Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜಗತ್ತಿನ ಎಡಗೈ ಸಾಧಕರಿಗೆ ನಮ್ಮದೊಂದು ಸಲಾಮ್
ಬಲಗಡೆ ಮೆದುಳಿಗಿಂತ ಎಡಗಡೆಯಿರುವ ಮೆದುಳು ಹೆಚ್ಚು ವೇಗವಾಗಿ ಕೆಲಸ ಮಾಡುತ್ತದೆ ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ. ಇದರಿಂದಾಗಿಯೇ ಎಡಗೈಯನ್ನು ಉಪಯೋಗಿಸುವ ವ್ಯಕ್ತಿಗಳು ಹೆಚ್ಚು ಜಾಣ್ಮೆಯನ್ನು ಪ್ರದರ್ಶಿಸುತ್ತಾರೆ. ಆದರೆ ಬಲಗೈಯ ಪ್ರಭಾವ ಹೆಚ್ಚಾಗಿರುವ ಕಾರಣ ಯಾವುದೇ ವಸ್ತುವನ್ನು ಮಾಡುವುದಿದ್ದರೂ ಅದನ್ನು ಬಲಗೈಯವರ ಉಪಯೋಗಕ್ಕೆ ತಕ್ಕಂತೆ ಮಾಡಲಾಗುತ್ತದೆ. ಉದಾಹರಣೆಗೆ ನಾವು ಉಪಯೋಗಿಸುವಂತಹ ಕಂಪ್ಯೂಟರ್ ಮೌಸ್.
ವಿಶ್ವದೆಲ್ಲೆಡೆ ಬಲಗೈಯವರಿಗೆ ಅತಿಯಾದ ಪ್ರಾಮುಖ್ಯತೆ ನೀಡುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಶತಮಾನಗಳಿಂದಲೂ ಎಡಗೈಯವರು ಭೇದಭಾವಕ್ಕೆ ಒಳಗಾಗುತ್ತಿದ್ದಾರೆ. ಕೆಲವೊಂದು ದೇಶಗಳಲ್ಲಿ ಎಡಗೈ ಬಳಸುವವರನ್ನು ದುರಾದೃಷ್ಟ ಮತ್ತು ಪಿಶಾಚಿಗಳೆಂದು ಕರೆಯುತ್ತಾರೆ. ಇಂಗ್ಲೀಷ್‌ನಲ್ಲಿ ರೈಟ್ ಎಂದರೆ ಸರಿ ಎಂದರ್ಥ. ಲ್ಯಾಟಿನ್ ಭಾಷೆಯಲ್ಲಿ ಲೆಫ್ಟ್ ಎಂದರೆ ದುರಾದೃಷ್ಟವೆಂದರ್ಥ. ನಿಜವಾಗಿಯೂ ಎಡಗೈ ಬಳಸುವವರು ಹೆಚ್ಚು ಪ್ರತಿಭಾವಂತರೇ?
ಆದರೆ ಇದೆಲ್ಲವೂ ಕೇವಲ ಅರ್ಥವಿಲ್ಲದ್ದದೆಂದು ಎಡಗೈಯನ್ನು ಬಳಸುತ್ತಿರುವ ಕೆಲವು ವ್ಯಕ್ತಿಗಳ ಸಾಧನೆಗಳನ್ನು ನೋಡಿದಾಗ ತಿಳಿದುಬರುತ್ತದೆ. ವಿಶ್ವದಲ್ಲಿ ಜನಪ್ರಿಯತೆಯನ್ನು ಪಡೆದಿರುವಂತಹ ಕೆಲವೊಂದು ವ್ಯಕ್ತಿಗಳ ಬಗ್ಗೆ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳುವ...

ಸಚಿನ್ ತೆಂಡೂಲ್ಕರ್
ವಿಶ್ವ ಕ್ರಿಕೆಟಿನಲ್ಲಿ ದಾಖಲೆಗಳ ಮೇಲೆ ದಾಖಲೆಯನ್ನು ಬರೆದು, ಸ್ಟೇಡಿಯಂಗೆ ಇಳಿದಾಗ ಎದುರಾಳಿ ಬೌಲರ್ ಗಳಲ್ಲಿ ನಡುಕ ಮೂಡಿಸುತ್ತಿದ್ದ ಸಚಿನ್ ತೆಂಡೂಲ್ಕರ್ ಬಲಗೈ ಬ್ಯಾಟ್ಸ್ ಮೆನ್. ಆದರೂ ಅವರು ಎಡಗೈಯನ್ನೇ ಬಳಸುತ್ತಿದ್ದರು. ಎಡಗೈ ಬಳಸುತ್ತಿರುವವರು ಜನಪ್ರಿಯರಾಗಿರುವವರ ಪಟ್ಟಿಯಲ್ಲಿ ಸಚಿನ್ ಅಗ್ರ ಸ್ಥಾನದಲ್ಲಿದ್ದಾರೆ. ಕ್ರೀಡೆಯಲ್ಲಿ ಹಲವಾರು ಮಂದಿ ಎಡಗೈ ಬಳಸುತ್ತಿರುವವರು ಸಾಧನೆಗಳನ್ನು ಮಾಡಿದ್ದಾರೆ. ಅದರಲ್ಲೂ ಕ್ರಿಕೆಟಿನಲ್ಲಿ ಸೌರವ್ ಗಂಗೂಲಿ, ಯುವರಾಜ್ ಸಿಂಗ್, ಇರ್ಫಾನ್ ಪಠಾಣ್ ಮತ್ತು ಜಹೀರ್ ಖಾನ್ ಮೈದಾನದಲ್ಲಿ ನಮ್ಮನ್ನು ಮನೋರಂಜಿಸಿದ್ದಾರೆ ಎನ್ನುವುದನ್ನು ಮರೆಯಬಾರದು. ಇವರೆಲ್ಲರೂ ತಮ್ಮ ಎಡಗೈ ಆಟದಿಂದಲೇ ಮಿಂಚಿದವರು.

