For Quick Alerts
ALLOW NOTIFICATIONS  
For Daily Alerts

ಮೈ ನವಿರೇಳಿಸುವಂತೆ ಮಾಡುವ ಕ್ರಿಕೆಟ್ ಜಗತ್ತಿನ ಅದ್ಭುತ ಸಂಗತಿ..!

By Super
|

ವಿಶ್ವಕಪ್ ಕ್ರಿಕೆಟ್ ಜ್ವರ ಜಗತ್ತಿನೆಲ್ಲೆಡೆ ಹರಡಿದೆ. ಕ್ರಿಕೆಟ್ ಬಗ್ಗೆ ಚರ್ಚೆ ಮಾಡದಿದ್ದವರನ್ನು ಇಂದಿನ ಜಗತ್ತಿಗೆ ಸಲ್ಲದವರು ಎಂದೂ ನೋಡಲಾಗುತ್ತದೆ. ಅದರಲ್ಲೂ ಸಾಮಾನ್ಯವಾಗಿ ಗಮನಕ್ಕೆ ತೆಗೆದುಕೊಳ್ಳದ ಮಾಹಿತಿಯನ್ನು ಪಡೆದವರು (ಉದಾಹರಣೆಗೆ ಸಚಿನ್ ಬ್ಯಾಟ್ ಮೇಲೆ ಏನು ಬರೆದಿದೆ?) ಅದನ್ನು ಬೇರೆಯವರಲ್ಲಿ ಹಂಚಿಕೊಳ್ಳುವಾಗ ಯಾವುದೋ ಘನಸಾಧನೆಯನ್ನು ಮಾಡಿದಂತೆ ಮೆರೆಯುತ್ತಾರೆ. ಪಂದ್ಯ ನಡೆಯುತ್ತಿರುವಾಗಲಂತೂ ಯಾವುದೇ ಪರಿಸ್ಥಿತಿಯಲ್ಲಿಯೂ ಪ್ರತಿ ಎಸೆತ ಏನಾಯ್ತು ಎಂದು ತಿಳಿಯುತ್ತಿರಬೇಕೆಂದು ಬಯಸುತ್ತಾರೆ. ಯಕ್ಷ ಪ್ರಶ್ನೆಯಂತೆ ಕಾಡುವ ಸೂರ್ಯನ ಕುರಿತಾದ ಅಚ್ಚರಿಯ ಸಂಗತಿಗಳು!

ರಜೆ ಹಾಕಿ ಕಣ್ಣೆವೆಯಿಕ್ಕದೇ ಟೀವಿ ಮುಂದೆ ಕುಳಿತು ಜಗತ್ತನ್ನೇ ಮರೆಯುತ್ತಾರೆ. ಆದರೆ ಇಂತಹ ಅಪ್ಪಟ ಕ್ರಿಕೆಟ್ ಪ್ರೇಮಿಗಳೂ ಅರಿಯದ ಹಲವಾರು ಮಾಹಿತಿಗಳಿವೆ. ಒಂದು ವೇಳೆ ನೀವೂ ಇಂತಹ ಕ್ರಿಕೆಟ್ ಪ್ರೇಮಿಯಾಗಿದ್ದರೆ ಕೆಳಗಿನ ಮಾಹಿತಿಗಳು ನಿಮ್ಮನ್ನು ಅಚ್ಚರಿಗೊಳಿಸಬಹುದು. ಈ ಮಾಹಿತಿಗಳನ್ನು ನೀವು ನಿಮ್ಮ ಇತರ ಕ್ರಿಕೆಟ್ ಪ್ರೇಮಿಗಳಲ್ಲಿ ಹಂಚಿ ಅವರ ದೃಷ್ಟಿಯಲ್ಲಿ ಹೀರೋ ಸಹಾ ಎನಿಸಿಕೊಳ್ಳಬಹುದು.

