Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಚ್ಚರಿಗೊಳಿಸುವ ಬರ್ಮುಡಾ ಟ್ರಯಾಂಗಲ್‌ನ ನಿಗೂಢ ರಹಸ್ಯ!
ಡೆವಿಲ್ಸ್ ಟ್ರಯಾಂಗಲ್ (ಭೂತಗಳ ತ್ರಿಕೋನ) ಎಂದೂ ಕರೆಯಲ್ಪಡುವ ಬರ್ಮುಡಾ ಟ್ರಯಾಂಗಲ್ ಹಲವು ವರ್ಷಗಳಿಂದ ತನ್ನ ನಿಗೂಢತೆಯ ಕಾರಣ ಜಗತ್ತಿನ ಕುತೂಹಲಕ್ಕೆ ಕಾರಣವಾಗಿದೆ. ಅಟ್ಲಾಂಟಿಕ್ ಮಹಾಸಾಗರದ ನಕ್ಷೆಯನ್ನು ಹರಡಿ ಫ್ಲೋರಿಡಾದಿಂದ ಬರ್ಮುಡಾ ದ್ವೀಪಗಳು, ಅಲ್ಲಿಂದ ಪ್ಯೂರ್ಟೋ ರೀಕೋ ಮತ್ತು ಅಲ್ಲಿಂದ ತಿರುಗಿ ಫ್ಲೋರಿಡಾ ಪ್ರದೇಶವನ್ನು ಮೂರು ಸರಳ ರೇಖೆಗಳಿಂದ ಮೂಡಿದ ತ್ರಿಕೋನಾಕೃತಿಯ ನಡುವಣ ಭಾಗವೇ ಬರ್ಮುಡಾ ಟ್ರಯಾಂಗಲ್ ಎಂಬುದು ಪ್ರಖ್ಯಾತವಾದ ಪ್ರದೇಶ.
ಇದು ಯಾಕೆ ಅಷ್ಟು ಪ್ರಸಿದ್ಧಿ ಪಡೆದಿದೆ ಎಂಬ ಮಾಹಿತಿಗೆ ಇಲ್ಲಿ ಕಳೆದುಹೋದ ಹಡಗು ಮತ್ತು ವಿಮಾನಗಳ ಬಗ್ಗೆ ಹಲವಾರು ಕಥೆಗಳು ಕೇಳಿಬರುತ್ತವೆ. ಆದರೆ ವಾಸ್ತವವಾಗಿ ಈ ನಿಗೂಢತೆಗೆ ಸೂಕ್ತ ಉತ್ತರ ಇನ್ನೂ ನಿಖರವಾದ ಅಳತೆಯ ಪ್ರದೇಶದಲ್ಲಿದೆ. ಉತ್ತರ ಅಟ್ಲಾಂಟಿಕ್ ಸಾಗರದಲ್ಲಿರುವ ಬರ್ಮುಡಾ ದ್ವೀಪಗಳಿಂದ ಯು.ಎಸ್.ಎ ದೇಶದ ಮಿಯಾಮಿ, ಅಲ್ಲಿಂದ ಪ್ಯೂರ್ಟೋ ರೀಕೋ ನಂತರ ಮತ್ತೆ ಬರ್ಮುಡಾಕ್ಕೆ ಎಳೆದ ರೇಖೆಗಳ ನಡುವಣ ಪ್ರದೇಶದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹಡಗುಗಳು ಮತ್ತು ವಿಮಾನಗಳು ಮಾಯವಾಗಿವೆ. ಇದಕ್ಕೆ ಕಾರಣಗಳನ್ನು ಹುಡುಕ ಹೊರಟವರಿಗೆ ವೈಜ್ಞಾನಿಕ ಸತ್ಯಕ್ಕಿಂತ ಕಟ್ಟುಕಥೆಗಳ ಕಂತೆಯೇ ಪುಂಖಾನುಪುಂಖವಾಗಿ ದೊರಕಿದೆ. ಜ್ಞಾನವನ್ನು ಒರೆಗೆ ಹಚ್ಚುವ ಅಚ್ಚರಿಯ ಸಂಗತಿಗಳು
