Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ಮೂಡ್ ಸರಿ ಇಲ್ಲವೆಂದರೆ ಇವುಗಳ ಸಹವಾಸ ಮಾಡಬೇಡಿ
ಕೆಟ್ಟ ಮೂಡ್ ಮತ್ತು ಕೋಪ ಸಾಮಾನ್ಯವಾಗಿ ಮಾನವರಲ್ಲಿ ಕಾಣಿಸಿಕೊಳ್ಳುವ ಒಂದು ಭಾವನೆಯಾಗಿರುತ್ತದೆ. ಇದು ಒಮ್ಮೆಯಾದರು ನಮ್ಮನ್ನು ಕಾಡಿರುತ್ತದೆ. ಅಲ್ಲದೆ ಇದೊಂದು ಸ್ವಾಭಾವಿಕ ಪ್ರಕ್ರಿಯೆಯಾಗಿದ್ದು, ಇದು ಕೆಟ್ಟದ್ದು ಮತ್ತು ಅಸಹನೀಯವಾದುದು ಎಂದು ಎಲ್ಲರಿಗೂ ಗೊತ್ತು. ಕೆಟ್ಟ ಮೂಡ್ ಇದ್ದಾಗ ನಮಗೆ ಕೋಪವು ಸಹ ಬರುತ್ತದೆ. ಹಾಗಾದರೆ ಈಗ ನಮ್ಮಲ್ಲಿ ಏಳುವ ಪ್ರಶ್ನೆಯೆಂದರೆ ಕೆಟ್ಟ ಮೂಡ್ ಅನ್ನು ಹೇಗೆ ನಿಯಂತ್ರಿಸಿಕೊಳ್ಳುವುದು.
ನಿಮ್ಮ ಮೂಡ್ ಎಲ್ಲಿ ಬೇಕಾದರು ಹಾಳಾಗಬಹುದು ಅಥವಾ ನಿಮಗೆ ಎಲ್ಲಿ ಬೇಕಾದರು ಕೋಪ ಬರಬಹುದು. ಅದು ಆಫೀಸ್, ಮನೆ, ರಸ್ತೆ ಅಥವಾ ಎಲ್ಲಾದರು ಸರಿ. ಒಂದು ವೇಳೆ ನಿಮ್ಮ ಮೂಡ್ ಇತರರಿಗೆ ತೊಂದರೆ ಮಾಡಿದಲ್ಲಿ, ಅದರ ಪರಿಣಮಾ ಮತ್ತಷ್ಟು ಕೆಟ್ಟದ್ದಾಗಿರುತ್ತದೆ. ನಿಮ್ಮ ಮೂಡ್ ನಿಮ್ಮ ತಾಳ್ಮೆಯನ್ನು ಹಾಳು ಮಾಡುತ್ತದೆ, ಜೊತೆಗೆ ನಿಮ್ಮ ಸ್ನೇಹಿತರು, ಸಹೋದ್ಯೋಗಿಗಳು ಮತ್ತು ನಿಮ್ಮ ಸಂಗಾತಿಯ ಮನಸ್ಸನ್ನು ಸಹ ಘಾಸಿಗೊಳಿಸುತ್ತದೆ.
ಇದನ್ನು ಆದಷ್ಟು ಮಟ್ಟಿಗೆ ನೀವು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಒಳ್ಳೆಯದು. ಮೂಡ್ ಸರಿಯಿಲ್ಲದಿದ್ದಾಗ ಸ್ವಲ್ಪ ಹೊತ್ತು ನೀವು ಎಲ್ಲರಿಂದ ದೂರವಿರಿ. ಬನ್ನಿ ಮೂಡ್ ಸರಿಯಿಲ್ಲದಿದ್ದಾಗ ನೀವು ಏನು ಮಾಡಬೇಕು ಎಂಬುದನ್ನು ಮುಂದೆ ನೀಡಿದ್ದೇವೆ ಓದಿಕೊಳ್ಳಿ.

ಆಲ್ಕೋಹಾಲ್ ಸೇವಿಸಬೇಡಿ
ಕೆಟ್ಟ ಮೂಡ್ ನಿಮ್ಮನ್ನು ಕಾಡಿದಾಗ ಆಲ್ಕೋಹಾಲ್ ಸೇವಿಸಬೇಡಿ. ಏಕೆಂದರೆ ಜನರು ಕೆಟ್ಟ ಮೂಡು ಮತ್ತು ಕೋಪವನ್ನು ನಿಯಂತ್ರಿಸುವ ಒಂದೇ ಔಷಧಿ ಆಲ್ಕೋಹಾಲ್ ಎಂದು ಭಾವಿಸಿರುತ್ತಾರೆ. ಆದರೆ ಅದನ್ನು ಸೇವಿಸುವುದರಿಂದ ನಿಮ್ಮ ಮನಸ್ಸು ಮತ್ತು ನೀವು ಮಾತನಾಡಿಕೊಳ್ಳುವ ಒಂದು ಸದಾವಕಾಶವನ್ನು ಕಳೆದುಕೊಳ್ಳುತ್ತೀರಿ. ಇದರಿಂದ ನಶೆ ಇಳಿದ ಮೇಲೆ, ನಿಮ್ಮ ಮನಸ್ಸು ಮತ್ತೆ ಪ್ರಕ್ಷುಬ್ಧಗೊಳ್ಳುತ್ತದೆ. ಮತ್ತೆ ಅದೇ ಕೆಟ್ಟ ಮೂಡ್ ಮತ್ತು ಕೋಪ ನಿಮ್ಮನ್ನು ಕಾಡುತ್ತದೆ. ಇದರಿಂದ ನಿಮ್ಮ ಸಂಬಂಧಗಳು ಹಾಳಾಗುತ್ತವೆ.

