ಹುಡುಗಿಯರ ವಿಚಿತ್ರ ವರ್ತನೆ, ಅರ್ಥೈಸಿಕೊಳ್ಳುವುದೇ ಕಷ್ಟ

By Deepu

ಜೀವನವೆಂಬ ಪ್ರಯಾಣದಲ್ಲಿ ನಾವು ಎಷ್ಟೋ ಮಂದಿಯನ್ನು ಭೇಟಿಯಾಗುತ್ತೇವೆ. ಅವರಲ್ಲಿ ಕೆಲವರು ನೆನಪಿನನಲ್ಲಿ ಉಳಿದಿದ್ದರೆ ಇನ್ನು ಕೆಲವರು ಮರೆತು ಹೋಗುತ್ತಾರೆ. ಹೀಗೆ ನೆನಪಿನಲ್ಲಿ ಉಳಿದವರು ಒಮ್ಮೊಮ್ಮೆ ಸಂತಸವನ್ನು ಇನ್ನೊಮ್ಮೆ ದುಃಖವನ್ನು ನೀಡುತ್ತಿರುತ್ತಾರೆ. ನೆನಪಿನಂಗಳದಲ್ಲಿ ಬೆಚ್ಚನೆಯ ಪಿಸುಮಾತುಗಳನ್ನು ನುಡಿದು ಆಗಾಗ್ಗೆ ಕಚಗುಳಿಯನ್ನಿಡುವ ಇವರುಗಳು ಮರೆತರೂ ಮರೆಯಲಾರೆ ಎಂಬಂತಹ ಭಾವವನ್ನು ನಮ್ಮ ಮನಸ್ಸಿನಲ್ಲಿ ತಾಳುವಂತೆ ಮಾಡುತ್ತಾರೆ.

ಈ ಕಚಗುಳಿಯ ಮಧುರ ನಿನಾದವನ್ನು ಮಾಡುವವರು ಹುಡುಗಿಯರೇ. ತಮ್ಮ ಆಕರ್ಷಕ ನೋಟಗಳಿಂದ, ಮುಗುಳ್ನಗುವಿನಿಂದ ಅನುರಾಗದ ಅಲೆಗಳನ್ನು ಮನದಲ್ಲಿ ಎಬ್ಬಿಸಿ ಆಮೇಲೆ ನೆನಪೇ ಇಲ್ಲದಷ್ಟು ದೂರಕ್ಕೆ ಹಾರಿಹೋಗುವಂತಹ ಚಿಟ್ಟೆಗಳಿವರು. ತಾವು ಹೇಳಿದ್ದೇ ಆಗಬೇಕು. ತಮ್ಮ ಮಾತೇ ನಡೆಯಬೇಕು ಎಂಬಂತಹ ಹಠಮಾರಿ ಮುಂಗೋಪ ಸ್ವಭಾವದವರು. ಹುಚ್ಚು ಹಿಡಿಸುವಷ್ಟು ಪ್ರೀತಿಯನ್ನು ಬೊಗಸೆಯಲ್ಲಿ ಮೊಗೆದು ಮೊಗೆದು ನೀಡುವಷ್ಟು ಉದಾರ ಹೃದಯಿಗಳು. ಎಷ್ಟೇ ಕೋಪವಿದ್ದರೂ ಕ್ಷಣದಲ್ಲೇ ಕ್ಷಮಿಸಿಬಿಡುವ ಪ್ರೀತಿಪಾತ್ರರು. ಹೆಂಗಸರೇ ಹೀಗೆ! ಅವರನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ

ಹೀಗೆ ಮೀನಿನ ನಡೆಯನ್ನು ಕಂಡುಹಿಡಿಯಲಾಗುವುದಿಲ್ಲ ಅಂತೆಯೇ ಹುಡುಗಿಯರ ಮನಸ್ಸನ್ನು ಅರಿತುಕೊಳ್ಳಲಾಗುವುದಿಲ್ಲ. ಇಂದಿನ ಲೇಖನದಲ್ಲಿ ಇಂತಹುದೇ ಭಿನ್ನ ಭಿನ್ನ ಸ್ವಭಾವದ ಹುಡುಗಿಯರ ಪರಿಚಯವನ್ನು ನಾವು ಮಾಡಿಕೊಡುತ್ತಿದ್ದೇವೆ. ನಿಮ್ಮ ನಡುವೆ ಇರುವಂತಹ ಈ ಮೃದು ಮನಸ್ಸಿನ ಬೆಡಗಿಯರ ವಿಭಿನ್ನ ಸ್ವಭಾವಗಳ ಪಟ್ಟಿ ಇಲ್ಲಿದೆ, ಮುಂದೆ ಓದಿ...

ರೊಮ್ಯಾಂಟಿಕ್ ಹುಡುಗಿಯರು

ರೊಮ್ಯಾಂಟಿಕ್ ಹುಡುಗಿಯರು

ಈ ಬಗೆಯ ಹುಡುಗಿಯರು ಇಡೀ ಪ್ರಪಂಚದಲ್ಲಿಯೇ ಅತ್ಯಂತ ಪ್ರೀತಿ-ಪಾತ್ರರಾಗಿರುತ್ತಾರೆ. ಅದೇ ಸಮಯಕ್ಕೆ ಗೀಳು ಮತ್ತು ಹಠಮಾರಿ ಸ್ವಭಾವವನ್ನು ಹೊಂದಿರುತ್ತಾರೆ. ಇವರು ಪ್ರೀತಿಯಲ್ಲಿ ತಮ್ಮನ್ನು ತಾವೇ ಕಳೆದುಕೊಳ್ಳಲು ಇಚ್ಛಿಸುವ ಸ್ವಭಾವದವರು. ಆದರೆ ಕಾಲಾಂತರದಲ್ಲಿ ಇವರು ಅಮೃತವು ವಿಷವಾಗುತ್ತದೆ ಎಂಬ ಮಾತನ್ನು ಸತ್ಯ ಮಾಡುತ್ತಾರೆ.

ಮೊಸಳೆ ಹಣ್ಣಿರು ಹಾಕುವ ಹುಡುಗಿಯರು

ಮೊಸಳೆ ಹಣ್ಣಿರು ಹಾಕುವ ಹುಡುಗಿಯರು

ಇಂತಹ ಹುಡುಗಿಯರು ಎಂದಿಗೂ ನಿಮ್ಮನ್ನು ನಂಬುವುದಿಲ್ಲ. ಅಷ್ಟೇ ಅಲ್ಲ ಪ್ರಪಂಚದಲ್ಲಿ ಇರುವುದನ್ನು ಯಾವುದನ್ನು ಸಹ ಅವರು ನಂಬುವುದಿಲ್ಲ. ಪ್ರೀತಿಯನ್ನು ಅವರು ಎಂದಿಗು ಸ್ವೀಕರಿಸುವುದಿಲ್ಲ. ಆದರೆ ಅವರು ನಿಮ್ಮನ್ನು ತಮ್ಮ ಎದೆಯಲ್ಲಿ ಇರಿಸಿಕೊಂಡಿರುತ್ತಾರೆ. ಅವರು ಒಂದು ರೀತಿ ತೆಂಗಿನಕಾಯಿಯಂತೆ, ಒಳಗೆ ಮೃದು ಹೊರಗೆ ಕಠಿಣವಾಗಿರುತ್ತಾರೆ. ಆದರೂ ಇವರ ಜೊತೆಗೆ ಹೊಂದಿಕೊಳ್ಳುವುದು ಕಷ್ಟ. ಸಣ್ಣ ಸಣ್ಣ ವಿಷಯಕ್ಕು ಸಹ ಇವರು ಗಂಗಾ-ಕಾವೇರಿಯನ್ನು ಕಣ್ಣಿನಲ್ಲಿ ಸೃಷ್ಟಿಸುತ್ತಾರೆ. ಅಲ್ಲದೆ ನೀವು ತಪ್ಪು ಮಾಡಿಲ್ಲ ಎಂದು ಪ್ರಾಣ ಕಳೆದುಕೊಳ್ಳುವವರೆಗೆ ಇದು ಮುಂದುವರಿಯುತ್ತದೆ.