ಅತ್ಯಂತ ವೇಗದ ಶತದ ದಾಖಲಿಸಲು ಆಫ್ರಿದಿ ಬಳಸಿದ್ದು ಸಚಿನ್‌ರವರ ಬ್ಯಾಟ್

ಅತ್ಯಂತ ವೇಗದ ಶತದ ದಾಖಲಿಸಲು ಆಫ್ರಿದಿ ಬಳಸಿದ್ದು ಸಚಿನ್‌ರವರ ಬ್ಯಾಟ್

1996ರಲ್ಲಿ ನೈರೋಬಿಯಲ್ಲಿ ಶ್ರೀಲಂಕಾ ತಂಡದ ವಿರುದ್ಧ ಆಡಲು ವೆಸ್ಟ್ ಇಂಡೀಸ್‌ನಿಂದ ಪಾಕಿಸ್ತಾನದ ಕ್ರಿಕೆಟ್ ತಂಡ ಆಗಮಿಸಿತ್ತು. ಅದರಲ್ಲಿ ಇನ್ನೂ ಯವಕನಾಗಿದ್ದ ಶಾಹಿದ್ ಆಫ್ರಿದಿಯವರ ಬಳಿ ಸರಿಯಾದ ಬ್ಯಾಟ್ ಇರಲೇ ಇಲ್ಲ. ಇದನ್ನು ಗಮನಿಸಿದ ತಂಡದ ಹಿರಿಯ ಆಟಗಾರ ವಖಾರ್ ಯೂನುಸ್‌ರವರು ಆಫ್ರಿದಿಯವರಿಗೆ ತಮ್ಮ ಬಳಿ ಇದ್ದ ಸಚಿನ್‌ರವರ ಬ್ಯಾಟ್ ಅನ್ನು ನೀಡಿದರು. ಕ್ರಿಕೆಟ್ ಲೋಕದ ಸವ್ಯಸಾಚಿ ಸಚಿನ್‌ರವರ ಬ್ಯಾಟ್ ಅನ್ನು ಉಪಯೋಗಿಸುತ್ತಿದ್ದೇನೆ ಎಂಬ ಹುರುಪಿನಿಂದ ಎಲ್ಲಾ ಬೌಲರುಗಳ ಪ್ರತಿ ಎಸೆತವನ್ನೂ 'ಇನ್ನೊಮ್ಮೆ ಸಿಗಲಾರದ ಅವಕಾಶ' ಎಂದೇ ಪರಿಗಣಿಸಿ ನಾಲ್ಕು, ಸಿಕ್ಸರ್ ಅಟ್ಟಿಸಿದ್ದೇ ಅಟ್ಟಿಸಿದ್ದು. ನೋಡು ನೋಡುತ್ತಲೇ ಅವರ ರನ್ನುಗಳ ಸಂಖ್ಯೆ ಶತದ ದಾಟಿಯೇ ಹೋಯ್ತು. ಎಷ್ಟು ಎಸೆತಗಳಲ್ಲಿ ತಾನು ಶತಕ ದಾಖಲಿಸಿದೆ ಎಂದು ಅವರಿಗೆ ಗೊತ್ತಿಲ್ಲದಿದ್ದರೂ ವಿವರಣಾಕಾರರಿಗೆ ಗೊತ್ತಿತ್ತು. ಅಂದು ಅವರು ಕೇವಲ ಮೂವತ್ತೇಳು ಎಸೆತಗಳಲ್ಲಿ ಶತಕ ದಾಖಲಿಸಿದ್ದು ಅಂದಿನ ದಾಖಲೆಯಾಗಿತ್ತು...

ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಪ್ರಥಮ ಎಸೆತದಲ್ಲಿ ಸಿಕ್ಸರ್ ಹೊಡೆದವರು ಕ್ರಿಸ್ ಗೇಲ್

ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಪ್ರಥಮ ಎಸೆತದಲ್ಲಿ ಸಿಕ್ಸರ್ ಹೊಡೆದವರು ಕ್ರಿಸ್ ಗೇಲ್

