Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಧವನ್‌ಗಿಂತಲೂ ಹಿರಿಯಳಾದ ಆಯೇಷಾಳ ಕುರಿತಾದ ಇಂಟ್ರೆಸ್ಟಿಂಗ್ ಸ್ಟೋರಿ!
ವಿಶ್ವಕಪ್ ಜ್ವರ ನಿಧಾನವಾಗಿ ದೇಶವನ್ನು ವ್ಯಾಪಿಸುತ್ತಿದೆ. ಇಂದು ಕ್ರಿಕೆಟ್ ಮತ್ತು ಕ್ರಿಕೆಟಿಗರ ಬಗ್ಗೆ ಯಾವುದೇ ಮಾಹಿತಿ ಎಲ್ಲರ ಮೊಬೈಲುಗಳಲ್ಲಿ ಹರಿದಾಡುತ್ತಿದೆ. ಅಂತೆಯೇ ಕ್ರಿಕೆಟ್ ಆಟಗಾರರ ಖಾಸಗಿ ಮತ್ತು ಅವರ ಸಂಬಂಧಿಕರ ಬಗ್ಗೆಯೂ ಜನರಲ್ಲಿ ಕುತೂಹಲ ಮೂಡುತ್ತಿದೆ. 1983ರ ವಿಶ್ವಕಪ್ ಗೆದ್ದಾಗ ಅವರಿಗಾಗಿ ಪಂಚತಾರಾ ಹೋಟೆಲಿನಲ್ಲಿ ಔತಣಕೂಟವನ್ನು ಏರ್ಪಡಿಸಲಾಗಿತ್ತು.
ಕೇವಲ ಅತಿಗಣ್ಯ ವ್ಯಕ್ತಿಗಳಿಗಾಗಿ ಮಾತ್ರ ಪ್ರವೇಶ ಸಾಧ್ಯವಿತ್ತು, ಆದರೆ ಇಂದು ಮಾಧ್ಯಮಗಳ ಮೂಲಕ ಕ್ರಿಕೆಟಿಗರಲ್ಲದೇ ಅವರ ಮನೆಯವರೂ ಮಾಧ್ಯಮಗಳ ಮೂಲಕ ಆಸಕ್ತರಿಗೆ ಚಿರಪರಿಚಿತರಾಗಿದ್ದಾರೆ. ಪ್ರಸ್ತುತ ಶಿಖರ್ ಧವನ್ ರ ಪತ್ನಿ ಆಯೇಷಾ ಮುಖರ್ಜಿಯವರತ್ತ ಎಲ್ಲರ ಚಿತ್ತ ನೆಟ್ಟಿದೆ. ಮೈ ನವಿರೇಳಿಸುವಂತೆ ಮಾಡುವ ಕ್ರಿಕೆಟ್ ಜಗತ್ತಿನ ಅದ್ಭುತ ಸಂಗತಿ..!
ಅಪೂರ್ವ ಸೌಂದರ್ಯವನ್ನು ಹೊಂದಿರುವ ಅವರು ಶಿಖರ್ ಧವನ್ ರ ಯಶಸ್ಸಿನ ಹಿಂದಿನ ಮಹಿಳೆಯೂ ಆಗಿದ್ದಾರೆ. ಶಿಖರ್ ರವರು ಇಪ್ಪತ್ತೇಳನೇ ಹರೆಯದಲ್ಲಿದ್ದಾಗ ಆಸ್ಟ್ರೇಲಿಯಾದ ಪೌರತ್ವವನ್ನು ಹೊಂದಿರುವ ಆಯೆಷಾ ಶಿಖರ್ ರನ್ನು ವರಿಸಿದ್ದರು. ಅವರ ಬಗ್ಗೆ ರೋಚಕವಾದ ವಿವರಗಳಲ್ಲಿ ಹತ್ತು ಪ್ರಮುಖವಾದುದನ್ನು ಇಲ್ಲಿ ನೀಡಲಾಗಿದೆ.

ಆಯೇಷಾ ಮುಖರ್ಜಿ ಉದಯೋನ್ಮುಖಿ ಬಾಕ್ಸರ್
ಆಯೇಷಾರವರಿಗೆ ಕ್ರೀಡೆ ಎಂದರೆ ತುಂಬಾ ಇಷ್ಟ. ಅಲ್ಲದೇ ಅವರು ಸ್ವತಃ ಒಬ್ಬ ಉದಯೋನ್ಮುಖ ಬಾಕ್ಸರ್ ಸಹಾ ಆಗಿದ್ದಾರೆ.

ಬಂಗಾಲಿ ಭಾಷೆ
ಆಯೇಷಾರ ತಾಯಿ ಬ್ರಿಟಿಷ್ ಪೌರತ್ವ ಹೊಂದಿದ್ದಾರೆ ಹಾಗೂ ತಂದೆ ಭಾರತೀಯರಾಗಿದ್ದಾರೆ (ಪಶ್ಚಿಮ ಬಂಗಾಳ). ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹುಟ್ಟಿದ್ದರಿಂದ ಇವರಿಗೆ ಬಂಗಾಲಿ ಭಾಷೆ ಸ್ಪಷ್ಟವಾಗಿ ಮಾತನಾಡಲು ಬರುತ್ತದೆ.

