For Quick Alerts
ALLOW NOTIFICATIONS  
For Daily Alerts

ಚುಂಬನದ ಹಿಂದಿರುವ ಇಂಟರೆಸ್ಟಿಂಗ್ ಸಂಗತಿ

By Hemanth
|

ಜೀವನದಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ಸಮಯದಲ್ಲಿ ಪ್ರೀತಿಯಲ್ಲಿ ಸಿಲುಕುತ್ತಾರೆ. ಆಧುನಿಕ ಯುಗದಲ್ಲಿ ಪ್ರೀತಿಗೆ ಬೆಲೆ ಕಡಿಮೆಯಾಗುತ್ತಿದ್ದರೂ ಕೆಲವರು ಮಾತ್ರ ನೈಜ ಪ್ರೀತಿಯಲ್ಲಿ ತೊಡಗಿರುತ್ತಾರೆ. ಪ್ರೀತಿ ಎಂದರೆ ಅದರಲ್ಲಿನ ಆಕರ್ಷಣೆಯೇ ಬೇರೆ. ಅದು ಆಯಸ್ಕಾಂತದಂತೆ. ಕೇವಲ ಹುಡುಗ ಹುಡುಗಿ ಮಧ್ಯೆ ಮಾತ್ರ ಪ್ರೀತಿ ಮೂಡುವುದಲ್ಲ. ಸೋದರ-ಸೋದರಿ, ತಾಯಿ-ಮಕ್ಕಳು, ತಂದೆ-ಮಕ್ಕಳ ಮಧ್ಯೆ ಕೂಡ ಪ್ರೀತಿ ಇದ್ದೇ ಇರುತ್ತದೆ.

ಆದರೆ ಯುವಕ ಮತ್ತು ಯುವತಿ ನಡುವೆ ಮೂಡುವ ಪ್ರೀತಿಯಲ್ಲಿ ಆ ಮೊದಲ ಸಲದ ಚುಂಬನಕ್ಕೆ ತನ್ನದೇ ಆದಂತಹ ಆಕರ್ಷಣೆಯಿದೆ. ಇದು ತುಂಬಾ ಭೀತಿ,ಸುಖದಾಯಕ ಹಾಗೂ ಅದ್ಭುತವಾಗಿರುತ್ತದೆ. ಇದೇ ವೇಳೆ ಚುಂಬನವು ಕೆಲವೊಂದು ಸ್ಪರ್ಶಿಕ ಅನುಭವವನ್ನು ನೀಡುತ್ತದೆ. ಈ ಆಟವು ನಿಮ್ಮಲ್ಲಿ ಪ್ರೀತಿಯನ್ನು ಉಂಟು ಮಾಡುತ್ತದೆಯಾ ಅಥವಾ ಇಲ್ಲವಾ ಎನ್ನುವುದನ್ನು ತಿಳಿಸುತ್ತದೆ.

Shocking Kissing Facts That You Never Knew

ಕೆಲವೊಂದು ಚುಂಬನದ ರಹಸ್ಯದ ಬಗ್ಗೆ ನಿಮಗೆ ತಿಳಿಯದೇ ಇರಬಹುದು. ನಾವು ಇದರ ಬಗ್ಗೆ ತಿಳಿಯಲು ನಿಮಗೆ ನೆರವಾಗಲಿದ್ದೇವೆ. ವಿಶ್ವದೆಲ್ಲೆಡೆ ಇರುವ ಚುಂಬನವು ಕೇವಲ ಪ್ರೀತಿ ವ್ಯಕ್ತಪಡಿಸುವ ಒಂದು ಮಾರ್ಗವೇ ಹೊರತು ಇದರಿಂದ ಗರ್ಭಧಾರಣೆಯಾಗುವುದಿಲ್ಲ. ಆದರೆ ಎಚ್ಚರಿಕೆಯಿಂದ ಇರಬೇಕಾದ ವಿಷಯವೆಂದರೆ ನಿಮ್ಮ ತುಟಿ ಮತ್ತು ಬಾಯಿಯಲ್ಲಿ ಗಾಯಗಳಿದ್ದರೆ ಆಗ ಇದರಿಂದ ಲೈಂಗಿಕ ರೋಗಗಳು ಬರಬಹುದು. ನೀವೀಗ ಚುಂಬನಕ್ಕಾಗಿ ಹಾತೊರೆಯುತ್ತಾ ಇರಬಹುದು. ಆದರೆ ಅದನ್ನು ಸ್ವಲ್ಪ ಸಮಯ ಹದ್ದುಬಸ್ತಿನಲ್ಲಿಡಿ. ಈಗ ನೀವು ಕಿಸ್ಸಿಂಗ್‌ನ (ಚುಂಬನ) ಕೆಲವೊಂದು ಆಘಾತಕಾರಿ ಅಂಶಗಳ ಬಗ್ಗೆ ತಿಳಿದುಕೊಳ್ಳಿ. ಮುಂದೆ ಓದಿ. ಚುಂಬನ ಪರೀಕ್ಷೆಯಲ್ಲಿ ಪಾಸಾಗಲು ಇಲ್ಲಿದೆ 15 ಸಲಹೆಗಳು!

