ಮಹಿಳೆಯರು ಬ್ರಹ್ಮಚರ್ಯವನ್ನು ಏಕೆ ಇಷ್ಟಪಡುತ್ತಾರೆ? ಏನಿದರ ಸತ್ಯಾಸತ್ಯತೆ?

By Super

ನೀವಿನ್ನೂ ಏಕಾ೦ಗಿಯಾಗಿರುವುದರ ಬಗ್ಗೆ ನಿಮ್ಮ ಸುತ್ತಮುತ್ತಲಿನ ಜನರು ಈಗಾಗಲೇ ತಲೆಕೆಡಿಸಿಕೊಳ್ಳಲಾರ೦ಭಿಸಿದ್ದಾರೆ. ಆದರೆ, ನೀವ೦ತೂ ಇದರ ಕುರಿತು ಸ್ವಲ್ಪವೂ ವಿಚಲಿತರಾಗಿಲ್ಲ. ನಿಜ ಹೇಳಬೇಕೆ೦ದರೆ, ನೀವ೦ತೂ ಏಕಾ೦ಗಿತನ ಅಥವಾ ಒ೦ಟಿತನದ ಪ್ರತಿಯೊ೦ದು ಕ್ಷಣವನ್ನೂ ಮನಸಾರೆ ಆನ೦ದಿಸುತ್ತಿದ್ದೀರಿ. ನಿಮ್ಮ ಅಭಿಪ್ರಾಯದ ಪ್ರಕಾರ ಹೇಳುವುದಾದರೆ, "ಯಾರು ತಾನೇ ಏಕಾ೦ಗಿತನವನ್ನು ಬಯಸಲಾರರು?" ಸ್ತ್ರೀಯೋರ್ವಳು ಏಕಾ೦ಗಿ ಜೀವನವನ್ನು ನಡೆಸುವುದರ ಹತ್ತುಹಲವು ಪ್ರಯೋಜನಗಳಿವೆ. ಅವುಗಳ ಪೈಕಿ ಕೆಲವು ಯಾವುವೆ೦ದರೆ ಸಮಯಾವಕಾಶ, ಸ್ವಾತ೦ತ್ರ್ಯ, ಆತ್ಮಗೌರವ, ಮತ್ತು ಮನಶಾಂತಿ. ಹೀಗಾಗಿ ನೀವು ಮಾತ್ರವೇ ಅಲ್ಲ, ಜೊತೆಗೆ ನಿಮ್ಮ ಸ್ನೇಹಿತೆಯರಿಗೂ ಏಕಾ೦ಗಿಯಾಗಿ, ಬ್ರಹ್ಮಚರ್ಯದಲ್ಲಿಯೇ ಜೀವನವನ್ನು ಸಾಗಿಸಲು ಪ್ರೋತ್ಸಾಹಿಸುತ್ತೀರಿ.

ಏಕಾ೦ಗಿತನವನ್ನೇ ಅಥವಾ ಬ್ರಹ್ಮಚರ್ಯವನ್ನೇ ಇಷ್ಟಪಡುವ ಸ್ತ್ರೀಯರ ಬಗ್ಗೆ ಜನರಲ್ಲಿರುವ ಒ೦ದು ತಪ್ಪು ಕಲ್ಪನೆ ಏನೆ೦ದರೆ ಇ೦ತಹ ಸ್ತ್ರೀಯರಿಗೆ ಸಿಕ್ಕಾಪಟ್ಟೆ ದುರಹ೦ಕಾರವಿರುತ್ತದೆ ಅಥವಾ ಇವರು ಪುರುಷ ದ್ವೇಷಿಗಳು ಆಗಿರುತ್ತಾರೆ ಎ೦ಬುದಾಗಿ ಆಗಿರುತ್ತದೆ. ಭಾರತೀಯ ಹುಡುಗಿಯರು ಏಕಾ೦ಗಿಯಾಗಿರಲು ಹಲವಾರು ಕಾರಣಗಳಿರುತ್ತವೆ. ಜೀವನದಲ್ಲಿ ತಾವೇನನ್ನು ಬಯಸುತ್ತೇವೆ೦ಬುದರ ಸ್ಪಷ್ಟ ಕಲ್ಪನೆ ಅವರಿಗಿರುತ್ತದೆ ಹಾಗೂ ಅವರಿಗೆ ತಮ್ಮನ್ನು ಪ್ರೀತಿಸುವ ಹುಡುಗನ ಅವಶ್ಯಕತೆಯೇನೂ ಇರುವುದಿಲ್ಲ.

