Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪುರುಷನೋ V/S ಮಹಿಳೆಯೋ-ನಿಮ್ಮ ಬಾಸ್ ಯಾರಾಗಿರಲು ಬಯಸುತ್ತೀರಿ?
ಸುಮಾರು ಮೂವತ್ತು ವರ್ಷಗಳ ಹಿಂದೆ ಪ್ರಾಥಮಿಕ ಶಾಲೆಯ ಪಠ್ಯಪುಸ್ತಕದ ಒಂದು ಪಾಠ ಹೀಗಿತ್ತು. ನಮ್ಮ ಕುಟುಂಬ, ನಮ್ಮ ತಂದೆ ಹೊಲಕ್ಕೆ ಕೆಲಸ ಮಾಡಲು ಹೋಗುತ್ತಾರೆ. ನಮ್ಮ ತಾಯಿ ಮನೆಯಲ್ಲಿ ಅಡುಗೆ ಮಾಡುತ್ತಾರೆ, ಬಟ್ಟೆ ಒಗೆಯುತ್ತಾರೆ ಮತ್ತು ಬೆರಣಿಯಿಂದ ನೆಲ ಸಾರಿಸುತ್ತಾರೆ. ನಮ್ಮ ಅಜ್ಜ ನಮಗೆ ಕಥೆ ಹೇಳುತ್ತಾರೆ. ನಮ್ಮ ಅಜ್ಜಿ ನಮಗೆ ತಿಂಡಿ ನೀಡುತ್ತಾರೆ. ಹೀಗೇ ಪಾಠ ಮುಂದುವರೆಯುತ್ತದೆ. ಅಂದಿನ ದಿನಗಳಲ್ಲಿ ಪುರುಷರೇ ಹೊರಗೆ ಕೆಲಸ ಮಾಡುವುದು ಮತ್ತು ಮಹಿಳೆಯರು ಗೃಹಿಣಿಯಾಗಿ ಮನೆ ನಡೆಸುವುದೇ ಪದ್ಧತಿಯಾಗಿತ್ತು.
ಈ ಪಾಠ ಇಂದು ಮಕ್ಕಳಿಗೆ ಹೇಳಿದರೆ ನಾವೇ ನಗೆಪಾಟಲಿಗೆ ಈಡಾಗುತ್ತೇವೆ. ಇಂದಿನ ಪಾಠ ಸರಿಸುಮಾರು ಹೀಗಿರುತ್ತದೆ: ನಮ್ಮ ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ, ನಾವು ಬೇಬಿ ಸಿಟ್ಟಿಂಗ್ ನಲ್ಲಿ ಕಾಲ ಕಳೆಯುತ್ತೇವೆ. ನಮ್ಮ ಅಜ್ಜ ಅಜ್ಜಿ ಊರಿನಲ್ಲಿದ್ದಾರೆ. ನಾವು ವರ್ಷಕ್ಕೊಂದು ಸಲ ಊರಿಗೆ ಹೋಗುತ್ತೇವೆ. ಇತ್ಯಾದಿ. ಅಂದರೆ ಸಮಾಜದಲ್ಲಿ ಪುರುಷ ಮತ್ತು ಮಹಿಳೆ ಇಬ್ಬರೂ ಸರಿಸುಮಾರು ಸಮಪ್ರಮಾಣದಲ್ಲಿ ಉದ್ಯೋಗದಲ್ಲಿದ್ದಾರೆ. ಅಂತೆಯೇ ಉದ್ಯೋಗದಲ್ಲಿರುವ ಸ್ತರಗಳ ಕಾರಣ ಒಬ್ಬರು ಇನ್ನೊಬ್ಬರ ಅಡಿ ಕೆಲಸ ನಿರ್ವಹಿಸಬೇಕಾಗಿ ಬರುತ್ತದೆ. ಆದರೆ ನಿಮ್ಮ ಮೇಲಧಿಕಾರಿ ಪುರುಷರಾಗಿದ್ದರೆ ಮೇಲೋ ಅಥವಾ ಮಹಿಳೆಯಾಗಿದ್ದರೋ? ಈ ಬಗ್ಗೆ ಕೆಲವು ವಿವರಗಳನ್ನು ನೋಡೋಣ.