ಕಿಸ್ಸಿಂಗ್‌ನಿಂದ ಆರೋಗ್ಯ ಲಾಭ
ನೀವು ಈಗಲೂ ಹೇಗೆ ಕಿಸ್ ಮಾಡಬೇಕೆಂದು ಚಡಪಡಿಸುತ್ತಾ ಇದ್ದೀರಾ? ಆದಷ್ಟು ಬೇಗ ನೀವು ಚುಂಬಿಸಲು ತಯಾರಾಗಿ. ಯಾಕೆಂದರೆ ಚುಂಬನದಿಂದ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ. ಇದು ನಿಮ್ಮ ಹಲ್ಲುಗಳಿಗೆ ತುಂಬಾ ಒಳ್ಳೆಯದು ಮತ್ತು ನಿಮ್ಮ ಜತೆಗಾರ ದೂರು ನೀಡುವ ಮೈಗ್ರೇನ್ ನಿಂದ ಉಪಶಮನ ನೀಡುತ್ತದೆ. ಇದು ನಿಮ್ಮ ಯೌವನವನ್ನು ಹೆಚ್ಚಿಸುತ್ತದೆ.

ಇದೊಂದು ಸುಖಕರ ಅನುಭವ
ಒಂದು ಸುಖಕರ ಅನುಭವವಾಗಿರುವ ಕಿಸ್ಸಿಂಗ್ ವೇಳೆ ಸುಮಾರು 1500 ಕ್ಯಾಲರಿಯನ್ನು ದಹಿಸಲ್ಪಡುತ್ತದೆ. ಕಿಸ್ಸಿಂಗ್ ಮಾಡುವ ವಿಧಾನಗಳ ಬಗ್ಗೆ ಮಾತನಾಡುವುದಾದರೆ ಫ್ರೆಂಚ್ ಕಿಸ್ಸಿಂಗ್ ನಿಂದ ನಿಮ್ಮ ಮುಖದ ಮೇಲಿರುವ ಸುಮಾರು 34 ಸ್ನಾಯುಗಳು ಚಟುವಟಿಕೆಯಲ್ಲಿ ತೊಡಗುತ್ತದೆ. ಇದು ನಿಮ್ಮ ಮುಖಕ್ಕೆ ಒಳ್ಳೆಯ ಅನುಭವ.

ಕಿಸ್ಸಿಂಗ್‌ಗೆ ದಾಸರಾಗುವುದು!
ಕಿಸ್ಸಿಂಗ್ ನ ಮತ್ತೊಂದು ಆಘಾತಕಾರಿ ಅಂಶವೆಂದರೆ ಇದು ಡ್ರಗ್ಸ್‌ನ ರೀತಿಯಲ್ಲಿ ಕೆಲಸ ಮಾಡುತ್ತದೆ. ಕಿಸ್ ಮಾಡುವ ವೇಳೆ ಬಿಡುಗಡೆಯಾಗುವ ಎಂಡ್ರೊಪಿನ್ಸ್ ಎನ್ನುವ ರಾಸಾಯನಿಕವು ಮೊರ್ಪಿನೆ ಎನ್ನುವ ಡ್ರಗ್ ಗಿಂತ ಪ್ರಭಾವಶಾಲಿ. ಕಿಸ್ಸಿಂಗ್ ನಿಮಗೆ ಚಟವಾಗಬಹುದು. ಆದರೆ ಈ ಚಟವನ್ನು ಯಾರೂ ವಿರೋಧಿಸುವುದಿಲ್ಲ ಮತ್ತು ಇದಕ್ಕೆ ಕಾನೂನಿನ ಅಡ್ಡಿಯೂ ಇಲ್ಲ.