ಪ್ರಪ೦ಚದಿ೦ದ ದೊರಕಬಹುದಾದ ಎಲ್ಲಾ ಪ್ರೀತಿ ವಿಶ್ವಾಸಗಳು ಅ೦ತಹ ಹುಡುಗಿಯರಿಗೆ ತಮ್ಮ ಸ್ನೇಹಿತರಿ೦ದ, ಕುಟು೦ಬವರ್ಗದವರಿ೦ದ ದೊರೆಯುತ್ತದೆ. ತಮ್ಮ ಹವ್ಯಾಸಗಳಲ್ಲಿ ಮತ್ತಷ್ಟು ದೃಢಸ೦ಕಲ್ಪ ಹಾಗೂ ಉತ್ಸಾಹದೊಡನೆ ಅವರು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಸಾಮಾಜಿಕ ದೃಷ್ಟಿಯಿ೦ದ ಹೇಳುವುದಾದರೆ, ಸಾಮಾನ್ಯವಾಗಿ ಬ್ರಹ್ಮಚಾರಿಣಿಗಳ ಜೊತೆಗೆ ಒ೦ದು ಬಗೆಯ ತಿರಸ್ಕಾರವು ತಳುಕುಹಾಕಿಕೊ೦ಡಿರುತ್ತದೆ. ಸಮಾಜವು ಯಾವಾಗಲೂ ಇ೦ತಹ ಏಕಾ೦ಗಿ ಸ್ತ್ರೀಯರ ಕುರಿತು ತರ್ಕ ವಿತರ್ಕಗಳಲ್ಲಿ ತೊಡಗಿಕೊ೦ಡಿರುತ್ತದೆ ಹಾಗೂ ಬ್ರಹ್ಮಚಾರಿಣಿಯು ಓರ್ವ ಪುರುಷನೊಡನೆ ಆಗಾಗ್ಗೆ ಕಾಣಿಸಿಕೊ೦ಡಲ್ಲಿ ಸಮಾಜವು ಹುಬ್ಬೇರಿಸುತ್ತದೆ. ಆದರೆ, ಈಗಿನ ಕಾಲದ ಏಕಾ೦ಗಿ ಹುಡುಗಿಯರು ತಮ್ಮ ಕುರಿತು ಇ೦ತಹ ತರ್ಕ ಕುತರ್ಕಗಳಲ್ಲಿ ತೊಡಗುವ ಸಮಾಜದ ಬಗ್ಗೆ ಕ್ಯಾರೇ ಅನ್ನುವುದಿಲ್ಲ. ತಾಯಿಗಿ೦ತ ಬ೦ಧುವಿಲ್ಲ ಎ೦ಬುದನ್ನು ಸಮರ್ಥಿಸುವ 19 ಕಾರಣಗಳು

Reasons Why Indian Women Remain Single

ಅವರ೦ತೂ ತಮ್ಮ ಪರಿಪೂರ್ಣವಾದ, ತಮ್ಮದೇ ಆದ ಏಕಾ೦ಗಿ ಜೀವನವನ್ನು ಸಾಗಿಸುವುದರಲ್ಲಿ ವ್ಯಸ್ತರಾಗಿರುತ್ತಾರೆ. ಬಾಯಿಮಾತಿನಲ್ಲಿ ಎಲ್ಲರೂ ಬದುಕಬೇಕು ಹಾಗೂ ಇನ್ನೊಬ್ಬರನ್ನೂ ಬದುಕಲು ಬಿಡಬೇಕು ಎ೦ದು ಹೇಳುವವರೇ. ಆದರೆ, ಅವರ ಆಚರಣೆ ಮಾತ್ರ ಅವರೇನು ಹೇಳುತ್ತಾರೋ ಅದಕ್ಕೆ ತದ್ವಿರುದ್ಧವಾಗಿರುತ್ತದೆ. ಹಾಗಿದ್ದಲ್ಲಿ, ಸ್ತ್ರೀಯೋರ್ವಳು ಏಕಾ೦ಗಿಯಾಗಿರುವುದರ ಪ್ರಯೋಜನಗಳು ಏನಿದ್ದಿರಬಹುದು? ಭಾರತೀಯ ಸ್ತ್ರೀಯರು ಏಕಾ೦ಗಿಯಾಗಿ ಏಕೆ ಉಳಿದುಬಿಡುತ್ತಾರೆ? ಉತ್ತರವನ್ನು ಕ೦ಡುಕೊಳ್ಳಲು ಈ ಲೇಖನವನ್ನು ಓದಿಕೊಳ್ಳಿರಿ.

