For Quick Alerts
ALLOW NOTIFICATIONS  
For Daily Alerts

ಯಕ್ಷ ಪ್ರಶ್ನೆಯಂತೆ ಕಾಡುವ ಸೂರ್ಯನ ಕುರಿತಾದ ಅಚ್ಚರಿಯ ಸಂಗತಿಗಳು!

By Arshad
|

ಭೂಮಿಯಾಚೆ ಜೀವಜಾಲ ಇದೆಯೇ ಎಂಬ ಪ್ರಶ್ನೆಗೆ ಉತ್ತರ ಪಡೆಯಲು ಯತ್ನಿಸುವ ವಿಜ್ಞಾನಿಗಳು ಹುಡುಕುವುದು ನಮ್ಮ ಸೂರ್ಯನಂತಹ ನಕ್ಷತ್ರ ಮತ್ತು ಅದರಿಂದ ಭೂಮಿಯಷ್ಟೇ ದೂರವಿರುವ ಗ್ರಹಗಳನ್ನು. ಏಕೆಂದರೆ ಭೂಮಿಯ ಮೇಲಿನ ಜೀವಜಾಲಕ್ಕೆ ಅತ್ಯಂತ ಪೂರಕವಾದ ಅಂಶವೆಂದರೆ ಸೂರ್ಯನಿಂದ ಭೂಮಿಗೆ ಇರುವ ಅಂತರ. ಹೆಚ್ಚಾದರೆ ಶೀತಲಗೊಳ್ಳುವ, ಕಡಿಮೆಯಾದರೆ ಅತೀವ ಬಿಸಿಗೊಳ್ಳುವ ಕಾರಣ ಈಗಿರುವ ದೂರ ಜೀವಜಾಲದ ಉಳಿಯುವಿಕೆಗೆ ಅತ್ಯಂತ ಸಮರ್ಪಕವಾಗಿದೆ. ಫೇಸ್‌ ಬುಕ್‌ ರಹಸ್ಯ: ಹರಿಯುವ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಏಕೆ?

ಆದರೆ ಈ ಸೂರ್ಯನ ಬಗ್ಗೆ ಮಾಹಿತಿ ಕಲೆಹಾಕುವುದು ಅಷ್ಟು ಸುಲಭವಲ್ಲ, ಏಕೆಂದರೆ 149,600,000 ಕಿಮೀ ದೂರವಿರುವ ಸೂರ್ಯ ವಾಸ್ತವವಾಗಿ ಒಂದು ಪ್ರಖರವಾಗಿ ಉರಿಯುತ್ತಿರುವ ಗೋಳ. ಇದನ್ನು ಕಣ್ಣಿನಿಂದ ನೇರವಾಗಿ ನೋಡಲು ಸಾಧ್ಯವಿಲ್ಲ. ಸೂಕ್ತ ಉಪಕರಣಗಳ ಸಹಾಯದಿಂದ ನೋಡಿದರೆ ಹಲವು ವಿದ್ಯಮಾನಗಳು ಅಲ್ಲಿ ಜರುಗುತ್ತಿರುವುದು ಕಾಣುತ್ತವೆ. ಅಪರೂಪಕ್ಕೆ ಸಂಭವಿಸುವ ಸೂರ್ಯನ ಸೌರ ವಾತಾವರಣ ಸ್ಫೋಟ (solar flare) ದಿಂದ ಭೂಮಿಯ ಮೇಲೆಯೂ ಹಲವು ಪರಿಣಾಮಗಳಾಗುತ್ತವೆ. ಸೂರ್ಯನ ಬಗ್ಗೆ ನೂರಾರು ಮಾಹಿತಿಗಳಿದ್ದರೂ ಅವುಗಳಲ್ಲಿ ಪ್ರಮುಖವಾದ ಮತ್ತು ಅಚ್ಚರಿಯ ಮಾಹಿತಿಗಳನ್ನು ಇಲ್ಲಿ ಕಲೆಹಾಕಲಾಗಿದೆ. ವಿಷಕಾರಿ ಕೀಟ - ಜೇಡಗಳ ಕುರಿತಾದ ಮೈ ನವಿರೇಳಿಸುವ ಸಂಗತಿಗಳು

