Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಾಕ್ಷಾತ್ ದೇವತೆಗಳಂತೆಯೇ ಕಂಗೊಳಿಸಿದ ಸೆಲೆಬ್ರಿಟಿಗಳು!
ನವದೆಹಲಿಯಲ್ಲಿ ನಡೆಯುತ್ತಿರುವ IIJW 2015 (India International Jewellery Week 2015) ಪ್ರದರ್ಶನದ ಮೂರನೆಯ ದಿನದಂದು ಸಾಕಷ್ಟು ಬಾಲಿವುಡ್ ಮತ್ತು ಟೀವಿ ನಟನಟಿಯರು ಆಗಮಿಸಿದ್ದು ವಾತಾವರಣಕ್ಕೆ ಕಳೆಯೇರಿಸಿತ್ತು. ಅವರಲ್ಲಿ ಹಲವರು ಪ್ರಮುಖ ವಿನ್ಯಾಸಕಾರರ ಪ್ರತಿಭೆಯನ್ನು ವೇದಿಕೆಯಲ್ಲಿ ಪ್ರದರ್ಶನ ಕೂಡಾ ಮಾಡಿದರು.
ಮೂರನೆಯ ದಿನ ಡಿಯೋಸಾ ಮತ್ತು ಸ್ವರೋಸ್ಕಿ ಜೆಮ್ ಸ್ಟೋನ್ಸ್ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ನಡೆದ ಪ್ರದರ್ಶನದಲ್ಲಿ ಮಿಸ್ ಇಂಡಿಯಾ ಸುಶ್ರೀ ಶ್ರೇಯಾ ಮಿಶ್ರಾ ಮತ್ತು ಖ್ಯಾತ ರೂಪದರ್ಶಿ ಉಜ್ವಲಾ ರಾವುತ್ ಮತ್ತು ಇನ್ನೋರ್ವ ತಾರೆ ಸೋಫಿ ಚೌಧುರಿಯವರು ಡಿಯೋಸಾದ ಆಭರಣಗಳು ಸೇರಿದಂತೆ ವಿವಿಧ ಆಭರಣ ಮತ್ತು ಉಡುಗೆಗಳನ್ನು ವೇದಿಕೆಯಲ್ಲಿ ಪ್ರದರ್ಶಿಸಿದರು.
ಡಿಯೋಸಾ ಎಂದರೆ ಲ್ಯಾಟಿನ್ ಭಾಷೆಯಲ್ಲಿ 'ದೇವತೆ' ಎಂಬ ಅರ್ಥವಿದೆ. ಈ ಪ್ರದರ್ಶನದಲ್ಲಿ ಡಿಯೋಸಾ ಆಭರಣಗಳನ್ನು ಧರಿಸಿದ ಈ ಸೌಂದರ್ಯವತಿಯರು ಸಾಕ್ಷಾತ್ ದೇವತೆಗಳಂತೆಯೇ ಗೋಚರಿಸಿದರು.

ಇಂದಿನ ಪ್ರದರ್ಶನದಲ್ಲಿ ಅತ್ಯಂತ ಹೆಚ್ಚು ಗಮನ ಸೆಳೆದವರೆಂದರೆ ಡಿಯೋಸಾ ಆಭರಣಗಳನ್ನು ತೊಟ್ಟ ಸೋಫಿ ಚೌಧುರಿ. ಖ್ಯಾತ ಉಡುಪು ವಿನ್ಯಾಸಗಾರರಾದ ಗೌರಿ ಮತ್ತು ನೈನಿಕಾರವರು ವಿನ್ಯಾಸಗೊಳಿಸಿದ್ದ ಮರ್ಮೇಡ್ ನೀಳುಡುಗೆಯಲ್ಲಿ ಅವರು ಸಾಕ್ಷಾತ್ ಓರ್ವ ದೇವತೆಯಂತೆ ಕಂಡುಬಂದರು.