ಸಾಮಾಜಿಕ ನೆಟ್‌ವರ್ಕ್ ಸೈಟಿನಲ್ಲಿ ಪೋಸ್ಟ್ ಮಾಡಬೇಡಿ
ನಿಮ್ಮ ಕೆಟ್ಟ ಮೂಡ್ ತುಂಬಾ ಹೊತ್ತು ಇರುವುದಿಲ್ಲ. ಒಂದು ವೇಳೆ ನಿಮಗೆ ನಿಮ್ಮ ಕೋಪ ಅಥವಾ ಕೆಟ್ಟ ಭಾವನೆಯನ್ನು ಬರೆಯಬೇಕು ಎಂದಲ್ಲಿ, ಪೆನ್ ಪೇಪರ್ ತೆಗೆದುಕೊಂಡು ಬರೆಯಿರಿ. ಅದನ್ನು ಬಿಟ್ಟು ಸಾಮಾಜಿಕ ನೆಟ್‌ವರ್ಕ್ ಸೈಟಿನಲ್ಲಿ ಬರೆಯಲು ಹೋಗಬೇಡಿ. ಏಕೆಂದರೆ ಈ ಸೈಟ್‌ಗಳಲ್ಲಿ ನಿಮ್ಮ ಸ್ನೇಹಿತರಲ್ಲದವರು ಸಹ ಇರುತ್ತಾರೆ.

ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ
ಒಂದು ವೇಳೆ ನಿಮಗೆ ಕೆಟ್ಟ ಮೂಡ್ ಕಾಡುತ್ತಿದ್ದಲ್ಲಿ, ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ. ಕೋಪದಲ್ಲಿ ತೆಗೆದುಕೊಂಡ ನಿರ್ಧಾರಗಳು ಕಹಿಯಾದ ಫಲಿತಾಂಶವನ್ನು ನೀಡುತ್ತವೆ. ಇದರಿಂದ ನೀವು ಮುಂದೆ ಪಶ್ಚಾತ್ತಾಪವನ್ನು ಪಡುತ್ತೀರಿ. ಆಮೇಲೆ ಮುಂದೆ ಇದರಿಂದ ನೀವು ಕೊರಗಿದರು ಪ್ರಯೋಜನವಾಗುವುದಿಲ್ಲ. ನಿಮ್ಮ ಮನಸ್ಸು ಮತ್ತೆ ತಿಳಿಯಾದಾಗ ಮಾತ್ರ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಅದನ್ನು ಸುಮ್ಮನೆ ಹೋಗಲು ಬಿಡಿ
ಕೆಲವೊಮ್ಮೆ ನೀವು ಕೆಲಸ ಮಾಡುವ ಸ್ಥಳದಲ್ಲಿ ಕೆಟ್ಟ ಮೂಡ್ ನಿಮ್ಮನ್ನು ಭಾದಿಸಬಹುದು. ಆಗ ಅದನ್ನು ಅದರ ಪಾಡಿಗೆ ಅದು ಹೋಗಲು ಬಿಡಿ. ನಿಮ್ಮ ಜೊತೆ ಯಾರಾದರು ಕೆಟ್ಟದಾಗಿ ನಡೆದುಕೊಂಡರೆ, ಅವನಿಗು ಸಹ ಕೆಟ್ಟ ಮೂಡ್ ಭಾದಿಸಿದೆ ಎಂದು ಅರ್ಥ ಮಾಡಿಕೊಳ್ಳಿ. ನೀವು ತಪ್ಪು ಮಾಡಿದಿರಿ ಎಂದು ಆತ ನಿಮ್ಮ ಮೇಲೆ ರೇಗಿಲ್ಲ, ಬದಲಿಗೆ ಆತನಿಗೆ ತನ್ನದೆ ಆದ ಸಮಸ್ಯೆಗಳು ಇದ್ದವು ಅದಕ್ಕೆ ಆತ ನಿಮ್ಮ ಮೇಲೆ ರೇಗಿದ ಎಂದು ಭಾವಿಸಿಕೊಳ್ಳಿ.

ಇಮೇಲ್ ಬರೆಯಲು ಹೋಗಬೇಡಿ
ಒಂದು ವೇಳೆ ನೀವು ಕೆಲಸದ ಸ್ಥಳದಲ್ಲಿ ಕೆಟ್ಟ ಮೂಡ್ ಅಥವಾ ಕೋಪಕ್ಕೆ ತುತ್ತಾದರೆ, ಯಾವುದೇ ಕಾರಣಕ್ಕು ಇಮೇಲ್ ಬರೆಯಲು ಹೋಗಬೇಡಿ. ಸ್ವಲ್ಪ ಹೊರಗೆ ಸಣ್ಣ ವಾಕ್ ಅಥವಾ ಕಾಫಿ ಸೇವಿಸಲು ಹೋಗಿ ಬನ್ನಿ. ಏಕೆಂದರೆ ಈ ಸನ್ನಿವೇಶದಲ್ಲಿ ಇಮೇಲ್ ಬರೆದರೆ, ನೀವು ಮತ್ತಷ್ಟು ತೊಂದರೆಗೆ ಸಿಕ್ಕಿಹಾಕಿಕೊಳ್ಳುವುದರಲ್ಲಿ ಸಂಶಯವಿಲ್ಲ. ಏಕೆಂದರೆ ಇಮೇಲ್ ಅನ್ನು ಒಮ್ಮೆ ಕಳುಹಿಸಿದರೆ ಅದನ್ನು ಪುನಃ ಹಿಂದಕ್ಕೆ ತೆಗೆದುಕೊಳ್ಳಲು ಆಗುವುದಿಲ್ಲ.



Click it and Unblock the Notifications