ಬೆಳಕಿನ ಕಿರಣ ಭೂಮಿಗೆ ತಲುಪಲು

ಬೆಳಕಿನ ಕಿರಣ ಭೂಮಿಗೆ ತಲುಪಲು

ಸೂರ್ಯನಿಂದ ಹೊರಟ ಬೆಳಕಿನ ಕಿರಣ ಭೂಮಿಗೆ ತಲುಪಲು ಎಂಟುನಿಮಿಷಗಳು ಬೇಕು. (ಕರಾರುವಾಕ್ಕಾಗಿ ಹೇಳಬೇಕೆಂದರೆ ಎಂಟು ನಿಮಿಷ ಇಪ್ಪತ್ತು ಸೆಕೆಂಡುಗಳು). (ಬೆಳಕಿನ ವೇಗ ಸೆಕೆಂಡಿಗೆ ಮೂರು ಲಕ್ಷ ಕಿ.ಮೀ)

ಸೂರ್ಯೋದಯ ಮತ್ತು ಸೂರ್ಯಾಸ್ತಗಳು

ಸೂರ್ಯೋದಯ ಮತ್ತು ಸೂರ್ಯಾಸ್ತಗಳು

ಭೂಮಿ ತನ್ನ ಸುತ್ತಲೂ ತಿರುಗುವುದರಿಂದ ಹಗಲು ರಾತ್ರಿಗಳಾಗುತ್ತವೆ. ಆದರೆ ಭೂಮಿಯ ಅಕ್ಷಾಂಶದಿಂದ ಕೊಂಚ ವಾರೆಯಾಗಿರುವುದರಿಂದ ಪ್ರತಿದಿನದ ಸೂರ್ಯೋದಯ ಮತ್ತು ಸೂರ್ಯಾಸ್ತಗಳು ದಿಗಂತದಲ್ಲಿ ಒಂದೇ ಕಡೆ ಇರುವುದಿಲ್ಲ. ವರ್ಷದ ಒಂದು ದಿನ ಪೂರ್ವದ ಬಲಭಾಗದ ತುದಿಗೂ, ಆರು ತಿಂಗಳ ಬಳಿಕ ಪೂರ್ವದ ಎಡಭಾಗಕ್ಕೂ ಬದಲಾಗುತ್ತಾ ಇರುತ್ತದೆ. ಒಂದು ವೇಳೆ ಪೂರ್ವದಿಕ್ಕಿಗೆ ನೇರವಾಗಿ ಬಂದರೆ ಮಾತ್ರ ಕಾಣುವಂತಿರುವ ಸ್ಥಂಬಗಳು ಅಥವಾ ಕಟ್ಟಡಗಳಿದ್ದರೆ ವರ್ಷಕ್ಕೆ ಸೂರ್ಯೋದಯ ಅಥವಾ ಸೂರ್ಯಾಸ್ತ ಕೇವಲ ಎರಡು ದಿನ ಮಾತ್ರ ಪೂರ್ಣವಾಗಿರುತ್ತದೆ. ಅಮೇರಿಕಾದ ಮ್ಯಾನ್ ಹಟ್ಟನ್ ನಗರ ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ.

ಸೂರ್ಯಾಸ್ತ ನೋಡಿದರೆ ಖನ್ನತೆ ವಾಸಿಯಾಗುವುದೇ?

ಸೂರ್ಯಾಸ್ತ ನೋಡಿದರೆ ಖನ್ನತೆ ವಾಸಿಯಾಗುವುದೇ?

