For Quick Alerts
ALLOW NOTIFICATIONS  
For Daily Alerts

ರಹಸ್ಯದ ವಿಷಯವನ್ನು ಮಹಿಳೆಯರ ಬಳಿ ಮಾತ್ರ ಹೇಳಬೇಡಿ!

|

ಒಂದು ವಿಷಯವನ್ನು ತುಂಬಾ ಚೆನ್ನಾಗಿ ಪ್ರಚಾರಗೊಳಿಸಬೇಕೇ? ಈ ವಿಷಯವನ್ನು ಓರ್ವ ಮಹಿಳೆಗೆ ಹೇಳಿ ಯಾರಿಗೂ ಹೇಳ್ಬೇಡಿ ಎಂದು ಕಡೆಗೆ ಹೇಳಿ. ಅತಿ ಕಡಿಮೆ ಸಮಯದಲ್ಲಿ ಈ ವಿಷಯ ಇಡಿಯ ಊರು ತುಂಬಾ ವ್ಯಾಪಿಸಿರುತ್ತದೆ. ಕಡೆಗೆ ಗುಟ್ಟು ಹೇಳಿದವರೇ ಹಳಿದುಕೊಳ್ಳುತ್ತಾ, ಈ ಹೆಂಗಸರೇ ಹೀಗೆ, ಒಂದು ಮಾತು ಹೊಟ್ಟೆಯಲ್ಲಿಟ್ಟುಕೊಳ್ಳಲಿಕ್ಕೆ ಆಗುವುದಿಲ್ಲ ಎಂಬ ಕಟ್ಟಕಡೆಯ ತೀರ್ಮಾನಕ್ಕೆ ಬಂದುಬಿಡುತ್ತಾರೆ.ಇದಕ್ಕೆ ಕಾರಣವೇನು ತಿಳಿದಿದೆಯೇ? ಮಹಿಳೆಯರು ಯಾಕಪ್ಪಾ ಈ ರೀತಿಯಾಗಿ ವರ್ತಿಸುತ್ತಾರೆ?

ಇತಿಹಾಸವನ್ನು ಕೆದಕಿದರೆ ಮಹಾಭಾರತದವರೆಗೂ ಈ ಪರಿಯನ್ನು ಕಾಣಬಹುದು. ಮಹರ್ಷಿ ವೇದವ್ಯಾಸರು ಈ ಬಗ್ಗೆ ನೀಡಿದ ವಿವರದ ಜೊತೆಗೆ ಇತರ ವಿವರಗಳನ್ನು ಕೆಳಗಿನ ಸ್ಲೈಡ್ ಷೋ ಮೂಲಕ ನೋಡುತ್ತಾ ಚಕಿತಗೊಳ್ಳಲು ತಯಾರಾಗಿ...

ಯುಧಿಷ್ಠಿರನ ಶಾಪ (ಮಹಾಭಾರತದಲ್ಲಿ ಕಂಡುಬಂದಂತೆ)

ಯುಧಿಷ್ಠಿರನ ಶಾಪ (ಮಹಾಭಾರತದಲ್ಲಿ ಕಂಡುಬಂದಂತೆ)