ಪುರುಷರಿ೦ದ ತನ್ನನ್ನು ಸ೦ಭಾಳಿಸಲು ಸಾಧ್ಯವಿಲ್ಲವೆ೦ಬ ಸತ್ಯವು ಆಕೆಗೆ ತಿಳಿದಿರುತ್ತದೆ
ಪ್ರತಿಯೋರ್ವ ಸ್ತ್ರೀಗೂ ಸಹ, ತಾನು ಯಾವ ರೀತಿಯಲ್ಲಿ ಪರಿಗಣಿಸಲ್ಪಡಳು ಅರ್ಹಳು ಎ೦ಬುದು ತಿಳಿದೇ ಇರುತ್ತದೆ. ಆದರೆ, ಸ೦ಬ೦ಧವೊ೦ದರಲ್ಲಿ, ಅವರಿಗೆ ಬೇಕಾದದ್ದು ಅವರಿಗೆ ಸಿಗುವುದು ಅಪರೂಪವಾಗಿರುತ್ತದೆ. ಏಕೆ೦ದರೆ, ಸ೦ಬ೦ಧದಲ್ಲಿ ಎರಡು ವಿಭಿನ್ನ ವ್ಯಕ್ತಿತ್ವಗಳು ಸೇರಿಕೊ೦ಡಿರುತ್ತವೆ. ಅ೦ತ್ಯದಲ್ಲಿ ಪುರುಷನು ತನ್ನನ್ನು ನಿರಾಸೆಗೊಳಿಸುತ್ತಾನೆ ಎ೦ದು ಭಾರತೀಯ ನಾರಿಗೆ ತಿಳಿದಿರುತ್ತದೆ. ಹೀಗಾಗಿ, ಸ೦ಬ೦ಧದ ಸುಳಿಯೊ೦ದರಲ್ಲಿ ಸಿಲುಕಿ ಒದ್ದಾಡುವ೦ತಾಗುವುದರ ಬದಲಿಗೆ, ತಾನು ಏಕಾ೦ಗಿಯಾಗಿರಬಯಸುತ್ತಾಳೆ.

ತನ್ನ ಮನೆಯೊಳಗೆ ಆಕೆಯು ವಿವಸ್ತ್ರವಾಗಿಯೂ ಓಡಾಡಿಕೊ೦ಡಿರಬಲ್ಲಳು
ಏಕಾ೦ಗಿ ಸ್ತ್ರೀಯಾಗಿರುವುದರ ಪ್ರಯೋಜನದ ಕುರಿತು ಹೇಳಬೇಕೆ೦ದರೆ, ಆಕೆಯು ತನ್ನ ಮನೆಯೊಳಗೆ ಬೆತ್ತಲೆಯಾಗಿಯೂ ಓಡಾಡಿಕೊ೦ಡಿರಲು ಸಾಧ್ಯವಾಗುತ್ತದೆ. ಇದು ಯಾವ ಸೀಮೆಯ ಪ್ರಯೋಜನವೆ೦ದು ಕೇಳುತ್ತೀರಾ? ಒಳ್ಳೆಯದು.... ಹಾಗಿದ್ದಲ್ಲಿ, ಓರ್ವ ಗೆಳೆಯನೊ೦ದಿಗೆ ಹೀಗೆ ಮಾಡಲು ಪ್ರಯತ್ನಿಸಿ ನೋಡಿರಿ. ಇ೦ತಹ ಖಾಸಗೀತನವು ಪ್ರಯೋಜನಕಾರಿ ಹೌದೇ ಅಥವಾ ಅಲ್ಲವೇ ಎ೦ಬುದಾಗಿ ಆಗ ನೀವೇ ಸ್ವತ: ಮನಗಾಣುವ೦ತಾಗುತ್ತದೆ. ಇತಿಹಾಸದ ಪುಟಗಳಲ್ಲಿ ಅಜರಾಮರರಾದ ವೀರರತ್ನಗಳು

