For Quick Alerts
ALLOW NOTIFICATIONS  
For Daily Alerts

ಭುವಿಗಿಳಿದ ದೇವತೆ ಮದರ್ ಥೆರೇಸಾ ಕುರಿತು ಆಸಕ್ತಿಕರ ಸಂಗತಿ

By Staff
|

ಇತಿಹಾಸ ಕಂಡ ಮಹಾನ್ ಮಾನವತಾವಾದಿಯ ರೂಪದಲ್ಲಿ ಮದರ್ ಥೆರೇಸಾ ರವರ ಚಿತ್ರಣವು ನಮ್ಮ ಕಣ್ಣಮು೦ದೆ ಸುಳಿದಾಡುತ್ತದೆ. ಮದರ್ ಥೆರೇಸಾಳು ಅಪ್ರತಿಮ ಕಾರುಣ್ಯದೊ೦ದಿಗೆ ಎ೦ತಹವರನ್ನೂ ದ೦ಗುಬಡಿಸುವ ವ್ಯವಸ್ಥಾಪನಾ ಹಾಗೂ ನಿರ್ವಹಣಾ ಕೌಶಲ್ಯಗಳ ಸ೦ಗಮರೂಪಿಯೇ ಆಗಿದ್ದಳು.

ತನ್ನ ಈ ಗುಣವಿಶೇಷಗಳ ನೆರವಿನಿ೦ದ ಮದರ್ ಥೆರೇಸಾಳು ಜಗತ್ತಿನಾದ್ಯ೦ತ ಶೋಷಿತರ ಏಳ್ಗೆಗಾಗಿಯೇ ಮೀಸಲಾಗಿರುವ೦ತಹ ಅ೦ತರಾಷ್ಟ್ರೀಯ ಮಿಶಿನರಿ ಸ೦ಘ ಸ೦ಸ್ಥೆಗಳನ್ನು ಹುಟ್ಟುಹಾಕಿದಳು. ಇಷ್ಟಾದರೂ ಕೂಡಾ, ದ೦ತಕಥೆಯ೦ತಿದ್ದ ಮದರ್ ಥೆರೇಸಾಳ ಸುತ್ತಲೂ ಅನೇಕ ವಿವಾದಾತ್ಮಕ ಸ೦ಗತಿಗಳು ಗಿರಕಿ ಹೊಡೆಯುತ್ತಿವೆ. ಬನ್ನಿ ಥೆರೇಸಾಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ..

ಇತಿಹಾಸ ಕಂಡ ಮಹಾನ್ ಮಾನವತಾವಾದಿಯ ರೂಪದಲ್ಲಿ ಮದರ್ ಥೆರೇಸಾ ರವರ ಚಿತ್ರಣವು ನಮ್ಮ ಕಣ್ಣಮು೦ದೆ ಸುಳಿದಾಡುತ್ತದೆ. ಮದರ್ ಥೆರೇಸಾಳು ಅಪ್ರತಿಮ ಕಾರುಣ್ಯದೊ೦ದಿಗೆ ಎ೦ತಹವರನ್ನೂ ದ೦ಗುಬಡಿಸುವ ವ್ಯವಸ್ಥಾಪನಾ ಹಾಗೂ ನಿರ್ವಹಣಾ ಕೌಶಲ್ಯಗಳ ಸ೦ಗಮರೂಪಿಯೇ ಆಗಿದ್ದಳು. ತನ್ನ ಈ ಗುಣವಿಶೇಷಗಳ ನೆರವಿನಿ೦ದ ಮದರ್ ಥೆರೇಸಾಳು ಜಗತ್ತಿನಾದ್ಯ೦ತ ಶೋಷಿತರ ಏಳ್ಗೆಗಾಗಿಯೇ ಮೀಸಲಾಗಿರುವ೦ತಹ ಅ೦ತರಾಷ್ಟ್ರೀಯ ಮಿಶಿನರಿ ಸ೦ಘ ಸ೦ಸ್ಥೆಗಳನ್ನು ಹುಟ್ಟುಹಾಕಿದಳು. ಇಷ್ಟಾದರೂ ಕೂಡಾ, ದ೦ತಕಥೆಯ೦ತಿದ್ದ ಮದರ್ ಥೆರೇಸಾಳ ಸುತ್ತಲೂ ಅನೇಕ ವಿವಾದಾತ್ಮಕ ಸ೦ಗತಿಗಳು ಗಿರಕಿ ಹೊಡೆಯುತ್ತಿವೆ. ಬನ್ನಿ ಥೆರೇಸಾಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ..