ಕುರುಕ್ಷೇತ್ರದ ಯುದ್ಧದ ಬಳಿಕ ಪಾಂಡವರಲ್ಲಿ ಹಿರಿಯನಾದ ಯುಧಿಷ್ಠಿರನ ಮೇಲೆ ಯುದ್ಧದಲ್ಲಿ ಮಡಿದ ತನ್ನ ಬಂಧು ಬಳಗವನ್ನು ಅಂತ್ಯಸಂಸ್ಕಾರಗೊಳಿಸಬೇಕಾದ ಕರ್ತ್ಯವ್ಯ ಎದುರಾಗುತ್ತದೆ. ಕರ್ಣನ ಸಾವಿನ ಬಳಿಕವೇ ಕುಂತಿಯಿಂದ ಆತ ತನ್ನ ಸಹೋದರನೆಂಬ ವಿಷಯ ಗೊತ್ತಾಗುತ್ತದೆ. ಆದ್ದರಿಂದ ಕರ್ಣನ ಅಂತ್ಯಸಂಸ್ಕಾರವನ್ನೂ ಯುಧಿಷ್ಠಿರನೇ ನೆರವೇರಿಸಬೇಕಾಗುತ್ತದೆ. ತಾಯಿ ಈ ವಿಷಯವನ್ನು ಗುಟ್ಟಾಗಿಟ್ಟಿದ್ದರಿಂದಲೇ ತಮ್ಮ ಸ್ವಂತ ಸಹೋದರನನ್ನು ಯುದ್ಧದಲ್ಲಿ ವೈರಿಯಂತೆ ಪರಿಗಣಿಸಿ ಕೊಲ್ಲಬೇಕಾಯ್ತಲ್ಲಾ ಎಂದು ಯುಧಿಷ್ಠಿರ ಮಮ್ಮಲ ಮರುಗುತ್ತಾನೆ. ಇದಕ್ಕೆ ಕಾರಣವಾದ ತನ್ನ ತಾಯಿಯನ್ನು ಮನಸ್ವೀ ಬೈದು ಇದೇ ದುಃಖದಲ್ಲಿ ಇನ್ನು ಮೇಲೆ ಭೂಮಿಯ ಮೇಲೆ ಯಾವ ಹೆಣ್ಣೂ ಯಾವುದೇ ಗುಟ್ಟನ್ನು ತನ್ನ ಹೊಟ್ಟೆಯಲ್ಲಿಟ್ಟುಕೊಳ್ಳಲು ಸಾಧ್ಯವಾಗದಿರಲಿ ಎಂದು ಶಾಪ ನೀಡುತ್ತಾನಂತೆ!

ಮಹಿಳೆಯರು ಗುಟ್ಟು ಕಾಪಾಡಿಕೊಳ್ಳುವ ಅತ್ಯಧಿಕ ಅವಧಿ-32 ನಿಮಿಷ

ಮಹಿಳೆಯರು ಗುಟ್ಟು ಕಾಪಾಡಿಕೊಳ್ಳುವ ಅತ್ಯಧಿಕ ಅವಧಿ-32 ನಿಮಿಷ

ಈ ಮಾಹಿತಿಯನ್ನು ನೀಡಿದ್ದು ಸಾಮಾನ್ಯ ಜನರಲ್ಲ, ಬ್ರಿಟನ್‌ನ ಖ್ಯಾತ ಸೌಂದರ್ಯಪ್ರಸಾದನಾ ತಯಾರಿಕಾ ಸಂಸ್ಥೆಯಾದ ಸಿಂಪಲ್ ಸ್ಕಿನ್ ಕೇರ್ ಎಕ್ಸ್ ಪರ್ಟ್ಸ್ ಸಂಸ್ಥೆ ನಡೆಸಿದ ಅಧ್ಯಯನದ ಬಳಿಕ ನೀಡಿದ ವಿವರ. ಇದಕ್ಕೆ ಕಾರಣಗಳನ್ನು ಹುಡುಕಿದ ಈ ಸಂಸ್ಥೆ ಇದಕ್ಕೆ ಕೇವಲ ಕುತೂಹಲವೇ ಕಾರಣ ಎಂಬ ನಿರ್ಣಯಕ್ಕೆ ಬಂದಿದೆ. ಕುತೂಹಲ ಎಲ್ಲರಲ್ಲಿಯೂ ಇರುತ್ತದೆ. ಆದರೆ ಮಾಹಿತಿಗಳನ್ನು ಪಡೆದುಕೊಳ್ಳಲು ಉತ್ಸುಕತೆಯನ್ನು ಸಮಾನವಾಗಿ ತೋರುವ ಪುರುಷರು ಮತ್ತು ಮಹಿಳೆಯರು ಮಾಹಿತಿಯನ್ನು ತಮ್ಮಿಂದ ರವಾನಿಸುವಲ್ಲಿ ಮಾತ್ರ ಇಬ್ಬರಲ್ಲಿಯೂ ಭಿನ್ನವಾಗಿದೆ.