ಕಿಸ್ಸಿಂಗ್‌ನ ವಿಜ್ಞಾನ
ನಾವು ಯಾಕೆ ಕಿಸ್ ಮಾಡುತ್ತೇವೆಂದು ಯಾರಿಗೂ ತಿಳಿದಿರುವುದಿಲ್ಲ. ಕಿಸ್ ಬಗ್ಗೆ ನಮಗೆ ತಿಳುವಳಿಕೆಯನ್ನು ಉಂಟುಮಾಡುವ ಅಂಶವೆಂದರೆ ಫಿಲೆಮ್ಯಾಥಾಲಜಿ. ಕಿಸ್ಸಿಂಗ್ ಮಾಡುವ ಭಯವನ್ನು ಫಿಲೆಮಫೋಬಿಯಾ ಎನ್ನಲಾಗುತ್ತದೆ. ಲೈಂಗಿಕ ಶೋಷಣೆ ಅಥವಾ ಇತರ ಕಾರಣಗಳಿಂದಾಗಿ ಈ ಭಯ ಉಂಟಾಗಬಹುದು.

ತುಟಿಗಳು ತುಂಬಾ ಸೂಕ್ಷ್ಮ
ತುಟಿಯಲ್ಲಿ ನೂರಾರು ನರಗಳು ಅಂತ್ಯಗೊಳ್ಳುತ್ತದೆ. ನಿಮ್ಮ ಪ್ರಿಯತಮ ಅಥವಾ ಪ್ರಿಯತಮೆಗೆ ಕಿಸ್ ಮಾಡಿದಾಗ ಇಲ್ಲಿರುವಂತಹ ನರಗಳು ದೇಹದ ಎಲ್ಲಾ ಭಾಗಗಳಲ್ಲಿ ಚಲನೆಯನ್ನು ಉಂಟುಮಾಡುತ್ತದೆ. ಈ ಕಿಸ್ಸಿಂಗ್ ಸತ್ಯದ ಬಗ್ಗೆ ನಿಮಗೆ ತಿಳಿದಿರಲಿಕ್ಕಿಲ್ಲ.

ಪುರುಷರು ಮತ್ತು ಮಹಿಳೆಯರ ವರ್ತನೆ
ಒಳ್ಳೆಯ ರೀತಿ ಕಿಸ್ ಮಾಡದ ವ್ಯಕ್ತಿಯೊಂದಿಗೆ ಮಹಿಳಯರು ಸೆಕ್ಸ್ ಮಾಡಲು ಇಷ್ಟಪಡುವುದಿಲ್ಲವಂತೆ. ಸೆಕ್ಸ್ ಗೆ ಮೊದಲು ಪುರುಷರು ಕಿಸ್ ಮಾಡಲು ಬಯಸುತ್ತಾರೆ. ಅದೇ ಮಹಿಳೆಯರು ಸೆಕ್ಸ್ ಬಳಿಕ ಕೂಡ ಕಿಸ್ ಮಾಡಬೇಕೆಂದು ಹಂಬಲಿಸುತ್ತಾರೆ. ಪುರುಷರು ಮತ್ತು ಮಹಿಳೆಯರ ಮನೋವಿಜ್ಞಾನವನ್ನು ಅಧ್ಯಯನ ಮಾಡಿದ ಬಳಿಕ ತಿಳಿದುಬಂದ ಅಂಶವೆಂದರೆ ಪುರುಷರು ಸೆಕ್ಸ್ ಬಳಿಕ ಸುಮ್ಮನೆ ಇರುತ್ತಾರೆ. ಆದರೆ ಮಹಿಳೆಯರು ಸೆಕ್ಸ್ ಅವಧಿ ಕೊನೆಗೊಂಡ ಬಳಿಕವೂ ಪ್ರೀತಿಯಲ್ಲಿ ತೊಡಗಿರಬೇಕೆಂದುಉ ಬಯಸುತ್ತಾರೆ.

English summary

Shocking Kissing Facts That You Never Knew

Remember that first time when you kissed and it felt so weird, awesome and magical at the same time? Kissing can be a sensual experience. It determines if the foreplay will lead to lovemaking or not. There are some kissing facts you never knew. We will help you with that. Kissing is practiced worldwide, perhaps much more than lovemaking,
Story first published: Monday, July 6, 2015, 19:08 [IST]
X
Desktop Bottom Promotion