ಬರ್ಮುಡಾ ಟ್ರಯಾಂಗಲ್ ಬಗ್ಗೆ 1964ರಲ್ಲಿ ಅರ್ಗೋಸಿ ಪತ್ರಿಕೆಯ ಮೂಲಕ ವಿನ್ಸೆಂಟ್ ಹೆಚ್ ಗಾಡ್ಡಿಸ್ ಎಂಬುವರು ಬರೆದ ಲೇಖನಗಳ ಮೂಲಕ ವಿಶ್ವದ ಗಮನ ಸೆಳೆಯಿತು. ಈ ಲೇಖನಗಳಲ್ಲಿ ಗಾಡ್ಡಿಸ್ ಕಾಣೆಯಾದ ಹಡಗುಗಳ ಬಗ್ಗೆ ಉಲ್ಲೇಖಿಸಿ ಇದಕ್ಕೆ ಕಾರಣ ತಮಗೆ ತಿಳಿಯದು ಎಂದು ಪ್ರಕಟಿಸಿದ್ದರು. ಇದಕ್ಕೂ ಮುನ್ನ, 1952ರಲ್ಲಿ ಜಾರ್ಜ್ ಎಕ್ಸ್, ಸಾಂಡ್ಸ್ ಎಂಬುವರೂ ಫೇಟ್ ಎಂಬ ಪತ್ರಿಕೆಯಲ್ಲಿ ಈ ಪ್ರದೇಶದಲ್ಲಿ ಹಲವಾರು ಅಪಘಾತಗಳಾಗುತ್ತಿರುವ ಬಗ್ಗೆ ವರದಿ ಸಲ್ಲಿಸಿದ್ದರು.
ಆದರೆ ಇದಕ್ಕೆ ನಿಜವಾದ ಪ್ರಚಾರ ಸಿಕ್ಕಿದ್ದು 1969ರಲ್ಲಿ ಜಾನ್ ವ್ಯಾಲ್ಲೇಸ್ ಸ್ಪೆನ್ಸರ್ ಎಂಬುವರು ಬರೆದ ಲಿಂಬೋ ಎಂಬ ಪುಸ್ತಕದ ಮೂಲಕ. ಈ ಪುಸ್ತಕವನ್ನು ಆಧರಿಸಿ ತಯಾರಿಸಿದ 'ದ ಡೆವಿಲ್ಸ್ ಟ್ರಯಾಂಗಲ್' ಎಂಬ ಸಾಕ್ಷ್ಯಚಿತ್ರ ಎರಡು ವರ್ಷಗಳ ಬಳಿಕ ಬಿಡುಗಡೆಗೊಂಡಿತು. ಇದರೊಂದಿಗೇ ದ ಬರ್ಮುಡಾ ಟ್ರಯಾಂಗಲ್ ಎಂಬ ಪುಸ್ತಕ 1974ರಲ್ಲಿ ಬಿಡುಗಡೆಗೊಂಡಿತು. ಜಗತ್ತಿನಾದ್ಯಂತ ಭರ್ಜರಿ ಮಾರಾಟ ಕಂಡ ಈ ಹೊತ್ತಿಗೆ 'ಹೂಡೂ ಸಾಗರ' ಎಂಬ ಪ್ರಖ್ಯಾತಿಯನ್ನೂ ಪಡೆಯಿತು.
ಪುಸ್ತಕದಲ್ಲಿಯೇ ಆಗಲಿ, ಸಾಕ್ಷ್ಯಚಿತ್ರದಲ್ಲಿಯೇ ಆಗಲಿ ವಿಮಾನ ಮತ್ತು ಹಡಗುಗಳು ನಿಗೂಢವಾಗಿ ಕಾಣೆಯಾಗುತ್ತಿರುವ ಮಾಹಿತಿ ಇತ್ತೇ ವಿನಃ ಏಕಾಗಿ ಮಾಯವಾಗುತ್ತಿವೆ ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇರಲಿಲ್ಲ. ಈ ಬಗ್ಗೆ ತಲೆಕೆಡಿಸಿಕೊಂಡ ಹಲವು ಲೇಖಕರು ಈ ಪ್ರದೇಶದಲ್ಲಿ ಪ್ರಬಲವಾದ ಆಯಸ್ಕಾಂತೀಯ ಕ್ಷೇತ್ರವಿದ್ದು ಹಡಗು ಮತ್ತು ವಿಮಾನಗಳನ್ನು ದಿಕ್ಕು ತಪ್ಪಿಸಲು ಕಾರಣವಾಗಿವೆ ಎಂದು ಅಭಿಪ್ರಾಯ ಪಟ್ಟರು. ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಈಗ ಲಭ್ಯವಿದ್ದು ಅದರಲ್ಲಿ ನಿಮ್ಮನ್ನು ಬೆಚ್ಚಿ ಬೀಳಿಸಬಹುದಾದ ಪ್ರಮುಖ ವಿಷಯಗಳ ಬಗ್ಗೆ ಕೆಳಗಿನ ಸ್ಲೈಡ್ ಶೋನಲ್ಲಿ ವಿವರಗಳನ್ನು ನೀಡಲಾಗಿದೆ..