ಖಿನ್ನತೆಯಿಂದ ದೂರಾಗಲು ವಾರದಲ್ಲಿ ಕನಿಷ್ಟ ಎರಡರಿಂದ ಮೂರು ಬಾರಿ ಸೂರ್ಯಾಸ್ತ ಅಥವಾ ಸೂರ್ಯೋದಯವನ್ನು ನೋಡುವಂತೆ ಮನೋಚಿಕಿತ್ಸಕರು ಸಲಹೆ ನೀಡುತ್ತಾರೆ. ಈ ಹೊತ್ತಿನಲ್ಲಿ ಸೂರ್ಯನ ಪ್ರಭಾವಶಾಲಿ ಕಿರಣಗಳು ನಮ್ಮ ಶರೀರದಲ್ಲಿ ಧನಾತ್ಮಕ ಶಕ್ತಿಯನ್ನು ಹುಟ್ಟುಹಾಕುತ್ತದೆ.

ಸೂರ್ಯನ ಪ್ರಥಮ ಕಿರಣಗಳು

ಸೂರ್ಯನ ಪ್ರಥಮ ಕಿರಣಗಳು

ಒಂದು ವೇಳೆ ಇಡಿಯ ರಾತ್ರಿ ಜಾಗರಣೆ ಮಾಡಬೇಕಾಗಿ ಬಂದು ಹಗಲೂ ಎಚ್ಚರವಿರಬೇಕಾದ ಪ್ರಸಂಗ ಎದುರಾದರೆ ಸೂರ್ಯೋದಯಕ್ಕೂ ಸ್ವಲ್ಪ ಮೊದಲು ಸುಮಾರು ಇಪ್ಪತ್ತು ನಿಮಿಷಗಳವರೆಗೆ ಮಲಗಿ ಸೂರ್ಯೋದಯಕ್ಕೆ ಸರಿಯಾಗಿ ಎದ್ದೇಳಿ, ಸೂರ್ಯನ ಪ್ರಥಮ ಕಿರಣಗಳು ನಿಮಗೆ ದಿನಕ್ಕೆ ಅವಶ್ಯವಾದ ಶಕ್ತಿಯನ್ನು ನೀಡಲು ನೆರವಾಗುತ್ತದೆ.

ಮಿಶಿಗನ್ ಕೆರೆಯಲ್ಲಿ ಸೂರ್ಯ ಮುಳುಗುತ್ತಿರುವ ದೃಶ್ಯ ಅತ್ಯಂತ ಅಪೂರ್ವವಾಗಿದೆ

ಮಿಶಿಗನ್ ಕೆರೆಯಲ್ಲಿ ಸೂರ್ಯ ಮುಳುಗುತ್ತಿರುವ ದೃಶ್ಯ ಅತ್ಯಂತ ಅಪೂರ್ವವಾಗಿದೆ

ಅಮೇರಿಕಾದ ಮಿಶಿಗನ್ ನಗರದ ವಿಶಾಲ ಕೆರೆಯ ಆಚೆದಡ ದಿಗಂತದಲ್ಲಿರುವಂತೆ ಕಾಣುವುದರಿಂದ ಈ ದಡದಿಂದ ಸೂರ್ಯಾಸ್ತವನ್ನು ನೋಡುವುದೇ ಒಂದು ವಿಶಿಷ್ಟ ಅನುಭವವಾಗಿದೆ. ಅದರಲ್ಲೂ ಆಗಸ್ಟ್ 7ನೇ ತಾರೀಖಿನಂದು ತೆಗೆದ ಛಾಯಾಚಿತ್ರದಲ್ಲಿ ಸೂರ್ಯ ದಿಗಂತದಲ್ಲಿ ಮುಳುಗುತ್ತಿದ್ದು ನಗರದ ಆಚೆದಡದ ಕಟ್ಟಡಗಳು ಸೂರ್ಯನಲ್ಲಿ ಮಿಳಿತವಾದಂತೆ ಕಾಣುವ ದೃಶ್ಯ ಅತ್ಯಂತ ಅಪೂರ್ವವಾಗಿದೆ. ಆದರೆ ಕೆಲವರು ಈ ಚಿತ್ರದ ನೈಜತೆಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ.