ರತನ್ ಟಾಟಾ
ಬಲಗೈ ಬಳಸುತ್ತಿರುವವರೇ ಸಾಮ್ರಾಜ್ಯವನ್ನಾಳುತ್ತಿರುವ ಉದ್ಯಮ ಲೋಕದಲ್ಲೂ ಎಡಗೈಯವರು ಸಾಧನೆ ಮಾಡಿದ್ದಾರೆ. ರತನ್ ಟಾಟಾ ಅವರು ಎಡಗೈಯನ್ನು ಬಳಸುವಂತಹ ಉದ್ಯಮಿ. ಅವರು ತನ್ನ ಎಡಗೈಯಿಂದಲೇ ಸಹಿ ಮಾಡಿ ಈಗ ತನ್ನ ಕಂಪೆನಿಯನ್ನು ವಿಶ್ವಮಟ್ಟದಲ್ಲಿ ಬೆಳೆಸಿದ್ದಾರೆ.

ಕರಣ್ ಜೋಹರ್
ಬಾಲಿವುಡ್‌ನ ನಿರ್ಮಾಪಕ, ನಿರ್ದೇಶಕ, ಕೌಟುಂಬಿಕ ಚಿತ್ರಗಳನ್ನು ಮಾಡುವಲ್ಲಿ ಎತ್ತಿದ ಕೈಯಾಗಿರುವ ಕರಣ್ ಜೋಹರ್ ಕೂಡ ಎಡಗೈ ಬಳಸುವ ವ್ಯಕ್ತಿ. ಮುಂದಿನ ಸಲ ನೂರು ಕೋಟಿ ರೂ. ಸಿನೆಮಾವನ್ನು ನೋಡುತ್ತಿರುವಾಗ ಅದು ಎಡಗೈ ನಿರ್ದೇಶಕ ಕರಣ್ ಜೋಹರ್‌ದ್ದು ಎಂದು ನೆನಪಿರಲಿ.

ಅಮಿತಾಭ್ ಮತ್ತು ಅಭಿಷೇಕ್ ಬಚ್ಚನ್
ಬಾಲಿವುಡ್‌ನ ಶೇಹನ್ ಷಾ ಅಮಿತಾಭ್ ಬಚ್ಚನ್ ಅವರು ಕೂಡ ಎಡಗೈ ಬಳಸುವ ವ್ಯಕ್ತಿಗಳ ಪಟ್ಟಿಯಲ್ಲಿದ್ದಾರೆ. ಅವರ ಮಗ ಅಭಿಷೇಕ್ ಬಚ್ಚನ್ ಕೂಡ ಎಡಗೈಯನ್ನು ಬಳಸುತ್ತಾರೆ. ಬಿಗ್ ಬಿ ಮತ್ತು ಜೂನಿಯರ್ ಬಿ ತಮ್ಮ ಕಾಲ್ ಶೀಟ್‌ಗೆ ಸಹಿ ಮಾಡಲು ಎಡಗೈಯನ್ನು ಬಳಸುತ್ತಾರೆ.

ಮಹಾತ್ಮ ಗಾಂಧಿ
ಈ ಹೆಸರೇ ಎಲ್ಲವನ್ನು ತಿಳಿಸಿಬಿಡುತ್ತದೆ. ಭಾರತದ ಸ್ವಾತಂತ್ರ್ಯ ಮತ್ತು ವಿಶ್ವ ಮಟ್ಟದಲ್ಲಿ ಇಂದು ಭಾರತದ ಹೆಸರು ಇರಬೇಕಾದರೆ ಅದಕ್ಕೆ ಪ್ರಮುಖ ಕಾರಣರು ಮಹಾತ್ಮ ಗಾಂಧಿ. ತುಂಡು ಬಟ್ಟೆ, ಕೈಯಲ್ಲಿ ಒಂದು ಊರುಗೋಲು ಹಿಡಿದುಕೊಂಡು ಭಾರತದಾದ್ಯಂತ ಸಂಚರಿಸಿ ಸ್ವಾತಂತ್ರ್ಯಕ್ಕಾಗಿ ಶಾಂತಿಯಿಂದ ಹೋರಾಟ ಮಾಡಿದವರು. ಇವರು ಕೂಡ ಎಡಗೈ ಬಳಸುವವರಾಗಿದ್ದರು ಎನ್ನುವುದನ್ನು ತಿಳಿದುಕೊಂಡು ನಾವು ಹೆಮ್ಮೆ ಪಡಬೇಕಾಗಿದೆ.

ನರೇಂದ್ರ ಮೋದಿ
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಮಟ್ಟದಲ್ಲಿ ಸಾಧನೆ ಮಾಡಿದ ಎಡಗೈ ಬಳಸುವವರ ಪಟ್ಟಿಗೆ ಹೊಸ ಸೇರ್ಪಡೆ.



Click it and Unblock the Notifications