ಬರ್ಮುಡಾ ಟ್ರಯಾಂಗಲ್ ಮಾಹಿತಿ
ಬರ್ಮುಡಾ ಟ್ರಯಾಂಗಲ್ ಎಂಬ ತ್ರಿಕೋನ ಚಿಕ್ಕದಾಗೇನೂ ಇಲ್ಲ. ಸುಮಾರು 440,000ಚದ ಮೈಲಿಗಳಷ್ಟು ವಿಶಾಲವಾದ ಸಾಗರವನ್ನು ಇದು ಒಳಗೊಂಡಿದೆ. ಇದರ ವಿಸ್ತಾರದ ಅರಿವು ಮೂಡಬೇಕಾದರೆ ನಮ್ಮ ದೇಶದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳ ಒಟ್ಟೂ ವಿಸ್ತಾರವನ್ನು ಒಂದುಗೂಡಿಸಬೇಕಾಗುತ್ತದೆ, ಅಷ್ಟು ವಿಸ್ತಾರವಾಗಿದೆ.
Image courtesy- http://www.universemagic.com
ಬರ್ಮುಡಾ ಟ್ರಯಾಂಗಲ್ ಎಂಬ ತ್ರಿಕೋನ ಚಿಕ್ಕದಾಗೇನೂ ಇಲ್ಲ. ಸುಮಾರು 440,000ಚದ ಮೈಲಿಗಳಷ್ಟು ವಿಶಾಲವಾದ ಸಾಗರವನ್ನು ಇದು ಒಳಗೊಂಡಿದೆ. ಇದರ ವಿಸ್ತಾರದ ಅರಿವು ಮೂಡಬೇಕಾದರೆ ನಮ್ಮ ದೇಶದ ರಾಜ್ಯಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳ ಒಟ್ಟೂ ವಿಸ್ತಾರವನ್ನು ಒಂದುಗೂಡಿಸಬೇಕಾಗುತ್ತದೆ, ಅಷ್ಟು ವಿಸ್ತಾರವಾಗಿದೆ.
Image courtesy
http://www.universemagic.com

