Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಂತಸವೆಂಬ ಸ್ವರ್ಗಕ್ಕಾಗಿ ದುಃಖವೆಂಬ ನರಕವನ್ನು ದಾಟಿ
ಜೀವನದಲ್ಲಿ ಸಂತೋಷವನ್ನು ನಾವು ಕಂಡುಕೊಳ್ಳಬೇಕು ಎಂದಾದಲ್ಲಿ ನಾವು ಯಾವತ್ತಿಗೂ ಧನಾತ್ಮಕವಾಗಿರಬೇಕು. ಧನಾತ್ಮಕ ಯೋಚನೆಗಳು ಮಾತ್ರವೇ ನಮ್ಮ ಜೀವನದಲ್ಲಿ ಸಂತಸದ ಅಲೆಗಳನ್ನು ತರಲು ಸಾಧ್ಯ. ಯಾವತ್ತಿಗೂ ಋಣಾತ್ಮಕವಾಗಿ ಯೋಚಿಸುವುದು ನನಗೆ ಮಾತ್ರವೇ ಈ ರೀತಿಯ ಸೋಲು ಎಂದು ಭಾವಿಸುವುದು ನಮ್ಮ ಜೀವನದ ಅತ್ಯಲ್ಪ ಸಂತೋಷವನ್ನು ಬಲಿತೆಗೆದುಕೊಳ್ಳುತ್ತದೆ. ನಿಮ್ಮನ್ನು ನೀವು ಬದಲಾಯಿಸಿಕೊಂಡು ಸೋಲಿದ್ದರೂ ನಾನು ಅದನ್ನು ಗೆದ್ದು ತೋರಿಸುತ್ತೇನೆ ಎಂಬ ಹುಮ್ಮನ್ನಸ್ಸನ್ನು ಬೆಳೆಸಿಕೊಂಡಲ್ಲಿ ಗೆಲುವಿನ ಕುದುರೆಯ ಬೆನ್ನೇರಿ ನಾವು ಸವಾರಿ ಮಾಡಬಹುದು.
ಅದರಲ್ಲೂ ಹಿಂದಿನ ತಪ್ಪುಗಳನ್ನು ನೆನೆದು ಅದರಲ್ಲೇ ಬೇಯುವುದಕ್ಕಿಂತ ಆ ತಪ್ಪಿನಿಂದ ಹೊರಬರುವ ಸರಿ ವಿಧಾನಗಳನ್ನು ನೀವು ಆಯ್ದುಕೊಳ್ಳಿ. ಜೀವನ ತುಂಬಾ ಚಿಕ್ಕದು ಗೆಳೆಯರೇ ಈ ಚಿಕ್ಕ ಸಮಯದಲ್ಲೇ ನಿಮ್ಮ ಹತಾಶೆ, ದುಗುಡ ಬೇಸರಗಳನ್ನೇ ನೀವು ಇದರಲ್ಲಿ ತುಂಬಿಕೊಳ್ಳುತ್ತೀರಿ ಎಂದಾದಲ್ಲಿ ಆ ದೇವರು ಕೊಟ್ಟಿರುವ ಜೀವನದ ಸಮಯ ಬೇಗನೇ ಮುಗಿದು ಹೋಗಿಬಿಡುತ್ತದೆ ಮತ್ತು ಬಾರದ ಸಂತಸವನ್ನು ನೆನೆದು ನೀವು ದುಃಖಿತರಾಗಬೇಕಾಗುತ್ತದೆ.
ನಿಮ್ಮ ಜೀವನದಲ್ಲಿ ನೀವು ಮಾಡುವ ಕೆಲವೊಂದು ಅಂಶಗಳನ್ನು ಬದಿಗಿಟ್ಟಾಗ ನಗುವೆಂಬ ಸ್ವರ್ಗ ನಿಮ್ಮನ್ನು ಬರಮಾಡಿಕೊಳ್ಳುತ್ತದೆ. ಹಾಗಿದ್ದರೆ ನಿಮ್ಮ ಸಂತಸವನ್ನು ಕಿತ್ತುಕೊಂಡು ನಿಮ್ಮನ್ನು ಅಸಂತೋಷಿಯನ್ನಾಗಿ ಮಾಡುವ ಆ ದುಃಖಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಿಂದ ತಿಳಿದುಕೊಳ್ಳೋಣ..