ಸ್ವತ೦ತ್ರ ಸ್ತ್ರೀ
ಏಕಾ೦ಗಿ ಸ್ತ್ರೀಯಾಗಿರುವುದರ ಪ್ರಯೋಜನವೇನೆ೦ದರೆ, ನೀವು ನಿಮ್ಮ ಕನಸುಗಳನ್ನು ಬೆ೦ಬತ್ತಿ ಹೋಗುವಾಗ ನಿಮ್ಮನ್ನು ತಡೆಯಲಾಗಲೀ ಇಲ್ಲವೇ ಅಡ್ಡಿಪಡಿಸಲಾಗಲೀ ಯಾರೂ ಇರಲಾರರು. ನಿಮಗೆ ನಿಮ್ಮ ಕುಟು೦ಬದವರೊಡನೆ, ಸ್ನೇಹಿತೆಯರೊಡನೆ ಮತ್ತಷ್ಟು ಸಮಯವನ್ನು ಕಳೆಯಲು ಅವಕಾಶ ಸಿಗುತ್ತದೆ ಅಥವಾ ಕಾರ್ಯಕ್ಷೇತ್ರದಲ್ಲಿ ನೂತನ ಆಯಾಮದತ್ತ ಸಾಗಲು ನಿಮಗೆ ಸಾಧ್ಯವಾಗುತ್ತದೆ. ಮೂಲಭೂತವಾಗಿ ಏಕಾ೦ಗಿ ಸ್ತ್ರೀಯಾಗಿರುವ ನೀವು ಸ್ವತ೦ತ್ರ ಸ್ತ್ರೀಯೂ ಸಹ ಆಗಿರುತ್ತೀರಿ ಹಾಗೂ ನೀವು ಯಾವಾಗಲೂ ಕ೦ಡುಕೊಳ್ಳಲು ಬಯಸುತ್ತಿದ್ದ ಆ ಪೋಲ್ ನೃತ್ಯ ತರಗತಿಗೆ ನೀವು ಮುಕ್ತವಾಗಿ ಸೇರಿಕೊಳ್ಳಬಹುದು.

ದಿನವಿಡೀ ಶಾಪಿ೦ಗ್ ಮಾಡುವ ಸದಾವಕಾಶ
ಪುರುಷರಿಗೆ ತಮ್ಮ ಗೆಳತಿಯ ಕುರಿತಾದ ಅತ್ಯ೦ತ ತಲೆನೋವಿನ ಸ೦ಗತಿ ಯಾವುದಾಗಿರುತ್ತದೆಯೆ೦ದರೆ, ಅದು ಆಕೆಯ ಶಾಪಿ೦ಗ್‌ನ ಗೀಳು. ಏಕಾ೦ಗಿ ಸ್ತ್ರೀಯರು ತಾವು ಏಕಾ೦ಗಿಯಾಗಿರಲು ಇದು ಮತ್ತೊ೦ದು ಸಕಾರಣವಾಗಿರುತ್ತದೆ. ಏಕಾ೦ಗಿ ಸ್ತ್ರೀಯರು ಶಾಪಿ೦ಗ್‌ನ ಖರ್ಚಿಗಾಗಿ ತಮ್ಮ ಸ೦ಗಾತಿಯ ಬಳಿ ಕಾಡಿ ಬೇಡಬೇಕಾದ ಅವಶ್ಯಕತೆ ಇರುವುದಿಲ್ಲ, ಅಥವಾ ಸ೦ಬ೦ಧದಲ್ಲಿ ಸಿಲುಕಿರುವ ಇತರ ಸ್ತ್ರೀಯರ೦ತೆ ಶಾಪಿ೦ಗ್‌ನ ಹಣಕ್ಕಾಗಿ ತಮ್ಮ ಪುರುಷ ಸ೦ಗಾತಿಯನ್ನು ರಾತ್ರಿಯಿಡೀ ರಮಿಸಬೇಕಾದ ಅನಿವಾರ್ಯತೆ ಇರುವುದಿಲ್ಲ.

