For Quick Alerts
ALLOW NOTIFICATIONS  
For Daily Alerts

ಭೂತಗಳ ಕಾಟದಿಂದ ಈಗ ಬೆಂಗಳೂರು ಕೂಡ ನಲುಗುತ್ತಿದೆ!

By Super
|

ಭೂತಗಳ ಬಗ್ಗೆ ಭಾರತದ ಪ್ರತಿ ಹಳ್ಳಿಯಲ್ಲಿಯೂ ನೂರಾರು ಕಥೆಗಳಿರುವಾಗ ಬೆಂಗಳೂರಿನಂತಹ ಮಹಾನಗರದಲ್ಲಿ ಇಲ್ಲದಿರುತ್ತದೆಯೇ? ಛೆ! ಎಲ್ಲಾದರೂ ಉಂಟೇ, ಸುಮ್ಮನೇ ಮಾತು ಕೆದಕಿದರೆ ಸಾಕು ಬಡಾವಣೆಗೊಂದಾದರೂ ಕೇಳಿಬರುತ್ತವೆ. ಇವುಗಳಲ್ಲಿ ಕಲ್ಪಿತವು ಎಷ್ಟು ಸಾಚಾ ಎಷ್ಟು ಎಂದು ಪ್ರತ್ಯೇಕಿಸುವುದೇ ಕಷ್ಟ. ಆದರೆ ಕೆಲವು ವಿದ್ಯಮಾನಗಳು ಮಾತ್ರ ಬೆಂಗಳೂರಿನ ಕೆಲವು ಸ್ಥಳಗಳಲ್ಲಿ ನಡೆದಿದ್ದು ಆ ಬಗ್ಗೆ ಹಲವು ಜನರು ತಮ್ಮ ಅನುಭವಗಳನ್ನು ಹೇಳಿಕೊಂಡಿರುವುದರಿಂದ ಕಲ್ಪನೆ ಎಂದು ಖಡಾಖಂಡಿತವಾಗಿ ನಿರಾಕರಿಸಲು ಸಾಧ್ಯವೇ ಇಲ್ಲ.

ಇದರಲ್ಲಿ ಭೂತ, ಪಿಶಾಚಿ, ಮಾಟಗಾರ, ಮಾಟಗಾತಿ, ಆತ್ಮಗಳು ಅಥವಾ ಇನ್ನಾವುದೇ ಅತೀಂದ್ರಿಯ ಶಕ್ತಿ ಇರಬಹುದು. ಈ ಅನುಭವಗಳನ್ನು ಕೇಳುತ್ತಿದ್ದಂತೆ ನಮಗರಿವಿಲ್ಲದೇ ಹೊಟ್ಟೆಯೊಳಗೆ ನುಗ್ಗುವ ಅಡ್ರಿನಲಿನ್ ರಸದೂತದ ಪರಿಣಾಮವಾಗಿ ಬೆನ್ನುಹುರಿಯಲ್ಲಿ ಚಳಕು ಮೂಡುತ್ತದೆ. ಸಿಲಿಕಾನ್ ಸಿಟಿ ಬೆಂಗಳೂರು, ಸೌಂದರ್ಯದ ತವರೂರು

ಬಹುತೇಕ ಬೆಂಗಳೂರು ನಗರ ಸುರಕ್ಷತೆಯಿಂದಿದೆ ಎಂಬ ಭಾವನೆಯನ್ನು ಈ ಕೆಳಗಿನ ಕೆಲವು ಭಯಭೀತ ಸ್ಥಳಗಳಲ್ಲಿ ನಡೆದಿರುವ ಅತೀಂದ್ರಿಯ ಚಟುವಟಿಕೆಗಳು ಕೊಂಚವಾದರೂ ಅಲುಗಾಡಿಸುತ್ತವೆ. ಬೆಂಗಳೂರಿನಲ್ಲಿದ್ದೂ ಅಥವಾ ಬೆಂಗಳೂರಿಗೆ ಈಗಾಗಲೇ ಭೇಟಿ ನೀಡಿದ್ದರೂ ಈ ಬಗ್ಗೆ ಕೊಂಚವೂ ಮಾಹಿತಿಯೇ ಇಲ್ಲದವರಿಗಾಗಿ ಬೆಂಗಳೂರಿನ ಇನ್ನೊಂದು ಮುಖದ ಪರಿಚಯವನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ. ಭೂತ- ಪ್ರೇತಗಳು ಬರೀ ಭ್ರಮೆಯಂತೆ! ನಂಬುತ್ತೀರಾ?

ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಟೆರಾ ವೆರಾ ಬಂಗಲೆ

ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಟೆರಾ ವೆರಾ ಬಂಗಲೆ

ಬೆಂಗಳೂರಿನ ಅತ್ಯಂತ ದುಬಾರಿ ಪ್ರದೇಶಗಳಲ್ಲಿ ಒಂದಾದ ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಈ ಬಂಗಲೆ ಈಗ ಪಾಳು ಬಿದ್ದಿದೆ. ಏಕೆಂದರೆ ಈ ಬಂಗಲೆಯಲ್ಲಿದ್ದ ಡೋಲ್ಸ್ ವಾಜ್ ಎಂಬ ಹೆಸರಿನ ವೃದ್ದೆಯೊಬ್ಬರನ್ನು 2002ರಲ್ಲಿ ವಿಚಿತ್ರ ರೀತಿಯಲ್ಲಿ ಕೊಲೆ ಮಾಡಿದ ಬಳಿಕ ನಡೆದ ವಿದ್ಯಮಾನಗಳು ಸಾಮಾನ್ಯರನ್ನು ಈ ಬಂಗಲೆಯೊಳಕ್ಕೆ ಕಾಲಿಡದಂತೆಯೇ ತಡೆದಿದೆ.

ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಟೆರಾ ವೆರಾ ಬಂಗಲೆ

ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಟೆರಾ ವೆರಾ ಬಂಗಲೆ

ನೋಡುವವರಿಲ್ಲದೇ ಬೆಳೆದ ಕಳೆ, ನಿಂತಲ್ಲೇ ತುಕ್ಕು ಹಿಡಿಯುತ್ತಿರುವ ನೀಲಿ ಬಣ್ಣದ ಒಂದು ಕಾಲದ ಐಷಾರಾಮಿ ಕಾರು, ಶಿಥಿಲವಾಗಿ ಹೆಚ್ಚೂ ಕಡಿಮೆ ಜೀರ್ಣವಾಗಿರುವ ಕಟ್ಟಡವನ್ನು ನೋಡುತ್ತಿದ್ದಂತೆಯೇ ಬೆಂಗಳೂರಿನ ಥಳಕಿನ ನಟ್ಟ ನಡುವೆ ಚುಕ್ಕಿಬೊಟ್ಟಿನಂತಿರುವುದು ಬೆನ್ನುಹುರಿಯಲ್ಲಿ ಬೆಳಕು ಮೂಡುತ್ತದೆ. ಮುಂದೆ ಓದಿ

ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಟೆರಾ ವೆರಾ ಬಂಗಲೆ

ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಟೆರಾ ವೆರಾ ಬಂಗಲೆ

ಸೆಂಟ್ ಮಾರ್ಕ್ಸ್ ರಸ್ತೆಯ ಈ ಬಂಗಲೆಯಿಂದಾಗಿ ಹೊರಗಿನವರಿಗೆ ಏನೂ ಅಪಾಯವಿಲ್ಲದಿದ್ದರೂ ಈ ಬಂಗಲೆಯನ್ನು ಪ್ರವೇಶಿಸಿದವರ ಅನುಭವದಿಂದಾಗಿಯೇ ಈ ಬಂಗಲೆಗೆ ಭೂತಬಂಗಲೆಯೆಂಬ ಹೆಸರು ಬಂದಿದೆ. ರಾತ್ರಿ ಹೊತ್ತು ಇಲ್ಲಿಂದ ಯಾರೋ ಪಿಯಾನೋ ಬಾರಿಸುತ್ತಿರುವ ಶಬ್ದವನ್ನು ಕೇಳಿ ಇದಕ್ಕೂ ಮುನ್ನ ಕೆಲವು ತಂಡಗಳು ಈ ಬಂಗಲೆಯೊಳಗೆ ಪ್ರವೇಶಿಸಿ ಕಾರಣಗಳನ್ನು ಹುಡುಕುವ ಪ್ರಯತ್ನ ನಡೆಸಿದ್ದವು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಟೆರಾ ವೆರಾ ಬಂಗಲೆ

ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಟೆರಾ ವೆರಾ ಬಂಗಲೆ

ಅದರಲ್ಲೂ ನಾಲ್ಕು ಜನರ ತಂಡಕ್ಕೆ ಆದ ಅನುಭವ ಮಾತ್ರ ಮರೆಯಲಾಗದಂತಹದ್ದು. ಇವರು ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ಕಂಡದ್ದು ತಲೆಕೆಳಗಾದ ಶಿಲುಬೆ, ಹತ್ಯೆಗೀಡಾಗಿದ್ದ ವೃದ್ಧೆಯ ಕೈ ಮತ್ತು ರುಂಡವಿಲ್ಲದ ಕಳೇಬರ, ನೆಲದಲ್ಲೆಲ್ಲಾ ಗಾಜಿನ ಚೂರುಗಳು ಚಿಲ್ಲಾಪಿಲ್ಲಿಯಾಗಿ ಬಿದ್ದಿರುವುದು ಮೊದಲಾದವು ಕಂಡುಬಂದಿವೆ.

ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಟೆರಾ ವೆರಾ ಬಂಗಲೆ

ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಟೆರಾ ವೆರಾ ಬಂಗಲೆ

ಇವನ್ನೆಲ್ಲಾ ಅನುಭವಿಸಿದ ಈ ತಂಡ ಅಲ್ಲಿಂದ ಕಾಲ್ಕಿತ್ತಿದೆ. ಆ ಬಳಿಕ ಇದುವರೆಗೂ ಯಾರೂ ಈ ಬಂಗಲೆಗೆ ಕಾಲಿಡುವ ಧೈರ್ಯ ಮಾಡದೇ ಇರುವ ಕಾರಣ ಈ ಬಂಗಲೆ ಪಾಳುಬಿದ್ದಿದ್ದು ನಗರದ ಒಂದು ಆಕರ್ಷಣೆಯ ಕೇಂದ್ರವಾಗಿದೆ. ಬೆಂಗಳೂರಿನಲ್ಲಿದ್ದವರು ಒಂದು ಬಾರಿಯಾದರೂ ಹೊರಗಿನಿಂದ ಈ ಬಂಗಲೆಯನ್ನು ನೋಡದಿದ್ದರೆ ನಿಮ್ಮ ಸ್ನೇಹಿತರಿಗೇನು ಹೇಳುವಿರಿ? ಈ ಬಂಗಲೆ ನೋಡಬಯಸಿದರೆ ಗೂಗಲ್ ನಲ್ಲಿ Terra Vera House ಎಂದು ಹಾಕಿ ಹುಡುಕಿ.

ಬಿಐಎಎಲ್ (ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ)

ಬಿಐಎಎಲ್ (ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ)

2008ರಲ್ಲಿ ರಾಜಕೀಯ ಶಕ್ತಿಗಳ ಪರಿಣಾಮವಾಗಿ ನಗರದಿಂದ ನಲವತ್ತು ಕಿ.ಮೀ ಯಷ್ಟು ದೂರ, ವಿರುದ್ಧ ದಿಕ್ಕಿನಲ್ಲಿ ಸ್ಥಾಪನೆಗೊಂಡ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಗುಣಮಟ್ಟ ಮತ್ತು ಸೌಲಭ್ಯಗಳನ್ನು ಒಳಗೊಂಡಿರುವ ಕಾರಣ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ. ಆದರೆ ಮುಖ್ಯ ಕಟ್ಟಡದ ಆಚೆಬದಿಯಲ್ಲಿರುವ ಕಾರ್ಗೋ ಕಟ್ಟಡದಲ್ಲಿ ಮಾತ್ರ ಭೂತವೊಂದು ನಡೆದಾಡುತ್ತಿರುವ ಬಗ್ಗೆ ಗುಸುಗುಸು ಹಬ್ಬಿದ್ದು ಈಗ ಗುಟ್ಟಾಗಿ ಉಳಿದಿಲ್ಲ. ಈ ಕಟ್ಟಡದಲ್ಲಿ ಯುವತಿಯೊಬ್ಬಳು ಬಿಳಿ ಸೀರೆಯುಟ್ಟುಕೊಂಡು ಕೂದಲನ್ನು ಬಿಟ್ಟುಕೊಂಡು ನಡೆದಾಡುತ್ತಿರುವುದನ್ನು ನೋಡಿದವರಿದ್ದಾರೆ!

ಬಿಐಎಎಲ್ (ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ)

ಬಿಐಎಎಲ್ (ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ)

ಈ ಬಗ್ಗೆ ಪೈಲಟ್ ಒಬ್ಬರು ತಮ್ಮ ಅನುಭವವನ್ನು ಹೇಳಿಕೊಳ್ಳುತ್ತಾ ಈಕೆ ದಾರಿ ತಪ್ಪಿ ಅಕಸ್ಮಿಕವಾಗಿ ಬಂದಿರುವ ಪ್ರಯಾಣಿಕರಿರಬಹುದೆಂದು ವಿಚಾರಿಸಲು ತಿಳಿದು ಆಕೆಯ ಸಹಾಯಕ್ಕಾಗಿ ಸಿಬ್ಬಂದಿಯನ್ನು ಕಳಿಸಿದ್ದರು. ಅದರೆ ಅವರು ಹತ್ತಿರ ಬರುವವರೆಗೂ ಸ್ಪಷ್ಟವಾಗಿದ್ದ ಆಕೆಯ ರೂಪ ಹತ್ತಿರಾಗುತ್ತಿದ್ದಂತೆಯೇ ಅದೃಶ್ಯವಾಗಿದೆ! ಇನ್ನೂ ಕೆಲವು ವಿಮಾನದ ಪೈಲಟ್ಟುಗಳು ವಿಮಾನ ನೆಲಸ್ಪರ್ಷವಾದ ಕೆಲವೇ ಕ್ಷಣಗಳಲ್ಲಿ ರನ್ ವೇ ಮೇಲೆ ತನ್ನ ಎರಡೂ ಕೈಗಳನ್ನು ಅಗಲವಾಗಿ ಚಾಚಿದ್ದಂತೆ ನಿಂತಿರುವ ಈಕೆಯ ಆಕೃತಿಯನ್ನು ಕಂಡಿದ್ದಾರೆ.

ಬಿಐಎಎಲ್ (ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ)

ಬಿಐಎಎಲ್ (ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ)

ಇನ್ನೂ ಕೆಲವರು ಈಕೆಯ ರುಂಡವಿಲ್ಲದ ದೇಹವನ್ನೂ ಗಮನಿಸಿದ್ದಾರೆ. ಇವರೆಲ್ಲರ ಅನುಭವಗಳನ್ನು ಕಂಡ ವಿಜ್ಞಾನಿಗಳ ತಂಡವೊಂದು ವಿಮಾನ ನಿಲ್ದಾಣದ ಈ ಭಾಗಕ್ಕೆ ಆಗಮಿಸಿ ಆಧುನಿಕ ಇನ್ಫ್ರಾರೆಡ್ ಕಿರಣಗಳ ಉಪಯೋಗದಿಂದ ಭೂತದ ಇರುವಿಕೆಯ ಬಗ್ಗೆ ಮಾಹಿತಿ ಪಡೆಯಲು ಯತ್ನಿಸಿದ್ದಾರೆ. ಆದರೆ ಇದನ್ನು ಅವರು ಪೂರ್ಣವಾಗಿ ಸಮರ್ಥಿಸಲೂ ಆಗದೇ ಪೂರ್ಣವಾಗಿ ತಿರಸ್ಕರಿಸಲೂ ಆಗದೆ ಇಬ್ಬಂದಿಯಿಂದ ಹಿಂದಿರುಗಿರುವುದು ಈ ಸ್ಥಳಕ್ಕೆ ಇನ್ನಷ್ಟು ಭೂತದ ಮೆರುಗು ಮೂಡಿಸಿದೆ.