ಕ್ರಿಕೆಟ್ ಟೆಸ್ಟ್ ಪಂದ್ಯಗಳಿಗೆ ಸುಮಾರು ನೂರಾಮೂವತ್ತೇಳು ವರ್ಷದ ಇತಿಹಾಸವಿದೆ. ಐದು ದಿನಗಳ ಕಾಲ ಆರಾಮವಾಗಿ ಆಡುವ ಆಟದಲ್ಲಿ ಡಾಟ್ ಬಾಲ್ (ಯಾವುದೇ ರನ್ ಮೂಡದ) ಎಸೆತಗಳೇ ಹೆಚ್ಚು.ಆಗೊಂದು ಈಗೊಂದು ಬೌಂಡರಿ ಅಥವಾ ಸಿಕ್ಸರ್ ಮೂಡಿದರೆ ಅದೇ ಆ ದಿನದ ಪಂದ್ಯದ ಹೈಲೈಟ್. ಅದರಲ್ಲೂ ಯಾವುದೇ ಬ್ಯಾಟ್ಸ್ ಮನ್ ಪಿಚ್‌ಗೆ ಹೊಂದಿಕೊಳ್ಳಲು ಮೊದಲ ನಾಲ್ಕೈದು ಓವರುಗಳನ್ನು ಮೇಯ್ಡನ್ (ಒಂದು ಓವರ್ ನ ಎಲ್ಲಾ ಎಸೆತಗಳಲ್ಲಿ ಒಂದೂ ರನ್ ಮಾಡದೇ ಇರುವುದು). ಇದುವರೆಗೆ ಅಂದರೆ ೨೦೧೨ ರಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಆಡಿದ ಪಂದ್ಯದ ಮೊದಲ ಎಸೆತವನ್ನೇ ಸಿಕ್ಸರ್ ಗೆ ಅಟ್ಟಿದ ಆಡೇಶಿಯಸ್ ಕ್ರಿಸ್ ಗೇಲ್ ಈ ಸಾಧನೆ ಸಾಧಿಸಿದ ಏಕಮಾತ್ರ ದಾಂಡಿಗರಾಗಿದ್ದಾರೆ. ಈ ಎಸೆತವನ್ನು ಎಸೆದ ಸೋಹಾಗ್ ಗಾಝಿ ಸಹಾ ಪ್ರಥಮ ಸಿಕ್ಸರ್ ನೀಡಿದ ಬೌಲರ್ ಎಂಬ ಅಪಖ್ಯಾತಿಯನ್ನೂ ಪಡೆದಿದ್ದಾರೆ. ಕ್ರೀಡಾಪ್ರೇಮಿಯಿಂದ ಚುಂಬನದ ಉಡುಗೊರೆ ಪಡೆದ ಪ್ರಥಮ ಕ್ರಿಕೆಟಿಗ ಅಬ್ಬಾಸ್ ಬೇಗ್ ಅಲಿ