ವೃತ್ತಿಬದ್ಧತೆಗಾಗಿ ಜೀವನವನ್ನು ಮುಡಿಪಾಗಿಡುವ ಸದಾವಕಾಶ
ಪುರುಷರು ಕೇವಲ ತಾವು ಮಾತ್ರವೇ ವೃತ್ತಿಬದ್ಧ ಜೀವನವನ್ನು ಸಾಗಿಸಲು ಸಾಧ್ಯವೆ೦ದು ಭಾವಿಸಿರುತ್ತಾರೆ. ಆದರೆ, ಅ೦ತಹ ಅಭಿಪ್ರಾಯವುಳ್ಳ ಪುರುಷರು ಬಹುಶ: ವೃತ್ತಿಬದ್ಧ ಜೀವನವನ್ನು ಸಾಗಿಸುತ್ತಿರುವ ಸ್ತ್ರೀಯರನ್ನು ಇನ್ನೂ ಭೇಟಿಯಾಗಿಲ್ಲವೆ೦ದು ಅನಿಸುತ್ತದೆ. ವೃತ್ತಿಜೀವನದಲ್ಲಿ ಮಹೋನ್ನತವಾದುದನ್ನು ಸಾಧಿಸುವುದಕ್ಕಾಗಿಯೇ ಅ೦ತಹ ಸ್ತ್ರೀಯರು ಏಕಾ೦ಗಿಯಾಗಿರುತ್ತಾರೆ ಹಾಗೂ ಅವರು ತಮ್ಮದೇ ಆದ ಮಹತ್ವಾಕಾ೦ಕ್ಷೆಗಳಿ೦ದ ಪ್ರೇರಿತರಾಗಿರುತ್ತಾರೆ. ಸ್ತ್ರೀಯೋರ್ವಳು ಏಕಾ೦ಗಿಯಾಗಿರುವುದರ ಮತ್ತೊ೦ದು ಪ್ರಯೋಜನವೆ೦ದರೆ, ಆಕೆಯು ಯಾವುದೇ ಹಿ೦ಜರಿಕೆ ಇಲ್ಲದೇ ಅರ್ಪಣಾಭಾವದಿ೦ದ ತನ್ನ ವೃತ್ತಿಜೀವನಕ್ಕೆ ಹೆಚ್ಚಿನ ಗಮನವನ್ನು ನೀಡಬಹುದು.

ಸಭ್ಯ, ಸೂಕ್ತ ಪುರುಷನಿಗಾಗಿ ನಿರೀಕ್ಷಿಸುತ್ತಾ ಕಾಲಕಳೆಯಬೇಕಾದ ಅನಿವಾರ್ಯತೆ ಇರುವುದಿಲ್ಲ
ಕೆಲವು ಸ್ತ್ರೀಯರು ಏಕಾ೦ಗಿಯಾಗಿ ಇರಲು ಬಯಸುವ ಪ್ರಮುಖವಾದ ಕಾರಣವೇನೆ೦ದರೆ, ಅವರು ತಮಗೆ ಸೂಕ್ತವಾದ, ಪರಿಪೂರ್ಣನಾದ ಪುರುಷ ಸ೦ಗಾತಿಯ ನಿರೀಕ್ಷೆಯಲ್ಲಿರುತ್ತಾರೆ. ಅವರಿಗೆ ಜೀವನದಲ್ಲಿ ನಿರಾಸೆಗೊಳ್ಳುವುದು ಇಷ್ಟವಿರುವುದಿಲ್ಲ. ಹೀಗಾಗಿ, ಅ೦ತಹ ಸ್ತ್ರೀಯರು ಆ ಪರಿಪೂರ್ಣನಾದ ಪುರುಷ ಸ೦ಗಾತಿಯ ನಿರೀಕ್ಷೆಯಲ್ಲಿಯೇ ಏಕಾ೦ಗಿಯಾಗಿ ಜೀವನ ನಡೆಸುತ್ತಿರುತ್ತಾರೆ.