ತಪ್ಪನ್ನೇ ಎತ್ತಿತೋರಿಸುವುದು
ಜೀವನದಲ್ಲಿ ತಪ್ಪು ಮಾಡಿದ್ದೀರಿ ಎಂದಾದಲ್ಲಿ ಅದನ್ನು ತಿದ್ದಿಕೊಳ್ಳಿ. ಪಶ್ಚಾತ್ತಾಪಕ್ಕಿಂತ ಬೇರೊಂದು ಶಿಕ್ಷೆಯಿಲ್ಲ. ಮುಂದೆ ಆ ತಪ್ಪು ಘಟಿಸದಂತೆ ನಿಮ್ಮ ಜೀವನವನ್ನು ಮಾರ್ಪಡಿಸಿಕೊಳ್ಳಿ. ನಿಮ್ಮ ಸುತ್ತಲಿನ ಜನರು ಆ ತಪ್ಪಿಗಾಗಿ ನಿಮ್ಮನ್ನು ದೂಷಿಸುತ್ತಾ ನಿಮ್ಮನ್ನು ನಿಂದಿಸುತ್ತಿದ್ದರೂ ತಲೆಎತ್ತಿ ಬಾಳಿರಿ. ಅವರು ಕೂಡ ನಿಮ್ಮ ಸ್ಥಿರತೆಯನ್ನು ನೋಡಿ ನಿಮ್ಮನ್ನು ನಿಂದಿಸುವುದನ್ನು ಮರೆತುಬಿಡಬೇಕು.

ಆರ್ಥಿಕ ಸಾಲ
ಹಾಸಿಗೆಯಿದ್ದಷ್ಟು ಕಾಲು ಚಾಚು ಎಂಬ ಮಾತಿನಂತೆ ನಿಮ್ಮ ಆರ್ಥಿಕ ಸ್ಥಿತಿಯನ್ನು ಗಮನಿಸಿಕೊಂಡು ನಿಮಗೆ ಎಷ್ಟು ಅಗತ್ಯವೋ ಅಂತಹುದ್ದಕ್ಕೆ ಮಾತ್ರವೇ ಖರ್ಚು ಮಾಡಿ. ಸಾಲವೆಂಬ ಹೊನ್ನ ಶೂಲ ನಿಮ್ಮನ್ನು ಇರಿಯುವ ಮುನ್ನವೇ ಎಚ್ಚೆತ್ತುಕೊಳ್ಳಿ ಮತ್ತು ನಿಮ್ಮ ಅಗತ್ಯಕ್ಕೆ ತಕ್ಕಂತೆ ಹಣವನ್ನು ಖರ್ಚು ಮಾಡಿ.

ಇತರರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳುವುದು
ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಹಂಬಲವುಳ್ಳವರು ನೀವಾಗಿದ್ದಲ್ಲಿ ನಿಮ್ಮನ್ನು ನೀವೇ ಕೀಳರಿಮೆಯಿಂದ ನೋಡುವುದನ್ನು ಬಿಟ್ಟುಬಿಡಿ. ಇತರರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳುವುದಕ್ಕೆ ಮುನ್ನ ನಿಮ್ಮಲ್ಲಿರುವ ವಿಶಿಷ್ಟ ಗುಣಗಳನ್ನು ಗೌರವಿಸಿಕೊಳ್ಳುವುದನ್ನು ಕಲಿತುಕೊಳ್ಳಿ. ಭಗವಂತ ಪ್ರತಿಯೊಬ್ಬರಲ್ಲೂ ಅತಿ ವಿಶಿಷ್ಟ ಅಂಶಗಳನ್ನು ದಯಪಾಲಿಸಿದ್ದಾನೆ. ನಿಮ್ಮಲ್ಲೂ ಆ ವಿಶೇಷತೆ ಇದ್ದು ಅದು ಏನು ಎಂಬುದನ್ನು ಮೊದಲು ಕಂಡುಕೊಳ್ಳಿ.