ಕ್ರೀಡಾಂಗಣದ ಆವರಣ ಎಂಟು ಅಡಿ ಅಥವಾ ಹತ್ತು ಅಡಿ ಎತ್ತರ

ಕ್ರೀಡಾಂಗಣದ ಆವರಣ ಎಂಟು ಅಡಿ ಅಥವಾ ಹತ್ತು ಅಡಿ ಎತ್ತರ

ಕ್ರೀಡಾಂಗಣದ ಆವರಣದಲ್ಲಿ ಗಟ್ಟಿಮುಟ್ಟಾದ ಎಂಟು ಅಡಿ ಅಥವಾ ಹತ್ತು ಅಡಿ ಎತ್ತರದ ಕಟಕಟೆಯನ್ನೇಕೆ ನಿರ್ಮಿಸಿರುತ್ತಾರೆ ಯಾಕೆ ಗೊತ್ತೇ? ಕ್ರೀಡಾಭಿಮಾನಿಗಳ ಅಭಿನಂದನೆಯ ಭರವನ್ನು ತಡೆಯಲು! ಏಕೆಂದರೆ ಪ್ರತಿ ಕ್ರೀಡೆ ತನ್ನ ಪರಾಕಾಷ್ಠೆಯತ್ತ ತಲುಪುತ್ತಿದ್ದಂತೆಯೇ ಕ್ರೀಡಾಭಿಮಾನಿಗಳ ದೇಹದಲ್ಲಿ ಹಲವು ರಸದೂತಗಳು ಭರ್ಜರಿಯಾಗಿ ಹರಿಯುತ್ತಿರುತ್ತವೆ. ಸೋಲುತ್ತಿರುವ ಘಟ್ಟದಲ್ಲಿ ಹೊಡೆದ ಒಂದು ಸಿಕ್ಸರ್ ಅಥವಾ ಹಿಡಿದ ಕ್ಯಾಚ್ ಕ್ರೀಡಾಭಿಮಾನಿಯನ್ನು ಹುಚ್ಚೆಬ್ಬಿಸುತ್ತದೆ. ಈ ಗೆಲುವಿಗೆ ಕಾರಣವಾದ ಆಟಗಾರನನ್ನು ಅಭಿನಂದಿಸುವ ಭರದಲ್ಲಿ ಕ್ರೀಡಾಂಗಣದ ಪೀಠೋಪಕರಣಗಳು ಧ್ವಂಸವಾಗಿವೆ. ಗೊಂದಲ, ಕಾಲ್ತುಳಿತ ಪ್ರಾರಂಭವಾಗಿ ಅನಾಹುತಗಳೂ ಸಂಭವಿಸಿವೆ. ಇದನ್ನು ತಡೆಯಲು ಬಲವಾದ ಕಟಕಟೆಗಳನ್ನು ಈಗ ನಿರ್ಮಿಸಿದ್ದಾರೆ.

ಕೆನ್ನೆಗೆ ಚುಂಬಿಸಿದ ತರುಣಿ..!

ಕೆನ್ನೆಗೆ ಚುಂಬಿಸಿದ ತರುಣಿ..!

ಆದರೆ ಸುಮಾರು ಅರವತ್ತರ ದಶಕದಲ್ಲಿ ಕ್ರೀಡಾಭಿಮಾನದಲ್ಲಿ ಇಷ್ಟೊಂದು ಹುಚ್ಚುತನ ಇರಲಿಲ್ಲ. ಕ್ರೀಡಾಂಗಣದ ಅಂಚಿನಲ್ಲಿ ಒಂದು ಹಗ್ಗವನ್ನು ಕಟ್ಟಿರಲಾಗುತ್ತಿತ್ತು. ಇದನ್ನು ಸುಲಭವಾಗಿ ದಾಟಿಕೊಂಡು ಹೋಗಬಹುದಿತ್ತು. 1960ರಲ್ಲಿ ಬ್ರಾಬೋರ್ನ್ ನಗರದಲ್ಲಿ ಆಸ್ಟ್ರೇಲಿಯಾ ವಿರುದ್ದ ಆಡುತ್ತದ್ದ ಭಾರತದ ಆಟಗಾರ ಅಬ್ಬಾಸ್ ಅಲಿ ಬೇಗ್ ರವರು ಅರ್ಧಶತಕ ದಾಖಲಿಸುತ್ತಿದ್ದಂತೆಯೇ ಎಲ್ಲಿಂದಲೋ ಸುಂದರ ತರುಣಿಯೊಬ್ಬಳು ಉತ್ತರ ಭಾಗದ ಸ್ಟ್ಯಾಂಡ್ ಕಡೆಯಿಂದ ಹಗ್ಗ ದಾಟಿ ಓಡಿ ಬಂದು ಬೇಗ್ ರ ಕೆನ್ನೆಗೆ ಚುಂಬಿಸಿಯೇ ಬಿಟ್ಟಳು. ಅಪ್ರತಿಭರಾದ ಬೇಗ್ ಈ ಸುಂದರ ಉಡುಗೊರೆ ಪಡೆದ ಪ್ರಥಮ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ವಿನೋದ್ ಕಾಂಬ್ಳಿಯವರ ಸರಾಸರಿ ಸಚಿನ್‪ಗಿಂತಲೂ ಮಿಗಿಲು

