Latest Updates
-
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ
ನಿಮ್ಮನ್ನು ನೀವೇ ಅಗೌರವದಿಂದ ಕಾಣುವ ಲಕ್ಷಣಗಳು
ಮಾನವರಲ್ಲಿ ಹಲವಾರು ಗುಣಗಳು ಅಡಕವಾಗಿರುತ್ತವೆ. ನಮ್ಮ ಕೈಯ ಬೆರಳುಗಳು ಹೇಗೆ ಸಮಾನವಾಗಿಲ್ಲವೋ ಅಂತೆಯೇ ನಾವು ಮನುಷ್ಯರೂ ವಿಭಿನ್ನ ಗುಣಗಳನ್ನು ಪ್ರತ್ಯೇಕ ಸ್ವಭಾವವನ್ನು ಹೊಂದಿದವರಾಗಿರುತ್ತೇವೆ. ಈ ಸ್ವಭಾವೇ ನಮ್ಮನ್ನು ಬೇರೆಯವರಿಂದ ಪ್ರತ್ಯೇಕವಾಗಿರಿಸಬಹುದು. ಇನ್ನು ಕೆಲವರಿಗೆ ನಮ್ಮ ಗುಣ ಹಿಡಿಸದೇ ಕೂಡ ಇರಬಹುದು ಆದರೆ ಬೇರೆಯವರಿಗಾಗಿ ನಾವು ಬದುಕದೇ ನಮಗಾಗಿ ನಾವು ಬದುಕಬೇಕು. ನಮ್ಮನ್ನು ನಾವು ಗೌರವಿಸುವ ಗುಣ ಮತ್ತು ಪ್ರೀತಿಸುವ ಗುಣವನ್ನು ನಾವು ಹೊಂದಿರಬೇಕಾದ್ದು ಅತ್ಯಗತ್ಯವಾಗಿದೆ.
ನಿಮ್ಮನ್ನು ನೀವು ಗೌರವಿಸಿದರೆ ಇನ್ನೊಬ್ಬರು ನಿಮ್ಮನ್ನು ಗೌರವಿಸುತ್ತಾರೆ ಎಂಬುದನ್ನು ಅರಿತುಕೊಳ್ಳಿ. ನಿಮ್ಮ ಗೌರವದ ಮೇಲೆ ನಿಮ್ಮ ಸಂತೋಷವಿದೆ ಎಂಬುದನ್ನು ಮಾತ್ರ ಮರೆಯಬೇಡಿ. ನಿಮ್ಮ ಬಗ್ಗೆ ಗೌರವ ತಾಳಿ ಇನ್ನೊಬ್ಬರಿಗೂ ಗೌರವ ನೀಡಿ ಮತ್ತು ಸಂತಸಭರಿತ ಸುಖಭರಿತ ಜೀವನವನ್ನು ಕಳೆಯಿರಿ. ನಿಮ್ಮ ಬೆಲೆಯನ್ನು ಮೊದಲು ನೀವು ತಿಳಿದುಕೊಂಡಾಗ ಮಾತ್ರವೇ ಇನ್ನೊಬ್ಬರಿಗೂ ನೀವು ಆಪ್ತರಾಗುತ್ತೀರಿ ಎಂಬುದನ್ನು ನೆನಪಿಡಿ. ಹಾಗಿದ್ದರೆ ಈ ಅಂಶಗಳನ್ನು ನಿಮ್ಮಲ್ಲಿ ಮೈಗೂಡಿಸಿಕೊಳ್ಳುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಲಿದ್ದೇವೆ.