ಬರ್ಮುಡಾ ಟ್ರಯಾಂಗಲ್ ಮಾಹಿತಿ
ಕಾಣೆಯಾಗಿರುವ ಮಾಹಿತಿ ಕೇವಲ ಈ ತ್ರಿಕೋಣಕ್ಕೆ ಸೀಮಿತವಾಗಿಲ್ಲ, ಇದರ ಹೊರಗಿನ ವ್ಯಾಪ್ತಿಯಲ್ಲಿಯೂ ಅಪಘಾತಗಳು ಮತ್ತು ಕಾಣೆಯಾಗಿರುವ ಸಂದರ್ಭಗಳಿವೆ. ಆದರೆ ಈ ತ್ರಿಕೋಣದ ವ್ಯಾಪ್ತಿಯಲ್ಲಿ ಕಾಣೆಯಾಗಿರುವ ಸಂಭವಗಳು ಹೆಚ್ಚು.
Image courtesy- http://www.universemagic.com

ಬರ್ಮುಡಾ ಟ್ರಯಾಂಗಲ್ ಮಾಹಿತಿ
ಕಾಣೆಯಾಗಿರುವ ವಿಮಾನ ಮತ್ತು ಹಡಗುಗಳಿಗೆ ಅನ್ಯಗ್ರಹ ನಿವಾಸಿ ಮತ್ತು ಅನ್ಯಗ್ರಹದಿಂದ ಬಂದಿರುವ ಆಕಾಶನೌಕೆಗಳಿಗೂ ಸಂಬಂಧ ಕಲ್ಪಿಸಲಾಗಿದೆ. ಇನ್ನೂ ಹಲವರು ಕಾಣೆಯಾಗಿ ಸಮುದ್ರತಳ ಸೇರಿರುವ ಐತಿಹಾಸಿಕ ಅಟ್ಲಾಂಟಿಸ್ ನಗರ ಈ ಸಮುದ್ರತಳದಲ್ಲಿದ್ದು ಇವನ್ನು ಸೆಳೆಯುತ್ತಿವೆ ಎಂದು ಅಭಿಪ್ರಾಯಪಡುತ್ತಾರೆ.
Image courtesy- www.enkivillage.com

ಬರ್ಮುಡಾ ಟ್ರಯಾಂಗಲ್ ಮಾಹಿತಿ
ಇದನ್ನು ನಂಬದ ವಿಜ್ಞಾನಿಗಳು ತಮ್ಮದೇ ಆದ ವೈಜ್ಞಾನಿಕ ಮತ್ತು ಭೌಗೋಳಿಕ ಕಾರಣಗಳನ್ನು ನೀಡುತ್ತಾರೆ.

ಬರ್ಮುಡಾ ಟ್ರಯಾಂಗಲ್ ಮಾಹಿತಿ
ಅಷ್ಟೇ ಅಲ್ಲದೆ ಕಾಣೆಯಾದ ಹಡಗು ಮತ್ತು ವಿಮಾನಗಳ ಅವಶೇಷಗಳು ಇಂದಿಗೂ ಸಿಗದೇ ಗಾಳಿಯಲ್ಲಿ ಕರಗಿ ಹೋದವೇ ಎಂಬ ದಿಗ್ಭ್ರಮೆ ಮೂಡಿಸುತ್ತವೆ. ವಿಜ್ಞಾನಿಗಳು ಕಂಡುಕೊಂಡ ಪ್ರಕಾರ ಇದಕ್ಕೆ ಕಾರಣವೇನೆಂದರೆ ಈ ಸಾಗರದಡಿಯಲಿ ಗಲ್ಫ್ ಸ್ಟ್ರೀಂ ಎಂಬ ಸಾಗರದಾಳದ ಪ್ರವಾಹ ಹರಿಯುತ್ತಿದ್ದು ಈ ಅವಶೇಷಗಳನ್ನು ತನ್ನೊಂದಿಗೆ ಎಲ್ಲೋ ಸಾಗಿಸಿ ಬಿಟ್ಟಿದೆ ಎಂದು ಅಭಿಪ್ರಾಯಪಡುತ್ತಾರೆ.