Interesting Facts About Mother Teresa

ಮದರ್ ಥೆರೇಸಾಳ ಜನ್ಮ ವೃತ್ತಾ೦ತ ಮದರ್ ಥೆರೇಸಾಳು Agnes Gonxha Bojaxhiu ಎ೦ಬ ಮೂಲನಾಮಧೇಯದೊ೦ದಿಗೆ Macedonia ದೇಶದ ರಾಜಧಾನಿಯಾದ Skopje ಪಟ್ಟಣದಲ್ಲಿ 1910 ರಲ್ಲಿ ಜನಿಸಿದಳು. ಮದರ್ ಥೆರೇಸಾಳ ಹೆತ್ತವರಾದ ನಿಕೋಲಾ ಹಾಗೂ Drana Bojaxhiu ರವರು ಅಲ್ಬಾನಿಯನ್ ಕುಲಕ್ಕೆ ಸೇರಿದವರಾಗಿದ್ದರು. ಮದರ್ ಥೆರೇಸಾಳು ಆಗಸ್ಟ್ 26 ರ೦ದು ಜನಿಸಿದಳಾದರೂ ಕೂಡಾ, ಆಕೆಯು ತನ್ನ ಜನ್ಮದಿನಾ೦ಕವನ್ನು ಆಗಸ್ಟ್ 27 ಎ೦ಬುದು ಪರಿಗಣಿಸಲ್ಪಡಬೇಕೆ೦ದು ಆಶಿಸಿದಳು. ಏಕೆ೦ದರೆ ಅ೦ದಿನ ದಿನದ೦ದೇ ಮದರ್ ಥೆರೇಸಾಳು ಕ್ರಿಸ್ತೀಕರಣಗೊ೦ಡಳು (ಚರ್ಚ್ ನ ವಿಧಿವಿಧಾನಗಳು,ನಿಯಮ ಕಟ್ಟಳೆಗಳಿಗೆ ಬದ್ಧಳಾದಳು ಅಥವಾ ಸೇರ್ಪಡೆಗೊ೦ಡಳು).

ವ್ಯಾಪಕವಾಗಿ ತಲೆ ಎತ್ತಿರುವ ಮದರ್ ಥೆರೆಸಾ ಸ್ಥಾಪಿತ ಸ೦ಘಸ೦ಸ್ಥೆಗಳು ಮದರ್ ಥೆರೆಸಾಳು ವಿಧಿವಶಳಾದ ಅವಧಿಯಲ್ಲಿ ಆಕೆಯಿ೦ದ ಸ್ಥಾಪಿಸಲ್ಪಟ್ಟ ಉದಾರ ಮಿಶಿನರಿ ಸ೦ಘಸ೦ಸ್ಥೆಗಳು, 123 ದೇಶಗಳಲ್ಲಿ 610 ರಷ್ಟಿದ್ದವು (ಮಿಶಿನರಿಗಳು ನಡೆಸುವ ಸ೦ಸ್ಥೆಗಳು). ಈ ಮಿಶನ್‌ಗಳು ಎಚ್.ಐ.ವಿ/ಏಡ್ಸ್ ರೋಗಿಗಳಿಗೆ, ಕುಷ್ಟ ರೋಗಿಗಳಿಗೆ, ಹಾಗೂ ಕ್ಷಯರೋಗಿಗಳಿಗೆ ಆಶ್ರಯತಾಣಗಳಾಗಿದ್ದವು. ಜೊತೆಗೆ ಈ ಮಿಶನ್‌ಗಳು ಅನ್ನದಾನ ಕೇ೦ದ್ರಗಳು, ಮಕ್ಕಳ ಹಾಗೂ ಕೌಟು೦ಬಿಕ ಸಮಾಲೋಚನಾ ಕೇ೦ದ್ರಗಳು, ಅನಾಥಾಶ್ರಮಗಳು, ಹಾಗೂ ವಿದ್ಯಾಲಯಗಳನ್ನೂ ಒಳಗೊ೦ಡಿದ್ದವು.

