀಡಿದೆ. ಅದು ರಹಸ್ಯಗಳನ್ನು ಭೇದಿಸುವ ನಾಯಿಯ ಪಾತ್ರವಾಗಿರಬಹುದು[ಸ್ಕೂಬಿ ಡೂ], ಮ್ಯಾನ್‍ಹಟನ್ ಅಲ್ಲೆಯಲ್ಲಿರುವ ಒಂದು ಗುಂಪಿನ ನಾಯಕನಾದ ಬೆಕ್ಕಿನ ಕಥೆ [ಟಾಪ್ ಕ್ಯಾಟ್] ಅಥವಾ ಒಬ್ಬ ಬುದ್ಧಿವಂತ ಹುಡುಗ ಮತ್ತು ಆತನ ಸೋದರಿ [ಡೆಕ್ಸ್‌ಟರ್ಸ್ ಲ್ಯಾಬೋರೇಟರಿ]; ಹೀಗೆ ಇದು ನಮ್ಮನ್ನು ಎಂದಿಗು ನಿರಾಸೆಗೊಳಿಸುವುದಿಲ್ಲ.

ಇವುಗಳ ಜೊತೆಗೆ ಪವರ್‌ಪಫ್ಫ್ ಗರ್ಲ್ಸ್ ಎಂಬ ಸೂಪರ್ ಹೀರೋ ತಂಡವು ಸಹ ಇದಕ್ಕೆ ಹೊರತಾಗಿಲ್ಲ. ಪವರ್‌ಪಫ್ಫ್ ಗರ್ಲ್ಸ್‌ನಲ್ಲಿ ಬ್ಲಾಸ್ಸಂ, ಬಬ್ಬಲ್ಸ್ ಮತ್ತು ಬಟ್ಟರ್‌ಕಪ್ ಎಂಬ ಹುಡುಗಿಯರು ಇದ್ದಾರೆ. ಇವರ ಮೂಲದ ರಹಸ್ಯವು ಡಾ.ಉಟೋನಿಯಮ್‍ವರೆಗೆ ಹೋಗಿ ಸೇರುತ್ತದೆ. ಡಾ.ಉಟೋನಿಯಮ್ " ಸಕ್ಕರೆ, ಮಸಾಲೆ ಮತ್ತು ಚೆನ್ನಾಗಿರುವ ಪ್ರತಿಯೊಂದು ಅಂಶವನ್ನು ಹೊಂದಿರುವ ಪರಿಪೂರ್ಣವಾದ ಪುಟ್ಟ ಹುಡುಗಿಯರನ್ನು ಮಾಡಬೇಕು ಎಂದು ಬಯಸಿದ್ದರು. ಆದರೆ ಆಕಸ್ಮಿಕವಾಗಿ ಅವರು ಇದಕ್ಕೆ "ಕೆಮಿಕಲ್ x" ಬೆರೆಸಿಬಿಟ್ಟರು.

Things Girls Can Learn From Powerpuff Girls

ಈ ಮಿಶ್ರಣದಲ್ಲಿ ಪವರ್‌ಪಫ್ಫ್ ಗರ್ಲ್ಸ್ ಜನ್ಮಿಸಿದರು. ಇವರು ಸಹ ನಮ್ಮ ಎಲ್ಲಾ ಹುಡುಗಿಯರಂತೆ ಒಡಹುಟ್ಟಿದವರ ಜೊತೆಗೆ ಜಗಳ ಆಡುತ್ತಾರೆ. ಹಾಸಿಗೆಯನ್ನು ಒದ್ದೆ ಮಾಡಿಕೊಳ್ಳುತ್ತಾರೆ ಮತ್ತು ಸಂಗತಿಗಳನ್ನು ನಂಬುತ್ತಾರೆ. ಇವರು ನಮಗೆ ಜೀವನದ ಕುರಿತು ಹಲವಾರು ಪಾಠಗಳನ್ನು ಸಹ ಕಲಿಸುತ್ತಾರೆ. ಪವರ್‌ಪಫ್ಫ್ ಗರ್ಲ್ಸ್ ನಿಂದ ಏನೇನು ಕಲಿಯಬಹುದೆಂಬುದನ್ನು ಮುಂದೆ ಓದಿ...

ಲುಕ್ ಅಂತಾ ಮಹತ್ವದ ವಿಚಾರವೇ ಅಲ್ಲ
ಬ್ಲಾಸ್ಸಮ್, ಬಬ್ಬಲ್ಸ್ ಮತ್ತು ಬಟ್ಟರ್‌ಕಪ್ ನೋಡಲು ಉದ್ದವಾಗಿಲ್ಲ ಅಥವಾ ನೋಡಲು ಕ್ರೂರವಾಗಿ ಸಹ ಇಲ್ಲ. ಆದರೆ ಇವರು ತಮ್ಮ ವೈರಿಗಳನ್ನು ಹೊಡೆದು, ಪ್ರಪಂಚವನ್ನು ನಾಶಗೊಳಿಸುವುದನ್ನು ತಪ್ಪಿಸಲು ಇವರಿಗೆ ಇದು ಅಡ್ಡಿಯೇ ಅಲ್ಲ. ಇನ್ನುಳಿದ ಸಮಯದಲ್ಲಿ ಇವರು ತಮ್ಮ ಒಡಹುಟ್ಟಿದವರ ಜೊತೆಗೆ ಆಡುತ್ತ ಕಳೆಯುತ್ತಾರೆ. ನೈಜತೆಯ ಅನುಭವವನ್ನು ನೀಡುವ 15 ಕಾರ್ಟೂನ್ ಪಾತ್ರಗಳು