ಮಹಿಳೆಯರು ಗುಟ್ಟು ಕಾಪಾಡಿಕೊಳ್ಳುವ ಅತ್ಯಧಿಕ ಅವಧಿ-32 ನಿಮಿಷ

ಮಹಿಳೆಯರು ಗುಟ್ಟು ಕಾಪಾಡಿಕೊಳ್ಳುವ ಅತ್ಯಧಿಕ ಅವಧಿ-32 ನಿಮಿಷ

ಅಧ್ಯಯನದಲ್ಲಿ ಕಂಡುಬಂದಂತೆ ಈ ಮಾಹಿತಿಯನ್ನು ಮುಂದೆ ರವಾನಿಸುವ ಮೂಲಕ ಮಹಿಳೆ ತನ್ನನ್ನು ತಾನೇ ಬಲಿಷ್ಠಳೆಂದು ಸಾಂತ್ವಾನ ಪಡೆದುಕೊಳ್ಳುತ್ತಾಳೆ. ಈ ಅಧ್ಯಯನದಲ್ಲಿ ಮಾನಸಿಕವಾಗಿ ದುರ್ಬಲರೆಂದು ಅಂದುಕೊಳ್ಳುವವರು ಹೆಚ್ಚಾಗಿ ಗುಟ್ಟು ಹರಡುವುದೂ ಮಾನಸಿಕವಾಗಿ ಸ್ಥೈರ್ಯವುಳ್ಳವರು ಗುಟ್ಟನ್ನು ಬಹಳ ಅವಧಿಯವರೆಗೆ ಅಥವಾ ಕಾಲ ಪಕ್ವಗೊಳ್ಳುವವರೆಗೆ ಕಾಪಾಡಿಕೊಳ್ಳುವುದನ್ನೂ ಗಮನಿಸಲಾಗಿದೆ.

ಸ್ವಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಗುಟ್ಟನ್ನು ರಟ್ಟಾಗಿಸುವ ಕಲೆ

ಸ್ವಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಗುಟ್ಟನ್ನು ರಟ್ಟಾಗಿಸುವ ಕಲೆ

ಸಾಮಾಜಿಕ ಬಾಳ್ವೆ ನಡೆಸುವ ಮಾನವನಿಗೆ ಅತ್ಯಂತ ಪ್ರಿಯವಾದುದು ಏನೆಂದು ಗೊತ್ತೇ? ಅದೇ ಇನ್ನೊಬ್ಬರು ನಮ್ಮ ಹೆಸರನ್ನು ಹಿಡಿದು ಕರೆಯುವುದು. ಮಗು ಅಮ್ಮಾ ಎಂದು ಕರೆದಾಗ ಯಾವ ತಾಯಿಯ ಮನ ಹಾರಡುವುದಿಲ್ಲ? ಇದೇ ಪರಿ ಎಲ್ಲರಿಗೂ ಇದೆ. ನಾಲ್ಕು ಜನರ ನಡುವೆ ಎದ್ದು ಕಾಣುವಂತಾಗಬೇಕು ಎಂದೇ ನಮ್ಮ ಸಿಂಗಾರ, ಉಡುಗೆ ತೊಡುಗೆ, ಮಾತು ಮೊದಲಾದವುಗಳ ಮೂಲಕ ನಾವೆಲ್ಲರೂ ಪ್ರಯತ್ನಿಸುತ್ತಲೇ ಇರುತ್ತೇವೆ. ಗುಟ್ಟು ರಟ್ಟಾಗಿಸುವುದೂ ಈ ನಿಟ್ಟಿನಲ್ಲಿಯೇ ಇನ್ನೊಂದು ವಿಧಾನವಾಗಿದೆ ಅಷ್ಟೇ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸ್ವಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಗುಟ್ಟನ್ನು ರಟ್ಟಾಗಿಸುವ ಕಲೆ

ಸ್ವಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಗುಟ್ಟನ್ನು ರಟ್ಟಾಗಿಸುವ ಕಲೆ