ಬರ್ಮುಡಾ ಟ್ರಯಾಂಗಲ್ ಮಾಹಿತಿ
ಕಳೆದ ನೂರು ವರ್ಷಗಳಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಜನರು ಈ ಪ್ರದೇಶದಲ್ಲಿ ಕಾಣೆಯಾಗಿದ್ದಾರೆ. ಒಂದು ಅಂದಾಜಿನ ಪ್ರಕಾರ ಪ್ರತಿವರ್ಷ ನಾಲ್ಕು ವಿಮಾನಗಳು ಮತ್ತು ಇಪ್ಪತ್ತು ನೌಕೆಗಳು ಕಾಣೆಯಾಗಿವೆ.

ಬರ್ಮುಡಾ ಟ್ರಯಾಂಗಲ್ ಮಾಹಿತಿ
ಈ ಎಲ್ಲಾ ರಹಸ್ಯವನ್ನು ಭೇದಿಸಲು ಅಮೇರಿಕಾ ಈ ಪ್ರದೇಶದ ನಟ್ಟ ನಡುವೆ ಒಂದು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದೆ. AUTEC (for Atlantic Undersea Test and Evaluation Center) ಎಂಬ ಹೆಸರಿನ ಈ ಸಂಸ್ಥೆಯಲ್ಲಿ ಸರ್ಕಾರದ ಸಬ್ ಮೆರೀನ್, ಸೋನಾರ್ ಮತ್ತು ಇತರ ಉಪಕರಣಗಳನ್ನು ಪರೀಕ್ಷಿಸಲಾಗುತ್ತದೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ ಈ ಬಗ್ಗೆ ಹಲವರು ತಮ್ಮ ಅನುಮಾನವನ್ನು ವ್ಯಕ್ತಪಡಿಸಿದ್ದು ಇವನ್ನು ಇಷ್ಟು ದೂರ ತಂದು ಪರೀಕ್ಷೆಗೆ ಒಳಪಡಿಸುವ ಅಗತ್ಯವೇ ಇಲ್ಲ, ನೌಕಾನೆಲೆಯ ಹತ್ತಿರವೇ ಎಲ್ಲಾ ಸೌಲಭ್ಯಗಳಿದ್ದು ಇನ್ನೂ ಉತ್ತಮವಾಗಿ ಅಲ್ಲಿಯೇ ಪರೀಕ್ಷೆ ಮಾಡಬಹುದಾಗಿದ್ದು ಇಲ್ಲಿ ತರುವ ಅಗತ್ಯವೇನಿದೆ ಎಂದು ಪ್ರಶ್ನಿಸುತ್ತಾರೆ.
Image courtesy - www.todayifoundout.com

ಬರ್ಮುಡಾ ಟ್ರಯಾಂಗಲ್ ಮಾಹಿತಿ
ಕೆಲವು ಪ್ರತ್ಯಕ್ಷದರ್ಶಿಗಳ ಪ್ರಕಾರ ಕೆಲವು ಸಮಯದಲ್ಲಿ ಇಲ್ಲಿ ಒಂದು ವಿಧದ ಎಲೆಕ್ಟಾನಿಕ್ ರೂಪದ ಇಬ್ಬನಿ ಕವಿದು ಒಂದು ಅಡ್ಡಲಾಗಿಸಿರುವ ಲಾಲಿಕೆಯ ಆಕೃತಿ ಪಡೆಯುತ್ತದೆ. ಇದನ್ನು ಪ್ರವೇಶಿಸಿದರೆ ಸಮಯದಲ್ಲಿ ಹಿಂದೆ ಹೋಗುತ್ತಾರೆ ಎಂದು ತಿಳಿಸುತ್ತಾರೆ.
Image courtesy- www.dailymail.co.uk