ವಿನೋದ್ ಕಾಂಬ್ಳಿಯವರ ಸರಾಸರಿ ಸಚಿನ್‪ಗಿಂತಲೂ ಮಿಗಿಲು

ಕ್ರಿಕೆಟ್ ಜಗತ್ತಿಗೆ ಬಾಲ್ಯ ಸ್ನೇಹಿತರಾದ ಸಚಿನ್ ಮತ್ತು ವಿನೋದ್ ಕಾಂಬ್ಳಿ ಜೊತೆಜೊತೆಯಾಗಿಯೇ ಮೈದಾನಕ್ಕಿಳಿದವರು. ವೃತ್ತಿಪರ ಕ್ರಿಕೆಟ್ ಸಹಾ ಜೊತೆಗೇ ಆಡಿದರು. ಆದರೆ ಕಾಂಬ್ಳಿ ಆಡಿದ್ದು ಕೇವಲ ಹದಿನೇಳು ಟೆಸ್ಟ್ ಪಂದ್ಯಗಳನ್ನು. ಅದರಲ್ಲಿ ಎರಡು ಒಂದರ ಹಿಂದೊಂದರಂತೆ ದ್ವಿಶತಕಗಳನ್ನು ದಾಖಲಿಸಿದ್ದಾರೆ. ಅವರ ಟೆಸ್ಟ್ ಸರಾಸರಿ 54.20. ಆದರೆ ಇದೇ ವೇಳೆ ಇನ್ನೂರು ಟೆಸ್ಟ್ ಪಂದ್ಯಗಳನ್ನು ಆಡಿರುವ ತೆಂಡೂಲ್ಕರ್ ರವರ ಸರಾಸರಿ 53.78 ಆಗಿದೆ.

ಸುನಿಲ್ ಗಾವಸ್ಕರ್

ಸುನಿಲ್ ಗಾವಸ್ಕರ್

ಸುನಿಲ್ ಗಾವಸ್ಕರ್ ಟೆಸ್ಟ್ ಪಂದ್ಯದ ಪ್ರಥಮ ಎಸೆತದಲ್ಲಿಯೇ ಮೂರು ಬಾರಿ ಔಟ್ ಆಗಿದ್ದಾರೆ. ಅಲ್ಲದೆ ಟೆಸ್ಟ್ ಕ್ರಿಕೆಟ್ ನಲ್ಲಿ ಹತ್ತು ಸಾವಿರ ರನ್ ದಾಖಲಿಸಿದ ಪ್ರಥಮ ಭಾರತೀಯರೆಂದರೆ ಸುನಿಲ್ ಗಾವಸ್ಕರ್. ಈ ಸಾಧನೆಯಲ್ಲಿ ಅವರ ಮೂವತ್ತನಾಲ್ಕು ಶತಕಗಳೂ ಸೇರಿವೆ. ಆದರೆ ಗಾವಸ್ಕ್ರರ್ ಸಹಾ ತಮ್ಮ ಕ್ರೀಡಾಜೀವನದಲ್ಲಿ ಮೂರು ಬಾರಿ ಪ್ರಥಮ ಎಸೆತದಲ್ಲಿಯೇ ಔಟ್ ಆಗಿ ಪೆವಿಲಿಯನ್ ಗೆ ಹಿಂದಿರುಗಿದ್ದಾರೆ. ಗಾವಸ್ಕರ್ರನ್ನು ಪ್ರಥಮ ಎಸೆತದಲ್ಲಿಯೇ ಹಿಂದೆ ಕಳುಹಿಸಿದ ಹಿರಿಮೆಯ ಗರಿಯನ್ನು ತಮ್ಮ ಕಿರೀಟಕ್ಕೆ ಸಿಕ್ಕಿಸಿಕೊಂಡವರು - ಜೆ ಆರ್ನಾಲ್ಡ್ (ಎಡ್ಗಾಬಾಸ್ಟನ್,1974), ಮಾಲ್ಕಂ ಮಾರ್ಷಲ್ (ಕೋಲ್ಕಾತಾ 1984), ಮತ್ತು ಇಮ್ರಾನ್ ಖಾನ್ (ಜೈಪುರ, 1987).

