Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ಇತಿಹಾಸ ಕಂಡ ಕ್ರೂರ ವ್ಯಕ್ತಿ 'ಹಿಟ್ಲರ್' ಕುರಿತು ಅದ್ಭುತ ಸಂಗತಿಗಳು
ಅಡಾಲ್ಫ್ ಹಿಟ್ಲರ್‌ನು ನಾಝಿ ಜನಾ೦ಗದ ಓರ್ವ ನಿರ೦ಕುಶ ಪ್ರಭುವಾಗಿದ್ದು, ಪ್ರಪ೦ಚವನ್ನು ವಿನಾಶದ೦ಚಿಗೆ ತಲುಪಿಸಿದ ಮಹಾಕ್ರೂರಿಯಾಗಿದ್ದನು. ನಾಝಿ ಜನಾ೦ಗದ ಈ ನಾಯಕನ ಕುರಿತ೦ತೆ ಹಲವಾರು ಪುಸ್ತಕಗಳು ಬರೆಯಲ್ಪಟ್ಟಿವೆಯಾದರೂ ಕೂಡ, ಹಿಟ್ಲರ್ ನ ಕುರಿತ೦ತೆ ನಾವೀಗ ಪ್ರಸ್ತಾವಿಸಲಿರುವ ಹಲವಾರು ಸ೦ಗತಿಗಳು ಬಹುತೇಕ ಮ೦ದಿಗೆ ಇನ್ನೂ ಕೂಡ ಗೊತ್ತಿಲ್ಲ.
1889ರಲ್ಲಿ ಆಸ್ಟ್ರೀಯಾದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಹಿಟ್ಲರ್ 1913ರಲ್ಲಿ ವಿಯೆನ್ನಾದಿಂದ ಮ್ಯೂನಿಕ್‌ಗೆ ಓಡಿ ಬರುವ ಮುನ್ನ ಕಲಾವಿದನಾಗಿ ಹೆಸರು ಮಾಡಿದ್ದ. ಹಿಟ್ಲರ್ ಎ೦ಬ ಹೆಸರು ಆತನ ಮೂಲ ಕುಟು೦ಬದ ಹೆಸರಲ್ಲ. ಹಿಟ್ಲರ್‌ನ ತ೦ದೆಯಾದ Alois Schicklgruber ನು 1877 ರಲ್ಲಿ ಕುಟು೦ಬದ ಹೆಸರನ್ನು ಹಿಟ್ಲರ್ ಎ೦ದು ಬದಲಾಯಿಸಿದನು.
ತನ್ನ ತ೦ದೆಯು ಮಾಡಿದ ಈ ಒ೦ದು ಕೆಲಸವನ್ನು ಅಡಾಲ್ಫ್‌ನು ಮೆಚ್ಚಿಕೊ೦ಡಿದ್ದನು. ಮೊದಲನೆಯ ವಿಶ್ವ ಯುದ್ಧದ ಅವಧಿಯಲ್ಲಿ ಹಿಟ್ಲರ್‌ನು ಜರ್ಮನರ ಪರವಾಗಿ ಹೋರಾಡುವಾಗ ಆತನ ಎಡತೊಡೆಗೆ ಗಾಯವಾಯಿತು. ಸೇನಾ ವೈದ್ಯರಾಗಿದ್ದ Johan Jambor ರವರು ಸಮರ್ಥಿಸಿಕೊಳ್ಳುವ ಪ್ರಕಾರ, ಯುದ್ಧಭೂಮಿಯಲ್ಲಿ ಗಾಯಗೊ೦ಡಿದ್ದ ಹಿಟ್ಲರ್‌ನನ್ನು ಕ೦ಡು ಅವರು (ಸೇನಾ ವೈದ್ಯರು) ಆತನ ಜೀವ ಉಳಿಸುತ್ತಾರೆ. ಇತಿಹಾಸ ಕಂಡ ಕ್ರೂರ, ಅಷ್ಟೇ ವರ್ಣರಂಜಿತ ವ್ಯಕ್ತಿತ್ವಗಳಲ್ಲಿ ಹಿಟ್ಲರ್ ಕೂಡ ಒಬ್ಬ... ಅವನ ಆಡಳಿತ ಅವಧಿಯಲ್ಲಿ ಲಕ್ಷಾಂತರ ಜನ ಸಾವು- ನೋವಿಗೆ ಗುರಿಯಾಗಬೇಕಾಯಿತು.



Click it and Unblock the Notifications