ಬರ್ಮುಡಾ ಟ್ರಯಾಂಗಲ್ ಮಾಹಿತಿ
ಇದಕ್ಕೆ ಇಂಬು ನೀಡಲು ಬ್ರೂಸ್ ಜೆರ್ನಾನ್ ಎಂಬ ವಿಮಾನ ಚಾಲಕನ ಅನುಭವ ಕಥನ The Fog by Bruce Gernon ಎಂಬ ಪುಸ್ತಕವನ್ನು ಆಧಾರವಾಗಿ ನೀಡುತ್ತಾರೆ. ಈತನ ವಿಮಾನ ರಾಡಾರ್ ನಿಂದ ಕಾಣೆಯಾಗಿ ಮತ್ತೆ ಮಿಯಾಮಿಯ ತೀರದಲ್ಲಿ ಪ್ರತ್ಯಕ್ಷವಾಗುವಾಗ ಆತ ನಿಜವೇಳೆಗಿಂತ ಇಪ್ಪತ್ತೆಂಟು ನಿಮಿಷ ಹಿಂದಿದ್ದ ಮಾಹಿತಿ ಮೈ ನವಿರೇಳಿಸುತ್ತದೆ.

ಬರ್ಮುಡಾ ಟ್ರಯಾಂಗಲ್ ಮಾಹಿತಿ
ಈ ಪ್ರದೇಶದ ಅತ್ಯಂತ ಭೀಕರ ದುರಂತವೆಂದರೆ 1945ರಲ್ಲಿ ಕಾಣೆಯಾದ ಅಮೇರಿಕಾದ ಮಿಲಿಟರಿ ವಿಮಾನಗಳು. ಫೋರ್ಟ್ ಲಾಡರ್ಡೇಲ್ ಎಂಬಲ್ಲಿಂದ ಹೊರಟ ಐದು ಅವೆಂಜರ್ ಟೋರ್ಪೆಡೋ ಬಾಂಬುಗಳನ್ನು ಹೊತ್ತ ಬಾಂಬರು ವಿಮಾನಗಳು ಬಿಮಿನಿ ಎಂಬ ದ್ವೀಪದ ಮೇಲೆ ಇವನ್ನು ಎಸೆಯಬೇಕಿತ್ತು. ಈ ಯಾತ್ರೆಯಲ್ಲಿ ಒಟ್ಟು ಹದಿನಾಲ್ಕು ಯೋಧರಿದ್ದರು. ಆದರೆ ಹೊರಟ ಒಂದೂವರೆ ಗಂಟೆಯ ಬಳಿಕ ನಿಯಂತ್ರಣ ಕೇಂದ್ರದಲ್ಲಿದ್ದವರಿಗೆ ಆ ಬಾಂಬರುಗಳಲ್ಲಿ ದಿಕ್ಸೂಚಿ ಕೆಲಸ ಮಾಡುತ್ತಿಲ್ಲ ಎಂಬ ಸಂಕೇತ ದೊರಕಿತು.

ಬರ್ಮುಡಾ ಟ್ರಯಾಂಗಲ್ ಮಾಹಿತಿ
ಬಳಿಕ ಸಂಪರ್ಕ ಕಡಿತಗೊಂಡಿತು. ಆ ಮೇಲೆ ಆ ಐದೂ ವಿಮಾನಗಳು ಎಲ್ಲಿವೆ ಎಂದು ಇದುವರೆಗೆ ಕಂಡುಹಿಡಿಯಲಾಗಿಲ್ಲ. ಇನ್ನೂ ವಿಚಿತ್ರವೆಂದರೆ ಇವನ್ನು ಹುಡುಕಲು ಹೊರಟ ಮೂರು ವಿಮಾನಗಳೂ ಇದೇ ರೀತಿ ಅದೇ ಸ್ಥಳದಲ್ಲಿ ಕಾಣೆಯಾದವು. ಒಟ್ಟು ಎಂಟು ವಿಮಾನಗಳು ಕಾಣೆಯಾದರೂ ಇದುವರೆಗೆ ಯಾವುದೇ ಮಾಹಿತಿ ಇಲ್ಲದಿರುವುದು ಒಂದು ರೋಚಕ ಕಥೆಯಾಗಿದೆ.