ಕಾರ್ಯಕ್ಷೇತ್ರದಲ್ಲಿ
ಹಿಂದಿನಿಂದ ನಡೆದು ಬಂದಿರುವ ಸಂಪ್ರದಾಯದಂತೆ ಪುರುಷರೇ ಹೆಚ್ಚಾಗಿ ಮೇಲ್ಮಟ್ಟದ ಹುದ್ದೆಗಳನ್ನು ಅಲಂಕರಿಸುತ್ತಾರೆ. ಈ ಸ್ತರದಲ್ಲಿರುವ ಪುರುಷರು ತಮ್ಮ ಕಾರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ ಹಾಗೂ ತಮ್ಮ ಕೆಳಗೆ ಕಾರ್ಯ ನಿರ್ವಹಿಸುವ ಎಲ್ಲರಿಂದಲೂ ಇದನ್ನೇ ಬಯಸುತ್ತಾರೆ. ಕೆಲಸದಲ್ಲಿ ವಿಳಂಬ ಮತ್ತು ತಪ್ಪುಗಳನ್ನು ಅವರು ಸಹಿಸುವುದಿಲ್ಲ ಹಾಗೂ ತಪ್ಪುಗಳಿಂದಾಗುವ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮಗಳಿಗೆ ಅವರನ್ನು ಗುರಿಯಾಗಿಸಿ ದಂಡವನ್ನೂ ವಿಧಿಸುತ್ತಾರೆ. ಇದೇ ವೇಳೆ ಉನ್ನತ ಸ್ಥಾನದಲ್ಲಿರುವ ಮಹಿಳೆಯರು ಅಷ್ಟೊಂದು ಬಿಗಿಯಾಗಿರುವುದಿಲ್ಲ. ತಮ್ಮ ಕೆಳಗಿನವರು ಯಾವುದಾದರೂ ತೊಂದರೆಯನ್ನು ಅಥವಾ ವಿಷಯವನ್ನು ವಿಮರ್ಶಿಸಲು ಬಂದರೆ ಮುಕ್ತಮನಸ್ಸಿನಿಂದ ಅವರೊಂದಿಗೆ ಮಾತುಕತೆ ನಡೆಸಿ ಪರಿಹಾರ ಸೂಚಿಸುತ್ತಾರೆ.

ಗೊಡ್ಡು ಹರಟೆ (ಗಾಸಿಪ್)
ಇಬ್ಬರು ಪುರುಷರಿದ್ದೆಡೆ ಚರ್ಚೆ, ಇಬ್ಬರು ಮಹಿಳೆಯರಿದ್ದೆಡೆ ಗಾಸಿಪ್ ಇರುತ್ತದೆ ಎಂಬುದೊಂದು ಹಳೆಯ ಆಂಗ್ಲ ಗಾದೆ. ತಮ್ಮ ಸುತ್ತಮುತ್ತಲ ಜನರಲ್ಲಿ ಏನು ನಡೆಯುತ್ತಿದೆ ಎಂಬ ಕುತೂಹಲ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು. ಹಾಗಾಗಿ ಪುರುಷ ಮೇಲಧಿಕಾರಿಗಳು ತಮ್ಮ ಕೆಳಗೆ ಕೆಲಸ ಮಾಡುವವರ ವೈಯಕ್ತಿಯ ವಿಷಯಗಳನ್ನು ಕೆದಕಲು ಹೋಗುವುದಿಲ್ಲ. ಇದೇ ವೇಳೆ ಮಹಿಳಾ ಉನ್ನತಾಧಿಕಾರಿ ಕೊಂಚ ಉತ್ಸುಕರಾಗುತ್ತಾರೆ. ಈ ಗುಟ್ಟನ್ನು ಅರಿತ ಸಮಯಸಾಧಕರು ಅಲ್ಲಿನ ವಿಷಯಗಳನ್ನು ಇಲ್ಲಿ ಇಲ್ಲಿನ ವಿಷಯಗಳನ್ನು ಅಲ್ಲಿ ಉಪ್ಪೂಕಾರ ಹಾಕಿ ತಿಳಿಸುವ ಮೂಲಕ ವಾತಾವರಣವನ್ನು ಕೆಡಿಸುತ್ತಾರೆ.