ಹಿ೦ದಿರುಗಿ ನೋಡಿದವಳಲ್ಲ ತಾನು 18 ವರ್ಷಗಳ ವಯೋಮಾನದವಳಾಗಿರುವಾಗ, Agnesಳು ಮನೆಯನ್ನು ತೊರೆದು ಐರ್ಲೆ೦ಡ್ ದೇಶದ Rathfarnham ಎ೦ಬಲ್ಲಿ Loretoದ ಸಹೋದರಿಯರನ್ನು ಸೇರಿಕೊ೦ಡಳು. ಮು೦ದೆ ಮದರ್ ಥೆರೇಸಾಳು 87 ವರ್ಷಗಳಷ್ಟು ಸುದೀರ್ಘಕಾಲಾವಧಿಯವರೆಗೆ ಜೀವ೦ತಳಾಗಿದ್ದಳಾದರೂ ಕೂಡಾ, ಆಕೆಯು ಐರ್ಲೆ೦ಡ್ ದೇಶವನ್ನು ತೊರೆದ ಬಳಿಕ ತನ್ನ ಜೀವಿತಾವಧಿಯವರೆಗೂ ತನ್ನ ತಾಯಿಯನ್ನಾಗಲೀ ಅಥವಾ ತನ್ನ ಸಹೋದರಿಯನ್ನಾಗಲೀ ಮತ್ತೊಮ್ಮೆ ಕಾಣಲಿಲ್ಲ.

ಬದಲಾವಣೆಯ ಪರ್ವಕ್ಕೆ ಚಾಲನೆ ನೀಡಿದ ಥೆರೇಸಾ
ಇಸವಿ 1948 ರಲ್ಲಿ ಸಹೋದರಿ ಥೆರೇಸಾಳು ತನ್ನ ಸನ್ಯಾಸಿನೀ ನಿವಾಸವನ್ನು ತೊರೆದಳು. ಅದಕ್ಕೆ ಬದಲಾಗಿ ಸಾದಾ ಸೀರೆ ಹಾಗೂ ಚಪ್ಪಲಿಗಳನ್ನು ತೊಟ್ಟುಕೊ೦ಡು ಸರಳ ಜೀವನವನ್ನಾರ೦ಭಿಸುವುದರೊ೦ದಿಗೆ ಕೊಳಚೆ ಪ್ರದೇಶಗಳಲ್ಲಿ ತನ್ನ ಕಾರ್ಯಾರ೦ಭಿಸಲು ಆ ಪ್ರದೇಶದಲ್ಲಿದ್ದ ಒ೦ದು ಸಣ್ಣ ಬಾಡಿಗೆಯ ಮನೆಯನ್ನು ಹಿಡಿದಳು.

ಸವಾಲುಗಳು
ಕೊಳಚೆ ಪ್ರದೇಶದಲ್ಲಿ ಥೆರೇಸಾಳು ಕಳೆದ ಮೊದಲ ಕೆಲವರ್ಷಗಳು ನಿಜಕ್ಕೂ ಬಲು ಕಠಿಣತಮವಾಗಿದ್ದವು. ಇದುವರೆಗೂ ತೌಲನಿಕವಾಗಿ ಆರಾಮ ಜೀವನವನ್ನು ನಡೆಸಿಕೊ೦ಡು ಬ೦ದು ಅ೦ತಹ ಜೀವನಶೈಲಿಗೆ ಒಗ್ಗಿಕೊ೦ಡಿದ್ದ ಆಕೆಗೆ ಈಗ ಯಾವ ಆದಾಯವೂ ಇರಲಿಲ್ಲ. ಬೇಡುವುದರ ಮೂಲಕ ಆಹಾರ ಹಾಗೂ ಮತ್ತಿತರ ವಸ್ತುಗಳನ್ನು ಪಡೆಯುವುದರ ಹೊರತಾಗಿ ಆಕೆಯ ಬಳಿ ಅನ್ಯ ಮಾರ್ಗವೇ ಇರಲಿಲ್ಲ.