ಮಹಿಳೆಯರು ಈ ಗುಟ್ಟನ್ನು ತನ್ನಿಂದ ಬೇರೆಯವರಿಗೆ ದಾಟಿಸಿದ ಬಳಿಕ ಈ ಪರಿಯಲ್ಲಿ ತನ್ನ ಹೆಸರೂ ಬಂದಂತಾಯ್ತು ಎಂದು ಮಾನಸಿಕವಾಗಿ ನೆಮ್ಮದಿ ಪಡುತ್ತಾರೆ. ಇನ್ನೊಂದೆಡೆ ಈ ಗುಟ್ಟನ್ನು ಪಡೆದಿರುವವರು ತಮ್ಮ ಸುತ್ತಮುತ್ತಲಿನವರಲ್ಲಿ ಈ ಮಾಹಿತಿಯನ್ನು ಪಡೆದವರು ಯಾರೂ ಇಲ್ಲ ಎಂದು ಬೀಗುತ್ತಾರೆ. ಕೇವಲ ತಮ್ಮ ಆಪ್ತರಿಗೆ ಮಾತ್ರ ಈ ಗುಟ್ಟನ್ನು ದಾಟಿಸಿ ಅವರ ದೃಷ್ಟಿಯಲ್ಲಿ ತಮ್ಮ ಅಹಮ್ಮಿಕೆ ಅಥವಾ ಸ್ವಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ನೆಮ್ಮದಿ ಪಡೆಯುತ್ತಾರೆ.

ಇತರರ ಗಮನ ತಮ್ಮೆಡೆ ಸೆಳೆಯುವ ಯತ್ನ

ಇತರರ ಗಮನ ತಮ್ಮೆಡೆ ಸೆಳೆಯುವ ಯತ್ನ

ಮಹಿಳೆಯರು ಸಾಮಾನ್ಯವಾಗಿ ಇತರರ ಗಮನವನ್ನು ತಮ್ಮೆಡೆಗೆ ಸೆಳೆದುಕೊಳ್ಳಲು ಪುರುಷರಿಗಿಂತಲೂ ಹೆಚ್ಚು ಉತ್ಸುಕರಾಗಿರುತ್ತಾರೆ. ಮೇಕಪ್, ವಿಭಿನ್ನ ಉಡುಗೆ, ಭಿನ್ನವಾದ ಮಾತು ಮೊದಲಾದವುಗಳ ಮೂಲಕ ಈ ಪ್ರಯತ್ನಗಳು ನಡೆಯುತ್ತಿರುತ್ತವೆ. ಸಂವಹನದಲ್ಲಿ ಏನು? ಎಲ್ಲಿ? ಎತ್ತ? ಹೇಗಾಯಿತು? ಏನಾಯಿತು ಎಂಬ ಮಾತುಗಳ ಮೂಲಕ ಸುತ್ತಮುತ್ತಲಿನ ಗುಟ್ಟುಗಳನ್ನು ಪಡೆಯುವ ಯತ್ನ ಮಾಡಿ ತಮ್ಮ ಇರುವಿಕೆಯನ್ನು ಸ್ಪಷ್ಟಪಡಿಸಿ ಇತರರ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. ಇದರ ಜ್ವಲಂತ ಉದಾಹರಣೆಗೆ ಯಾವುದಾದರೂ ಫೇಸ್‌ಬುಕ್ ಬಳಗದ ವಿಚಾರ ವಿನಿಮಯವನ್ನು ಅವಲೋಕಿಸಿದರೆ ಸಾಕು, ಇಂತಹ ಸಾವಿರಾರು ಪ್ರಶ್ನೆಗಳು ಎದ್ದು ಕಾಣುತ್ತವೆ. ಅದರಲ್ಲೂ ವಿಷಯ ಕೊಂಚ ಎಡವಟ್ಟಿನದ್ದಾಗಿದಿದ್ದರೆ ಈ ಪರಿ ತಾರಕಕ್ಕೇರುತ್ತದೆ.

ಮಾನಸಿಕ ಒತ್ತಡದಿಂದ ಮುಕ್ತಿ

ಮಾನಸಿಕ ಒತ್ತಡದಿಂದ ಮುಕ್ತಿ

ಅಮೇರಿಕಾದ ಮಸಾಚುಸೆಟ್ಸ್ ನಲ್ಲಿರುವ ಟಫ್ಟ್ಸ್ ವಿಶ್ವವಿದ್ಯಾಯಲದ ಸಂಶೋಧನೆಗಳ ಮೂಲಕ ಕಂಡುಕೊಂಡಂತೆ ಗುಟ್ಟುಗಳನ್ನು ತಮ್ಮಲ್ಲಿ ಅಡಗಿಸಿಟ್ಟಿರುವ ಮಹಿಳೆಯರು ಮಾನಸಿಕವಾಗಿ ಒತ್ತಡವನ್ನು ಅನುಭವಿಸುತ್ತಿರುತ್ತಾರೆ. ಯಾವಾಗ ಈ ಗುಟ್ಟನ್ನು ರಟ್ಟು ಮಾಡುತ್ತಾರೋ ಆಗ ಅವರ ಮೆದಳಿನಲ್ಲಿ ಕೆಲವು ರಸದೂತಗಳು ಸ್ರವಿಸುವ ಮೂಲಕ ಮಾನಸಿಕ ಒತ್ತಡದಿಂದ ಮುಕ್ತಿ ಪಡೆದು ನಿರಾಳರಾಗುತ್ತಾರೆ ಎಂದು ಪ್ರಕಟಿಸಿದೆ.ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಾನಸಿಕ ಒತ್ತಡದಿಂದ ಮುಕ್ತಿ