ಇತರರೊಂದಿಗೆ ಅಂಗೀಕರಿಸುವುದು
ನಿಮಗೆ ಇಷ್ಟವಿದ್ದಾಗ ಮಾತ್ರವೇ ವ್ಯಕ್ತಿಯ ದೃಷ್ಟಿಕೋನವನ್ನು ಒಪ್ಪಿಕೊಳ್ಳಿ. ನೀವು ಸುಮ್ಮನೆ ಯೋಚನೆ ಮಾಡದೇ ಎಲ್ಲದಕ್ಕೂ ತಲೆ ಅಲ್ಲಾಡಿಸುವುದು ನಿಮ್ಮಲ್ಲಿ ಯಾವುದೇ ಅಭಿಪ್ರಾಯಗಳಿಲ್ಲ ಎಂಬುದನ್ನು ಸೂಚಿಸುತ್ತದೆ. ಅಲ್ಲದೇ ನಿಮ್ಮನ್ನು ನೀವೇ ಗೌರವಿಸುತ್ತಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.

ಇತರರ ಹೇಳಿಕೆಗಳನ್ನು ಅನುಸರಿಸುವುದು
ಕೆಲವೊಂದು ಹೇಳಿಕೆಗಳನ್ನು ಕುರಿತು ನಿಮ್ಮ ಅಭಿಪ್ರಾಯಗಳನ್ನು ನೀವು ಹೊಂದುವುದು ಅತ್ಯವಶ್ಯಕವಾಗಿದೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂಬುದರ ಅರಿವು ನಿಮಗಿರಬೇಕು. ಇನ್ನೊಬ್ಬರ ಉಪದೇಶಗಳನ್ನು ಅನುಸರಿಸುವುದು ಒಳ್ಳೆಯದು ಆದರೆ ಕಣ್ಣುಮುಚ್ಚಿಕೊಂಡು ಅದನ್ನು ಅನುಸರಿಸುವುದು ಒಳ್ಳೆಯದಲ್ಲ.

ನಿಮ್ಮ ಭಾವನೆಗಳನ್ನು ಮುಚ್ಚಿಟ್ಟುಕೊಳ್ಳುವುದು
ನಿಮ್ಮ ಮನದಲ್ಲಿ ಏನಿದೆ ಎಂಬುದನ್ನು ತೋರ್ಪಡಿಸಿಕೊಳ್ಳುವುದು ಉತ್ತಮವೇ. ನಿಮ್ಮ ಭಾವನೆಗಳನ್ನು ಇತರರು ಅರ್ಥಮಾಡಿಕೊಳ್ಳುವುದಿಲ್ಲ ಎಂದಾದಲ್ಲಿ ನೀವು ಅವರಿಗೆ ಎಂಥವರು ಎಂಬುದನ್ನು ತೋರಿಸಿಕೊಡಿ. ತೋರ್ಪಡಿಸಿಕೊಳ್ಳುವಾಗ ನಯವಾಗಿರಿ. ನಿಮ್ಮ ಬಗ್ಗೆ ಅಗೌರವ ತಾಳದಿರಿ.

ನಿಮ್ಮಿಂದ ಆಗುವುದಿಲ್ಲ ಎಂಬುದನ್ನು ಒಪ್ಪಿಕೊಳ್ಳದೇ ಇರುವುದು
ಕೆಲವೊಮ್ಮೆ ಮೆಚ್ಚುಗೆಗಳನ್ನು ಪಡೆದುಕೊಳ್ಳಲು, ಮತ್ತೊಬ್ಬರ ಎದುರಿಗೆ ನಾವು ನಮ್ಮ ನಡವಳಿಕೆಗಳನ್ನು ಮುಚ್ಚಿಟ್ಟು ನಡೆದುಕೊಳ್ಳುತ್ತೇವೆ. ನಿಮ್ಮನ್ನು ನೀವು ಅಗೌರವದಿಂದ ಕಾಣುವ ಗುಣ ಇದಾಗಿದೆ. ನಿಮ್ಮನ್ನು ನೀವು ಒಪ್ಪಿಕೊಳ್ಳದೇ ಇರುವುದು ಮತ್ತು ಅವಮಾನಿತರಾಗುವುದು ಇದರಿಂದ ಸಂಭವಿಸುತ್ತದೆ.