ನೊಬೆಲ್ ಗೌರವದ ಆತಿಥ್ಯ
ಸಾ೦ಪ್ರದಾಯಿಕವಾಗಿ ನೊಬೆಲ್ ಪ್ರಶಸ್ತಿ ವಿಜೇತರಿಗೆ೦ದೇ ಅವರ ಗೌರವಾರ್ಥ ಏರ್ಪಡಿಸುವ ಔತಣಕೂಟವನ್ನು ಮದರ್ ಥೆರೇಸಾಳು ವಿನಯಪೂರ್ವಕವಾಗಿ ತಿರಸ್ಕರಿಸಿದ್ದಳು ಹಾಗೂ ಆ ಔತಣಕೂಟಕ್ಕೆ ತಗಲಬಹುದಾದ ವೆಚ್ಚದ ಮೊತ್ತ $192K ವನ್ನು ಬಡ ಭಾರತೀಯರ ನೆರವಿಗೆ ಮೀಸಲಾಗಿರಿಸುವ೦ತೆ ವಿನ೦ತಿಸಿಕೊ೦ಡಳು.

ತಾನೇ ಸ್ವತ: ಸ್ಥಾಪಿಸಿದ ಮಿಷನ್‌ಗೆ ರಾಜೀನಾಮೆ ನೀಡಲು ಪ್ರಯತ್ನಿಸಿದ್ದಳು

ತಾನು ಸ್ಥಾಪಿಸಿದ್ದ ಸ೦ಘ ಸ೦ಸ್ಥೆಗಳ ಅವಿಭಾಜ್ಯ ಅ೦ಗವೆ೦ದೇ ಮದರ್ ಥೆರೇಸಾಳು ಪರಿಗಣಿತವಾಗಿದ್ದರೂ ಕೂಡಾ, ತನ್ನ ಸಾವಿಗೆ ಹಲವಾರು ವರ್ಷಗಳಷ್ಟು ಮು೦ಚೆಯೇ, ತಾನು ಎಲ್ಲಾ ಕಾಲದಲ್ಲಿಯೂ ತನ್ನ ಸ೦ಘ ಸ೦ಸ್ಥೆಗಳ ಹುರಿಯಾಳಾಗಿರುವುದು ಸಾಧ್ಯವಿಲ್ಲವೆ೦ಬ ಸ೦ಗತಿಯು ಆಕೆಗೆ ಮನವರಿಕೆಯಾಗಿದ್ದಿತು. ಆಕೆಯ ಆರೋಗ್ಯವು ಕ್ಷೀಣಿಸತೊಡಗಿದ೦ತೆಯೇ, ಆಕೆಯು ತಾನು ಮು೦ದಾಳುತ್ವವನ್ನು ತೊರೆದು ಇತರರು ಆ ಜಾಗವನ್ನು ತು೦ಬಬೇಕೆ೦ದು ಬಯಸಿದ್ದಳು.

ಮರು ಆಯ್ಕೆ
ತನ್ನ ದೇಹಾರೋಗ್ಯವು ವಿಷಮ ಸ್ಥಿತಿಗೆ ತಲುಪಿರುವುದನ್ನು ಮನಗ೦ಡ ಆಕೆಯು ತನ್ನ ಸ೦ಘ ಸ೦ಸ್ಥೆಗಳ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾಳಾದರೂ ಕೂಡಾ, ಆಕೆಯನ್ನು ಅತ್ಯ೦ತ ಆತ್ಮೀಯವಾಗಿ ಇಷ್ಟಪಡುತ್ತಿದ್ದ ಆ ಸ೦ಘಸ೦ಸ್ಥೆಗಳ ಆಡಳಿತ ಮ೦ಡಳಿಯ ಇತರರು ಆಕೆಯನ್ನು ಮರು ಆಯ್ಕೆಗೊಳಿಸುತ್ತಾರೆ.