ಟೆಸ್ಟ್ ಪಂದ್ಯಗಳನ್ನು ಐದೂ ದಿನ ಆಡಿದ ಆಟಗಾರರು

ಟೆಸ್ಟ್ ಪಂದ್ಯಗಳನ್ನು ಐದೂ ದಿನ ಆಡಿದ ಆಟಗಾರರು

ಐದು ದಿನಗಳ ಟೆಸ್ಟ್ ಪಂದ್ಯದ ಐದೂ ದಿನಗಳಲ್ಲಿ ಮೈದಾನದಲ್ಲಿ ಆಟವಾಡಿದವರೆಂದರೆ ರವಿಶಾಸ್ತ್ರಿ ಮತ್ತು ಎಂ.ಎಲ್ ಜೈಸಿಂಹ ಮಾತ್ರ

photo courtesy - Indiatimes and Getty images

ಇಫ್ತಿಖಾರ್ ಅಲಿ ಖಾನ್ ಪಟೌಡಿ

ಇಫ್ತಿಖಾರ್ ಅಲಿ ಖಾನ್ ಪಟೌಡಿ

ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ದೇಶಗಳೆರಡನ್ನೂ ಪ್ರತಿನಿಧಿಸಿದ ಏಕಮಾತ್ರ ಭಾರತೀಯ ಆಟಗಾರನೆಂದರೆ ಇಫ್ತಿಖಾರ್ ಅಲಿ ಖಾನ್ ಪಟೌಡಿ (ಸೈಫ್ ಅಲಿ ಖಾನ್ ರವರ ಅಜ್ಜ)

 ಕ್ರಿಕೆಟ್ ಜಗತ್ತಿನ ದಂತಕಥೆ ಡಾನ್ ಬ್ರಾಡ್ಮನ್

ಕ್ರಿಕೆಟ್ ಜಗತ್ತಿನ ದಂತಕಥೆ ಡಾನ್ ಬ್ರಾಡ್ಮನ್

ಕ್ರಿಕೆಟ್ ಜಗತ್ತಿನ ದಂತಕಥೆ ಡಾನ್ ಬ್ರಾಡ್ಮನ್ ರವರನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ಹಿಟ್ ವಿಕೆಟ್ ಮೂಲಕ ಔಟ್ ಮಾಡಿದ ಏಕಮಾತ್ರ ಬೌಲರ್ ಎಂದರೆ ಲಾಲಾ ಅಮರ್ ನಾಥ್.

courtesy - iloveindia.com

ಆಸ್ಟ್ರೇಲೇಷಿಯಾ ಕಪ್

ಆಸ್ಟ್ರೇಲೇಷಿಯಾ ಕಪ್

ಕಾಕತಾಳೀಯವಾಗಿ ಏಕರೂಪದ ಫಲಿತಾಂಶಗಳು ಕಂಡುಬಂದ ಎರಡು ವಿಭಿನ್ನ ಪಂದ್ಯಾಟಗಳೆಂದರೆ 1986ರ ಆಸ್ಟ್ರೇಲೇಷಿಯಾ ಕಪ್ ಮತ್ತು 2014ರ ಏಷಿಯಾ ಕಪ್ ಪಂದ್ಯಾವಳಿಗಳು.

1983ರ ಕ್ರಿಕೆಟ್ ವಿಶ್ವಕಪ್

1983ರ ಕ್ರಿಕೆಟ್ ವಿಶ್ವಕಪ್

ಕಪಿಲ್ ದೇವ್ ನಾಯಕತ್ವದಲ್ಲಿ 1983ರ ಕ್ರಿಕೆಟ್ ವಿಶ್ವಕಪ್ ಗೆದ್ದ ಬಳಿಕ ಮೂರು ವರ್ಷಗಳ ನಂತರ ಲಾರ್ಡ್ಸ್ ಕ್ರೀಡಾಂಗಣದಲ್ಲಿ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನೂ 1986ರಲ್ಲಿ ಗೆದ್ದುಕೊಂಡಿತು.