ಸೂರ್ಯನ ಕಿರಣದ ಮಹಿಮೆ

ಸೂರ್ಯನ ಕಿರಣದ ಮಹಿಮೆ

ಸಾಮಾನ್ಯವಾಗಿ ಕತ್ತಲೆಯಿಂದ ಬೆಳಕಿಗೆ, ಅದರಲ್ಲೂ ಸೂರ್ಯನ ಪ್ರಖರ ಬೆಳಕಿಗೆ ಬಂದಾಕ್ಷಣ ನಮ್ಮ ಕಣ್ಣಿನ ನರಕ್ಕೆ ಸೂರ್ಯನ ಕಿರಣ ಪ್ರಚೋದನೆಯುಂಟುಮಾಡುವುದರಿಂದ (photic sneeze reflex) ಕೂಡಲೇ ಸೀನು ಬರುತ್ತದೆ. ಇದು ವಿಶ್ವದ ಸುಮಾರು ಪ್ರತಿ ಮೂರು ವ್ಯಕ್ತಿಗಳಲ್ಲಿ ಒಬ್ಬರಲ್ಲಿ ಕಂಡುಬರುತ್ತದೆ. ಇದು ಅನುವಂಶೀಯವಾಗಿದ್ದು ಇದಕ್ಕೆ ಸ್ಪಷ್ಟ ಕಾರಣವನ್ನು ಇದುವರೆಗೆ ನೀಡಲು ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ.

ಸೂರ್ಯನ ಬೆಳಕಿನಲ್ಲಿ ಹೆಚ್ಚು ಹೊತ್ತು ಕಳೆಯುವವರು ಸಂತೋಷದಿಂದಿರುತ್ತಾರೆ

ಸೂರ್ಯನ ಬೆಳಕಿನಲ್ಲಿ ಹೆಚ್ಚು ಹೊತ್ತು ಕಳೆಯುವವರು ಸಂತೋಷದಿಂದಿರುತ್ತಾರೆ

ತಮ್ಮ ಚಟುವಟಿಕೆಯನ್ನು ದಿನದ ಅವಧಿಯಲ್ಲಿ, ಅದರಲ್ಲೂ ಸೂರ್ಯನ ಬೆಳಕು ಶರೀರದ ಮೇಲೆ ಬೀಳುವಂತೆ ಕೆಲಸ ಮಾಡುವವರು ಹೆಚ್ಚು ಸಂತೋಷಕರವಾಗಿ, ಧನಾತ್ಮಕ ಯೋಚನೆಯುಳ್ಳವಾಗಿರುತ್ತಾರೆ ಮತ್ತು ಖಿನ್ನತೆ ಇವರನ್ನು ಬಾಧಿಸುವ ಸಂಭವ ಕಡಿಮೆ ಎಂದು ಸಂಶೋಧನೆಗಳು ತಿಳಿಸುತ್ತವೆ. ಅದೇ ರಾತ್ರಿ ಕೆಲಸ ಮಾಡುವವರು, ಇಡಿಯ ದಿನ ಒಳಗೇ ಇದ್ದು ಸೂರ್ಯನ ಕಿರಣಗಳಿಗೆ ಮೈಯೊಡ್ಡದೇ ಇರುವವರಲ್ಲಿ ಋಣಾತ್ಮಕ ಚಿಂತನೆ, ಖಿನ್ನತೆ, ಒತ್ತಡ ಬಾಧಿಸುತ್ತದೆ.

ಸೂರ್ಯ ಬಿಳಿರಕ್ತಕಣವಾದರೆ.....

ಸೂರ್ಯ ಬಿಳಿರಕ್ತಕಣವಾದರೆ.....