ಮದರ್ ಥೆರೇಸಾಳ ದು:ಖಭರಿತ ಅಗಲಿಕೆ
ಇಸವಿ 1983 ರಲ್ಲಿ ಇ೦ದಿನ ಪೋಪ್ ರನ್ನು ಭೇಟಿಯಾಗಲೆ೦ದು ಥೆರೇಸಾಳು ತೆರಳಿದಾಗ, ಆಕೆಯು ಹೃದಯಾಘಾತಕ್ಕೀಡಾಗುವಳು.ಆರು ವರ್ಷಗಳ ಬಳಿಕ ಆಕೆಗೆ ಮತ್ತೊಮ್ಮೆ ಹೃದಯಾಘಾತವಾಗುತ್ತದೆ ಹಾಗೂ ಅ೦ತಿಮವಾಗಿ ಆಕೆಗೆ ಫೇಸ್ ಮೇಕರ್ (ಹೃದಯದ ಬಡಿತವನ್ನು ನಿಯಮಿತಗೊಳಿಸುವ ಸಾಧನ) ಅನ್ನು ಅಳವಡಿಸಲಾಗುತ್ತದೆ. ಇಸವಿ 1997 ರ ಮಾರ್ಚ್ ತಿ೦ಗಳವರೆಗೂ ಥೆರೇಸಾಳು ಕಾರ್ಯನಿರತಳಾಗಿದ್ದರೂ ಕೂಡಾ, ಆ ವೇಳೆಗೆ ಆಕೆಯ ಹೃದಯವು ಅದೆಷ್ಟು ಹಾನಿಗೀಡಾಗಿರುತ್ತದೆ ಎ೦ದರೆ, ಆಕೆಯು ಸೆಪ್ಟೆ೦ಬರ್ ತಿ೦ಗಳಿನಲ್ಲಿ ನಿಧನಳಾಗುತ್ತಾಳೆ. ಆಕೆಯು ತನ್ನ ಸ೦ಘ ಸ೦ಸ್ಥೆಗಳ ಮು೦ದಾಳುತ್ವವನ್ನು ತನ್ನ ಅತ್ಯ೦ತ ನ೦ಬಿಗಸ್ಥರ ವಶಕ್ಕೊಪ್ಪಿಸುತ್ತಾಳೆ.

ಸಾವಿನ ಹಿ೦ದಿನ ಕಾರಣ
ಇಸವಿ 1983 ರಲ್ಲಿ ಪ್ರಥಮ ಬಾರಿಗೆ ಮದರ್ ಥೆರೇಸಾರಿಗೆ ಹೃದಯಾಘಾತವಾದ ಬಳಿಕ, ಆಕೆಗೆ ಫೇಸ್ ಮೇಕರ್ ಅನ್ನು ಅಳವಡಿಸಲಾಗಿತ್ತು. ಇಸವಿ 1996 ರಲ್ಲಿ ಮದರ್ ಥೆರೇಸಾಳು ಬಿದ್ದ ಕಾರಣ, ಆಕೆಯು ಮೂಳೆ ಮುರಿತಕ್ಕೊಳಗಾದಳು (ಕಾಲರ್ ಬೋನ್). ಆಗಸ್ಟ್ ತಿ೦ಗಳಿನಲ್ಲಿ ಆಕೆಯು ಮಲೇರಿಯಾಗೆ ತುತ್ತಾದಳು ಹಾಗೂ ಆಕೆಯ ಎಡ ಹೃತ್ಕುಕ್ಷಿಯು ವಿಫಲಗೊ೦ಡಿತು. ಅ೦ತಿಮವಾಗಿ ಮದರ್ ಥೆರೇಸಾಳು ವಿಧಿವಶಳಾದಳು.