ಇತರರಿಗಾಗಿ ಬದುಕುವುದು
ನಿಮ್ಮ ಬಗ್ಗೆ ನೀವು ಯೋಚಿಸದೇ ಇತರರ ಸುಖ ಸಂತೋಷದ ಬಗ್ಗೆ ಅರಿತುಕೊಳ್ಳುವುದು ನಿಮ್ಮನ್ನು ನೀವು ಅಗೌರವಿಸಿದಂತೆ. ಅವರ ದುಃಖ ಮತ್ತು ಸಂತೋಷವನ್ನು ಕುರಿತು ನೀವು ಕಾಳಜಿವಹಿಸುವುದು ಉತ್ತಮ ವಿಚಾರವೇ. ಜೊತೆಗೆ ನಿಮ್ಮ ಬಗ್ಗೆ ಕೂಡ ನೀವು ಕಾಳಜಿಯನ್ನು ವಹಿಸಬೇಕು. ಯಾವಾಗಲೂ ಇತರರ ಸಂತಸಕ್ಕಾಗಿ ನಿಮ್ಮ ಸಂತಸವನ್ನು ಮರೆತುಬಿಡಬೇಡಿ.

ಕೆಟ್ಟ ಜನರ ಸಹವಾಸ
ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳದವರು ಮತ್ತು ನಿಮ್ಮನ್ನು ಅಗೌರವದಿಂದ ಕಾಣುವವರ ಗೆಳೆತನದಿಂದ ಆದಷ್ಟು ದೂರವಿರಿ. ಅವರ ಮಾತುಗಳನ್ನು ನೀವು ಯಾವಾಗಲೂ ಕೇಳುತ್ತಾ ಸ್ವತಃ ನೀವಾಗಿಯೇ ಆಲೋಚಿಸುವ ಗುಣವನ್ನು ನೀವು ಕಳೆದುಕೊಳ್ಳಬಹುದು. ನಿಮ್ಮಂತೆಯೇ ಗುಣವಿರುವ ನಿಮ್ಮಂತೆಯೇ ಯೋಚಿಸುವ ಜನರ ಸ್ನೇಹವನ್ನು ಮಾಡಿ ಅವರೊಂದಿಗಿರಿ. ನೀವು ಯಾವಾಗಲೂ ಇತರರಿಗೆ ಲಭ್ಯವಿರುವಂತೆ ನಿಮ್ಮನ್ನು ಮಾಡಿಕೊಳ್ಳದಿರಿ. ಕೆಟ್ಟ ಜನರ ಸ್ನೇಹವನ್ನು ಮಾಡುವುದರ ಬದಲಿಗೆ ನೀವು ಒಬ್ಬಂಟಿಯಾಗಿರುವುದು ಎಷ್ಟೋ ಮೇಲು.

ಇನ್ನೊಬ್ಬರಿಗೆ ಹೌದು ಎಂದು ಸಮ್ಮತಿಸುವುದು
ಇನ್ನೊಬ್ಬರೊಂದಿಗೆ ಹೆಚ್ಚು ಆಪ್ತರಾಗಿರುವುದು ಅವಗುಣಗಳನ್ನು ಹೊಂದಿದೆ. ನೀವು ಇತರರಿಗೆ ಯೆಸ್ ಎಂದು ಹೇಳುವಾಗ, ನಿಮ್ಮಷ್ಟಕ್ಕೆ ಇಲ್ಲ ಎಂದು ನೀವು ಹೇಳಿಕೊಳ್ಳುತ್ತೀರಿ. ಆದ್ದರಿಂದ ಮತ್ತೊಬ್ಬರೊಂದಿಗೆ ಹೆಚ್ಚು ಸರಳತೆಯಿಂದ ವರ್ತಿಸಬೇಡಿ ಮತ್ತು ಇದರಿಂದ ನಿಮ್ಮ ಬೆಲೆಯನ್ನು ನೀವು ಕಳೆದುಕೊಳ್ಳಂತೆ.



Click it and Unblock the Notifications