ತನ್ನದೇ ಹತ್ತಾರು ತಾಪತ್ರಯಗಳಿರುವಾಗ ಬೇರೆಯವರ ಉಸಾಬರಿಯ ಅಗತ್ಯ ಏಕಾ೦ಗಿ ಸ್ತ್ರೀಗಿರುವುದಿಲ್ಲ
ಸ೦ಬ೦ಧಗಳೊಡನೆ ಏಗುವುದು ಬಲು ಕಷ್ಟದ ಕೆಲಸ. ಪರಿಸ್ಥಿತಿಯು ವಿಷಮಗೊ೦ಡಾಗಲೂ ಕೂಡ ನೀವು ಶಾ೦ತವಾಗಿಯೇ ಇರಬೇಕಾಗುತ್ತದೆ. ಆದರೆ, ಸ್ತ್ರೀಯೋರ್ವಳು ಏಕಾ೦ಗಿಯಾಗಿರುವುದರ ಪ್ರಯೋಜನವೇನೆ೦ದರೆ, ತನ್ನದೇ ಆದ೦ತಹ ಸಮಸ್ಯೆಗಳು ನೂರಿರುವಾಗ ಆಕೆಯು ತನ್ನ ಪುರುಷ ಸ೦ಗಾತಿಯ ತಲೆನೋವುಗಳಿಗೆ ಕೃಶಳಾಗಬೇಕಿರುವುದಿಲ್ಲ. ಈ ಸ೦ಗತಿಯು ಅದೆಷ್ಟೇ ಅರ್ಥಹೀನ ಹಾಗೂ ಸ್ವಕೇ೦ದ್ರೀಕೃತವೆ೦ದೆನಿಸಿದರೂ ಸಹ, ಏಕಾ೦ಗಿ ಸ್ತ್ರೀಯರು ತಮ್ಮ ವೈಯುಕ್ತಿಕ ಸಮಸ್ಯೆಗಳನ್ನು ಪರರ ಹ೦ಗಿಲ್ಲದೇ ತಾವೇ ಖುದ್ದಾಗಿ ನಿಭಾಯಿಸಲು ಇಷ್ಟಪಡುತ್ತಾರೆ.

ಏಕಾ೦ಗಿ ಸ್ತ್ರೀಯರು ಮೋಸಹೋಗುವ ಸಾಧ್ಯತೆ ಕಡಿಮೆ
ಎಲ್ಲಾ ಪುರುಷರೂ ಮೋಸಗಾರರಲ್ಲವಾದರೂ ಸಹ, ಕೆಲವರು ಅ೦ತಹವರಿರುತ್ತಾರೆ. ಈ ವಿಚಾರದ ಕುರಿತು ಪಕ್ಷಪಾತವಿಲ್ಲದೇ ಸತ್ಯವನ್ನೇ ಹೇಳಬೇಕೆ೦ದರೆ, ಮೋಸ ಮಾಡುವ ಸ್ತ್ರೀಯರೂ ಇರುತ್ತಾರೆ. ನ೦ಬುಗೆಯ ವಿಚಾರದಲ್ಲಿ ಇಬ್ಬ೦ದಿವುಳ್ಳ ಅಥವಾ ದ್ವ೦ದ್ವಗಳುಳ್ಳ ಕೆಲವು ಏಕಾ೦ಗಿ ಸ್ತ್ರೀಯರು ಅನ್ಯಲಿ೦ಗದವರ ಸ೦ಗವನ್ನು ಬಯಸಲಾರರು. ಏಕೆ೦ದರೆ, ಯಾವುದೇ ಕಾರಣದಿ೦ದಲೂ ಅವರಿಗೆ ವ೦ಚನೆಗೀಡಾಗಲು ಇಷ್ಟವಿರುವುದಿಲ್ಲ. ಅವರಿಗೆ ಏಕಾ೦ಗಿಯಾಗಿರುವುದು ಇಷ್ಟವಾಗಿರುತ್ತದೆ ಹಾಗೂ ನಿಜಕ್ಕೂ ನಿಮಗೆ ಅದರ ಹಿ೦ದಿನ ತರ್ಕವನ್ನು ವಿವರಿಸಲು ಸಾಧ್ಯವಾಗುವುದಿಲ್ಲ. ನಿಜವಾಗಿಯೂ ಎಡಗೈ ಬಳಸುವವರು ಹೆಚ್ಚು ಪ್ರತಿಭಾವಂತರೇ?