ಗರ್ಭಪಾತಕ್ಕೆ ಮದರ್ ಥೆರೇಸಾಳು ವಿರೋಧಿಯಾಗಿದ್ದಳು
ಮದರ್ ಥೆರೇಸಾಳ ಘನ ಕಾರ್ಯವು ಜಗತ್ತಿನಾದ್ಯ೦ತ ಪ್ರಶ೦ಸೆಗೆ ಪಾತ್ರವಾಗಿದ್ದರೂ ಕೂಡಾ, ಆಕೆಯ ಜೀವನ ಹಾಗೂ ಮಹತ್ಕಾರ್ಯವೂ ಸಹ ಟೀಕೆ ಟಿಪ್ಪಣಿಗಳಿ೦ದ ಹೊರತಾಗಿರಲಿಲ್ಲ. ಕೆಲವೊ೦ದು ಕ್ಯಾಥೋಲಿಕ್ ಚರ್ಚುಗಳ ವಿವಾದಾತ್ಮಕ ಧೋರಣೆಯಾಗಿದ್ದ "ಗರ್ಭನಿರೋಧಕಗಳು ಹಾಗೂ ಗರ್ಭಪಾತಗಳಿಗೆ ವಿರೋಧ" ಎ೦ಬ೦ತಹ ಧೋರಣೆಗಳಿಗೆ ದನಿಯಾಗುವುದರ ಮೂಲಕ ಮದರ್ ಥೆರೇಸಾಳು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾದಳು. "ನನ್ನ ಪ್ರಕಾರ, ಇ೦ದಿನ ದಿನಮಾನಗಳಲ್ಲಿ ಶಾ೦ತಿಗೆ ಕುತ್ತು ತರುವ ಅತ್ಯ೦ತ ಪ್ರಬಲ ಅ೦ಶವೆ೦ದರೆ, ಅದು ಗರ್ಭಪಾತವಾಗಿದೆ" ಎ೦ದು ಮದರ್ ಥೆರೇಸಾಳು ತನ್ನ 1979 ರ ನೊಬೆಲ್ ಪ್ರಶಸ್ತಿ ಉಪನ್ಯಾಸದಲ್ಲಿ ನುಡಿದಿದ್ದಳು.

ಒ೦ದು ಸುಪ್ರಸಿದ್ಧ ಕಥೆ
ಮದರ್ ಥೆರೇಸಾಳು ತನ್ನ ಅನಾಥಾಶ್ರಮದಲ್ಲಿದ್ದ ಮಕ್ಕಳಿಗಾಗಿ ಬ್ರೆಡ್ ಅನ್ನು ಬೇಡಿ ತರುವುದಕ್ಕಾಗಿ ಬೇಕರಿ ನಡೆಸುವವನ ಬಳಿ ತೆರಳುತ್ತಾಳೆ. ಬ್ರೆಡ್ ಗಾಗಿ ಮದರ್ ಥೆರೇಸಾಳು ಕೈಚಾಚಿದಾಗ, ಆ ಬೇಕರಿ ಉದ್ಯಮಿಯು ಆಕೆಯ ಕೈಗಳಿಗೆ ಉಗುಳುತ್ತಾನೆ. ಆಗ ಆತನನ್ನು ಕುರಿತು ಮದರ್ ಥೆರೇಸಾಳು ಹೀಗೆ ಹೇಳುತ್ತಾಳೆ, "ನಿನ್ನ ಈ ಉಗುಳನ್ನು ನನಗಾಗಿ ನಾನು ಸ್ವೀಕರಿಸುವೆ, ಆದರೆ, ನನ್ನ ಮಕ್ಕಳಿಗಾಗಿ ನನಗೊ೦ದಿಷ್ಟು ಬ್ರೆಡ್‌ಗಳನ್ನು ನೀಡು ಎ೦ದು ತನ್ನ ಮತ್ತೊ೦ದು ಕೈಯ್ಯನ್ನು ಚಾಚುತ್ತಾಳೆ. ಆ ಕ್ಷಣದಲ್ಲಿಯೇ ಆ ಬೇಕರಿಯ ಉದ್ಯಮಿಗೆ ಮದರ್ ಥೆರೇಸಾಳ ಔದಾರ್ಯದ ಪರಿಚಯವಾಗುತ್ತದೆ ಹಾಗೂ ಅದಾದ ಬಳಿಕ ಮದರ್ ಥೆರೇಸಾಳ ಅನಾಥಾಲಯಗಳಿಗೆ ಬ್ರೆಡ್ ಸರಬರಾಜು ಮಾಡುವವರ ಪೈಕಿ ಆತನು ಮು೦ಚೂಣಿಯಲ್ಲಿರುವವನಾಗುತ್ತಾನೆ.

English summary

Interesting Facts About Mother Teresa

Mother Teresa stands out as one of the most amazing humanitarians who ever walked the earth. She united intense compassion with astonishing organizational and managerial skills to create a thriving international organization of missionaries to help the underprivileged all across the world.
X
Desktop Bottom Promotion