ಖಗೋಳಶಾಸ್ತ್ರದಲ್ಲಿ ದೂರಗಳು ಕಲ್ಪನೆಗೂ ಮಿಗಿಲಾಗಿವೆ. ಇವನ್ನು ಇದ್ದದ್ದನ್ನು ಇದ್ದ ಹಾಗೇ ಹೇಳಲು ಬರುವುದಿಲ್ಲ. ಏಕೆಂದರೆ ಅಷ್ಟು ದೊಡ್ಡ ಪ್ರಮಾಣದ ಅಳತೆಗಳನ್ನು ಹೇಳಲು ನಮ್ಮಲ್ಲಿ ಮಾನದಂಡಗಳೇ ಇಲ್ಲ. ಹಾಗಾಗಿ ಸಾಮಾನ್ಯವಾಗಿ ಹೋಲಿಕೆಯ ರೂಪದಲ್ಲಿ ಈ ಅಳತೆಗಳನ್ನು ನೀಡಲಾಗುತ್ತದೆ. ದೂರವನ್ನು ಬೆಳಕು ಒಂದು ವರ್ಷ ಚಲಿಸಿದರೆ ಕ್ರಮಿಸುವ ದೂರವಾದ ಜ್ಯೋತಿರ್ವರ್ಷಗಳ ಮೂಲಕ ನೀಡಲಾಗುತ್ತದೆ. ಗ್ರಹಗಳನ್ನು ಸಾಸಿವೆ, ಚೆಂಡುಗಳಿಗೆ ಹೋಲಿಸಲಾಗುತ್ತದೆ. ಉದಾಹರಣೆಗೆ ಸೂರ್ಯ ಒಂದು ಬಿಳಿರಕ್ತಕಣದಷ್ಟು ಚಿಕ್ಕದಾಗಿದ್ದರೆ ಆಕಾಶಗಂಗೆ ಅಮೇರಿಕಾ ರಾಷ್ಟ್ರದಷ್ಟು ವಿಸ್ತಾರವಾಗಿದೆ. ಅದೇ ರೀತಿ ಸೂರ್ಯ ಒಂದು ಫುಟ್ಬಾಲ್ ಗಾತ್ರಕ್ಕಿಳಿಸಿದರೆ ಭೂಮಿ 2ಮಿ.ಮೀ (ಸಾಸಿವೆ ಕಾಳಿನ) ಗಾತ್ರದ ಗೋಳವಾಗುತ್ತದೆ.

ಬೈಬಲ್ ಪ್ರಕಾರ...

ಬೈಬಲ್ ಪ್ರಕಾರ...

ಬೈಬಲ್ ನಲ್ಲಿ ವಿಶ್ವದ ಸೃಷ್ಟಿಯ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಲಾಗಿದೆ. ಆ ಪ್ರಕಾರ ಮೊದಲು ವಿಶ್ವವನ್ನು ಸೃಷ್ಟಿಸಿ ನಾಲ್ಕನೆಯ ದಿನ ಸೂರ್ಯನನ್ನು ಸೃಷ್ಟಿಸಿದ. ಆ ನಾಲ್ಕು ದಿನಗಳು ಪ್ರಾಯಶಃ ವಿಶ್ವದ ಕೇವಲ ನಾಲ್ಕು ಗಾಡಾಂಧಕಾರದ ದಿನಗಳಾಗಿದ್ದಿರಬೇಕು.

ಸೂರ್ಯನ ನಿಜವಾದ ಬಣ್ಣ ಹಸಿರು ಮಿಶ್ರಿತ ನೀಲಿ

ಸೂರ್ಯನ ನಿಜವಾದ ಬಣ್ಣ ಹಸಿರು ಮಿಶ್ರಿತ ನೀಲಿ

ಭೂಮಿಯ ವಾತಾವರಣದಲ್ಲಿ ಸೂರ್ಯನ ಕಿರಣಗಳು ವಕ್ರೀಭವನ ಹೊಂದುವ ಕಾರಣ ದಿನದ ವಿವಿಧ ವೇಳೆಯಲ್ಲಿ ಸೂರ್‍ಯನ ಬಣ್ಣ ಬೇರೆಬೇರೆಯಾಗಿರುತ್ತದೆ. ಅದೂ ಅಲ್ಲದೇ ಭೂಮಿಯ ಆಯಸ್ಕಾಂತಿಯ ಕವಚ ಸೂರ್ಯನ ಕಿರಣಗಳಲ್ಲಿದ್ದ ಹಲವು ಹಾನಿಕಾರಕ ಅಂಶಗಳನ್ನು ಪ್ರತಿಫಲಿಸಿ ಕೆಲವು ಅಂಶಗಳನ್ನು ಮಾತ್ರ ಬಿಡುವುದರಿಂದ ಸೂರ್ಯನ ನೈಜ ಬಣ್ಣ ಭೂಮಿಯ ಮೇಲಿದ್ದು ನೋಡಲು ಸಾಧ್ಯವಿಲ್ಲ. ಅದಕ್ಕೆ ಭೂಮಿಯ ಕಕ್ಷೆಯಿಂದ ಹೊರಹೋಗಿ ನೋಡಿದರೆ ಸೂರ್ಯನ ನಿಜವಾದ ಬಣ್ಣ ಹಸಿರು ಮಿಶ್ರಿತ ನೀಲಿ ಎಂದು ಗೊತ್ತಾಗುತ್ತದೆ.