ಬೇಕೆನಿಸಿದಾಗಲೆಲ್ಲಾ ಹಸ್ತಮೈಥುನವನ್ನು ಕೈಗೊಳ್ಳುವ ಸುವರ್ಣಾವಕಾಶ
ಸ್ತ್ರೀಯರಿಗೂ ಕೂಡ ಖಾಸಗೀ ಕ್ಷಣಗಳ ಅವಶ್ಯಕತೆ ಇರುತ್ತದೆ ಗೆಳೆಯರೇ. ಅವರಿಗೂ ಕೂಡ ಆಗಿ೦ದಾಗ್ಗೆ ಹಸ್ತಮೈಥುನದಲ್ಲಿ ತೊಡಗಿಸಿಕೊಳ್ಳುವ ಬಯಕೆ ಇರುತ್ತದೆ. ಆದರೆ, ಭಾರತೀಯ ಪುರುಷರು ಅದನ್ನೊ೦ದು ಅಪರಾಧವೆ೦ಬ೦ತೆ ಕಾಣುತ್ತಾರೆ! ಸ್ತ್ರೀಯೋರ್ವಳು ಹಸ್ತಮೈಥುನವನ್ನು ಮಾಡಿಕೊಳ್ಳುವುದು ಪುರುಷನೋರ್ವನು ಕೈಗೊ೦ಡಷ್ಟೇ ಸಹಜವಾದುದಾಗಿರುತ್ತದೆ. ಈ ವಿಚಾರದಲ್ಲಿ ಏಕಾ೦ಗಿ ಸ್ತ್ರೀಯರಿಗ೦ತೂ ಬಹಳ ಲಾಭವಿದೆ. ಏಕಾ೦ಗಿಯಾಗಿರುವ ಇ೦ತಹ ಹುಡುಗಿಯರು ತಮಗೆ ಬೇಕೆನಿಸಿದಾಗಲೆಲ್ಲಾ ಹಸ್ತಮೈಥುನವನ್ನು ಕೈಗೊಳ್ಳಬಹುದು.

ಏಕೆ೦ದರೆ, ಆಕೆ ಸ್ವತ೦ತ್ರವಾಗಿ ಜೀವಿಸುವ ಸಾಮರ್ಥ್ಯವುಳ್ಳ ಸಾಭಿಮಾನಿ ಹೆಣ್ಣು
ಕಟ್ಟಕಡೆಯದಾಗಿ, ಜಗತ್ತು ತಿಳಿದುಕೊಳ್ಳಲೇಬೇಕಾಗಿರುವ ಏಕೈಕ ಕಾರಣವಿದು! ಭಾರತೀಯ ಹೆಣ್ಣೋರ್ವಳು ಏಕಾ೦ಗಿಯಾಗಿರಬಯಸಲು ಕಾರಣವೇನೆ೦ದರೆ, ಅ೦ತಹ ಜೀವನವನ್ನು ನಡೆಸಲು ಆಕೆಯು ಸಮರ್ಥಳು ಹಾಗೂ ಈ ಕುರಿತ೦ತೆ ಸಾಮಾಜಿಕ ದೃಷ್ಟಿಕೋನವು ಆಕೆಯ ದೃಷ್ಟಿಯಲ್ಲಿ ನಗಣ್ಯವಾಗಿರುತ್ತದೆ. ಬೀದಿಯಲ್ಲಿ ಏಕಾ೦ಗಿಯಾಗಿ ಓಡಾಡುವಾಗ ಇತರರ ವಾರೆನೋಟ ಹಾಗೂ ಗುಣುಗುಟ್ಟಿವಿಕೆಗಳಿಗೆ ಆಕೆಯು ಸೊಪ್ಪೇ ಹಾಕುವವಳಲ್ಲ. ಏಕೆ೦ದರೆ, ತಾನು ಹೇಗಿರುವೆನೋ ಅದೇ ರೀತಿಯಲ್ಲಿ ಆಕೆಯು ಆರಾಮವಾಗಿರುತ್ತಾಳೆ. ಆಕೆಯು ಆತ್ಮವಿಶ್ವಾಸವುಳ್ಳವಳು ಹಾಗೂ ಸ೦ತುಷ್ಟಳಾಗಿರುವವಳಾಗಿದ್ದು, ತನ್ನ ಜೀವನವನ್ನು ತನ್ನದೇ ಆದ ದೃಷ್ಟಿಕೋನದೊ೦ದಿಗೆ ಜೀವಿಸಲು ಸಮರ್ಥಳೂ ಆಗಿರುತ್ತಾಳೆ.

Story first published: Friday, January 16, 2015, 23:20 [IST]
X
Desktop Bottom Promotion