ಸರಣಿ ಡೇಟಿಂಗ್ ಮಾಡುವ ಹುಡುಗಿ

ಸರಣಿ ಡೇಟಿಂಗ್ ಮಾಡುವ ಹುಡುಗಿ

ಇವರು ಪ್ರೀತಿಯಲ್ಲಿ ಪ್ರಾಮಾಣಿಕತೆಯನ್ನು ಹೊಂದಿರದ ಹುಡುಗಿಯರಾಗಿರುತ್ತಾರೆ. ಒಬ್ಬ ಒಳ್ಳೆಯ ಹುಡುಗನಿಗಾಗಿ ಹುಡುಕಾಟ ನಡೆಸುತ್ತಾ ಇರುತ್ತಾರೆ. ತಮಗೆ ಬೇಕಾದ ಮಿಸ್ಟರ್ ಪರ್ಫೆಕ್ಟ್‌ಗಾಗಿ ಹುಡುಕುತ್ತಾ ಸುಮಾರು ಜನರ ಜೊತೆಗೆ ಡೇಟಿಂಗ್ ಮಾಡುತ್ತಾರೆ. ಹುಷಾರು, ಅವರ ಬಲೆಗೆ ಬೀಳಬೇಡಿ!

ಬಾತುಕೋಳಿ ಮುಖದ ಸೆಲ್ಫೀ ಹುಡುಗಿ!

ಬಾತುಕೋಳಿ ಮುಖದ ಸೆಲ್ಫೀ ಹುಡುಗಿ!

ಇಂತಹ ಹುಡುಗಿಯರು ತಮ್ಮ ಬಗ್ಗೆ ವಿಪರೀತ ಆಸೆಯನ್ನು ಇಟ್ಟಿಕೊಂಡಿರುತ್ತಾರೆ. ಮೇಕಪ್ ಹಾಕಿಕೊಂಡೆ ರಸ್ತೆ ದಾಟುವ ಸ್ವಭಾವದವರು ಇವರು. ತಮ್ಮ ಮೂಳೆ ಮುರಿದಿದ್ದರು ಸಹ ಪಾರ್ಲರ್‌ಗೆ ಹೋಗುವಂತವರು ಇವರು. ತಮ್ಮನ್ನು ಹೊಗಳುವ ಒಬ್ಬ ಮನುಷ್ಯ ಬೇಕು, ಅದಕ್ಕಾಗಿ ಅವರು ಪ್ರೀತಿ ಮಾಡುತ್ತಾರೆ.