ಬರ್ಮುಡಾ ಟ್ರಯಾಂಗಲ್ ಮಾಹಿತಿ
ಬರ್ಮುಡಾ ಟ್ರಯಾಂಗಲ್ ಎಂಬ ಸ್ಥಳದ ಬಗ್ಗೆ ಮೊತ್ತ ಮೊದಲಾಗಿ ಉಲ್ಲೇಖಿಸಿದವರೆಂದರೆ ಕ್ರಿಸ್ಟೋಫಲ್ ಕೊಲಂಬಸ್. ತಮ್ಮ ದಿನಚರಿಯಲ್ಲಿ ಅವರು ಈ ಪ್ರದೇಶದಲ್ಲಿ ಹಾದು ಹೋಗುತ್ತಿದ್ದಾಗ ತಮ್ಮ ಹಡಗಿನ ದಿಕ್ಸೂಚಿ ನಿಂತೇ ಬಿಟ್ಟಿತ್ತು ಹಾಗೂ ಆಕಾಶದಲ್ಲಿ ಬೆಂಕಿಯ ಉಂಡೆಯೊಂದು ಭಾರೀ ವೇಗದಲ್ಲಿ ಸಾಗುತ್ತಿತ್ತು ಎಂದು ಬರೆದಿದ್ದಾರೆ.

ಬರ್ಮುಡಾ ಟ್ರಯಾಂಗಲ್ ಮಾಹಿತಿ
ಭೂಮಿಯ ಆಯಸ್ಕಾಂತೀಯ ಕ್ಷೇತ್ರದ ಕಾರಣ ಯಾವುದೇ ಸಡಿಲವಾಗಿ ನೇತುಹಾಕಿದ ಆಯಸ್ಕಾಂತ ಉತ್ತರ ದಕ್ಷಿಣ ಧೃವಕ್ಕನುಗುಣವಾಗಿ ನಿಲ್ಲುತ್ತದೆ. ಇದು ನಿಲ್ಲದ ಸ್ಥಳಗಳೆಂದರೆ ಮೂರು. ಉತ್ತರ ಮತ್ತು ದಕ್ಷಿಣ ಧೃವ ಪ್ರದೇಶಗಳು ಮತ್ತು ಬರ್ಮುಡಾ ಟ್ರಯಾಂಗಲ್. ಇದು ಏಕೆಂದು ಇದುವರೆಗೆ ಕಂಡುಹಿಡಿಯಲಾಗಿಲ್ಲ.

ಬರ್ಮುಡಾ ಟ್ರಯಾಂಗಲ್ ಮಾಹಿತಿ
ಭೂಮಿಯ ಆಯಸ್ಕಾಂತೀಯ ಉತ್ತರಕ್ಕೂ ನೈಜ ಉತ್ತರ ಧೃವಕ್ಕೂ ಕೊಂಚ ವ್ಯತ್ಯಾಸವಿದೆ. ಈ ಸ್ಥಳದಲ್ಲಿ ದಿಕ್ಸೂಚಿಗಳು ನೈಜ ಉತ್ತರವನ್ನೇ ತೋರಿಸುತ್ತಿದ್ದು ಹಡಗು ಮತ್ತು ವಿಮಾನಗಳ ದಿಕ್ಕು ತಪ್ಪಿಸುತ್ತಿದ್ದು ಅಪಘಾತಕ್ಕೆ ಕಾರಣ ಎಂದು ಸ್ಥೂಲವಾಗಿ ಅಂದಾಜಿಸಬಹುದು. ಆದರೆ ಇದು ಏಕಾಗಿ ಹೀಗೆ ಮತ್ತು ಕಾಣೆಯಾದ ಹಡಗುಗಳು ಎಲ್ಲಿ ಹೋದವು ಎಂಬುದಕ್ಕೆ ಇದುವರೆಗೆ ಉತ್ತರ ಸಿಕ್ಕಿಲ್ಲ.



Click it and Unblock the Notifications