ಎಂ.ಜಿ.ರಸ್ತೆಯಲ್ಲಿರುವ ಕಾಲ್ ಸೆಂಟರ್

ಎಂ.ಜಿ.ರಸ್ತೆಯಲ್ಲಿರುವ ಕಾಲ್ ಸೆಂಟರ್

ನಗರದ ಎಂ.ಜಿ.ರಸ್ತೆ ಹಗಲಿನಲ್ಲಿ ಎಷ್ಟು ಜನನಿಬಿಡವೋ ಅಂತೆಯೇ ರಾತ್ರಿಯಾಗುತ್ತಿದ್ದಂತೆ ಜನವಿರಳವಾಗುತ್ತದೆ. ಅದರಲ್ಲೂ ಒಂದು ವೇಳೆ ನೀವು ಭೂತಗಳ ಬಗ್ಗೆ ಕುತೂಹಲವುಳ್ಳವರಾಗಿದ್ದರೆ ಈ ಸ್ಥಳದ ಬಗ್ಗೆ ಅವಗಣನೆ ಸಾಧ್ಯವೇ ಇಲ್ಲ. ಏಕೆಂದರೆ ಎಂ.ಜಿ.ರಸ್ತೆಯಲ್ಲಿರುವ ಈ ಕಾಲ್ ಸೆಂಟರ್ ಕಟ್ಟಡದಲ್ಲಿ ಹಗಲಿನಲ್ಲಿ ಯಾವುದೇ ಅನುಭವಗಳಾಗದಿದ್ದರೂ ರಾತ್ರಿ ಹೊತ್ತು ಆದ ಕೆಲವು ಅನುಭವಗಳು ಅಳ್ಳೆದೆಯವರಿಗೆ ಸಲ್ಲದು. ರಾತ್ರಿ ಪಾಳಿಯಲ್ಲಿದ್ದ ಕಾಲ್ ಸೆಂಟರ್ ಉದ್ಯೋಗಿಯಾಗಿದ್ದ ಯುವತಿಯನ್ನು ಮದ್ಯದ ಅಮಲಿನಲ್ಲಿ ಓಡಿಸುತ್ತಿದ್ದ ಕಾರಿನ ಚಾಲಕ ಅಪಘಾತಕ್ಕೀಡಾಗಿಸಿ ನಿಲ್ಲಿಸದೇ ಪರಾರಿಯಾಗಿದ್ದ.

ಎಂ.ಜಿ.ರಸ್ತೆಯಲ್ಲಿರುವ ಕಾಲ್ ಸೆಂಟರ್

ಎಂ.ಜಿ.ರಸ್ತೆಯಲ್ಲಿರುವ ಕಾಲ್ ಸೆಂಟರ್

ಗಾಯಗೊಂಡು ಕಿರಿಚುತ್ತಲೇ ಇದ್ದ ಆಕೆಯ ಚೀತ್ಕಾರವನ್ನೂ ಲೆಕ್ಕಿಸದೆ ಕಾರಿನ ಚಾಲಕ ಅಲ್ಲಿಂದ ಕಾಲ್ಕಿತ್ತಿದ್ದ. ಸೂಕ್ತ ಸಮಯದಲ್ಲಿ ಆರೈಕೆ ಸಿಗದೇ ಆಕೆ ಕೊಂಚಹೊತ್ತಿನ ಬಳಿಕ ಸಾವನ್ನಪ್ಪಿದ್ದಳು. ಆ ಬಳಿಕ ಆ ಸ್ಥಳದಲ್ಲಿ ಪ್ರತಿವರ್ಷ ಆಕೆ ಸಾವಿಗೀಡಾಗಿದ್ದ ರಾತ್ರಿಯಂದು ಆಕೆಯ ಚೀತ್ಕಾರ ಕೇಳಿಬರುತ್ತಿದೆ. ಇದನ್ನು ಆ ಸ್ಥಳದಲ್ಲಿ ಉದ್ಯೋಗಿಯಾಗಿರುವ ಹಲವರು ಕೇಳಿ ಸ್ಪಷ್ಟಪಡಿಸಿರುವುದು ಈ ಸ್ಥಳವನ್ನು ಕುಖ್ಯಾತವಾಗಿಸಿದೆ.