ಈ ಎಮರಾಲ್ಡ್ ಹಸಿರು ಬಣ್ಣದ ನೀಳುಡುಗೆ ದೇಹದ ಮೇಲ್ಭಾಗವನ್ನು ಅಪ್ಪಿ ಹಿಡಿದಿದ್ದರೆ ಕೆಳಭಾಗ ಮೊಣಕಾಲಿನವರೆಗೂ ನವಿರಾಗಿ ಅಪ್ಪಿದಂದಿದ್ದು ಮೊಣಕಾಲ ಬಳಿಕ ಥಟ್ಟನೇ ಸಡಿಲವಾದಂತೆ ತೋರುತ್ತಿದೆ. ಫಿಶ್ ಕಟ್ ಎಂಬ ಶೈಲಿಯ ಈ ಉಡುಗೆ ಸೋಫಿಯವರ ಮೈಮಾಟವನ್ನು ಅತ್ಯಂತ ಸಮರ್ಪಕವಾಗಿ ತೋರುತ್ತಾ ಅವರ ಬಿನ್ನಾಣಕ್ಕೆ ಹೆಚ್ಚಿನ ಮಹತ್ವ ನೀಡುವಂತಿತ್ತು.
ಬಹುತೇಕ ಭುಜ ತೆರೆದಿದ್ದರೂ ಎಡಸೊಂಟದಿಂದ ದೇಹವನ್ನಾವರಿಸಿ ಮೇಲೇರಿದ ಅಲೆಯಂತೆ ಅಗಲವಾದ ಪಟ್ಟಿಯೊಂದು ಬಲಭುಜದ ತುದಿಯಲ್ಲಿ ಮೇಲೆ ಹಾರಿ ಸಮುದ್ರದ ಅಲೆ ಈಗಿನ್ನೇನು ಕೆಳಸರಿಯುತ್ತಿರುವ ಹಂತದಲ್ಲಿರುವಂತೆ ವಿನ್ಯಾಸಗೊಳಿಸಿದ ಗೌರಿ ಮತ್ತು ನೈನಿಕಾ ಪ್ರಶಂಸೆಗೆ ಅರ್ಹರಾಗಿದ್ದಾರೆ. ಐಐಜೆಡಬ್ಲ್ಯೂ: ಗ್ಲಾಮರಸ್ ಲುಕ್‌ನಲ್ಲಿ ಸೋಹಾ ಅಲಿ ಖಾನ್
ಕಿರೀಟವಿಲ್ಲದ ದೇವತೆಯನ್ನು ಊಹಿಸಲು ಸಾಧ್ಯವೇ? ಅಂತೆಯೇ ಇಂದಿನ ದಿನ ಪ್ರಕಟಗೊಂಡ ದೇವತೆಯ ತಲೆಯ ಮೇಲೆಯೂ ಒಂದು ವಜ್ರಖಚಿತ, ಸರಳ ಆದರೆ ಸುಂದರವಾದ ಕಿರೀಟವಿತ್ತು.
ಎಡಗೈಗೆ ಸರದ ಪದಕದ್ದೇ ಬಣ್ಣದ ಹರಳುಗಳಿರುವ ಬ್ರೇಸ್ಲೆಟ್ ಮತ್ತು ಬಲಗೈಗೆ ಅದೇ ಬಣ್ಣದ ಭಾರೀ ಗಾತ್ರದ ಹರಳಿರುವ ಒಂದೇ ಉಂಗುರ ಅವರ ಸೌಂದರ್ಯಕ್ಕೆ ಪುಟವಿಟ್ಟಿತ್ತು.ಈ ಉಡುಗೆಗೆ ಪೂರಕವಾಗಿ ಅವರ ತಲೆಗೂದಲ ಶೈಲಿಯೂ ಬಲಬದಿಗೆ ಅಲೆಯಲೆಯಾಗಿ ಹೊರಳಿದಂತಿತ್ತು ಮತ್ತು ನವಿರಾದ ಹೊಗೆಯಂತಿದ್ದ ಮುಖದ ಮತ್ತು ಕಣ್ಣಿನ ಮೇಕಪ್ ಅವರ ಸೌಂದರ್ಯವನ್ನು ಪೂರ್ಣಗೊಳಿಸಿತ್ತು.



Click it and Unblock the Notifications