2011ರ ವಿಶ್ವಕಪ್

2011ರ ವಿಶ್ವಕಪ್

ಕಾಕತಾಳೀಯವೆಂಬಂತೆ 28 ವರ್ಷಗಳ ಬಳಿಕ 2011ರ ವಿಶ್ವಕಪ್ ಗೆದ್ದ ಬಳಿಕ ಮೂರು ವರ್ಷಗಳ ನಂತರ 20104ರಲ್ಲಿ ಮತ್ತೊಮ್ಮೆ ಲಾರ್ಡ್ಸ್ ನಲ್ಲಿಯೇ ಟೆಸ್ಟ್ ಕ್ರಿಕೆಟ್ ನಲ್ಲಿ ಗೆಲುವು ಸಾಧಿಸಿತು, ಇದು ಎರಡನೆಯ ಗೆಲುವಾಗಿದೆ.

50-20 ಓವರ್ ಎರಡರಲ್ಲೂ ಭಾರತ ಮೇಲುಗೈ..

50-20 ಓವರ್ ಎರಡರಲ್ಲೂ ಭಾರತ ಮೇಲುಗೈ..

ಒಂದು ದಿನದ ಪಂದ್ಯಗಳ ವೈವಿಧ್ಯತೆಯಾದ 50-ಓವರ್ ಮತ್ತು 20-ಓವರ್ ಗಳ ವಿಶ್ವಕಪ್ ಎರಡರಲ್ಲೂ ಗೆದ್ದ ಏಕಮಾತ್ರ ತಂಡವೆಂದರೆ ಭಾರತ.

ಸಿಫ್ ಕರೀಂ

ಸಿಫ್ ಕರೀಂ

ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಟೆನ್ನಿಸ್‌ನ ಡೇವಿಸ್ ಕಪ್ ನಲ್ಲಿ ತನ್ನ ದೇಶವನ್ನು ಪ್ರತಿನಿಧಿಸಿದ ಏಕಮಾತ್ರ ಆಟಗಾರನೆಂದರೆ ಕೀನ್ಯಾ ದೇಶದ ಸಿಫ್ ಕರೀಂ ಆಗಿದ್ದಾರೆ.

courtesy - Indiatimes and getty images

ಟೆಸ್ಟ್‌ನಲ್ಲಿ 10 ವಿಕೆಟ್

ಟೆಸ್ಟ್‌ನಲ್ಲಿ 10 ವಿಕೆಟ್

ಟೆಸ್ಟ್ ಕ್ರಿಕೆಟ್‌ನ ಒಂದು ಇನ್ನಿಂಗ್ಸ್ ನಲ್ಲಿ ಎಲ್ಲಾ ಹತ್ತು ವಿಕೆಟ್ ಗಳನ್ನು ಕಬಳಿಸಿದುದ ಇಬ್ಬರು ಬೌಲರುಗಳನ್ನು ನೋಡಿದ ಏಕಮಾತ್ರ ವ್ಯಕ್ತಿ ರಿಚರ್ಡ್ ಸ್ಟೋಕ್ಸ್