ಅವರನ್ನು ಅವರ ಗಾತ್ರ ನೋಡಿ, ತೀರ್ಮಾನಿಸಬೇಡಿ
ಈ ಹುಡುಗಿಯರು "ಸಕ್ಕರೆ, ಮಸಾಲೆ ಮತ್ತು ಚೆನ್ನಾಗಿರುವ ಪ್ರತಿಯೊಂದು ಅಂಶವನ್ನು ಸೇರಿಸಿ" ಮಾಡಲ್ಪಟ್ಟವರಾಗಿದ್ದಾರೆ. ಆದರೆ ಪ್ರೊಫೆಸರ್ ಉಟೋನಿಯಮ್ ಅಪಾಯಕಾರಿಯಾದ "ಕೆಮಿಕಲ್ X" ಬೆರೆಸಿಬಿಟ್ಟರು. ಹಾಗಾಗಿ ಪವರ್‌ಪಫ್ಫ್ ಹುಡುಗಿಯರು ಜನಿಸಿದರು. ಈ ಹುಡುಗಿಯರು ತಮ್ಮ ಬಣ್ಣ ಬಣ್ಣದ ಉಡುಗೆ ತೊಡುಗೆಗಳಿಂದ ನಿರಪಾಯಕಾರಿಯಾಗಿ ಮತ್ತು ಸುಂದರವಾಗಿ ಕಾಣುತ್ತಾರೆ. ಜೊತೆಗೆ ಅವರ ಮುದ್ದಾದ ಹೆಸರುಗಳು ಸಹ ಇವರತ್ತ ನಮ್ಮನ್ನು ಸೆಳೆಯುತ್ತವೆ. ಆದರೆ ಇವರು ಸೂಪರ್ ಹೀರೋಗಳು. ಇವರ ನೋಟ ನಮಗೆ ಹೇಗಿದ್ದರೆ ಏನು? ಅವರ ಶಕ್ತಿ ಸಾಮರ್ಥ್ಯ ಮುಖ್ಯ!

ಅಸೂಯೆ ಬಿಡಿ ಮತ್ತು ಒಟ್ಟಿಗೆ ಕೆಲಸ ಮಾಡಿ
ಎಲ್ಲಾ ಹುಡುಗಿಯರ ತರಹ ಇರಬೇಡಿ. ಅಸೂಯೆಯನ್ನು ಬಿಡಿ, ಒಟ್ಟಿಗೆ ಎಲ್ಲರ ಜೊತೆ ಬೆರೆತು ಕೆಲಸ ಮಾಡಿ. ಪವರ್‌ಪಪ್ಫ್ ಹುಡುಗಿಯರಿಗು ಸಹ ತಮ್ಮದೆ ಆದ ಕೊರತೆಗಳು ಇವೆ. ಆದರೆ ಅವರಿಗೆ ಇದೆಲ್ಲ ಮುಖ್ಯವಲ್ಲ. ಅವರು ಬಟ್ಟೆ, ಬರೆ, ದುಡ್ಡು ಕಾಸು, ಒಡವೆ ಇತ್ಯಾದಿಗಳ ಕುರಿತು ಇತರರನ್ನು ಕಂಡು ಅಸೂಯೆಪಡುವುದಿಲ್ಲ. ಅವರು ಒಟ್ಟಿಗೆ ಸೇರಿ ದುಡಿಯುತ್ತಾರೆ. ಒಂದೇ ಗುರಿಗಾಗಿ ದುಡಿಯುತ್ತಾರೆ. ಶತಮಾನದ ಕೆಲ ನಿಗೂಢ ರಹಸ್ಯಗಳು

ಹುಡುಗಿಯರು ವಿಭಿನ್ನವಾಗಿ ಏನಾದರು ಮಾಡಬಹುದು
ಭಾರತದಲ್ಲಿ ಹುಡುಗಿಯರಿಗೆ ಯಾವಾಗಲು ಸ್ವಲ್ಪ ಕಡಿಮೆ ಪ್ರಾಶಸ್ತ್ಯವಿರುತ್ತದೆ. ಅದರಲ್ಲೂ ಅವರ ಮೇಲೆ ಹೆಚ್ಚಿನ ಅತ್ಯಾಚಾರಗಳು ನಡೆಯುತ್ತ ಇವೆ. ಅವರು ಅಬಲೆಯರು ಎಂದು ಎಲ್ಲರೂ ಭಾವಿಸಿದ್ದಾರೆ. ಆದರೆ ಪವರ್‌ಪಫ್ಫ್ ಗರ್ಲ್ಸ್ ತರಹ ಹುಡುಗಿಯರು ಸಹ ಯುದ್ಧ ಮಾಡಬಲ್ಲರು, ಎಂಬುದನ್ನು ತಿಳಿದುಕೊಳ್ಳಬೇಕು. ಉದ್ದ, ಕುಳ್ಳ, ಕೈಲಾಗಲ್ಲ ಎನ್ನುವ ಮಾತೇ ಇಲ್ಲ. ಹುಡುಗಿಯರು ಸಹ ಏನು ಬೇಕಾದರು ಮಾಡಬಹುದು ಎಂಬುದನ್ನು ನಾವು ಇವರಿಂದ ಕಲಿಯಬೇಕು.

Story first published: Thursday, February 19, 2015, 23:24 [IST]
X
Desktop Bottom Promotion