ಎನ್.ಎಚ್4

ಎನ್.ಎಚ್4

ಭಾರತದಲ್ಲಿ ಭೂತಗಳ ಕಥೆಗಳಿಗೂ ಹೈವೇಗಳಿಗೂ ಬಿಡಲಾರದ ನಂಟು. ಏಕೆಂದರೆ ಹೈವೇಗಳಲ್ಲಾಗುವ ಅಪಘಾತಗಳಲ್ಲಿ ಮೃತರಾದವರ ಆತ್ಮಗಳು ಅಪಘಾತದ ಸ್ಥಳದಲ್ಲಿಯೇ ಓಡಾಡಿಕೊಂಡಿಕೊಂಡಿದ್ದು ತಮ್ಮ ಸಾವಿಗೆ ಕಾರಣರಾದವರ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿರುತ್ತವೆ ಎಂಬ ನಂಬಿಕೆಯಿದೆ. ಹಲವರಿಗೆ ಈ ಬಗ್ಗೆ ಅನುಭವಗಳೂ ಆಗಿವೆ. ಇನ್ನೂ ಕೆಲವು ಕಡೆಗಳಲ್ಲಿ ಭೂತಕ್ಕೆ ಹೆದರಿ ಹಿಂದೆಂದೋ ಅಪಘಾತ ನಡೆಸಿ ತಲೆಮರೆಸಿಕೊಂಡಿದ್ದ ಹಳೆಯ ಕುಳಗಳೂ ತಾವೇ ಪೋಲೀಸರಿಗೆ ಶರಣಾಗಿರುವುದು ಈ ಬಗ್ಗೆ ಕುತೂಹಲ ಮೂಡಿಸುತ್ತದೆ. ಎನ್.ಹೆಚ್4 ರಲ್ಲಿ ತಮ್ಮ ವಾಹನದಲ್ಲಿ ಹೋಗುತ್ತಿದ್ದ ವೃದ್ಧರೊಬ್ಬರಿಗೆ ನಡುರಾತ್ರಿಯಲ್ಲಿ ಮಹಿಳೆಯು ಸಹಾಯ ಕೇಳಲು ಕೈ ಅಡ್ಡಹಾಕಿದಂತಾಗಿತ್ತು.

ಎನ್.ಎಚ್4

ಎನ್.ಎಚ್4

ವೇಗವನ್ನು ತಗ್ಗಿಸಿ ನಿಲ್ಲಿಸಿ ಹಿಂದಿರುಗಿ ನೋಡಿದಾಗ ಅಲ್ಲಿ ಯಾರೂ ಇರಲಿಲ್ಲ. ಇಷ್ಟೇ ಆಗಿದ್ದರೆ ಯಾರದ್ದೋ ಕುಚೇಷ್ಟೆ ಎಂದು ಸುಮ್ಮನಾಗಬಹುದಿತ್ತು. ಆದರೆ ಆಕೆ ಥಟ್ಟನೇ ಇವರ ಹಿಂಭಾಗದಲ್ಲಿ ಪ್ರತ್ಯಕ್ಷಳಾಗಿ ಅಟ್ಟಹಾಸದಿಂದ ನಗಲು ಪ್ರಾರಂಭಿಸಿದ್ದಳು. ಹೆದರಿದ ಈ ವೃದ್ಧರು ಹೆದರಿಕೊಂಡು ಅಲ್ಲಿಂದ ಓಡಿ ಹೋಗಲು ಯತ್ನಿಸಿ ಆ ಪ್ರಯತ್ನದಲ್ಲಿ ಕಾಂಪೌಂಡ್ ಗೋಡೆಗೆ ಢಿಕ್ಕಿಹೊಡೆದು ಗಾಯಗೊಂಡಿದ್ದಾರೆ. ಮುಂದಿನ ಬಾರಿ ಈ ಹೈವೇಯಲ್ಲಿ ಹೋಗುತ್ತಿರುವಾಗ ಕಿಶೋರಿಯೊಬ್ಬಳು ಅಡ್ಡ ಹಾಕಿದರೆ ಏನು ಮಾಡಬೇಕು (ಅಥವಾ ಏನು ಮಾಡಬಾರದು) ಎಂದು ಈಗ ನಿಮಗೆ ಗೊತ್ತಿದೆ.