ಕಛೇರಿಯಲ್ಲಿದ್ದಾಗ ಮನೆಯ ಬಗ್ಗೆ ಯೋಚನೆ
ಕುಟುಂಬದ ಬಗ್ಗೆ ಪುರುಷರಿಗಿಂತಲೂ ಮಹಿಳೆಯರಿಗೇ ಹೆಚ್ಚಿನ ಕಾಳಜಿಯಿರುತ್ತದೆ. ಸ್ವಾಭಾವಿಕವಾಗಿ ಕಛೇರಿಯಲ್ಲಿದ್ದ ವೇಳೆಯಲ್ಲಿಯೂ ಅವರು ತಮ್ಮ ಕುಟುಂಬದ ಬಗ್ಗೆ ಚಿಂತನೆ ನಡೆಸುತ್ತಾರೆ. ಇದರಿಂದಾಗಿ ಕೆಲವು ಬಾರಿ ಅತ್ಯಂತ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ವೇಳೆ ಪೂರ್ಣವಾದ ಗಮನ ನೀಡಲಾಗದೇ ಸೂಕ್ತನಿರ್ಣಯ ಕೈಗೊಳ್ಳಲು ವಿಫಲರಾಗುತ್ತಾರೆ. ಇದೇ ವೇಳೆ ಪುರುಷ ಮೇಲಧಿಕಾರಿ ಕಛೇರಿಯ ವೇಳೆಯಲ್ಲಿ ಸಂಪೂರ್ಣರಾಗಿ ತಮ್ಮ ಕೆಲಸದಲ್ಲಿ ಮಗ್ನರಾಗಿ ಬಿಡುವ ಕಾರಣ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲು ಸಮರ್ಥರಾಗುತ್ತಾರೆ.

ಉದ್ಯೋಗಿಗಳನ್ನು ಅರ್ಥ ಮಾಡಿಕೊಳ್ಳುವುದು
ಹೆಚ್ಚಿನ ಬಾರಿ ಮೇಲಧಿಕಾರಿಗಳು ತಮ್ಮ ಕೆಲಸದ ಬಗ್ಗೆ ಅತೀವ ಹೆಚ್ಚಿನ ಕಾಳಜಿ ತೋರುತ್ತಾ ಒಂದು ರೀತಿಯಲ್ಲಿ ಕಾರ್ಯವ್ಯಸನಿಗಳಾಗಿರುತ್ತಾರೆ (workaholic). ಇವರಿಗೆ ತಮ್ಮ ಕೆಲಸ ಬಿಟ್ಟು ಬೇರೆಯವರ ತೊಂದರೆಗಳೊಂದೂ ಪ್ರಮುಖವಾಗಿ ಕಾಣಿಸುವುದೇ ಇಲ್ಲ. ಉದ್ಯೋಗಿಗಳು ನೀಡುವ ನೆವಗಳು ನಿಜವಾದರೂ ಇವರಿಗೆ ಅವು ಸುಳ್ಳು ಹೇಳಿ ಕೆಲಸದಿಂದ ತಪ್ಪಿಸಿಕೊಳ್ಳುವ ಹುನ್ನಾರದಂತೆಯೇ ಭಾಸವಾಗುತ್ತದೆ. ಈ ಪರಿಸ್ಥಿತಿಯಲ್ಲಿ ಪುರುಷ ಅಥವಾ ಮಹಿಳಾ ಮೇಲಧಿಕಾರಿ ಯಾರು ಮೇಲು ಎಂದು ಕೇಳಿದರೆ ಹೆಚ್ಚಿನವರು ಕೋಮಲ ಹೃದಯವುಳ್ಳ ಮಹಿಳೆಯೇ ಆಗಿರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ವಾಸ್ತವದಲ್ಲಿ ಪುರುಷ ಮೇಲಧಿಕಾರಿಯೇ ತಮ್ಮ ಉದ್ಯೋಗಿಗಳ ಕಷ್ಟಗಳ ಬಗ್ಗೆ ವ್ಯಾಕುಲತೆಯನ್ನು ತೋರಿ ತಮ್ಮಿಂದಾದ ಸಹಾಯವನ್ನು ನೀಡುತ್ತಾರೆ. ಮಹಿಳಾ ಮೇಲಧಿಕಾರಿಗಳು ಈ ಮನವಿಯನ್ನೇ ಅಸ್ತ್ರವನ್ನಾಗಿಸಿ ತಮ್ಮ ಕೆಳಗೆ ಕೆಲಸ ಮಾಡುವವರ ಮೇಲೆ ಇನ್ನಷ್ಟು ಹತೋಟಿ ಸಾಗಿಸಲು ಬಳಸುವುದು ಕಂಡುಬಂದಿದೆ.

ಮಾತುಗಳಲ್ಲಿ ಅವಾಚ್ಯ ಶಬ್ದ ಬಳಸುವುದು
ಎಷ್ಟೇ ಎಚ್ಚರಿಕೆಯಿಂದ ಕೆಲಸ ಮಾಡಿದರೂ ಯಾವುದೋ ಒಂದು ಕ್ಷಣದ ಮೈಮರೆತ ಘಳಿಗೆಯಲ್ಲಿ ಏನೋ ಒಂದು ಪ್ರಮಾದವಾಗಿ ಕೆಲವು ತೊಂದರೆಗಳು ಎದುರಾಗುತ್ತವೆ. ಈ ವಿಷಯ ತಿಳಿದ ಯಾವುದೇ ಮೇಲಧಿಕಾರಿ ಕೋಪಾವಿಷ್ಠರಾಗುವುದು ಸಹಜ. ಈ ಕೋಪದ ಭರದಲ್ಲಿ ಅವರು ಉಪಯೋಗಿಸುವ ಪದಗಳನ್ನು ಪಟ್ಟಿ ಮಾಡಿದರೆ ಪುರುಷ ಮೇಲಧಿಕಾರಿ ಸೂಕ್ತವಾದ ಮತ್ತು ಗಂಭೀರವಾದ ಪದಗಳನ್ನೇ ಉಪಯೋಗಿಸುವುದು ಕಂಡುಬಂದಿದೆ. ಇದೇ ವೇಳೆ ಮಹಿಳಾ ಮೇಲಧಿಕಾರಿ ತಮ್ಮ ಸ್ಥಿಮಿತವನ್ನು ಕಳೆದುಕೊಂಡು ಅವಾಚ್ಯ ಮತ್ತು ವಾಮಗೋಚರ ಪದಗಳನ್ನು ಉಪಯೋಗಿಸಿರುವುದು ಕಂಡುಬಂದಿದೆ. ಅದರಲ್ಲೂ ಮಹಿಳಾ ಅಧಿಕಾರಿಯ ಕೈಕೆಳಗಿನ ಉದ್ಯೋಗಿ ಮಹಿಳೆಯಾಗಿದ್ದರೆ ಮತ್ತು ವಿವಾಹಿತೆಯಾಗಿದ್ದರೆ ಈ ಪದಪುಂಜ ಇನ್ನಷ್ಟು ಕೆಟ್ಟದಾಗಿರುವುದು ಗಮನಕ್ಕೆ ಬಂದಿದೆ.



Click it and Unblock the Notifications