ಡೈನೋಸಾರ್ ಗಳ ಅಳಿವಿಗೆ ಸೂರ್‍ಯನ ಪ್ರಭಾವವಿತ್ತೇ

ಡೈನೋಸಾರ್ ಗಳ ಅಳಿವಿಗೆ ಸೂರ್‍ಯನ ಪ್ರಭಾವವಿತ್ತೇ

ಸುಮಾರು 231 ರಿಂದ 60 ಮಿಲಿಯನ್ ವರ್ಷಗಳ ಹಿಂದೆ ಭೂಮಿಯ ಮೇಲಿದ್ದ ಡೈನೋಸಾರುಗಳೆಂಬ ದೈತ್ಯಜೀವಿಗಳ ಏಕಾಏಕಿ ಅಳಿವಿನಲ್ಲಿ ಸೂರ್ಯನ ಪಾತ್ರವಿದೆಯೇ? ಹೌದು ಎನ್ನುತ್ತಾರೆ ಪ್ರಾಕ್ತನಶಾಸ್ತ್ರಜ್ಞರು. ಅವರ ಪ್ರಕಾರ ಆ ಸಮಯದಲ್ಲಿ ಸೂರ್ಯ ಆಕಾಶಗಂಗೆಯಲ್ಲಿದ್ದ ಸ್ಥಾನ ಯಾವುದೋ ಪ್ರಳಯವನ್ನು ಸೃಷ್ಟಿಸಿ ಇವುಗಳ ಅಳಿವಿಗೆ ಕಾರಣವಾಗಿರಬಹುದು ಎನ್ನುತ್ತಾರೆ. ಲೆಕ್ಕಾಚಾರದ ಪ್ರಕಾರ ಸೂರ್ಯ ಈಗ ಸರಿಸುಮಾರು ಅದೇ ಸ್ಥಾನಕ್ಕೆ ಮತ್ತೆ ಬಂದಿದೆ. ಇದೇ ಲೆಕ್ಕಾಚಾರ 2012ರಲ್ಲಿ ಪ್ರಳಯ ಎಂಬ ಜ್ಯೋತಿಷಿಗಳ ಭವಿಶ್ಯವಾಣಿಗೂ (ಬಳಿಕ ಲೇವಡಿಗೂ) ಒಳಗಾಯಿತು.

ಭೂಮಿ ಚಿಕ್ಕ ನೆಲ್ಲಿಕಾಯಿ ಗಾತ್ರದಲ್ಲಿದ್ದರೆ ಸೂರ್ಯ ಎಷ್ಟಿರಬಹುದು

ಭೂಮಿ ಚಿಕ್ಕ ನೆಲ್ಲಿಕಾಯಿ ಗಾತ್ರದಲ್ಲಿದ್ದರೆ ಸೂರ್ಯ ಎಷ್ಟಿರಬಹುದು

ನಮ್ಮ ಭೂಮಿಯನ್ನು ಒಂದು ಚಿಕ್ಕ ಚೆರ್ರಿ ಟೊಮಾಟೋ ಅಥವಾ ಚಿಕ್ಕ ನೆಲ್ಲಿಕಾಯಿಯ ಗಾತ್ರದಲ್ಲಿ ಸಮಾನ ಅನುಪಾತದಲ್ಲಿ ಇಳಿಸಿಕೊಂಡರೆ ಸೂರ್ಯ ಸುಮಾರು ಹದಿಮೂರು ಅಡಿ ವ್ಯಾಸದ ಗೋಳವಾಗುತ್ತದೆ. ದೂರ ಸುಮಾರು ಅರ್ಧ ಕಿ.ಮೀ. ದಷ್ಟಿರುತ್ತದೆ.