photo courtesy - Indiatimes and Gretty Images

ಭಾರತದ ಆಟಗಾರ ಅನಿಲ್ ಕುಂಬ್ಳೆ

ಭಾರತದ ಆಟಗಾರ ಅನಿಲ್ ಕುಂಬ್ಳೆ

1956ರಲ್ಲಿ ಇಂಗ್ಲೆಂಡಿನ ಜಿಮ್ ಲೇಕರ್ ರವರು ಆಸ್ಟ್ರೇಲಿಯಾ ವಿರುದ್ಧ ಆಡಿದ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್ ನಲ್ಲಿ ಎಲ್ಲಾ ಹತ್ತು ವಿಕೆಟ್ಟುಗಳನ್ನು ಕಬಳಿಸಿದರು. ಆಗ ಹತ್ತು ವರ್ಷದ ರಿಚರ್ಡ್ ಸ್ಟೋಕ್ಸ್ ಕ್ರೀಡಾಂಗಣದಲ್ಲಿದ್ದು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಕಾಕತಾಳೀಯವೆಂಬಂತೆ ನಲವತ್ತಮೂರು ವರ್ಷಗಳ ನಂತರ ಪಾಕಿಸ್ತಾನದ ವಿರುದ್ಧ ಆಡಿದ ಭಾರತದ ಆಟಗಾರ ಅನಿಲ್ ಕುಂಬ್ಳೆಯವರು ಒಂದು ಇನ್ನಿಂಗ್ಸ್ ನಲ್ಲಿ ಎಲ್ಲಾ ಹತ್ತು ವಿಕೆಟ್ ಗಳನ್ನು ಕಬಳಿಸಿದಾಗಲೂ ರಿಚರ್ಡ್ ಸ್ಟೋಕ್ಸ್ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದರು. ಇನ್ನಷ್ಟು ಅಚ್ಚರಿಯ ವಿಷಯವೆಂದರೆ ಅವರು ತಮ್ಮ ಜೀವಮಾನದಲ್ಲಿ ಕ್ರೀಡಾಂಗಣದಲ್ಲಿ ನೋಡಿದ ಪಂದ್ಯಗಳೆಂದರೆ ಇವೆರಡೇ ಆಗಿವೆ.

 ಹುಟ್ಟುಹಬ್ಬದಂದೇ ಹ್ಯಾಟ್ ಟ್ರಿಕ್ ಪಡೆದ ಬೌಲರ್ -ಪೀಟರ್ ಸಿಡ್ಲ್

ಹುಟ್ಟುಹಬ್ಬದಂದೇ ಹ್ಯಾಟ್ ಟ್ರಿಕ್ ಪಡೆದ ಬೌಲರ್ -ಪೀಟರ್ ಸಿಡ್ಲ್

ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ ಪೀಟರ್ ಸಿಡ್ಲ್ ರವರು 2010ರಲ್ಲಿ ತಮ್ಮ ಹುಟ್ಟುದಿನವಾದ ನವೆಂಬರ್ 25ರಂದು ಬ್ರಿಸ್ಬೇನ್ ನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಆಡುತ್ತಿದ್ದರು. ಅಂದು ಅವರು ಪಡೆದ ಆರು ವಿಕೆಟ್ ಗಳಲ್ಲಿ ಮೂರು ವಿಕೆಟ್ ಗಳನ್ನು ಸತತ ಮೂರು ಓವರ್ ಗಳಲ್ಲಿ ಪಡೆದು ಹ್ಯಾಟ್ರಿಕ್ ದಾಖಲಿಸಿದ್ದಾರೆ.

ಭಾರತಕ್ಕಾಗಿ ಆಡುವ ಮೊದಲೇ ಸಚಿನ್ ಪಾಕಿಸ್ತಾನಕ್ಕಾಗಿ ಆಡಿದ್ದರು!

ಭಾರತಕ್ಕಾಗಿ ಆಡುವ ಮೊದಲೇ ಸಚಿನ್ ಪಾಕಿಸ್ತಾನಕ್ಕಾಗಿ ಆಡಿದ್ದರು!

1987ರ ಸಮಯ, ಆಗಿನ್ನೂ ಸಚಿನ್ ಭಾರತ ತಂಡದಲ್ಲಿ ದಾಖಲಾಗಿರಲೇ ಇಲ್ಲ. ಆಗ ಮುಂಬಯಿಯ ಬ್ರಾಬೋರ್ನ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನದ ತಂಡಗಳ ನಡುವೆ ಅಭ್ಯಾಸದ ಪಂದ್ಯ ನಿಗದಿಯಾಗಿತ್ತು. ಅಂದು ಪಾಕಿಸ್ತಾನದ ತಂಡದ ಆಟಗಾರರೊಬ್ಬರ ಅನುಪಸ್ಥಿತಿಯಲ್ಲಿ ಸಚಿನ್ ಪಾಕಿಸ್ತಾನದ ತಂಡದಲ್ಲಿ ಫೀಲ್ಡರ್ ಆಗಿ ಮೈದಾನದಲ್ಲಿ ಉಪಸ್ಥಿತರಿದ್ದರು.

English summary

Interesting Cricket Facts That'll Blow Your Mind

Call yourself a cricket superfan? Well, then how many of these amazing facts do you know? have a look
X
Desktop Bottom Promotion