ವಿಷಕಾರಿ ಅನುಬಂಧ
ನಿಮಗೆ ಕೆಟ್ಟದ್ದನ್ನು ಬಯಸುವ ಮತ್ತು ನಿಮ್ಮನ್ನು ಕೆಟ್ಟದ್ದಕ್ಕೆ ಪ್ರೇರೇಪಿಸುವ ಜನರಿಂದ ಆದಷ್ಟು ದೂರಿವಿರಿ. ದುರ್ಜನರ ಸಂಗ ಜೇನು ಕಡಿದಂತೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ತಾವು ಕೆಡವುದಲ್ಲದೆ ತಮ್ಮೊಂದಿಗೆ ಇರುವವರನ್ನು ಕೆಡಿಸುವ ಗುಣವನ್ನು ಇಂತಹವರು ಹೊಂದಿರುತ್ತಾರೆ ಎಂಬುದು ಮರೆಯದಿರಿ.

ಋಣಾತ್ಮಕ ಚಿಂತನೆಗಳು
ನಿಮ್ಮನ್ನು ನೀವೇ ಋಣಾತ್ಮಕವಾಗಿ ಅವಲೋಕಿಸುವುದನ್ನು ಮೊದಲು ಬಿಟ್ಟುಬಿಡಿ. ನಿಮ್ಮನ್ನು ನೀವೇ ಜರೆದುಕೊಳ್ಳುವುದು ಅಸಹಾಯಕ ಎಂಬುದಾಗಿ ಬಣ್ಣಿಸಿಕೊಳ್ಳುವ ಗುಣಗಳನ್ನು ಮೊದಲು ಬಿಟ್ಟುಬಿಡಿ. ಸಾಧಿಸಿದರೆ ಸಬಳ ನುಂಗಬಹುದು ಎಂಬ ಮಾತಿನಂತೆಯೇ ಪ್ರಯತ್ನಪಡಿ ಮತ್ತು ಉತ್ತಮ ಫಲಿತಾಂಶದ ಭರವಸೆ ನಿಮ್ಮಲ್ಲಿರಲಿ.

ಅಸಮಾಧಾನಗೊಳಿಸುವ ಅಂಶಗಳನ್ನು ತ್ಯಜಿಸಿ
ನಿಮಗೆ ಅನುಕೂಲಕರವಾಗಿಲ್ಲದ ಅಂಶಗಳನ್ನು ತ್ಯಜಿಸಿ. ದಿರಿಸುಗಳು, ನೀವು ಧರಿಸು ಪಾದರಕ್ಷೆಗಳು ನಿಮಗೆ ಹಿತವನ್ನುಂಟು ಮಾಡುವುದಿಲ್ಲ ಎಂದಾದಲ್ಲಿ ಅವುಗಳನ್ನು ತ್ಯಜಿಸಿ. ಮನೆಯ ಪೀಠೋಪಕರಣಗಳನ್ನು ಬದಲಾಯಿಸಿ ನಿಮ್ಮ ಅಭಿರುಚಿಗೆ ತಕ್ಕಂತೆ ಅವುಗಳನ್ನು ಹೊಂದಿಸಿ .ಹೀಗೆ ನಿಮ್ಮ ಮನಮೆಚ್ಚುವ ಕೆಲಸಗಳನ್ನು ಮಾಡಿ.

ಇಷ್ಟವಿಲ್ಲದ ಉದ್ಯೋಗ
ನೀವು ಮಾಡುವ ಕೆಲಸದ ಮೇಲೆ ನಿಮಗೆ ಒಲವಿದ್ದರೆ ಮಾತ್ರ ಅದರಲ್ಲಿ ಪೂರ್ಣ ಸಫಲತೆಯನ್ನು ಪಡೆಯಲು ಸಾಧ್ಯ. ಆದ್ದರಿಂದ ನಿಮ್ಮ ಕೆಲಸವನ್ನು ಪ್ರೀತಿಸಿ. ಇಲ್ಲವೇ ನಿಮ್ಮ ಇಷ್ಟವಿಲ್ಲದ ಉದ್ಯೋಗವನ್ನು ಬಿಟ್ಟುಬಿಡಿ. ಮನಕ್ಕೆ ಒಪ್ಪದ ಕೆಲಸಗಳನ್ನು ಮಾಡುವುದೂ ಕೂಡ ನಿರಾಸೆ ಒತ್ತಡವನ್ನು ಹೇರುತ್ತವೆ ಎಂಬುದು ಗಮನದಲ್ಲಿರಲಿ.



Click it and Unblock the Notifications