ಹಗಲಿನಲ್ಲಿ ನಿಮ್ಮ ತೂಕ ಕಡಿಮೆ, ರಾತ್ರಿ ಹೆಚ್ಚು ಎನಿಸುತ್ತದೆಯೇ?

ಹಗಲಿನಲ್ಲಿ ನಿಮ್ಮ ತೂಕ ಕಡಿಮೆ, ರಾತ್ರಿ ಹೆಚ್ಚು ಎನಿಸುತ್ತದೆಯೇ?

ನಾವೆಲ್ಲಾ ಎರಡು ಗುರುತ್ವಗಳಿಗೆ ಒಳಪಟ್ಟಿದ್ದೇವೆ. ಒಂದು ಭೂಮಿನ ಕೇಂದ್ರದತ್ತ ಸೆಳೆಯುವ ಗುರುತ್ವಾಕರ್ಷಣ ಶಕ್ತಿ, ಇನ್ನೊಂದು ಇದಕ್ಕೆ ವಿರುದ್ದ ದಿಕ್ಕಿನಲ್ಲಿ ಸೆಳೆಯುವ ಸೂರ್ಯನ ಗುರುತ್ವ. ಈ ಸೆಳೆತಗಳಿಗೆ ಅನುಗುಣವಾಗಿ ಸಾಗರದ ಅಲೆ, ಉಬ್ಬರ ಇಳಿತ ಸಾಗುತ್ತವೆ. ಹಾಗಾದರೆ ಹಗಲಿನಲ್ಲಿ ಈ ಎರಡೂ ಗುರುತ್ವಗಳು ನಿಮ್ಮ ಮೇಲೆ ಪ್ರಭಾವ ಬೀರುತ್ತಿರುವುದರಿಂದ (ವಿರುದ್ದ ದಿಕ್ಕಿನಲ್ಲಿ) ನಿಮ್ಮ ತೂಕ ಕಡಿಮೆ ಹಾಗೂ ರಾತ್ರಿ ಹೆಚ್ಚು (ಸಮಾನ ದಿಕ್ಕಿನಲ್ಲಿ) ಆಗಬೇಕಲ್ಲಾ? ಹೌದು ಹೀಗೇ ಆಗುತ್ತದೆ. ಆದರೆ ಸೂರ್ಯನ ದೂರದ ಕಾರಣ ಸಾಮಾನ್ಯ ವಸ್ತುಗಳ ಮೇಲಿನ ಈ ಅಂತರ ಬಹಳ ಕಡಿಮೆ. ಹಾಗಾಗಿ ಇಡಿಯ ಶಿಕಾಗೋ ನಗರವನ್ನೇ ಒಂದು ವಸ್ತುವೆಂದು ಪರಿಗಣಿಸಿದರೆ ಅದರ ರಾತ್ರಿಯ ತೂಕ ಮುನ್ನೂರು ಪೌಂಡ್ ಹೆಚ್ಚಿರುತ್ತದೆ.