ವಿಕ್ಟೋರಿಯಾ ಆಸ್ಪತ್ರೆ

ವಿಕ್ಟೋರಿಯಾ ಆಸ್ಪತ್ರೆ

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶತಮಾನದ ಸಂಭ್ರಮ. ಸಿಟಿ ಮಾರ್ಕೆಟ್ ಬಳಿ ಇರುವ ಈ ಆಸ್ಪತ್ರೆ ನೂರಕ್ಕಿಂತಲೂ ಹೆಚ್ಚಿನ ವರ್ಷಗಳಿಂದ ಬಡಜನರಿಗೆ ಅಗತ್ಯ ವೈದ್ಯಕೀಯ ಸೇವೆಯನ್ನು ಸಲ್ಲಿಸುತ್ತಾ ಅಪತ್ಬಾಂಧವನಾಗಿ ಪರಿಣಮಿಸಿದೆ. ಆದರೆ ಜೀವ ಉಳಿಸುವ ಈ ಸ್ಥಳದಲ್ಲಿಯೂ ಕೆಲವು ಅತೀಂದ್ರಿಯ ಅನುಭವಗಳಾಗಿವೆ. ಆಸ್ಪತ್ರೆಯ ಆವರಣದಲ್ಲಿರುವ ಮರಗಳ ಮೇಲೆ ಹಲವರಿಗೆ ಭೂತದಂತಹ ಆಕೃತಿಗಳು ಕಂಡುಬಂದಿವೆ. ಆದರೆ ಈ ಭೂತಗಳು ಯಾರಿಗೂ ಇದುವರೆಗೆ ತೊಂದರೆ ಅಥವಾ ಅಪಾಯವನ್ನು ಕೊಟ್ಟಿಲ್ಲ.

Image courtesy- wekepedia

ವಿಕ್ಟೋರಿಯಾ ಆಸ್ಪತ್ರೆ

ವಿಕ್ಟೋರಿಯಾ ಆಸ್ಪತ್ರೆ

ವ್ಯತಿರಿಕ್ತವಾಗಿ ಮಕ್ಕಳ ನಡುವೆ ಆಟವಾಡಿಕೊಂಡಿದ್ದನ್ನು ಕಂಡವರು ಇವು ನಿರಪಾಯಕಾರಿ ಎಂಬ ತೀರ್ಮಾನಕ್ಕೆ ಬಂದಿರುವುದರಿಂದ ಇವುಗಳು ಹೆದರಿಕೆ ಹುಟ್ಟಿಸುವುದಕ್ಕಿಂತಲೂ ಆಸ್ಪತ್ರೆಯ ಒಂದು ಆಕರ್ಷಣೆಯಾಗಿ ಪರಿಣಮಿಸಿವೆ! ಆದರೆ ಇವುಗಳ ಒಂದೇ ಕೀಟಲೆ ಎಂದರೆ ಆಗಮಿಸಿದವರ ಆಹಾರದ ಪ್ಯಾಕೆಟ್ಟುಗಳನ್ನು ಎಗರಿಸುವುದು! ಮುಂದಿನ ಬಾರಿ ಆಸ್ಪತ್ರೆಗೆ ಭೇಟಿ ನೀಡಿದಾಗ ಆಹಾರದ ಪೊಟ್ಟಣವೊಂದನ್ನು ಭೂತಗಳಿಗಾಗಿಯೇ ಕೊಂಡು ಹೋಗಲು ಮರೆಯದಿರಿ!

English summary

Haunted Places In Bangalore!

The supernatural is something that you cannot ignore. Believe in it or don’t, there are some unexplained phenomena that are bound to catch your interest. Be it ghosts, demons, witches, spirits, or other yet to be discovered beings, an encounter with them will leave your adrenaline pumping.
X
Desktop Bottom Promotion