ಮಾನಸಿಕ ಒತ್ತಡದಿಂದ ಮುಕ್ತಿ

ಈ ಪರಿಯನ್ನು ಹಲವಾರು ಮಾನಸಿಕ ಕಾಯಿಲೆಗಳ ಚಿಕಿತ್ಸೆಗೂ ಉಪಯೋಗಿಸಿ ಯಶಸ್ಸು ಕಾಣಲಾಗಿದೆ. ಗುಟ್ಟನ್ನು ಹೇಳಲಾಗದೇ ತಮ್ಮೊಳಗೇ ವರ್ಷಗಳಿಂದ ಅಡಗಿಸಿಟ್ಟಿದ್ದು ಮಾನಸಿಕ ರೋಗಿಗಳಾದವರಲ್ಲಿ ಈ ಚಿಕಿತ್ಸೆ (ಮೆಸ್ಮರೈಸೇಶನ್) ಉಪಯೋಗಿಸಿ ಗುಟ್ಟು ರಟ್ಟು ಮಾಡಿದ ಬಳಿಕ ರೋಗಿ ಸಾಮಾನ್ಯ ಸ್ಥಿತಿಗೆ ಬಂದಿರುವುದು ಕಂಡುಬಂದಿದೆ.

ಪುರುಷರೂ ಗುಟ್ಟು ಬಿಟ್ಟುಕೊಡುತ್ತಾರೆ, ಆದರೆ ಕೆಲವು ಸ್ಥಿತಿಗಳಲ್ಲಿ ಮಾತ್ರ

ಪುರುಷರೂ ಗುಟ್ಟು ಬಿಟ್ಟುಕೊಡುತ್ತಾರೆ, ಆದರೆ ಕೆಲವು ಸ್ಥಿತಿಗಳಲ್ಲಿ ಮಾತ್ರ

ಯಾವುದಾದರೂ ಪುರುಷನಿಂದ ಗುಟ್ಟು ಪಡೆಯಬೇಕಾದರೆ ಆತನಿಗೆ ಕಂಠಪೂರ್ತಿ ಮದ್ಯ ಕುಡಿಸಿದರೆ ಸಾಕು. ಈ ಪರಿ ಇತಿಹಾಸದಲ್ಲಿ ಎಷ್ಟೋ ಕಡೆ ವಿವರಿಸಲ್ಪಟ್ಟಿದೆ. ಇಂದಿಗೂ ಗುಟ್ಟು ರಟ್ಟಾಗಿಸಲು, ಅಥವಾ ಅವರಿಂದ ಉಪಯುಕ್ತ ಮಾಹಿತಿ ಪಡೆಯಲು ಪೋಲೀಸರೂ ಈ ವಿಧಾನದ ಮೊರೆ ಹೋಗುತ್ತಾರೆ. ಮಹಿಳೆಯರಿಗೂ ಈ ಪರಿ ಅನ್ವಯವಾಗುತ್ತದೆ. ಮದ್ಯದ ಅಮಲಿನಲ್ಲಿ ಹೆಚ್ಚಿನ ಮಹಿಳೆಯರೂ ತಮ್ಮ ಗುಟ್ಟನ್ನು ರಟ್ಟುಮಾಡುತ್ತಾರೆ.

English summary

Reasons: Why women can't keep secrets

It is said that women are from Venus and men are from mars. Women are always ready to share their thoughts whereas men aren't. Especially, when they are asked to keep a secret, it is almost impossible for them and they tend to share the information.Why is it so? Click on this slide show to know the incident of Mahabharat and other reasons…
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X