ಸೂರ್ಯ ಪ್ರತಿ ಘಂಟೆಗೆ ಐದು ಅಡಿ ಕುಗ್ಗುತ್ತಿದ್ದಾನೆ

ಸೂರ್ಯ ಪ್ರತಿ ಘಂಟೆಗೆ ಐದು ಅಡಿ ಕುಗ್ಗುತ್ತಿದ್ದಾನೆ

ಸೂರ್ಯನ ರಶ್ಮಿಗೆ ಅಣುಗಳ ಸಮ್ಮಿಳನ (nuclear fusion) ಎಂಬ ಪ್ರಕ್ರಿಯೆ ಕಾರಣ. ಅಂದರೆ ಎರಡು ಅಣುಗಳು ಸೇರಿ ಒಂದು ಆಗುವುದು. ಈ ವಿದ್ಯಮಾನದ ಕಾರಣ ಸೂರ್ಯನ ದ್ರವ್ಯರಾಶಿ ಕರಗುತ್ತಾ ಬರುತ್ತದೆ. ಅಂದರೆ ಪ್ರತಿ ಘಂಟೆಗೆ ಸುಮಾರು ಐದು ಅಡಿ. ಹೀಗೇ ಮುಂದುವರೆದರೆ ಮುಂದೊಂದು ದಿನ ಪೂರ್ಣವಾಗಿ ಕರಗಿ ಹೋಗಬಹುದಲ್ಲಾ? ನಿಮ್ಮ ಊಹೆ ಸರಿ. ಆದರೆ ಅದಕ್ಕೆ ಕೆಲವು ಸಾವಿರ ಮಿಲಿಯನ್ ವರ್ಷಗಳು ಬೇಕು. ಹಾಗಾಗಿ ಸಧ್ಯಕ್ಕೆ ಆತಂಕವಿಲ್ಲ.

“The Others” ಎಂಬ ಚಿತ್ರದಲ್ಲಿ ತೋರಿಸಿದ ಸೂರ್ಯನ ಕಿರಣಗಳ ಅಲರ್ಜಿ ಸತ್ಯ

“The Others” ಎಂಬ ಚಿತ್ರದಲ್ಲಿ ತೋರಿಸಿದ ಸೂರ್ಯನ ಕಿರಣಗಳ ಅಲರ್ಜಿ ಸತ್ಯ

2001ರಲ್ಲಿ ಬಿಡುಗಡೆಯಾದ "The Others" ಎಂಬ ಚಿತ್ರದಲ್ಲಿ ಪಾತ್ರಧಾರಿಗಳಿಗೆ ಸೂರ್ಯನ ಕಿರಣಗಳೇ ಅಲರ್ಜಿ ಎಂಬ ವಿಷಯ ಮನ ಕಲಕುತ್ತದೆ. ವಾಸ್ತವವಾಗಿ ಈ ತೊಂದರೆ xeroderma pigmentosum ಎಂಬ ಕಾಯಿಲೆಯ ಲಕ್ಷಣವಾಗಿದೆ. ಕೆಲವರಿಗೆ ಸೂರ್ಯನ ರಶ್ಮಿಯಲ್ಲಿರುವ ಅತಿನೇರಳೆ ಕಿರಣಗಳು ಚರ್ಮದಲ್ಲಿ ಅತೀವ ತುರಿಕೆ ಮತ್ತು ಬಳಿಕ ಕ್ಯಾನ್ಸರ್ ತರಿಸುತ್ತದೆ. ಇವರು ಚಿಕ್ಕವಯಸ್ಸಿನಲ್ಲಿಯೇ ಸಾವನ್ನಪ್ಪುತ್ತಾರೆ.

ರಶ್ಮಿಗಳು ಹೊರಬರಲು ಕನಿಷ್ಠ ನಾಲ್ಕು ಸಾವಿರ ವರ್ಷ ಬೇಕು

ರಶ್ಮಿಗಳು ಹೊರಬರಲು ಕನಿಷ್ಠ ನಾಲ್ಕು ಸಾವಿರ ವರ್ಷ ಬೇಕು

ಸೂರ್ಯನ ಒಡಲಲ್ಲಿರುವ ಪ್ಲಾಸ್ಮಾ ಎಷ್ಟು ಗಾಢ ಎಂದರೆ ಇದರಿಂದ ಹೊರಡುತ್ತಿರುವ ರಶ್ಮಿಗಳು ಅಲ್ಲಿಂದ ಬಿಡುಗಡೆ ಹೊಂದಿದ ಬಳಿಕ ಹೊರಬರಲು ಕನಿಷ್ಠ ನಾಲ್ಕು ಸಾವಿರ ವರ್ಷ ಬೇಕು!

English summary

Fascinating Facts About the Sun

This post is all about the Sun, the center of the Solar System and the main source of energy for the Earth.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X