ಸ್ವತಂತ್ರ ಸ್ವಭಾವದವರು

ಸ್ವತಂತ್ರ ಸ್ವಭಾವದವರು

ಈ ಹುಡುಗಿಯರು ಸ್ವತಂತ್ರವಾಗಿ ಬದುಕಲು ಇಷ್ಟಪಡುತ್ತಾರೆ. ಅವರು ನಿಮ್ಮ ಜೀವನದಲ್ಲಿ ಮೂಗು ತೂರಿಸುವುದಿಲ್ಲ, ಅಲ್ಲದೆ ನಿಮ್ಮ ಬಗ್ಗೆ ಸಹ ತಲೆ ಕೆಡಿಸಿಕೊಳ್ಳುವುದಿಲ್ಲ. ಇಂತಹವರು ಇತ್ತೀಚೆಗಷ್ಟೇ ಒಂದು ಅಹಿತಕರ ಸಂಬಂಧದಿಂದ ವಿಮುಕ್ತಿಯನ್ನು ಪಡೆದಿರುತ್ತಾರೆ. ಸ್ಫೂರ್ತಿಯುತವಾದ ಸುಭಾಷಿತಗಳನ್ನು ಇವರು ಪೋಸ್ಟ್ ಮಾಡುತ್ತಿರುತ್ತಾರೆ, ಯೋಗ ಮಾಡುತ್ತಾರೆ, ತಮಗೆ ಸಮಯವನ್ನು ಮೀಸಲಾಗಿಟ್ಟುಕೊಳ್ಳುತ್ತಾರೆ ಇಂತಹ ಸ್ವತಂತ್ರ ಪ್ರವೃತ್ತಿ ಇವರಿಗೆ ಇರುತ್ತದೆ.

ಆನ್‍ಲೈನ್ ಸಿಂಗಲ್ ಬಗೆಯವರು

ಆನ್‍ಲೈನ್ ಸಿಂಗಲ್ ಬಗೆಯವರು

ಇಂತಹ ಹುಡುಗಿಯರು ತಮಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸುವ ಹುಡುಗರನ್ನು ತುಂಬಾ ಇಷ್ಟಪಡುತ್ತಾರೆ. ಒಂದು ವೇಳೆ ಅವರು ಇಷ್ಟವಾಗಲಿಲ್ಲ ಎಂದಾದಲ್ಲಿ, ಅವರನ್ನು ಹತ್ತಿರ ಸುಳಿಯದಂತೆ ನೋಡಿಕೊಳ್ಳುತ್ತಾರೆ. ಅವರು ತಮ್ಮ ಬಹುತೇಕ ಸಮಯವನ್ನು ಸಾಮಾಜಿಕ ಜಾಲತಾಣಗಳಿಗೆ ಫೋಟೋಗಳನ್ನು ಕ್ಲಿಕ್ಕಿಸುವುದರಲ್ಲಿ ಕಾಲ ಕಳೆಯುತ್ತಾರೆ. ಆದರೆ ತಮ್ಮಿಷ್ಟದ ಹುಡುಗನು ತನ್ನ ಸ್ವಭಾವವನ್ನು ತಿಳಿದುಕೊಳ್ಳಲು, ಮದುವೆಯಾಗುವವರೆಗೆ ಇವರು ಅವಕಾಶ ಮಾಡಿಕೊಡುವುದಿಲ್ಲ.

 ಹತಾಶೆಯಿರುವ ಒಂಟಿ ಹುಡುಗಿಯರು

ಹತಾಶೆಯಿರುವ ಒಂಟಿ ಹುಡುಗಿಯರು

ಈ ಹುಡುಗಿಯರು ತಮ್ಮ ಹುಡುಗನಲ್ಲಿ ಕೆಲವೊಂದು ಗುಣಗಳನ್ನು ಹುಡುಕುತ್ತಾರೆ. ಆದರೆ ಅವರು ಈಗಾಗಲೇ ಒಂದು ಹುಡುಗಿಯ ಜೊತೆಗೆ ಸಂಬಂಧದಲ್ಲಿರುತ್ತಾರೆ. ಈ ಹುಡುಗಿಯರು ತಮ್ಮ ಜೀವನದಲ್ಲಿ ಎದುರಾಗುವ ಸುಮಾರು ಹುಡುಗರ ಜೊತೆಗೆ ಮುರಿದ ಸಂಬಂಧವನ್ನು ಹೊಂದಿರುತ್ತಾರೆ. ಅಷ್ಟರ ಮಟ್ಟಿಗೆ ಇವರು ಭ್ರಮರ ನಿರಸನ ಹೊಂದಿದ ಜನರಾಗಿರುತ್ತಾರೆ.

X
Desktop Bottom Promotion