ಸಾಮಾಜಿಕ ತಾಣದ ಮೂಲಕ ಲವ್!
ಆಯೇಷಾ ಮತ್ತು ಶಿಖರ್ ಒಂದು ಸಾಮಾಜಿಕ ತಾಣದ ಮೂಲಕ ಒಬ್ಬರಿಗೊಬ್ಬರು ಪರಿಚಯಿಸಲ್ಪಟ್ಟರು.

ಹರ್ಭಜನ್ ಸಿಂಗ್
ಇವರಿಬ್ಬರಿಗೂ ಸಮಾನವಾದ ಸ್ನೇಹಿತನೆಂದರೆ ಹರ್ಭಜನ್ ಸಿಂಗ್. ಇವರೇ ಇಬ್ಬರನ್ನೂ ಒಂದುಗೂಡಿಸಲು ನಡುವಣ ಸೇತುವೆಯಾಗಿದ್ದಾರೆ.

ಆಯೇಷಾಗೆ ಈ ಹಿಂದೆಯೇ ಮದುವೆಯಾಗಿತ್ತು..!
ಆಯೇಷಾರಿಗೆ ಇದಕ್ಕೂ ಹಿಂದೆ ಮದುವೆಯಾಗಿದ್ದು ಆ ಮದುವೆಯಿಂದ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

2009ರಲ್ಲಿ ನಿಶ್ಚಿತಾರ್ಥ
ಆಯೇಷಾ ಮತ್ತು ಶಿಖರ್ 2009ರಲ್ಲಿ ನಿಶ್ಚಿತಾರ್ಥಕ್ಕೆ ಒಳಪಟ್ಟಿದ್ದರೂ ಮುಂದಿನ ಮೂರು ವರ್ಷಗಳವರೆಗೆ ಮದುವೆಯನ್ನು ಮುಂದೂಡಿದ್ದರು. ಏಕೆಂದರೆ ಈ ಮೂರು ವರ್ಷಗಳಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಸುಬಧ್ರ ಸ್ಥಾನ ಪಡೆಯಲು ಈ ಅವಧಿ ಅಗತ್ಯವಾಗಿದೆ ಎಂದು ಮನವೊಲಿಸಿದರು.

ಅಕ್ಟೋಬರ್ 30 2012ರಂದು ವಿವಾಹ
ಕೊಟ್ಟ ಮಾತಿಗೆ ತಪ್ಪದೇ ಅಕ್ಟೋಬರ್ 30, 2012ರಂದು ಆಯೇಷಾರನ್ನು ವಿವಾಹವಾದರು.

ಆಯೇಷಾರ ಟ್ಯಾಟೂ
ಆಯೇಷಾ ರವರು ಕುತ್ತಿಗೆಯಿಂದ ಸೊಂಟದವರೆಗೂ ಒಂದು ನೀಳವಾದ ಸುಂದರ ಟ್ಯಾಟೂ ಹಚ್ಚೆ ಹಚ್ಚಿಸಿಕೊಂಡಿದ್ದು ಅವರ ಸೌಂದರ್ಯವನ್ನು ನೂರ್ಮಡಿಗೊಳಿಸಿದೆ.

ತರುಣ ದಂಪತಿಗಳೂ ನಾಚುವಂತಿದೆ ಇವರ ಜೋಡಿ!
ಈಗ ನಲವತ್ತು ವರ್ಷದವರಾಗಿರುವ ಆಯೇಷಾಗಿಂತ ಹತ್ತು ವರ್ಷ ಕಿರಿಯರಾದ ಶಿಖರ್ ರನ್ನು ವಿವಾಹವಾದ ಬಳಿಕವೂ ತಮ್ಮ ಅಂಗಸೌಷ್ಟವವನ್ನು ಅತ್ಯಂತ ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಈ ದಂಪತಿ ಜೊತೆಯಾಗಿ ಬಂದರೆ ಇಪ್ಪತ್ತರ ತರುಣ ದಂಪತಿಗಳೂ ನಾಚುವಂತಿದೆ ಇವರ ಜೋಡಿ.

ತವರು ಮನೆ ಆಸ್ಟ್ರೇಲಿಯಾದಲ್ಲಿ?
ಆಯೇಷಾರ ತಂದೆ ತಾಯಿ ಆಸ್ಟ್ರೇಲಿಯಾದ ಒಂದು ಕಾರ್ಖಾನೆಯಲ್ಲಿ ಕೆಲಸಕ್ಕಿದ್ದಾಗ ಒಬ್ಬರಿಗೊಬ್ಬರು ಪರಿಚಯವಾಗಿ ವಿವಾಹಬಂಧನದಕ್ಕೆ ಒಳಪಟ್ಟಿದ್ದರು. ಹಾಗಾಗಿ ಆಯೇಷಾರಿಗೆ ಆಸ್ಟ್ರೇಲಿಯಾದ ಪೌರತ್ವ ಸಿಕ್ಕಿದೆ. ಇದೇ ಕಾರಣದಿಂದ ಅವರು ನಿಯಮಿತವಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಓಡಾಡುತ್ತಾ ಇರುತ್ತಾರೆ.



Click it and Unblock the Notifications
